Link copied!
Sign in / Sign up
138
Shares

ರುಚಿಯಾದ ಬಿಸಿಬೇಳೆ ಬಾತ್ ಮಾಡುವುದು ಹೇಗೆಂದು ನೋಡಿ


ಬಿಸಿಬೇಳೆ ಬಾತ್ ಕರ್ನಾಟಕದ ಅಚ್ಚು ಮೆಚ್ಚಿನ ಆಹಾರ. ಇದನ್ನು ತಿಂಡಿ, ಹಾಗು ಊಟದ ಸಮಯದಲ್ಲೂ ಸೇವಿಸುವ ಮಕ್ಕಳಿಂದ ವಯಸ್ಕರೂ ತಿನ್ನಬಹುದಾದ ಹಾಗು ಆರೋಗ್ಯಕ್ಕೆ ಹಿತವಾದ ಆಹಾರ. ಬಿಸಿಬೇಳೆಬಾತ್ ರುಚಿ ಬಲು ಅಪರೋಪ, ಇದು ಬೇರೆ ರೀತಿಯ ಚಿತ್ರಾನ್ನ,ವಾಂಗೀ ಬಾತ್ ರೀತಿಗಿಂತ ವಿಭಿನ್ನ ರೀತಿಯ ರುಚಿಯನ್ನು ನೀಡುತ್ತದೆ ಅದಕ್ಕೆ ಕಾರಣ ಅದಕ್ಕೆ ಬಳಸುವ ಮಸಾಲಾ ಹಾಗು ತರಕಾರಿಗಳು ರುಚಿಯನ್ನು ಹೆಚ್ಚಿಸುತ್ತದೆ. ಕರ್ನಾಟಕದಲ್ಲಿ ಶುರುವಾದ ಬಿಸಿಬೇಳೆಬಾತ್ ಈಗ ದಕ್ಷಿಣ ಭಾರತದ ಜನಪ್ರಿಯ ಆಹಾರಗಳಲ್ಲಿ ಒಂದು. ದಕ್ಷಿಣ ಭಾರತ ಮಾತ್ರವಲ್ಲದೆ ವಿದೇಶಿಗರೂ ಕೂಡ ಬಿಸಿಬೇಳೆಬಾತ್ ಅನ್ನು ಇಷ್ಟಪಡುತ್ತಾರೆ.

ಬಿಸಿಬೇಳೆ ಬಾತ್ ಹೇಗೆ ಮಾಡುವುದೆಂದು ನೋಡಿ

ತಯಾರಿಸಲು ಬೇಕಾಗುವ ಸಮಯ: 30 ನಿಮಿಷ

ಅಡುಗೆ ಸಮಯ: 1 ಗಂಟೆ

ಜನಕ್ಕೆ ಬೇಕಾಗುವಷ್ಟು 4

ಪದಾರ್ಥಗಳು: (ಅಳತೆ ಕಪ್ = 120 ಮಿಲಿ)

3/4 ಕಪ್ ತೊಗರಿ ಬೇಳೆ (toor dal)

1 ಕಪ್ ಅಕ್ಕಿ (ಆದ್ಯತೆ ಸೋನಾ ಮಸೂರ್ )

10-15ಬೀನ್ಸ್

2-3 ಕ್ಯಾರಟ್ (medium size)

1 ಗೆಡ್ಡೆ ಕೋಸು/ಎಲೆಕೋಸು (ಬೇಕಾದರೆ ಮಾತ್ರ)

1-2 ಕ್ಯಾಪ್ಸಿಕಂ

1-2 ಆಲೂಗೆಡ್ಡೆ

2 ಚಮಚ ಕಡ್ಲೇಬೀಜ

2 ಚಮಚ ಬಟಾಣಿ (ನೆನೆಸಿಟ್ಟದ್ದು)

2 ಟೊಮೇಟೊ

1 ಚಿಕ್ಕ ಗಾತ್ರದಲ್ಲಿನ ಹುಣಸೇ ಹಣ್ಣು

ಚಿಕ್ಕ ಬೆಲ್ಲದ ಚೂರು

ಉಪ್ಪು ರುಚಿಗೆ ತಕ್ಕಂತೆ

ಮಸಾಲಾ ಪುಡಿಗಾಗಿ ಬೇಕಾದ ಪದಾರ್ಥಗಳು:

2-4 ಕೆಂಪು ಮೆಣಸಿನಕಾಯಿ

1 ಟೀಸ್ಪೂನ್ ಕಡಲೇ ಬೇಳೆ

2 ಟೀಸ್ಪೂನ್ ಉದ್ದಿನ ಬೇಳೆ

1/4 ಟೀಸ್ಪೂನ್ ಮೆಥಿ / ಮೆಂತ್ಯ ಕಾಳು

1/4 ಟೀಸ್ಪೂನ್ ಸಾಸಿವೆ ಕಾಳು

1/2 ಟೀಸ್ಪೂನ್ ಜೀರಾ / ಜೀರಿಗೆ

2 ಟೀಸ್ಪೂನ್ ಕೊತ್ತಂಬರಿ ಬೀಜಗಳು

ಒಂದು ಚಿಟಿಕೆ ಇಂಗು

1/2 ಬೆರಳು ಉದ್ದ ದಾಲ್ಚಿನ್ನಿ

10 ಲವಂಗಗಳು / ಲವಂಗ್ (ಆದ್ಯತೆ ಇದ್ದರೆ )

1 ಏಲಕ್ಕಿ

1 ಟೀಸ್ಪೂನ್ ಗಸಗಸೆ

2 ಟೀಸ್ಪೂನ್ ಸಿಹಿಯಾದ ತೆಂಗಿನಕಾಯಿ / ತುರಿದ ತೆಂಗಿನಕಾಯಿ

1/2 ಟೀಸ್ಪೂನ್ ಅಡುಗೆ ಎಣ್ಣೆ

ಬಿಸಿಬೇಳೆ ಬಾತ್ ಮಾಡಲು ಸೂಚನೆಗಳು:

1.ಬಿಸಿಬೇಳೆ ಬಾತ್ ತಯಾರಿಸಲು ಕನಿಷ್ಠ 5 ಲೀಟರ್ ಸಾಮರ್ಥ್ಯ ಹೊಂದಿರುವ ಪ್ರೆಶರ್ ಕುಕ್ಕರ್ ತೆಗೆದುಕೊಳ್ಳಿ. ಕುಕ್ಕರ್ ಗೆ ತೊಗರಿ ಬೇಳೆ ಹಾಕಿ.

2. ಕುಕ್ಕರ್ ಗೆ ತೊಗರಿಬೇಳೆ ಹಾಕಿದನಂತರ 2 ಕಪ್ ನೀರನ್ನು ಹಾಕಿ ನೆನೆಸಿ, ಅದಕ್ಕೆ ಚಿಟಿಕೆ ಅರಿಸಿನದ ಪುಡಿ ಹಾಗು ಅರ್ಥ ಚಮಚ ಅಡಿಗೆ ಎಣ್ಣೆಯನ್ನು ಹಾಕಿ. ನಂತರ ಬೇಳೆಯನ್ನು ಕುಕ್ಕರ್ ನಲ್ಲಿ 2 ವಿಷಲ್ ಕೂಗಿಸಿ, ಬೇಳೆ ಅರ್ಧ ಬೆಂದಿರುತ್ತದೆ.

3. ನೀವು ಮೇಲೆ ವಿವರಿಸಿದ ತರಕಾರಿಗಳನ್ನು ಮೊದಲೇ ಕತ್ತರಿಸಿ ಇಟ್ಟುಕೊಂಡಿರಬೇಕು.

4. ನೆನೆಸಿದ ಬಟಾಣಿ, ಕಡಲೇ ಬೀಜ, ಹಾಗು ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ನೆನೆಸಿ ಮತ್ತೆ ತೆಗೆದಿಡಿ.

5. ಈಗ ಕತ್ತರಿಸಿದ ತರಕಾರಿಗಳನ್ನು, ಹಾಗು ನೆನೆಸಿಟ್ಟಿದ ಅಕ್ಕಿ, ಬಟಾಣಿ, ಕಡಲೇ ಬೀಜವನ್ನು ಬೇಳೆ ಬೇಯಿಸಿದ್ದ ಕುಕ್ಕರ್ ಗೆ ಹಾಕಿ. ಕುಕ್ಕರ್ ನಲ್ಲಿ ಅರ್ಧ ಬೆಂದಿರುವ ತೊಗರಿಬೇಳೆಗೆ ಹಾಕಿ. ನಂತರ ಇದಕ್ಕೆ 4ಕಪ್ ಅನ್ನು ಹಾಕಿ, ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ 2-3 ಬಾರಿ ವಿಷಲ್ ಬರುವ ತನಕ ಬೇಯಿಸಿ.

ನೀವು ಬಿಸಿಬೇಳೆಬಾತ್ ಮಾಡುವ ವೇಳೆಯಲ್ಲೇ ಬಾತ್ ಪೌಡರ್ ಅನ್ನು ತಯಾರಿಸಿ ಇಟ್ಟುಕೊಳ್ಳಬೇಕು, ಇಲ್ಲವಾದರೆ ಮುಂಚೆಯೇ ಪೌಡರ್ ರೆಡಿ ಮಾಡಿಕೊಂಡಿರಬೇಕು. ಇಲ್ಲಿ ಬಿಸಿಬೇಳೆ ಬಾತ್ ಪೌಡರ್ ಅನ್ನು ಹೇಗೆ ಮಾಡುವುದೆಂದು ತಿಳಿಸಿದ್ದೇವೆ ನೋಡಿ.

ಬಿಸಿಬೇಳೆ ಬಾತ್ ಪೌಡರ್ ಮಾಡುವುದು ಹೇಗೆ ನೋಡಿ 


ಈಗ ಒಂದು ಬಾಂಡಲಿಯಲ್ಲಿ ಅರ್ಧ ಟೀ ಸ್ಪೂನ್ ಎಣ್ಣೆ ಯನ್ನು ಹಾಕಿ, ಒಗ್ಗರಣೆ ಮಾಡುವ ರೀತಿಯಲ್ಲಿ ಸ್ಟೋವ್ ಅನ್ನು ಸ್ವಲ್ಪ ಹದವಾದ ಶಾಖಕ್ಕೆ ಮಾಡಿ. 2-3 ಕೆಂಪು ಮೆಣಸಿನ ಕಾಯಿಯನ್ನು ಹುರಿಯಿರಿ, ನಂತರ ಅದಕ್ಕೆ ಕಡಲೇ ಬೆಲೆ ಹಾಗು ಉದ್ದಿನ ಬೇಳೆಯನ್ನು ಹಾಕಿ. ಸ್ವಲ್ಪ ಬಣ್ಣ ಬದಲಾಗುವ ತನಕ ಹುರಿಯಿರಿ.

ನಂತರ ಸಾಸಿವೆ, ಜೀರಿಗೆ, ಮೆಂತ್ಯ, ಕೊತ್ತಂಬರಿ ಬೀಜವನ್ನು ಹಾಕಿ ಹುರಿಯಿರಿ

ನಂತರ ದಾಲ್ಚಿನ್ನಿ, ಲವಂಗ, ಹಾಗು ಏಲಕ್ಕಿ ಯನ್ನು ಹಾಕಿ. ನಂತರ ಇಂಗನ್ನು ಹಾಕಿ.

ಉರಿಯನ್ನು ಕಡಿಮೆ ಮಾಡಿಕೊಲ್ಲಿ, ತಳ ಹತ್ತದಂತೆ ನೋಡಿಕೊಳ್ಳಿ.

ನಂತರ ಸ್ಟೋವ್ ಅನ್ನು ಆಫ್ ಮಾಡಿ. ಪಾತ್ರೆಯನ್ನು ಆರಲು ಬಿಡಿ

ನಂತರ ಈ ಮಿಶ್ರಣವನ್ನು ಆರಿದ ನಂತರ ಮಿಕ್ಸಿ ಗೆ ಹಾಕಿ. ಅದಕ್ಕೆ ಸ್ವಲ್ಪ ತುರಿದ ತೆಂಗಿನ ಕಾಯಿ ಅಥವಾ ಕೊಬ್ಬರಿಯನ್ನು ಹಾಕಿ,ರುಬ್ಬಿ.

ಈಗ ಬಿಸಿಬೇಳೆಬಾತ್ ಪೌಡರ್ ರೆಡಿ.

ಈಗ ಒಂದು ಪತ್ರೆ ಅಥವಾ ಬಾಂಡಲಿಯನ್ನು ತೆಗೆದುಕೊಂಡು ಒಗ್ಗರಣೆಗೆ ರೆಡಿ ಮಾಡಿ, ಅದರಲ್ಲೇ ನೀವು ಅನ್ನವನ್ನು ಮಿಕ್ಸ್ ಮಾಡುವ ತರ ಇರುವ ದೊಡ್ಡ ಪಾ ತ್ರೆ. ಅದಕ್ಕೆ ಎಣ್ಣೆ, ಸಾಸಿವೆ, ಕಡಲೆ ಬೇಳೆ, ಕರಿಬೇವಿನ ಸೊಪ್ಪ್ಪು, ಗೋಡಂಬಿ ಹಾಗು ಅರಿಶಿನದ ಪೌಡರ್ ಅನ್ನು ಹಾಕಿ ಹುರಿಯಿರಿ, ಕಡಲೆಬೇಳೆ ಸ್ವಲ್ಪ ಬಣ್ಣ ಬದಲಾದ ನಂತರ ಸ್ಟೋವ್ ಆಫ್ ಮಾಡಿ. ಸ್ಟೋವ್ ಆಫ್ ಮಡಿದ ತಕ್ಷಣವೇ ಬಿಸಿಬೇಳೆಬಾತ್ ಪೌಡರ್ ಅನ್ನು ಒಗ್ಗರಣೆಗೆ ಮಿಕ್ಸ್ ಮಾಡಿ. ಇದಕ್ಕೆ ಬೆಲ್ಲ, ಹುಣಸೆ ಹಣ್ಣು, ಹಾಗು ಹರಳುಪ್ಪನ್ನು ಹಾಕಿ.

ಈಗ ಕುಕ್ಕರ್ ಕೂಗಿದ ನಂತರ, ಮೇಲಿನ ಮುಚ್ಚಳವನ್ನು ತೆಗೆದರೆ ಬೇಳೆ, ತರಕಾರಿ,ಹಾಗು ಅನ್ನ ಕಾಣಿಸುತ್ತದೆ. ಈಗ ನೀವು ಮಸಾಲಾ ಮಿಶ್ರಣವನ್ನು ಕುಕ್ಕರ್ ಗೆ ಹಾಕಬಹುದು ಅಥವಾ ಬೇರೆ ಪಾತ್ರೆಗೆ ಎರಡನ್ನು ಮಿಕ್ಸ್ ಮಾಡಬಹುದು. ನಿಮಗೆ ಯಾವುದೇ ಅನುಕೂಲವೋ ಹಾಗೆ ನೀವು ಮಾಡಬಹುದು.

ಕುಕ್ಕರ್ ಗೆ ಅಥವಾ ಬೇರೆ ಬಾಂಡಲಿಗೆ ಈ ಎರೆಡನ್ನೂ ಸೇರಿಸಿ 4 ಲೋಟ ನೀರನ್ನು ಹಾಕಿ. ನಂತರ ಒಲೆಯನ್ನು ಕಡಿಮೆ ಮಾಡಿಕೊಂಡು ಸ್ವಲ್ಪ ಸಮಯದ ತನಕ ಈ ಮಿಶ್ರಣವನ್ನು ಮಿಕ್ಸ್ ಮಾಡಿ. ನಿಮ್ಮ ಬಿಸಿಬೇಳೆ ಬಾತ್ ಈಗ ರೆಡಿ. ಕೊನೆಯಲ್ಲಿ ಸ್ವಲ್ಪ ತುಪ್ಪವನ್ನು ರುಚಿಗೆ ಮಿಕ್ಸ್ ಮಾಡಿಕೊಳ್ಳಬಹುದು.

 

 ನಿಮ್ಮ  ಬಿಸಿಬೇಳೆಬಾತ್ ರೆಡಿ..!

Photo credits: Youtube Channel: Veg Recipes of Karnataka

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon