Link copied!
Sign in / Sign up
15
Shares

ಮಗುವಿಗೆ ಎದೆ ಹಾಲು ನೀಡುವ ಬಗ್ಗೆ ಸಂಪೂರ್ಣ ವಿವರ


ನಿಮಗೆ ಎಲ್ಲಿಯವರೆಗೂ ಎದೆಹಾಲು ನೀಡಲು ಸಾಧ್ಯವೋ, ಅಲ್ಲಿಯವರೆಗೆ ನೀವು ಎದೆಹಾಲು ನೀಡಬೇಕು ಎಂಬ ಮಾತನ್ನು ಕೇಳುತ್ತಲೇ ಇರುತ್ತೀರ. ಆದರೆ ನಿಮ್ಮ ಮಗುವು ಬೆಳೆದಂತೆಲ್ಲಾ ಅದಕ್ಕೆ ಎದೆಹಾಲು ಕುಡಿಯುವುದು ಅನೇಕ ಕಾರಣಗಳಿಂದ ಮೊದಲಿನಷ್ಟು ಹಿತಕರ ಅನಿಸದೇ ಇರಬಹುದು. ಎದೆಹಾಲು ನೀಡುವುದಕ್ಕೆ ಮತ್ತು ಮಗುವು ತನಗೆ ಅಗತ್ಯವಿರುವ ಪೋಷಕಾಂಶಗಳನ್ನ ಪಡೆದುಕೊಳ್ಳಲು ಸಹಾಯ ಮಾಡುವಂತಹ ಕೆಲವು ಸಲಹೆಗಳನ್ನ ನಾವು ನೀಡುತ್ತೇವೆ ಓದಿ.

ದೊಡ್ಡ ಮಗುವಿಗೆ ಹಾಲು ಕುಡಿಸುವಾಗ ನೆನಪಲ್ಲಿರಬೇಕಾದ ವಿಷಯಗಳು

1. ಗಡಿಯಾರದ ಮೇಲೆ ನಿಮ್ಮ ಗಮನ ಇರದಿರಲಿ

ನಿಮ್ಮ ಮಗುವು ಬೆಳದಂತೆಲ್ಲವೂ ಅದು ಎದೆಹಾಲು ಹೀರುವ ಸಮಯವು ಸ್ವಲ್ಪ ಸ್ವಲ್ಪವೇ ಕಡಿಮೆ ಆಗುತ್ತಾ ಬರುತ್ತದೆ. ಹೊಸತರಲ್ಲಿ ನಿಮ್ಮ ಮಗುವಿಗೆ ಎದೆಹಾಲು ಹೀರುವುದು ಹೊಸತು ಆಗಿರುತ್ತದೆ, ಹೀಗಾಗಿ ಮಗುವು ಹಾಲು ಹೀರಿ ಹೊಟ್ಟೆ ತುಂಬಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅದು ಬೆಳೆದಂತೆಲ್ಲಾ ಕಚ್ಚಿಕೊಳ್ಳುವುದು ಮತ್ತು ಹೀರುವುದನ್ನು ಸರಿಯಾಗಿ ಕಲಿಯುವ ಕಾರಣ, ಸ್ವಲ್ಪವೇ ಸಮಯ ತೆಗೆದುಕೊಳ್ಳುತ್ತದೆ. ಮಗು ತೆವಳಲು ಅಥವಾ ನಡೆಯಲು ಕಲಿಯುವಷ್ಟು ದೊಡ್ಡದಾದ ಮೇಲೆ ಒಮ್ಮೆಗೆ ಕೇವಲ 2 ನಿಮಿಷಗಳವರೆಗೆ ಮಾತ್ರ ಎದೆಹಾಲು ಹೀರುತ್ತದೆ. ಹೀಗೆಂದ ಮಾತ್ರಕ್ಕೆ ಮಗುವಿಗೆ ಸಾಕಾಗುವಷ್ಟು ಪೋಷಕಾಂಶಗಳು ದೊರೆಯುತ್ತಿಲ್ಲ ಎಂಬುದಲ್ಲ. ಹೀಗಾಗಿ ನೀವು ಆತಂಕ ಪಡಬೇಕಿಲ್ಲ.

2. ರಾತ್ರಿ ಹಾಲು ಕುಡಿಸುವುದು ನಿಮಗೆ ವರವಾಗಬಹುದು

ಬಹುತೇಕ ಮಕ್ಕಳು ಒಂದಲ್ಲ ಒಂದು ಸಮಯದಲ್ಲಿ ರಾತ್ರಿ ಮಲಗಲು ಹಠ ಮಾಡುವರು ಮತ್ತು ಪದೇ ಪದೇ ಎಚ್ಚರಗೊಂಡು ಗೋಳಿಡುವರು. ಇಂತಹ ಸಮಯದಲ್ಲಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸ ಎಂದರೆ ಅದು ನಿಮ್ಮ ಮಗುವಿಗೆ ಮಲಗುವಂತೆ ಪೋಷಿಸುವುದು. ಆ ಬಾಂಧವ್ಯದ ಕ್ಷಣಗಳು ಮತ್ತು ನಿಮ್ಮ ತೋಳುಗಳು ನೀಡುವ ಆರಾಮ ನಿಮ್ಮ ಮಗುವು ನಿದ್ದೆಗೆ ಮರಳಲು ಸಾಕು.

3. ಸಾರ್ವಜನಿಕವಾಗಿ ಹಾಲು ಕುಡಿಸುವುದು ಮೊದಲಿನಷ್ಟು ಆರಾಮದಾಯಕವಲ್ಲ

ಸಾರ್ವಜನಿಕ ಸ್ಥಳಗಳಲ್ಲಿ ವಕ್ರದೃಷ್ಟಿಗೆ ಗುರಿಯಾಗುವ ಕಾರಣದಿಂದಲೇ ಬಹಳಷ್ಟು ಅಮ್ಮಂದಿರು ಎದೆಹಾಲು ನೀಡಲು ಮುಜುಗರ ಪಟ್ಟುಕೊಳ್ಳುವವರು. ಸ್ವಲ್ಪ ದೊಡ್ಡದಿರುವ ಮಗುವಿಗೆ ಹಾಲು ಕುಡಿಸಬೇಕೆಂದರಂತೂ ಇದಕ್ಕಿಂತಲೂ ಮುಜುಗರ. ಒಂದು ವೇಳೆ ನಿಮಗೆ ಇಂತಹ ಮುಜುಗರ ಇಲ್ಲವೆಂದರೆ, ಅದು ನಿಜಕ್ಕೂ ಒಳ್ಳೆಯ, ಅದ್ಭುತ ವಿಷಯವೇ! ಆದರೆ ನಿಮಗೆ ಮುಜುಗರವಿದ್ದರೆ ನಿಮ್ಮೊಂದಿಗೆ ಯಾವಾಗಲೂ ಒಂದು ಹೊದಿಕೆ ಅಥವಾ ದುಪ್ಪಟ್ಟವನ್ನ ಕೊಂಡೊಯ್ಯಿರಿ.

4. ಹೆಚ್ಚು ಅಡಚನೆಗಳು

ಇದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ನಿಮ್ಮ ಮಗುವು ಕೇವಲ ಹಾಲು ಕುಡಿಯುವುದರ ಮೇಲೆ ಮಾತ್ರ ಗಮನ ಹರಿಸುವುದಿಲ್ಲ. ಮಗುವಿನ ಸುತ್ತಮುತ್ತಲಿರುವ ಸಣ್ಣ ಸಣ್ಣ ವಸ್ತು ಕೂಡ ಅದರ ಗಮನವನ್ನ ತನ್ನೆಡೆಗೆ ಸೆಳೆಯಬಹುದು. ಹೀಗಾಗಿ ನೀವು ಸ್ವಲ್ಪ ಹಠಮಾರಿ ಮಗುವಿನೊಂದಿಗೆ ನಿಭಾಯಿಸುವ ಪರಿಸ್ಥಿತಿ ಉಂಟಾಗುತ್ತದೆ.

5. ನಿಮ್ಮ ಹಾರ್ಮೋನುಗಳು ತಮ್ಮ ಆಟ ಶುರು ಮಾಡುತ್ತವೆ

ನಿಮಗೆ ಹೆರಿಗೆ ಆದ ನಂತರದ ಕೆಲವು ತಿಂಗಳುಗಳ ಕಾಲ ಪಿರಿಯಡ್ಸ್ ಉಂಟಾಗಿರುವುದಿಲ್ಲ. ಆದರೆ ಅದು ಈಗಲ್ಲವೆಂದರೆ ಯಾವಾಗಲಾದರೂ ವಾಪಸ್ ಬರಲೇ ಬೇಕು. ನಿಮ್ಮ ಋತುಚಕ್ರದ ಆರಂಭದಲ್ಲಿ ನಿಮ್ಮ ಮಗುವು ಹೀರುವ ಹಾಲಿನ ರುಚಿಯು ಬದಲಾಗಬಹುದು ಮತ್ತು ಇದು ಸಂಪೂರ್ಣವಾಗಿ ಸಹಜವೇ. ತಿಂಗಳಿನ ಆ ದಿನಗಳಲ್ಲಿ ನಿಮ್ಮ ಎದೆಹಾಲಿನ ಪ್ರಮಾಣ ಕೂಡ ಹೆಚ್ಚು ಕಡಿಮೆ ಆಗಬಹುದು.

ನಿಮ್ಮ ಬಹುದಿನದ ಕನಸಾದ ತಾಯ್ತನ ಕೊನೆಗೂ ನಿಮಗೀಗ ಲಭಿಸಿದೆ. ನಿಮ್ಮ ಮುದ್ದು ಕಂದಮ್ಮನನ್ನ ಮನೆಗೆ ಬರಮಾಡಿಕೊಂಡಿರುವಿರಿ. ಈಗ ಆ ಮಗುವಿಗೆ ಎದೆಹಾಲು ನೀಡುತ್ತಿರುವಿರಿ. ಆದರೆ ಎದೆಹಾಲು ನೀಡುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಎದೆಹಾಲು ನೀಡುವಿಕೆಯಲ್ಲೂ ಹಲವಾರು ರೀತಿಯ ತೊಂದರೆಗಳು ಎದುರಾಗಬಹುದು. ಈ ತೊಂದರೆಗಳು ನಿಮಗೂ ಮತ್ತು ನಿಮ್ಮ ಮಗುವಿಗೆ ಇಬ್ಬರಿಗೂ ಆರೋಗ್ಯ ಸಮಸ್ಯೆಗಳನ್ನ ತಂದು ಒಡ್ಡಬಹುದು.

ಎದೆಹಾಲು ಕೊಡುವಾಗ ಉಂಟಾಗಬಾರದ ವಿಷಯಗಳು

ಇವುಗಳೆಲ್ಲಾ ಏನೇ ಇದ್ದರೂ, ಸಿಹಿ ಸುದ್ದಿ ಏನೆಂದರೆ, ನಿಮಗೆ ಸೂಕ್ತ ವೈದ್ಯಕೀಯ ಸಹಾಯ ಮತ್ತು ಕೌಟುಂಬಿಕ ಸಹಾಯ ಸಿಗುವವರೆಗೂ ಈ ಎಲ್ಲಾ ತೊಂದರೆಗಳು ಕೇವಲ ತಾತ್ಕಾಲಿಕ. ಒಂದು ವೇಳೆ ನೀವು ಎದೆಹಾಲು ಕುಡಿಸಲು ಆಗುವುದೇ ಇಲ್ಲ ಎಂದಾದರೂ, ಅದು ಕೂಡ ಓಕೆ. ಅದಕ್ಕೂ ಪರಿಹಾರಗಳು ಇವೆ. ಹಾಗಿದ್ದರೆ, ನೀವು ಎದೆಹಾಲು ನೀಡುವ ವೇಳೆ ಉಂಟಾಗಬಾರದ ವಿಷಯಗಳು ಯಾವುದೆಂದು ತಿಳಿಯೋಣ ಬನ್ನಿ.

1. ನಿಮ್ಮ ಮಗುವು ದಿನವಿಡೀ ತಿನ್ನುತ್ತಿರುವುದು

ನಿಮ್ಮ ಎದೆಹಾಲಿನ ಉತ್ಪತ್ತಿ ಮತ್ತು ಪೂರೈಕೆ ಸರಿಯಾಗಿದ್ದರೆ, ನಿಮ್ಮ ಮಗುವು ಅರ್ಧ ಗಂಟೆಗೊಮ್ಮೆ ಅಥವಾ ಗಂಟೆಗೆ ಒಮ್ಮೆ ಹಾಲು ಕುಡಿಯಲು ಕೇಳಿದರೂ, ಅದು ಸಹಜವೇ, ಏನು ತೊಂದರೆ ಇಲ್ಲ.

ಆದರೆ, ನೀವು ನಿಮ್ಮ ಮಗುವನ್ನು ಈಗಷ್ಟೇ ಆಸ್ಪತ್ರೆಯಿಂದ ಮನೆಗೆ ಕರೆತಂದಿದ್ದು, ನಿಮ್ಮ ಮಗುವು ದಿನದ 24 ಗಂಟೆಯೂ ನಿಮ್ಮ ಮೊಲೆಗೇ ಕಚ್ಚಿಕೊಂಡು ಇರುತ್ತದೆ ಎಂದರೆ, ನಿಮ್ಮ ಎದೆಯಲ್ಲಿ ಬೇಕಾದಷ್ಟು ಹಾಲು ಉತ್ಪತ್ತಿ ಆಗುತ್ತಿಲ್ಲ ಎಂಬುದರ ಸೂಚನೆ ಆಗಿರಬಹುದು ಅಥವಾ ಹಾಲು ಇದ್ದು ಮಗುವಿಗೆ ಸರಿಯಾಗಿ ಹೀರಲು ಆಗುತ್ತಿಲ್ಲ ಎಂದಿರಬಹುದು.

 

2. ಹಾಲು ನೀಡುವುದೆಂದರೆ ನಿಮಗೆ ಆಗುವುದಿಲ್ಲ

ಒಂದು ವೇಳೆ ನಿಮಗೆ ಎದೆಹಾಲು ನೀಡುವ ಮುನ್ನ ಅಥವಾ ನೀಡುವಾಗ, ಬೇಸರ, ಕೋಪ ಅಥವಾ ಆತಂಕದಂತಹ ನಕಾರಾತ್ಮಕ ಭಾವನೆಗಳು ಉಂಟಾದರೆ, ಆ ಅಸ್ವಸ್ಥತೆಯನ್ನು D-MER ಎನ್ನುತ್ತಾರೆ. ನಿಮಗೂ ಇದು ಎದುರಾಗುತ್ತಿದ್ದರೆ ನೀವು ಮಗುವಿಗೆ ಘನ ಆಹಾರ ನೀಡಲು ಶುರು ಮಾಡಬಹುದು ಅಥವಾ ಬ್ರೆಸ್ಟ್ ಪಂಪ್ ಮಾಡಬಹುದು ಅಥವಾ ಎದೆಹಾಲು ನೀಡುವುದು ಮುಂದುವರೆಸಬಹುದು. ಇದು ಬಹುದಿನಗಳಿಂದ ಕಾಡುತ್ತಲೇ ಇದ್ದರೆ, ವೈದ್ಯಕೀಯ ನೆರವು ಪಡೆದುಕೊಳ್ಳಲು ಹಿಂದೇಟು ಹಾಕಬೇಡಿ.

 

3.ನೀವು ಯಾವಾಗಲೂ ನೋವಿನಲ್ಲೇ ಇರುತ್ತೀರ

ಎದೆಹಾಲು ನೀಡುವುದು ದೈಹಿಕ ನೋವಿನ ವಿಷಯವೇ. ಅದರಲ್ಲೂ ಮೊದಲು ಕೆಲವು ದಿನಗಳಲ್ಲಿ ಮಗುವು ಸರಿಯಾಗಿ ಕಚ್ಚಿಕೊಳ್ಳದೇ ಇರುವುದು, ಕಚ್ಚುವುದರಿಂದ ಆಗುವ ಸೋಂಕು, ಬ್ಯಾಕ್ಟೀರಿಯಾ ಸೋಂಕು, ಹೀಗೆ ಹಲವಾರು. ಆದರೆ ಕೆಲವೊಮ್ಮೆ ಮಗುವು ಸರಿಯಾಗಿ ಕಚ್ಚಿಕೊಳ್ಳುತ್ತಿದ್ದರೂ ನಿಮ್ಮ ತೊಟ್ಟುಗಳು ನೋವಬಹುದು. ಈ ಸಮಸ್ಯೆಯನ್ನ ನಿಪ್ಪಲ್ ವಸೊಸ್ಪಾಸ್ಮ್ ಎಂದು ಕರೆಯುವರು ಮತ್ತು ಇದು ಉಂಟಾಗುವುದು ರಕ್ತನಾಳಗಳ ಕಾರ್ಯಕ್ಕೆ ಅಡ್ಡಿಯಾಗುವುದರಿಂದ. ಇದರಿಂದ ನಿಮ್ಮ ಮೊಲೆತೊಟ್ಟುಗಳು ಅಷ್ಟೇ ಅಲ್ಲದೆ ನಿಮ್ಮ ಎದೆಯ ಒಳಗೂ ಆಳದಲ್ಲಿ ನೋವು ಉಂಟಾಗಬಹುದು. ಇಂತಹ ಸಮಯದಲ್ಲಿ ನೀವು ವೈದ್ಯರನ್ನ ಭೇಟಿ ಮಾಡಿದರೆ, ಅವರು ನಿಮಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ.

 

4.ನಿಮ್ಮ ಮಗುವು ತೂಕ ಕಳೆದುಕೊಳ್ಳುತ್ತಿದೆ ಅಥವಾ ತೂಕ ಗಳಿಸಿಕೊಳ್ಳುತ್ತಿಲ್ಲ

ಮಗುವು ಮೊದಲಿಗೆ ತೂಕ ಕಳೆದುಕೊಳ್ಳುವುದು ಸಹಜ, ಆದರೆ ನಿಮ್ಮ ಮಗುವಿನ ಜನನದ ತೂಕಕ್ಕಿಂತ 7% ಅಷ್ಟು ತೂಕ ಕಡಿಮೆ ಆದರೆ, ನಿಮ್ಮ ಮಗುವಿಗೆ ಆಹಾರ ಸಾಕಷ್ಟು ಸಿಗುತ್ತಿದೆಯೇ ಎಂಬುದನ್ನು ನೋಡಬೇಕು. ನಿಮ್ಮಿಂದ ಸಾಕಷ್ಟು ಎದೆಹಾಲು ಉತ್ಪತ್ತಿ ಮಾಡಲು ಆಗುತ್ತಿಲ್ಲವೆಂದರೆ ಪರ್ಯಾಯ ಮಾರ್ಗಗಳನ್ನ ಬಳಸಿ.

 

5.ನಿಮ್ಮ ಎದೆಯಲ್ಲಿ ಗಂಟು ಅಲುಗಾಡದ ಗಂಟು ಇದ್ದರೆ

ಎದೆಹಾಲು ನೀಡುವಾಗ ನಿಮ್ಮ ಸ್ತನಗಳಲ್ಲಿ ಗಂಟುಗಳು, ಉಬ್ಬುಗಳು ಉಂಟಾಗುವುದು ಸಹಜ. ಆದರೆ, ಅಲುಗಾಡದ ಅಥವಾ ಹೋಗಲಾಗಿಸಲು ಆಗದೆ ಇದ್ದರೆ, ನೋವು ಉಂಟು ಮಾಡುತ್ತಿದ್ದರೆ ಅಥವಾ ನಿಮ್ಮ ಮೊಲೆತೊಟ್ಟುಗಳು ಅತಿಯಾಗಿ ಉರಿಯುತ್ತಿದ್ದರೆ, ನೀವು ಕೂಡಲೇ ವೈದ್ಯರನ್ನ ಭೇಟಿ ಮಾಡಬೇಕು.

ಎದೆಹಾಲು ಸೇವಿಸುವಾಗ ಸೇವಿಸಬೇಕಾದ ಆಹಾರಗಳು

ಮಗುವಿನ ಬೇಡಿಕೆಗಳಿಗೆ ಆದ್ಯತೆ ನೀಡುವ ನೀವು ಯಾವತ್ತೂ ಮಗುವಿಗೆ ಹಾಲೂಡಿಸುವುದರಲ್ಲಿ ಬಿಸಿಯಾಗಿರಬಹುದು. ನಿಮ್ಮ ಮನಸ್ಸು ಯಾವತ್ತೂ ಮಗುವಿನ ಆರೋಗ್ಯದ ಬಗ್ಗೆಯೇ ಆಲೋಚಿಸುತ್ತಿರುತ್ತದೆ. ಮಗುವಿಗೆ ಉತ್ತಮ ಪೋಷಕಾಂಶಗಳು ದೊರೆಯುವಂತೆ ಯಾವ ಆಹಾರಗಳನ್ನು ತಾಯಿ ಸೇವಿಸಬೇಕು ಎನ್ನುವುದರ ಬಗ್ಗೆ ಹಗಲಿರುಳೂ ಅಧ್ಯಯನ ಮಾಡುತ್ತಿದ್ದಿರಬಹುದು.

ಆದರೆ ನಿಮ್ಮ ಕಣ್ಣ ಮುಂದೆಯೇ ಕಾಣಸಿಗುವ ಅತ್ಯುತ್ತಮ ಆಹಾರವನ್ನು ನೀವು ಕಾಣದೆ ಹೋಗಿರಬಹುದು, ಹೌದು...ಹಣ್ಣುಗಳು !! ಮಗುವಿಗೆ ಅಗತ್ಯವಾಗಿರುವ ಆ್ಯಂಟಿ ಆಕ್ಸಿಡೆಂಟ್ಸ್, ಅಗತ್ಯವಾದ ನಾರಿನಂಶ ಮತ್ತು ಮಿನರಲ್ಸ್ಗಳು ಹೇರಳವಾಗಿರುವ ಹಣ್ಣುಗಳು ಮೊಲೆಯೂಡಿಸುವ ತಾಯಿಯರಿಗೆ ಅಗತ್ಯವಾದ ಚೈತನ್ಯವನ್ನೂ ನೀಡುತ್ತದೆ.

1 ಸ್ಟ್ರಾಬೆರಿ

strawberry

ವಿಟಾಮಿನ್ - ಸಿ ಯನ್ನು ಒಳಗೊಂಡಿರುವ ಸ್ಟ್ರಾಬೆರಿಯನ್ನು ಎಲ್ಲ ತಾಯಿಯರು ದಿನಕ್ಕೆ 120mg ಅಷ್ಟನ್ನಾದರೂ ತಿನ್ನಬೇಕೆಂದು ಶಿಫಾರಸು ಮಾಡಲಾಗಿದೆ.ಹೇರಳವಾಗಿ ದ್ರವಾಂಶಗಳನ್ನು ಒಳಗೊಂಡಿರುವ ಸ್ಟ್ರಾಬೆರಿಯು ನಿಮ್ಮ ಶರೀರವನ್ನು ನಿರ್ಜಲೀಕರಣದಿಂದ ರಕ್ಷಿಸುವುದರಿಂದ, ನೀವು ತೋರಿದಾಗಲೆಲ್ಲಾ ನಿಮ್ಮ ಮಗುವಿಗೆ ಮೊಲೆಯೂಡಿಸಬಹುದು.

 

2 ಸಪೋಟ (ಚಿಕ್ಕು)

sapota

ಮಗುವು ಹಗಲಿರುಳೂ ನಿಮ್ಮ ಸೇವೆಯನ್ನು ಬಯಸುವುದರಿಂದ ಕೆಲವೊಮ್ಮೆ ನೀವು ನಿಶ್ಯಕ್ತರಾಗಬಹುದು. ಮೊಲೆಯೂಡಿಸುವುದು ಕೂಡ ಒಂದು ರೀತಿಯ ಆಯಾಸದ ಕೆಲಸವೇ ಹೌದು. ನಿಮ್ಮ ಮಕ್ಕಳಿಗೆ ನಿಶ್ಯಕ್ತಿ ಹಾಗೂ ತೂಕಡಿಕೆಯನ್ನು ನಿಯಂತ್ರಿಸಲು ಬೇಕಾದಂತಹ ಚೈತನ್ಯವು, ಚಿಕ್ಕು ನಿಮಗೆ ನೀಡುತ್ತದೆ.

 

3 ನೇರಳೆ ಹಣ್ಣುಗಳು ( ಬ್ಲುಬೆರಿ )

ನೇರಳೆ

ಹೇರಳವಾಗಿ ಸಿಟ್ರಸ್ ಅನ್ನು ಒಳಗೊಂಡಿರುವ ಬ್ಲೂಬೆರಿ ಉತ್ತಮ ಆ್ಯಂಟಿ ಆಕ್ಸಿಡೆಂಟ್ಸ್ ಕೂಡ ಹೌದು. ನೇರಳೆ ಹಣ್ಣುಗಳು ,ಇತರ ಹಣ್ಣುಗಳಿಗಿಂತ ಅಧಿಕ ಪ್ರಮಾಣದಲ್ಲಿ ಅಂಟಿ ಓಕ್ಸಿಡೆಂಟ್ಸ್ ಅನ್ನು ಒಳಗೊಂಡಿದೆ. ಎದೆಹಾಲಿನ ಮೂಲಕ ವರ್ಗಾಯಿಸಲ್ಪಡುವ ಆ್ಯಂಟಿಓಕ್ಸಿಡೆಂಟಿನ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ, ನಿಮ್ಮ ಮಗುವಿಗೆ ಎದೆಹಾಲಿನ ಮೂಲಕ ಆ್ಯಂಟಿಓಕ್ಸಿಡೆಂಟ್ಗಳು ವರ್ಗಾಯಿಸಲ್ಪಡುತ್ತದೆಯೆನ್ನುವುದಂತೂ ಸತ್ಯ.

 

4 ಬಾಳೇಹಣ್ಣುಗಳು

banana

ಹೇರಳವಾಗಿ ಪೊಟಾಶಿಯಂನ್ನು ಒಳಗೊಂಡಿರುವ ಬಾಳೆಹಣ್ಣುಗಳು ಗರ್ಭಿಣಿಯರು ಸೇವಿಸುವುದು ಅತ್ಯುತ್ತಮ.ಶರೀರದ ಇಲೆಕ್ಟ್ರೋಲೈಟ್ ಹಾಗೂ ದ್ರವಾಂಶಗಳನ್ನು ಸರಿದೂಗಿಸಬೇಕಾದ ಅಗತ್ಯವಿರುವುದರಿಂದ, ಎದೆ ಹಾಲೂಡಿಸುವ ತಾಯಿಯರು ಅತ್ಯಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂನ್ನು ಆರ್ಜಿಸಿಕೊಳ್ಳಬೇಕಾದ್ದು ಅಗತ್ಯ.

 

5 ಪಪಾಯ

papaya

ಹೇರಳವಾಗಿ ಗಾಲಾಕ್ಟಾಗ್ಲೋಗನ್ನು ಒಳಗೊಂಡಿರುವ ಪಪಾಯವು ತಾಯಿಯರ ಅಮೃತದ ಹೆಚ್ಚಿನ ಪ್ರಮಾಣದ ಒಸರುವಿಕೆ ಕಾರಣವಾಗುವುದು. ವಿಟಾಮಿನ್ A,B, E,ಮತ್ತು D ಯನ್ನು ಒಳಗೊಂಡಿರುವ ಪಪಾಯ ಹಣ್ಣಿನ ರಸವೂ ಎದೆ ಹಾಲಿನ ಉತ್ಪಾದನೆಗೆ ಕಾರಣವಾಗುತ್ತದೆ.

 

6 ಕರ್ಭೂಜ (ಕಾಂಟಲೊಪ್)

karbooja

ನಿಮ್ಮ ಶರೀರಕ್ಕೆ ಪೂರ್ಣ ಪ್ರಮಾಣದ ಪೋಷಕಾಂಶಗಳ ಅಗತ್ಯವಿದೆ. ಆದಕಾರಣ ಅಗತ್ಯವಿರುವ ಪೋಷಕಾಂಶಗಳನ್ನು ಶರೀರಕ್ಕೆ ಪೂರೈಸುವುದು ನಿಮ್ಮ ಕರ್ತವ್ಯ. ಹಾಲೂಡಿಸುವ ಸ್ತ್ರೀಯರು ಆರೋಗ್ಯವಾಗಿರಲು ಅಗತ್ಯವಾದ ಎಲ್ಲ ಹಣ್ಣುಗಳನ್ನು ಸೇವಿಸಬೇಕಾದದ್ದು ಅತೀ ಅಗತ್ಯ.

 

7 ಬಟರ್ ಫ್ರೂಟ್ ( ಅವಕಾಡೊ)

avacado

ಒಮೆಗಾ-೩, ಒಮೆಗಾ-೭ಮತ್ತು ಒಮೆಗಾ-೮ ಫ್ಯಾಟಿ ಆಸಿಡ್ ಅನ್ನು ಹೇರಳವಾಗಿ ಶೇಖರಿಸಿಟ್ಟುಕೊಂಡಿರುವ ಬಟರ್ ಫ್ರೂಟ್ಗಳ ಸೇವನೆಯಿಂದ ಎದೆಹಾಲಿನ ಉತ್ಪಾದನೆಗೆ ಅತಿ ಅಗತ್ಯವಾದ ಅಮೈನೋ ಆ್ಯಸಿಡ್ಗಳು ಲಭ್ಯವಾಗುತ್ತದೆ. ಇದು ನಿಮ್ಮ ಮಗುವನ್ನು ಆರೋಗ್ಯ ಹಾಗೂ ದಷ್ಟಪುಷ್ಟವಾಗಿಸುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon