Link copied!
Sign in / Sign up
6
Shares

ಬಿಳಿ ಕೂದಲ ಸಮಸ್ಯೆಗೆ ಮನೆಯಲ್ಲೇ ಮದ್ದುಗಳು!

ಬಿಳಿ ಕೂದಲು ಎನ್ನುವುದು ಎಲ್ಲರಲ್ಲೂ ಅದರಲ್ಲೂ ವಯಸ್ಸಾಗಿರುವವರಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಷಯ. ಆದರೆ, ಬಹುತೇಕ ಹರೆಯದ ಯುವಕ ಯುವತಿಯರು ಕೂಡ 30 ವಯಸ್ಸರ ಗಡಿ ದಾಟುವ ಮುನ್ನವೇ ಬಿಳಿಗೂದಲಿನ ಅಕಾಲಿಕ ಸಮಸ್ಯೆಯಿಂದ ಬಳಲುಬಹುದು. ಇದಕ್ಕೆ ಹೆರಿಡಿಟಿ, ಒತ್ತಡ, ಕಾಯಿಲೆ, ಮೆಲನಿನ್ ಉತ್ಪಾದಿಸುವ ಪೋಷಕಾಂಶಗಳ ಕೊರತೆ - ಇವುಗಳಲ್ಲಿ ಯಾವುದಾದರೂ ಕಾರಣ ಆಗಿರಬಹುದು. ಈ ಲೇಖನದಲ್ಲಿ ನಾನು ನಿಮಗೆ ಬಿಳಿಕೂದಲನ್ನು ಹೊಸತರಲ್ಲೇ ಕಪ್ಪು ಕೂದಲಾಗಿ ಬದಲಿಸಲು ನಿಮ್ಮ ಸಹಾಯಕ್ಕೆ ಬರುವ ಮನೆಮದ್ದುಗಳು ಯಾವುದೆಂದು ತಿಳಿಸುತ್ತೇನೆ.


೧. ನಲ್ಲಿಕಾಯಿ


ಅಕಾಲಿಕ ಬಿಳಿಕೂದಲ ಸಮಸ್ಯೆಯ ನಿವಾರಣೆ ಮತ್ತು ಚಿಕೆತ್ಸೆಯಲ್ಲಿ ನಲ್ಲಿಕಾಯಿಯನ್ನು ಬಳಸುವುದು ಒಂದು ಪರಿಣಾಮಕಾರಿ ವಿಧಾನ. ಇದನ್ನು ಬಳಸುವ ಮೂಲಕ ಕೇವಲ ನಿಮ್ಮ ಕೂದಲ ಬೆಳವಣಿಗೆಗೆ ಪುಷ್ಟಿ ದೊರೆಯುವುದಲ್ಲದೆ, ನಿಮ್ಮ ಕೂದಲು ಗಾಢ ಕಪ್ಪು ಬಣ್ಣ ಹೊಂದಲು ಸಹಾಯ ಮಾಡುತ್ತದೆ. ಒಂದು ಚಮಚದಷ್ಟು ನಲ್ಲಿಕಾಯಿ ರಸದೊಂದಿಗೆ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿಕೊಳ್ಳಿ ಅಥವಾ ಕೆಲವು ಹನಿಗಳಷ್ಟು ನಲ್ಲಿಕಾಯಿ ರಸವನ್ನು ನಿಂಬೆ ರಸದೊಂದಿಗೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು.


೨. ಕರಿಬೇವು


ಕರಿಬೇವಿನ ಸೊಪ್ಪನ್ನು ಎತ್ತೇಚ್ಛವಾಗಿ ಸೇವಿಸುವ ಮೂಲಕ ನೀವು ಅಕಾಲಿಕ ಬಿಳಿ ಕೂದಲ ಸಮಸ್ಯೆಯನ್ನು ನಿವಾರಿಸಬಹುದು. ಇದನ್ನು ಸೇವಿಸುವ ಮೂಲಕ ನಿಮ್ಮ ಜೀವಗಳಿಗೆ ಚೈತನ್ಯ ಮತ್ತು ಅವುಗಳ ಬೇರಿಗೆ ಶಕ್ತಿಯನ್ನು ಕೊಡುತ್ತೀರಿ. ಹೊಸದಾಗಿ ಹುಟ್ಟುವ ಕೂದಲಿಗೆ ಸಹಜವಾದ ಪಿಗ್ಮೆಂಟ್ ಲಭ್ಯವಾಗುತ್ತದೆ ಮತ್ತು ಹಳೆಯ ಕೂದಲಿಗಿಂತ ಆರೋಗ್ಯಕರವಾಗಿ ಬೆಳೆಯುತ್ತವೆ. ನೀವು ಇದನ್ನು ಆಹಾರದಲ್ಲಿ ಬಳಸಬಹುದು ಅಥವಾ ಮಜ್ಜಿಗೆಯಲ್ಲಿ ಹಿಂಡಿ ಕುಡಿಯಬಹುದು.


೩. ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣು


ನಿಮಗೆ ಗೊತ್ತೇ ಇರುವ ಹಾಗೆ ತೆಂಗಿನ ಎಣ್ಣೆಯು ನಮ್ಮ ಕೂದಲಿಗೆ ತುಂಬಾ ಒಳ್ಳೆಯದು. ತೆಂಗಿನ ಎಣ್ಣೆಯೊಂದಿಗೆ ಸ್ವಲ್ಪವೇ ನಿಂಬೆಹಣ್ಣು ಅಥವಾ ಸುಣ್ಣವನ್ನು ಬೆರೆಸಿ, ನಿಮ್ಮ ತಲೆಯನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದನ್ನು ಪ್ರತಿದಿನ 15 ನಿಮಿಷಗಳ ಕಾಲ ಮಾಡಿಕೊಳ್ಳಿ. ಈ ಮಿಶ್ರಣವು ಬಿಳಿ ಕೂದಲನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಶಕ್ತಿ, ಅಳತೆ ಮತ್ತು ವಿನ್ಯಾಸವನ್ನು ಸರಿಪಡಿಸುವ ದೀರ್ಘಾವಧಿಯ ಉಪಯೋಗಗಳನ್ನ ನೀಡುತ್ತದೆ.


೪. ಹಿರೇಕಾಯಿ


ಹಿರೇಕಾಯಿಯನ್ನು ತೆಂಗಿನ ಎಣ್ಣೆಯಲ್ಲಿ ಬೇಯಿಸಿಕೊಂಡು ಹಚ್ಚಿಕೊಳ್ಳುವುದು ಬಿಳಿ ಕೂದಲ ನಿವಾರಣೆಗೆ ಬಹಳ ಉಪಕಾರಿ. ಈ ತರಕಾರಿಯನ್ನು ನೆರಳಲ್ಲೇ ಒಣಗಿಸಿ ನಂತರ ತೆಂಗಿನ ಎಣ್ಣೆಯಲ್ಲಿ ನೆನೆಯಲು ಇಡಿ. ಅದನ್ನು ಹಾಗೆಯೇ 4 ದಿನಗಳ ಕಾಲ ಬಿಡಿ. ನಂತರ ಈ ಎಣ್ಣೆಯನ್ನು ಹೊರತೆಗೆದು, ಚೆನ್ನಾಗಿ ಕುದಿಸಿ. ಎಣ್ಣೆಯು ಒಂದು ಕಪ್ಪು ಪದಾರ್ಥವಾಗಷ್ಟೇ ಉಳಿಯುವವರೆಗೂ ಕುದಿಸಿ. ಈ ಮಿಶ್ರಣದಿಂದ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ ನಿಮ್ಮ ಕೂದಲಿಗೆ ಪಿಗ್ಮೆಂಟ್ ಮತ್ತು ಬೆಳೆಯುವ ಶಕ್ತಿಯನ್ನು ನೀಡಿ.


೫. ಬಾದಾಮಿ ಎಣ್ಣೆ


ಬಿಳಿ ಕೂದಲ ನಿವಾರಣೆಗೆ ಅತ್ಯಂತ ಸುಲಭವಾದ ದಾರಿ ಎಂದರೆ ಅದು ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ನೆತ್ತಿಗೆ ಎಣ್ಣೆಗಳಿಂದ ಮಸಾಜ್ ಮಾಡಿಕೊಳ್ಳುವುದು. ನೀವು ರೋಸ್ಮರಿ, ಸೆಜ್ ಅಥವಾ ಥೈಮ್ ಎಣ್ಣೆಯನ್ನು ಬಳಸಿಕೊಂಡು ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿಕೊಳ್ಳಬಹುದು. ಪ್ರತಿದಿನ ಮಲಗುವ ಮುನ್ನ ಈ ಎಣ್ಣೆಗಳ 2-3 ಹನಿಗಳಷ್ಟನ್ನು ತೆಗೆದುಕೊಂಡು ನಿಮ್ಮ ನೆತ್ತಿಯನ್ನು ಮೃದುವಾಗಿ, ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon