Link copied!
Sign in / Sign up
3
Shares

ಈ 5 ವಸ್ತುಗಳು ಎದೆಹಾಲು ಕೊಡುತ್ತಿರುವ ಅಮ್ಮನ ಬಳಿ ಇರಲೇಬೇಕು!

ಮುದ್ದು ಮಗು ಮನೆಗೆ ಬಂದೊಡನೆ, ಕೇವಲ ಅದಕ್ಕೆ ಬೇಕಿರುವ ವಸ್ತುಗಳಷ್ಟೇ ನಿಮ್ಮ ಪಟ್ಟಿಯಲ್ಲಿ ಇರಬಾರದು. ನಿಮ್ಮ ತಾಯ್ತನ ಎಷ್ಟೇ ಕಠಿಣವಾಗಿ ಇದ್ದರೂ, ಅದು ಸರಾಗವಾಗಿ ಸಾಗಲು ನಿಮಗೆ ಬೇಕಿರುವ ಎಲ್ಲಾ ವಸ್ತುಗಳು ನಿಮ್ಮ ಬಳಿ ಇರಬೇಕು. ನೀವು ಎದೆಹಾಲು ಉಣಿಸುವ ಸಮಯದಲ್ಲಿ ನಿಮ್ಮ ಶ್ರಮ ಮತ್ತು ಸಮಯ ಎರಡನ್ನೂ ಉಳಿಸುವ 5 ವಸ್ತುಗಳ ಪಟ್ಟಿ ಇಲ್ಲಿದೆ ನೋಡಿ :

೧. ಬ್ರೆಸ್ಟ್ ಪಂಪ್


ಕೆಲವೊಮ್ಮೆ ನೀವು ಅಗತ್ಯಕ್ಕಿಂತ ಹೆಚ್ಚಿನ ಎದೆಹಾಲನ್ನು ಉತ್ಪಾದಿಸಬಹುದು. ಇಂತಹ ಸಮಯಗಳಲ್ಲಿ ನೀವು ನಿಮ್ಮ ಎದೆಹಾಲನ್ನು ಸುಮ್ಮನೆ ವೇಸ್ಟ್ ಮಾಡುವ ಬದಲು, ಅದನ್ನು ಶೇಖರಿಸಿ, ಭವಿಷ್ಯದಲ್ಲಿ ಉಪಯೋಗಿಸಬಹುದು. ಒಂದು ವೇಳೆ ನಿಮಗೆ ಸಾರ್ವಜನಿಕ ಸ್ಥಳಗಳಲ್ಲಿ ಮಗುವಿಗೆ ಎದೆಹಾಲು ನೀಡಲು ಮುಜುಗರವಿದ್ದರೆ ಅಥವಾ ನಿಮ್ಮ ಮಗುವನ್ನ ಮನೆಯಲ್ಲೇ ಬಿಟ್ಟು ನೀವು ಎಲ್ಲಾದರೂ ಹೊರಹೋಗುತ್ತಿದ್ದೀರಾ ಎಂದಾದರೆ, ಶೇಖರಿಸಿ ಇಟ್ಟ ಈ ಹಾಲು ತುಂಬಾನೇ ಉಪಯೋಗಕ್ಕೆ ಬರುತ್ತದೆ. ನಿಮ್ಮ ಎದೆಹಾಲನ್ನು ಪಂಪ್ ಮಾಡಿ ಶೇಖರಿಸಿಟ್ಟು, ನೀವು ಎಲ್ಲೇ ಇದ್ದರೂ ನಿಮ್ಮ ಮಗುವಿನ ಪೋಷಕಾಂಶ ಅಗತ್ಯಗಳೊಂದಿಗೆ ರಾಜಿ ಆಗದಿರಿ.


೨. ನರ್ಸಿಂಗ್ ಬ್ರಾ


ಎದೆಹಾಲು ನೀಡುವ ಮಗುವಿಗೆ ಬೇಕಿರುವ ಅಗತ್ಯ ವಸ್ತುಗಳಲ್ಲಿ ನರ್ಸಿಂಗ್ ಬ್ರಾಗಳು ಮುಖ್ಯವಾದವು. ಕೆಲವೊಂದಿಷ್ಟು ನರ್ಸಿಂಗ್ ಬ್ರಾಗಳನ್ನ ಖರೀದಿಸಿ ಇಟ್ಟುಕೊಳ್ಳಿ. ನೀವು ಯಾವಾಗಲೂ ಗ್ರಾನಿ ಟೈಪ್ ಬ್ರಾಗಳ ಮೊರೆಯೇ ಹೋಗಬೇಕಿಲ್ಲ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ತರಾವರಿ, ಅಗ್ಗದ ಬೆಲೆಯ ನರ್ಸಿಂಗ್ ಬ್ರಾಗಳು ಉಂಟು. ಈ ನರ್ಸಿಂಗ್ ಬ್ರಾಗಳ ಬಗ್ಗೆ ಇನ್ನೊಂದು ಒಳ್ಳೆಯ ವಿಷಯ ಎಂದರೆ, ನೀವು ಎದೆಹಾಲು ನೀಡುವುದನ್ನು ನಿಲ್ಲಿಸಿದ ಮೇಲೆಯೂ ನೀವು ಇವುಗಳನ್ನ ಬಳಸಬಹುದು.


೩. ಫೀಡಿಂಗ್ ಪಿಲ್ಲೋ


ಎದೆಹಾಲು ಕುದಿಸುವಾಗ, ಸೂಕ್ತ ಭಂಗಿಯನ್ನು ಕಂಡುಕೊಳ್ಳುವುದು ಬಹಳಾನೇ ಕಷ್ಟ. ಬಹಳಷ್ಟು ಬಾರಿ ಅಮ್ಮಂದಿರಿಗೆ ಮಗುವನ್ನು ಸರಿಯಾದ ಭಂಗಿಯಲ್ಲಿ ಹಿಡಿದುಕೊಳ್ಳುವುದಕ್ಕೆಯೇ ಆಗದೆ, ಎದೆಹಾಲನ್ನೇ ನೀಡದಂತೆ ಆಗುವುದು. ನಿಮಗೆ ಬಹುಮುಖ್ಯವಾಗಿ ಅಗತ್ಯವಿರುವ ಸಪೋರ್ಟ್ ಅನ್ನು ಈ ಫೀಡಿಂಗ್ ಪಿಲ್ಲೋಗಳು ನೀಡುತ್ತವೆ.


೪. ನಿಪ್ಪಲ್ ಬಟರ್


ಎದೆಹಾಲು ನೀಡುವಾಗ ನೋವಾದ, ಒಡೆದ, ಡ್ರೈ ಆದ ಮೊಲೆತೊಟ್ಟುಗಳು ಸಾಮಾನ್ಯ. ನೀವು ನಿಮಗೆ ಬೇಕಾದ ಅನುಕೂಲವನ್ನ ಒದಗಿಸಿಕೊಳ್ಳಲು ಒಂದು ದೊಡ್ಡ ಟ್ಯೂಬ್ ನಿಪ್ಪಲ್ ಬಟರ್ ಅನ್ನು ಖರೀದಿಸಿ. ನೀವು ಇದನ್ನ ಹಚ್ಚಿಕೊಂಡರೆ, ಕ್ಷಣಗಳಲ್ಲಿಯೇ ಆರಾಮ ಕಾಣುತ್ತೀರಿ. ಆದರೆ, ಮಗುವಿಗೆ ಎದೆಹಾಲು ನೀಡುವ ಮುನ್ನ ಇದನ್ನು ಹಚ್ಚಿಕೊಂಡು ನೀಡಬೇಡಿ. ಇದನ್ನು ಮಗು ಸೇವಿಸಿದರೆ, ಮಗುವಿಗೆ ತೊಂದರೆ ಆಗಬಹುದು.


೫. ಒಂದು ಅದ್ಭುತ ಬೆಂಬಲ ವ್ಯವಸ್ಥೆ


ನಿಮ್ಮ ಬಳಿ ಏನೇ ಇರಲಿ, ಏನೇ ಬಿಡಲಿ, ನಿಮ್ಮ ಜೊತೆ ನಿಮಗೆ ಬೆನ್ನೆಲುಬಾಗಿ ನಿಲ್ಲುವ ಆತ್ಮೀಯ ಗೆಳೆಯರು ಮತ್ತು ಪ್ರೀತಿಸುವ ಕುಟುಂಬ ಇಲ್ಲಿದಿದ್ದರೆ, ಎಲ್ಲವೂ ಕಷ್ಟವಾಗುತ್ತದೆ. ಹೀಗಾಗಿ ನಿಮ್ಮ ಮನೆಮಂದಿಯನ್ನೆಲ್ಲಾ ಒಂದು ಕಡೆ ಕೂಡಿಸಿ, ಅವರಿಗೆ ಪಾರ್ಟಿ ಕೊಡಿ. ಏಕೆಂದರೆ, ಇವೆಲ್ಲವೂ ಸಾಧ್ಯವಾಗಿದ್ದು ಅವರಿಂದಲೇ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon