Link copied!
Sign in / Sign up
3
Shares

ಬ್ಲಾಕ್ ಟೀಯ ೧೦ ಆಸಕ್ತಿಕರ ಅರೋಗ್ಯ ಪ್ರಯೋಜನಗಳು (10 Interesting Health Benefits Of Black Tea in Kannada)

ಬ್ಲಾಕ್ ಟೀ ಕುಡಿಯುವುದು ಕೇವಲ ಒಂದು ಪ್ರವೃತ್ತಿಯಲ್ಲ. ಅದು ಜೀವನದ ಒಂದು ಪ್ರಮುಖ ಅಭ್ಯಾಸವಾಗಿದೆ. ಬಿಳಿಗ್ಗೆ ಎದ್ದ ತಕ್ಷಣ ಅಥವಾ ನಿಮ್ಮ ದಿನನಿತ್ಯದ ವ್ಯಾಯಾಮದ ನಂತರ ಈ ನಿರ್ದಿಷ್ಟ ಬಗೆಯ ಚಹಾವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಹೊಸಾ ಚೈತನ್ಯವನ್ನು ಮೂಡಿಸುತ್ತದೆ. ಆದರೆ ಸಮಸ್ಯೆಯೆಂದರೆ ಹಲವರು ಈ ಚಹಾವನ್ನು ಬೇರೆಯವರ ಹೇಳಿದರು ಎಂದೋ ಅಥವಾ ಯಾವುದೊ ವಾಟ್ಸಾಪ್ ಸಂದೇಶವನ್ನು ಓದಿದ್ದೀವಿ ಅಂತಲೋ ಕುಡಿಯುತ್ತಾರೆ. ಇಂದು ನಾವು ಕಪ್ಪು ಚಹಾ ಅಥವಾ ಬ್ಲಾಕ್ ಟೀ ಕುರಿತು ನಿಮಗಿರುವ ಎಲ್ಲಾ ಅನುಮಾನಗಳನ್ನು ತೆರವುಗೊಳಿಸಿ, ಅದರ ಅರೋಗ್ಯ ಪ್ರಯೋಜನಗಳನ್ನು ಚರ್ಚಿಸಲಾಗಿದೆ. ನಾವು ಕೇವಲ ಕಪ್ಪು ಚಹಾದ ಅರೋಗ್ಯ ಪ್ರಯೋಜನಗಳನ್ನಷ್ಟೇ ಅಲ್ಲದೆ, ಅಡ್ಡಪರಿಣಾಮಗಳ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಅವುಗಳ ಬಗ್ಗೆ ಓದಲು ಈ ಲೇಖನವನ್ನು ಓದಿರಿ. 

ಪರಿವಿಡಿ: 

೧. ಕಪ್ಪು ಚಹಾ ಎಂದರೇನು? (What Is Black Tea? in Kannada)

೨. ಕಪ್ಪು ಚಹಾದ ಪೌಷ್ಟಿಕ ಮೌಲ್ಯ (Nutritional Value Of Black Tea in Kannada)

೩. ಕಪ್ಪು ಚಹಾ ಅರೋಗ್ಯ ಪ್ರಯೋಜನಾಗಳು (Health Benefits Of Black Tea in Kannada)

೪. ಕಪ್ಪು ಚಹಾದ ಅಡ್ಡಪರಿಣಾಮಗಳು (Black Tea Side Effects in Kannada)

೫. ನಿರ್ಣಯ (Conclusion in Kannada)

೧. ಕಪ್ಪು ಚಹಾ ಎಂದರೇನು? (What Is Black Tea? in Kannada)

ಬ್ಲಾಕ್ ಟೀ ಅಥವಾ ಕಪ್ಪು ಚಹಾ ಬೇರೆ ಉತ್ಕರ್ಷಣ ಕ್ರಿಯೆಗೆ ಒಳಗಾಗಿರುವ ಚಹಾಗಳಿಗಿಂತ ಸ್ವಾದಿಷ್ಟಭರಿತವಾಗಿರುತ್ತದೆ. ಬಲ್ಕ್ ಟೀ ಸಹ ಸಣ್ಣ ಎಳೆಯ ಚೈನೀಸ್ ಸಸ್ಯದಿಂದ ಉತ್ಪತ್ತಿಯಾಗುತ್ತದೆ. ಸರಳವಾಗಿ ಹೇಳುವುದಾದರೆ, ಬ್ಲಾಕ್ ಟೀ ಯಲ್ಲಿ ಹಾಲನ್ನು ಸೇರಿಸುವುದಿಲ್ಲ. 

೨. ಕಪ್ಪು ಚಹಾದ ಪೌಷ್ಟಿಕ ಮೌಲ್ಯ (Nutritional Value Of Black Tea in Kannada):

ಈ ವಿಭಾಗದಲ್ಲಿ ಬ್ಲಾಕ್ ಟೀ ಪೌಷ್ಟಿಕ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ. ಅದರಲ್ಲಿ ಸೊನ್ನೆ ಕೊಬ್ಬೇನಂಶ, ಸೊನ್ನೆ ಕೊಬ್ಬು, ೦.೭ ಗ್ರಾಂ ಕಾರ್ಬೋಹೈಡ್ರೇಟ್ಸ್ ಮತ್ತು ಒಟ್ಟಾರೆ ೨.೪ ಕ್ಯಾಲೋರಿಗಳಿವೆ. ಇದೆ ಕಾರಣದಿಂದ ಬ್ಲಾಕ್ ಟೀ ತೂಕ ಇಳಿಸುವಿಕೆಗೆ ಸೂಕ್ತ ಎನ್ನುತ್ತಾರೆ. ಇದು ಬ್ಲಾಕ್ ಟೀಯ ಅತ್ಯುನ್ನತ ಪ್ರಯೋಜನಗಳಲ್ಲಿ ಒಂದು. 

[Back To Top]

೩. ಕಪ್ಪು ಚಹಾ ಅರೋಗ್ಯ ಪ್ರಯೋಜನಾಗಳು (Health Benefits Of Black Tea in Kannada):

ನಿಮ್ಮಲ್ಲಿ ಹಲವರಿಗೆ ಬ್ಲಾಕ್ ಟೀ ಅರೋಗ್ಯ ಪ್ರಯೋಜನಗಳ ಬಗ್ಗೆ ಅರಿವಿರುವುದಿಲ್ಲ. ಇದರ ಬಗ್ಗೆ ನೀವು ಚಿಂತಿಸಬೇಕಿಲ್ಲ. ನಾವು ನೀವು ತಿಳಿದುಕೊಳ್ಳಬೇಕಾದ ಪ್ರಧಾನ ಅರೋಗ್ಯ ಪ್ರಯೋಜನಗಳ ಬಗ್ಗೆ ವಿಶ್ಲೇಷಿಸುತ್ತೇವೆ. ನೀವು ಇವುಗಳ ಬಗ್ಗೆ ತಿಳಿದ ನಂತರ ಆಶ್ಚರ್ಯಚಕಿತರಾಗುತ್ತೀರಿ. 

೧. ಬ್ಲಾಕ್ ಟೀ ಹೃದಯ ರೋಗಗಳನ್ನು ತಡೆಗಟ್ಟುತ್ತದೆ: ಬ್ಲಾಕ್ ಟೀ ರಕ್ತನಾಳಗಳ ಅಸಹಜ ಕಾರ್ಯಚಟುವಟಿಕೆಗಳ ಕಾರಣದಿಂದ ಉಂಟಾಗಬಹುದಾದ ಪಾರ್ಶ್ವವಾಯು, ಅಪಧಮನಿ ಕಾಠಿಣ್ಯ ಮತ್ತು ಇತರ ಹೃದಯರಕ್ತನಾಳದ ತೊಂದರೆಗಳನ್ನು ನಿಭಾಯಿಸುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಬ್ಲಾಕ್ ಟೀಯಲ್ಲಿರುವ ಹೆಚ್ಚಿನ ಮಟ್ಟದ ಪ್ಲಾವನ್-೩, ಫ್ಲವಾನ್ -3-ಓಲ್ಸ್, ಫ್ಲಾವನ್ಗಳು, ಗ್ಯಾಲಿಕ್ ಆಮ್ಲ ಮತ್ತು ಥೇಅಪ್ಲಾವಿನ್ಸ್ ಗಳು ಹೃದಯ ರೋಗಿಗಳಲ್ಲಿನ ಪರಿಧಮನಿಯ ಅಪಧಮನಿಯ ಅಸಾಮಾನ್ಯ ಕ್ರಿಯೆಯನ್ನು ಸರಿಪಡಿಸುವಲ್ಲಿ ಸಹಾಯ ಮಾಡುತ್ತದೆ. ಬ್ಲಾಕ್ ಟೀಯ ಈ ಪ್ರಯೋಜನ ಎಲ್ಲರಿಗೂ ತಿಳಿದಿರುವುದಿಲ್ಲ. 

೨. ಬ್ಲಾಕ್ ಟೀ ಕುಡಿಯುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು: ಎಲ್ಲರಿಗೂ ತಿಳಿದಿರುವಂತೆ ಮಾನವ ದೇಹದಲ್ಲಿರುವ ಅಸಾಮಾನ್ಯ ಜೀವಕೋಶಗಳಿಂದ ಕ್ಯಾನ್ಸರ್ ರೋಗ ಉಂಟಾಗುತ್ತದೆ. ಬ್ಲಾಕ್ ಟೀಯಲ್ಲಿರುವ ಥೆಯಾಪ್ಲಾವಿನ್ಸ್ ಮಾನವ ದೇಹದ ಅಸಾಮಾನ್ಯ ಜೀವಕೋಶಗಳ ಸಂಹಾರ ಮಾಡಿ, ಸ್ತನ, ಅಂಡಾಶಯ ಮತ್ತು ಚರ್ಮದ ಕ್ಯಾನ್ಸರ್ ತಡೆಗಟ್ಟುತ್ತದೆ. ಋತುಚಕ್ರದ ಸಮಯದಲ್ಲಿ ಇದು ಗ್ಲೋಬುಲಿನ್ ಹಾರ್ಮೋನ್ಗಳ ಮಟ್ಟವನ್ನು ಹೆಚ್ಚಿಸುತ್ತದೆ. ಈ ಅರೋಗ್ಯ ಪ್ರಯೋಜನವು ಚಹಾದ ಗುರುತಿಸದೇ ಹೋದ ಹಲವು ಪ್ರಯೋಜನಗಳಲ್ಲಿ ಒಂದು. 

೩. ಬ್ಲಾಕ್ ಟೀ ಮಧುಮೇಹದ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ: ನೀವು ಭಾಳ ದಿನಗಳಿಂದ ಬ್ಲಾಕ್ ಟೀ ಕುಡಿಯುತ್ತಿದ್ದರೆ, ಅದು ನಿಮ್ಮ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಕಡಿಮೆಗೊಳಿಸಿ, ಟೈಪ್ ೨ ಮಧುಮೇಹ ಉಂಟಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಬ್ಲಾಕ್ ಟೀಯ ಪ್ರಮುಖ ಮತ್ತು ಪ್ರಬಲವಾದ ಸಂಯುಕ್ತಗಳು ಪಾಲಿಫೀನಾಲ್ಗಳಾಗಿವೆ. ಇದು ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡುತ್ತದೆ. ಈ ಯುಗದಲ್ಲಿ ಮಧುಮೇಹ ತುಂಬಾ ಸಾಮಾನ್ಯವಾಗುತ್ತಿದೆ ಮತ್ತು ಇದರಿಂದ ತಪ್ಪಿಸಿಕೊಳ್ಳುವ ಬಯಕೆಯಿದ್ದರೆ, ಬ್ಲಾಕ್ ಟೀ ಅರೋಗ್ಯ ಲಭ್ಯವನ್ನು ಖಚಿತವಾಗಿ ಉಪಯೋಗಿಸಿ. 

೪. ಬ್ಲಾಕ್ ಟೀ ಸೇವಿಸುವುದರಿಂದ ಅಪಾಯಕಾರಿ ಸ್ಟ್ರೋಕ್ಸ್ ತಪ್ಪಿಸಬಹುದು: ಬ್ಲಾಕ್ ಟೀಯ ಈ ಪ್ರಯೋಜನ ಇನ್ನೂ ಸಾಬೀತು ಪಡಿಸಲಾಗಿಲ್ಲ. ಆದರೆ ಇದರ ವಿರುದ್ಧವಾಗಿಯೂ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಈ ಬೇಸಿಗೆಯಲ್ಲಿ ನೀವು ಹಾನಿಕಾರಕ ಸ್ಟ್ರೋಕ್ ಗಳಿಂದ ತಪ್ಪಿಸಿಕೊಳ್ಳಲು ಬಯಸಿದರೆ, ನಿಮಗೆ ಅಗತ್ಯವಿರುವಷ್ಟು ಬ್ಲಾಕ್ ಟೀ ಪ್ರಯೋಜನವನ್ನು ಅನುಭವಿಸಿ. 

೫. ಬ್ಲಾಕ್ ಟೀ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಬ್ಲಾಕ್ ಟೀ ಟ್ಯಾನಿನ್ ನಂತಹ ರಾಸಾಯನಿಕಗಳನ್ನು ಹೊಂದಿದ್ದು, ನಿಮ್ಮ ದೇಹದ ಜೀರ್ಣಕ್ರಿಯೆ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಚಹಾ ಹೆಚ್ಚು ತಿನ್ನಲು ಬಯಸುವವರಿಗೆ ಸೂಕ್ತ. ಇದು ಅವರ ಜೀರ್ಣಾಂಗಗಳನ್ನು ಆರೋಗ್ಯಕರವಾಗಿಡುತ್ತದೆ. ಈ ಚಹಾ ಲಾಭವನ್ನು ಅನುಭವಿಸಿ, ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಿ. 

೬. ಬ್ಲಾಕ್ ಟೀ ನಿಮ್ಮ ಮೌಖಿಕ ಆರೋಗ್ಯವನ್ನು ಸುಧಾರಿಸುತ್ತದೆ: ಬ್ಲಾಕ್ ಟೀಯಲ್ಲಿರುವ ಪೊಲಿಫೆನೋಲ್ಸ್ ಗಳಾದ ಕ್ಯಾಥೆಚಿನ್ಸ್, ಫ್ಲ್ಯಾವೊನೊಯ್ಡ್ಸ್, ಟ್ಯಾನಿನ್ಸ್ ಆಂಟಿಮೈಕ್ರೋಬಿಯಲ್ ಗುಣವನ್ನು ಹೊಂದಿದ್ದು, ಬ್ಯಾಕ್ಟೀರಿಯಾ ಮತ್ತು ಲವಣ ಕಿಣ್ವಗಳ ಮೇಲೆ ಪ್ರತಿಬಂಧಕ ಪರಿಣಾಮವನ್ನು ಬೀರುತ್ತದೆ.  ಹಾಗಾಗಿ, ಪ್ರತಿದಿನ ಒಂದು ಅಥವಾ ಎರಡು ಕಪ್ ಬ್ಲಾಕ್ ಟೀ ಸೇವಿಸುವುದರಿಂದ ಉರಿಯೂತವನ್ನು ಕಡಿಮೆಗೊಳಿಸಿ, ಕ್ಯಾವಿಟಿಗಳನ್ನು ತಡೆಗಟ್ಟಿ, ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ನಿಷೇಧಿಸುತ್ತದೆ. ಬ್ಲಾಕ್ ಟೀಯ ಈ ಪ್ರಯೋಜನವನ್ನು ನೀವು ಹಲ್ಲು ತಿಕ್ಕಿದ ನಂತರ ಕುಡಿಯುವುದರೊಂದಿಗೆ ಅನುಭವಿಸಬಹುದು. 

[Back To Top]

೭. ಬ್ಲಾಕ್ ಟೀ ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ: ಅಧ್ಯಯನದ ಅನುಸಾರ ಮೂಳೆಮುರಿತಕ್ಕೆ ಒಳಗಾಗಬಹುದಾದ ವಯಸ್ಸಾದ ಮಹಿಳೆಯರು ಬ್ಲಾಕ್ ಟೀ ಸೇವಿಸಿದರೆ ಮೂಳೆಮುರಿತವನ್ನು ಅನುಭವಿಸುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಅದಕ್ಕೆ ಕಾರಣ ಬ್ಲಾಕ್ ಟೀಯಲ್ಲಿರುವ ಫ್ಲ್ಯಾವೊನೊಯ್ಡ್ಸ್. ಈ ಪ್ರಖ್ಯಾತಿ ಚಹಾದಲ್ಲಿ ಫೈಟೋಕೆಮಿಕಲ್ಸ್ ಗಳಿದ್ದು, ಅವುಗಳು ಸಂಧಿವಾತದ ಸಂಭವನೀಯತೆಯನ್ನು ಕಡಿಮೆಗೊಳಿಸುತ್ತವೆ. ಆದರೆ ಬ್ಲಾಕ್ ಟೀಯ ಈ ಪ್ರಯೋಜನವನ್ನು ಅನುಭವಿಸುವ ಮುನ್ನ ನಿಮ್ಮ ವೈದ್ಯರೊಂದಿಗೆ ಚರ್ಚಿಸುವುದು ಒಳಿತು. 

೮. ಬ್ಲಾಕ್ ಟೀ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿಡುತ್ತದೆ: ಆಂಟಿಓಕ್ಸಿಡಾಂಟ್ಸ್ ಗಳನ್ನು ಹೊಂದಿರುವ ಬ್ಲಾಕ್ ಟೀ, ಮುಪ್ಪಿನ ಚಿಹ್ನೆಗಳು ಮತ್ತು ಉರಿಯೂತದ ವಿರುದ್ಧ ಹೋರಾಡಿ, ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ನಿಮ್ಮ ಮುಖಕ್ಕೆ ಈ ಚಹಾವನ್ನು ಲೇಪಿಸಿಕೊಂಡರೆ, ಇದು ನಿಮ್ಮ ಚರ್ಮವನ್ನು ಅರ್ಧರಿಕರಿಸಿ, ನಿಮ್ಮ ಮುಖ ಹೊಳೆಯುವಂತೆ ಮಾಡುತ್ತದೆ. ಇದು ನಿಮ್ಮ ಚರ್ಮಕ್ಕೆ ಒಳ್ಳೆಯ ಮನೆಮದ್ದು. ಕೆಲವರು ಬ್ಲಾಕ್ ಟೀಯ ಈ ಪ್ರಯೋಜನವನನ್ನು ಬ್ಲಾಕ್ ಟೀಯ ಅಡ್ಡಪರಿಣಾಮ ಎಂದು ಸಹ ಕರೆಯುತ್ತಾರೆ. ಏಕೆಂದರೆ ಬ್ಲಾಕ್ ಟೀ ಎಲ್ಲ ಬಗೆಯ ಚರ್ಮಗಳಿಗೆ ಸೂಕ್ತವಲ್ಲ. 

೯. ಬ್ಲಾಕ್ ಟೀ ಹಾನಿಕಾರಕ ನೇರಳಾತೀತ ಕಿರಣಗಳಿಂದ ಸಂರಕ್ಷಿಸುತ್ತದೆ: ಬ್ಲಾಕ್ ಮತ್ತು ಗ್ರೀನ್ ಟೀಯನ್ನು ನಿಮ್ಮ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಅವುಗಳಲ್ಲಿರುವ ಪೊಲಿಫೆನೋಲ್ಸ್ ಹಾನಿಕಾರಕ ಕಿರಣಗಳಿಂದ ನಿಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತವೆ. 

೧೦. ಬ್ಲಾಕ್ ಟೀ ಕೊಬ್ಬಿನಂಶ ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ: ಕೊಬ್ಬಿನ ತೊಂದರೆ ಇಂದಿನ ಕಾಲದಲ್ಲಿ ಸಾಮಾನ್ಯವಾಗಿದೆ. ಅತಿಯಾಗಿ ಜಂಕ್ ಫುಡ್ ಸೇವಿಸಿ, ನಂತರ ತಮ್ಮ ದೇಹದ ಕೊಬ್ಬಿನಂಶದ ಬಗ್ಗೆ ಕಾಳಜಿವಹಿಸುವುದಿಲ್ಲ. ಆದರೆ ನೀವು ಚಿಂತಿಸಬೇಕಿಲ್ಲ. ಬ್ಲಾಕ್ ಟೀ ಈ ವಿಷಯದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಹೃದಯದ ಸ್ಟ್ರೋಕ್ ಗಳಂತಹ ಹೃದಯ ಸಂಬಂಧಿತ ಸಮಸ್ಯೆಗಳನ್ನು ಬ್ಲಾಕ್ ಟೀ ಸೇವಿಸುವುದರಿಂದ ನಿಯಂತ್ರಿಸಬಹುದು. 

೪. ಕಪ್ಪು ಚಹಾದ ಅಡ್ಡಪರಿಣಾಮಗಳು (Black Tea Side Effects in Kannada):

ನಿಮ್ಮ ಟೀಯಲ್ಲಿ ಕೆಫೀನ್ ಇರಬಹುದು ಎಂದು ಯೋಚಿಸುತ್ತಿದ್ದೀರಾ? ಬ್ಲಾಕ್ ಟೀ ಅಡ್ಡಪರಿಣಾಮಗಳು ಲಾಭಗಳಿಗಿಂತ ಹೆಚ್ಚಿರಬಹುದು ಎಂದು ಹೆದರಿದ್ದೀರಾ? ನಿಮ್ಮ ಉತ್ತರ ಹೌದಾದಲ್ಲಿ, ನೀವು ಈ ಕೆಳಗೆ ಕೊಟ್ಟಿರುವ ವಿಷಯದ ಬಗ್ಗೆ ಓದಿ ತಿಳಿದುಕೊಳ್ಳುವುದುಕೊಂಡು, ಬ್ಲಾಕ್ ಟೀ ಬಗ್ಗೆ ನಿಮಗಿರುವ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದು ಒಳಿತು. 

‣ ಬ್ಲಾಕ್ ಟೀಯನ್ನು ಬೇರೆ ಯಾವುದಾದರೂ ಕೆಫೀನ್ ಉತ್ಪನ್ನದ ಜೊತೆ ಅಥವಾ ಎಫೆಡ್ರಾ ಜೊತೆ ಸೇರಿಸುವುದು ಹಾನಿಕಾರಕ. ಅದರ ಕೆಲವು ಪರಿಣಾಮಗಳು: ದಿಗಿಲುಗೊಳ್ಳುವುದು, ಹೆಚ್ಚಿದ ರಕ್ತದೊತ್ತಡ, ಹೃದಯ ಬಡಿತದ ಏರಿಳಿತ, ಮೂರ್ಛೆ ಹೋಗುವುದು. 

‣ ಬ್ಲಾಕ್ ಟೀ ಅಥವಾ ಬ್ಲಾಕ್ ಟೀ ಪೂರಕಗಳು ಬೇರೆ ಔಷಧಿಗಳ ಹೀರುವಿಕೆಯಲ್ಲಿ ತೊಂದರೆಯನ್ನುಂಟು ಮಾಡಬಹುದು. ಕೆಲವು ಔಷಧಿಗಳು ಬ್ಲಾಕ್ ಟೀಯಲ್ಲಿರುವ ಕೆಫೀನ್ ಅಂಶ ನಿಮ್ಮ ದೇಹದಲ್ಲಿ ತುಂಬಾ ಕಾಲ ಇರುವಂತೆ ಮಾಡಬಹುದು. ಹಾಗಾಗಿ ಈ ವಿಷಯದ ಕುತ್ತಾಗಿ ನಿಮ್ಮ ವೈದ್ಯರ ಬಳಿ ವಿಚಾರಿಸುವುದು ಸೂಕ್ತ. 

[Back To Top]

೫. ನಿರ್ಣಯ (Conclusion in Kannada):

ನೀವು ಇನ್ನು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತೀರಿ ಎಂದು ನಮಗೆ ತಿಳಿದಿದೆ. ಆದರೆ ಈ ಲೇಖನ ಇಲ್ಲಿಗೆ ಮುಕ್ತಾಯಗೊಳ್ಳುತ್ತದೆ. ನಾವು ಬ್ಲಾಕ್ ಟೀ ಲಾಭಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಸೂಕ್ತ ರೀತಿಯಲ್ಲಿ ನಿಮಗೆ ತಿಳಿಸಿದ್ದೇವೆ ಅಂದು ಭಾವಿಸುತ್ತೇವೆ. ಈ ಲೇಖನವನ್ನು ನಿಮ್ಮ ಬಂಧು-ಮಿತ್ರರೊಡನೆ ಹಚ್ಚಿಕೊಂಡು, ಬ್ಲಾಕ್ ಟೀ ಅರೋಗ್ಯ ಪ್ರಯೋಜನಗಳನ್ನು ಅನುಭವಿಸಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon