Link copied!
Sign in / Sign up
2
Shares

ಎದೆಹಾಲು ಕುಡಿಸುವುದರ ಬಗ್ಗೆ ಜನರು ಹೇಳುವ 7 ಸುಳ್ಳುಗಳು!

 

ನಿಮಗೆ ತಿಳಿದಿರುವ ಪ್ರತಿಯೊಬ್ಬ ತಾಯಿ ಬಹುಶಃ ನಿಮಗೆ ಹಾಲುಣಿಸುವ ಬಗ್ಗೆ ಉಪಯುಕ್ತ ಅಥವಾ ಅನುಪಯುಕ್ತ ಮಾಹಿತಿಯನ್ನು ಸರಿ-ತಪ್ಪುಗಳನ್ನು ಅಳೆದು ತೂಗದೇ, ಕುರುಡಾಗಿ ಅನುಕರಿಸಬಹುದು. ಎದೆ ಹಾಲುಣಿಸುವಿಕೆಯ ವಿಚಾರದಲ್ಲಿ ಸಾಮಾನ್ಯವಾಗಿ ಪ್ರಚಲಿತವಾಗಿರುವ ತಪ್ಪು ಕಲ್ಪನೆಗಳನ್ನು ಬಯಲು ಮಾಡಿ, ಅವುಗಳ ಸತ್ಯ ಮತ್ತು ನೈಜ್ಯತೆಗಳನ್ನು ನಿಮ್ಮ ಮುಂದಿರಿಸಿದ್ದೇವೆ. 

 

ಮಿಥ್ಯ#೧: ದುಗ್ಧನಾಳವು ತೆರೆದುಕೊಳ್ಳದಿದ್ದರೆ, ಸ್ತನ್ಯಪಾನ ಮಾಡಬಾರದು

ಸತ್ಯ: ಇದು ಸತ್ಯದ ವಿರುದ್ಧವಾಗಿದೆ. ಹೆಚ್ಚಾಗಿ ಹಾಲುಣಿಸುವುದು ಮತ್ತು ಪಂಪ್ ಮಾಡುವುದು ಆ ನಾಳಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.ಏಕೆಂದರೆ;ಇದರಿಂದ  ಹಾಲನ್ನು ನಾಳಗಳಿಂದ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಬಿಗಿಯಾದ ಬ್ರಾಗಳನ್ನು ಧರಿಸುವುದನ್ನು ತಪ್ಪಿಸಿ, ಇದು ಕೂಡಾ ಕೆಲವೊಮ್ಮೆ ನಾಳಗಳ ನಿರ್ಬಂಧಕ್ಕೆ  ಕಾರಣವಾಗಬಹುದು. ವುಮೆನ್ಸ್ ಹೆಲ್ತ್ ಪತ್ರಿಕೆಯೊಂದರ ಪ್ರಕಾರ, ನಿಮ್ಮ ಸ್ತನಗಳನ್ನು ಮಸಾಜ್ ಮಾಡುವ ಮೂಲಕ ಮತ್ತು ನಾಳಗಳನ್ನು ತೆರವುಗೊಳಿಸುವುದರ ಮೂಲಕ ಹಾಲನ್ನು ಒಸರುವಂತೆ ಮಾಡಬಹುದು. ಇದಲ್ಲದೆ, ನಾಳಗಳನ್ನು ತೆರವುಗೊಳಿಸಲು, ಸ್ತನಗಳ ಮೇಲೆ ಬೆಚ್ಚಗಿನ ಶಾಖವನ್ನೂ ನೀಡಬಹುದು. 

 

ಮಿಥ್ಯ # 2: ನೀವು ರೋಗಿಗಳಾಗಿದ್ದರೆ ಹಾಲುಣಿಸುವಿಕೆಯನ್ನು ನಿಲ್ಲಿಸಬೇಕು 

ಸತ್ಯ: ನಿಮ್ಮ ಅನಾರೋಗ್ಯದ ಬಗ್ಗೆ ನೀವು ತಿಳಿದುಕೊಳ್ಳುವ ಮೊದಲೇ ನಿಮ್ಮ ಮಗು ಸೋಂಕಿಗೆ ಒಳಗಾಗಬಹುದು. ಸಂಶೋಧನೆಯ ಪ್ರಕಾರ, ಸ್ತನ್ಯಪಾನ ಮಾಡುವುದನ್ನು ಮುಂದುವರೆಸುವುದು ನಿಮ್ಮ ಮಗುವಿಗೆ ಸಹಾಯ ಮಾಡುತ್ತದೆ ಏಕೆಂದರೆ ನಿಮ್ಮ ಎದೆ ಹಾಲು ಈಗ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಹೊಂದಿರುತ್ತದೆ. 

 

ಮಿಥ್ಯ # 3: ಸ್ತನ್ಯಪಾನವು ಸ್ತನಗಳನ್ನು ಜೋಲು ಬೀಳಿಸುತ್ತವೆ 

 

ಸತ್ಯ: ಅನುಭವಿ ಡೈಲಿಂಕ್.ಕಾಮ್ ಪ್ರಕಾರ, ಸ್ತನ್ಯಪಾನವು ಸ್ತನಗಳ ಜೋಲುವಿಕೆಗೆ ಕಾರಣವಾಗುವುದಿಲ್ಲ. ಗರ್ಭಾವಸ್ಥೆಯಲ್ಲಿ ನಿಮ್ಮ ಸ್ತನಗಳು ಊದಿಕೊಳ್ಳುತ್ತವೆ ಮತ್ತು ಸ್ತನಗಳನ್ನು ಹಿಡಿದಿಡುವ ಅಸ್ಥಿರಜ್ಜುಗಳ ಒತ್ತಡದಿಂದಾಗಿ ಅವರು ಅಂತಿಮವಾಗಿ ಕುಗ್ಗಲಾರಂಭಿಸುತ್ತದೆ. ನಿಮ್ಮ ಪೂರ್ವ ಗರ್ಭಧಾರಣೆಯ ಬ್ರಾದ ಗಾತ್ರ, ವಯಸ್ಸು, ಮತ್ತು BMI ನಿಮ್ಮ ಸ್ತನಗಳು ಎಷ್ಟರಮಟ್ಟಿಗೆ ಜೋತು ಬಿದ್ದಿದೆಯೆಂದು ಎಂದು ಸೂಚಿಸುತ್ತದೆ. ಕೊನೆಗಂತೂ- ನೀವು ಸ್ತನಪಾನ ಮಾಡಿಸಿದರೂ, ಇಲ್ಲದಿದ್ದರೂ ಸ್ತನವಂತೂ ಜೋತು ಬೀಳುತ್ತದೆ. ಇನ್ನು ಆಯ್ಕೆ ನಿಮಗೆ ಬಿಟ್ಟದ್ದು. 

 

 

ಮಿಥ್ಯ # 4: ಸ್ತನ್ಯಪಾನ ಮಾಡುವಾಗ ಪಥ್ಯಾಹಾರಗಳನ್ನು ಮಾತ್ರ ಸೇವಿಸಬೇಕು 

 

 ಸತ್ಯ: ನೀವು ತಿನ್ನುವ ಎಲ್ಲಾ ಆಹಾರವನ್ನು ನಿಮ್ಮ ದೇಹವು ಜೀರ್ಣಿಸಿಕೊಳ್ಳುತ್ತದೆ ಮತ್ತು ಅದರಿಂದ ಎದೆ ಹಾಲು ಉತ್ಪಾದಿಸಲು ಅಗತ್ಯವಾದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತದೆ. ಲಾಕ್ಟೇಷನ್ ಲಿಂಕ್‍ಗಳು ಇದರ ಬಗ್ಗೆ ಸಂಪೂರ್ಣವಾಗಿ ವಿವರಿಸುತ್ತದೆ. ನೀವು ತಿನ್ನುವ ಆಹಾರಗಳಿಂದ ಅನಿಲ ಉತ್ಪಾದಿಸುವ ಅಂಶಗಳು, ಆಹಾರದ ಜೀರ್ಣವಾದ ನಂತರ ಕಡಿಮೆಯಾಗುತ್ತದೆ. ಆದ್ದರಿಂದ ನಿಮ್ಮ ಮೆಚ್ಚಿನ ಮಸಾಲೆಯುಕ್ತ ಆಹಾರವನ್ನು ತಿನ್ನಲು ಹೆದರಬೇಕಾಗಿಲ್ಲ. ವಾಸ್ತವವಾಗಿ, ಶಿಶುಗಳು ಬೆಳ್ಳುಳ್ಳಿ ಮಿಶ್ರಿತ ಹಾಲನ್ನು ಇಷ್ಟಪಡುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ! 

 

ಮಿಥ್ಯ # 5: ಸಣ್ಣ ಸ್ತನಗಳು ಕಡಿಮೆ ಹಾಲು ಉತ್ಪಾದಿಸುತ್ತವೆ 

ಸತ್ಯ: ನಿಮ್ಮ ಸ್ತನಗಳ ಗಾತ್ರವು ನಿಮ್ಮ ಸ್ತನಗಳಲ್ಲಿ ಕೊಬ್ಬಿನ ಅಂಗಾಂಶವನ್ನು ಮಾತ್ರ ಸೂಚಿಸುತ್ತದೆ. ಸಣ್ಣ ಸ್ತನಗಳನ್ನು ಹೊಂದಿರುವ ತಾಯಂದಿರು ದೊಡ್ಡ ಸ್ತನಗಳನ್ನು ಹೊಂದಿದ ತಾಯಂದಿರಂತೆ, ಸಾಕಷ್ಟು ಎದೆ ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂಟರ್ನ್ಯಾಷನಲ್ ಮಿಲ್ಕ್ ಜೆನೊಮಿಕ್ಸ್ ಕನ್ಸೋರ್ಟಿಯಂ ಇದನ್ನು ವಿವರವಾಗಿ ವಿವರಿಸಿದೆ.  

ಮಿಥ್ಯ # 6: ಸ್ತನ್ಯಪಾನ ಜನನ ನಿಯಂತ್ರಣದ ಒಂದು ವಿಶ್ವಾಸಾರ್ಹ ರೂಪವಾಗಿದೆ

 

ಸತ್ಯ: ಸ್ವತಃ ಹಾಲುಣಿಸುವಿಕೆಯು ಜನ್ಮ ನಿಯಂತ್ರಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲು ಒಂದು ವಿಸ್ತಾರವಾದ ಕೆಲವು ಘಟಕಗಳನ್ನು ಅವಲಂಬಿಸ ಬೇಕಾಗಿದೆ. WebMD ಯ ಪ್ರಕಾರ, ಇದು ನಿಜವಾಗುವುದಕ್ಕಾಗಿ 3 ಷರತ್ತುಗಳನ್ನು ಪೂರೈಸಬೇಕು.  

(೧) ನಿಮ್ಮ ಮಾಸಿಕ ಮುಟ್ಟು ಇನ್ನೂ ಪುನರಾರಂಭಿಸದಿದ್ದರೆ.  

(೨)  ನಿಮ್ಮ ಮಗು ಇನ್ನೂ 6 ತಿಂಗಳು ಮಾತ್ರ ಪ್ರಾಯವಾಗಿದ್ದರೆ: 

(೩) ನೀವು ನಿಮ್ಮ ಮಗುವಿಗೆ ಎದೆಹಾಲನ್ನು ಮಾತ್ರ ನೀಡುವುದಾಗಿದ್ದರೆ: 

       - ನೀವು ಗರ್ಭಿಣಿಯಾಗದಿರುವ 98% ಅವಕಾಶವಿರುತ್ತದೆ. ಇವುಗಳಲ್ಲಿ ಯಾವುದನ್ನಾದರೊಂದನ್ನು ಪೂರೈಸದಿದ್ದರೆ, ನಂತರ ಗರ್ಭಧಾರಣೆಯ ಹೆಚ್ಚಿನ ಅವಕಾಶವಿದೆ. 

 

ಮಿಥ್ಯ # 7: ಹಾಲು ಪಂಪ್ ಮಾಡಲು ಬಳಸಿದ ನಂತರ ನಿಮ್ಮ ಮಗು ಸ್ತನಹಾಲನ್ನು ತಿರಸ್ಕರಿಸುತ್ತದೆ 

 

ಸತ್ಯ: ಹೆಚ್ಚಿನ ಶಿಶುಗಳಿಗೆ ಬಾಟಲಿ ಹಾಲು ಮತ್ತು ಎದೆ ಹಾಲು ನಡುವೆ ಯಾವುದೇ ಸಮಸ್ಯೆಗಳಿಲ್ಲ. ಕನಿಷ್ಠ ಒಂದು ತಿಂಗಳಾದರೂ ನಿಮ್ಮ ಮಗುವಿಗೆ ಕೇವಲ ಎದೆ ಹಾಲು ಮಾತ್ರ ನೀಡಿರಿ. ನಂತರ ಬೇಕಿದ್ದಲ್ಲಿ ನೀವು ದಿನಕ್ಕೆ ಒಂದು ಬಾಟಲಿಯನ್ನು ಪರಿಚಯಿಸಬಹುದು ಮತ್ತು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಾಟಲಿ ಪ್ರಮಾಣವನ್ನು ಹೆಚ್ಚಿಸಬಹುದು. ಬೆಳೆದ ಶಿಶುಗಳು, ಬಾಟಲಿ ಹಾಲಿನ ಪರಿಚಯಿಸಿದ ನಂತರ ಎದೆ ಹಾಲಿನ ಬಗ್ಗೆ ಒಲವು ತೋರದಿರುವುದು ಸಾಮಾನ್ಯವಾಗಿದೆ.  ಮತ್ತು ಇದು ಕೆಟ್ಟ ಬೆಳವಣಿಗೆಯಲ್ಲ. ಶಿಶುಗಳು ಹಾಲುಣಿಸುವಿಕೆಯನ್ನು ನಿರಾಕರಿಸುವ ಸಾಮಾನ್ಯ ಕಾರಣಗಳು ಉಸಿರಾಟದ ತೊಂದರೆಗಳು, ನಿಧಾನವಾಗಿ ಹಾಲು ಪೂರೈಕೆ ಅಥವಾ ಸಾಕಷ್ಟು ಹಾಲು ಸಿಗದಿರುವುಕೆ, ಅಥವಾ ಎದೆ ಹಾಲಿಗೆ ಸ್ವತಃ ಸಮಸ್ಯೆಗಳು (ಮೊಸ್ಟಿಟಿಸ್) ಹಾಲೂಡಿಸುವ ಭಂಗಿಗಳಲ್ಲಿ ಬದಲಾವಣೆಗಳು ಎಂದು ಸಂಶೋಧನೆ ತೋರಿಸಿದೆ. 

ಹಕ್ಕುತ್ಯಾಗ: 

ಲೇಖನದಲ್ಲಿ ಒದಗಿಸಿದ ಎಲ್ಲಾ ಮಾಹಿತಿಯು ಕೇವಲ ತಿಳುವಳಿಕೆಗಾಗಿ ಮಾತ್ರ. ದಯವಿಟ್ಟು ಇದನ್ನು ವೈದ್ಯಕೀಯ ಸಲಹೆ ಎಂದು ಪರಿಗಣಿಸಬೇಡಿ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ನಿಮ್ಮ ವೈದ್ಯರನ್ನು ತಕ್ಷಣ ಸಂಪರ್ಕಿಸಿ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon