Link copied!
Sign in / Sign up
36
Shares

ಬಣ್ಣ ಹಚ್ಚದೆ ನಿಮ್ಮ ಬಿಳಿ ಕೂದಲನ್ನು ಮೊದಲಿನಂತೆ ಮಾಡಲು ಸರಳ ಮತ್ತು ಸುಲಭ ಉಪಾಯಗಳು

ಕೂದಲಿನ ಒಂದು ಸಾಮಾನ್ಯ ಸಮಸ್ಯೆ ಎಂದರೆ ಅದು ನರೆ ಕೂದಲು ಅಥವಾ ಬಿಳಿ ಕೂದಲು ಬರುವುದು. ಅದರಲ್ಲೂ ಇದು ಹುಡುಗಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಇದು ಅವರಿಗೆ ದುಃಸ್ವಪ್ನ ಇದ್ದಂತೆ ಸರಿ. ಇದನ್ನು ಕಂಡ ತಕ್ಷಣ ಅವರು ಯೋಚಿಸಲು ಪ್ರಾರಂಭಿಸುತ್ತಾರೆ ಮತ್ತು ಅದನ್ನು ಹೋಗಲಾಡಿಸಲು ಸುಲಭ ಉಪಾಯಗಳನ್ನು ಹುಡುಕುವಿರಿ, ಮತ್ತು ಬಣ್ಣವನ್ನು ಹಚ್ಚಲು ಪ್ರಾರಂಭ ಮಾಡುವಿರಿ. ನೆನಪಿರಲಿ ನೀವು ಬಣ್ಣ ಹಚ್ಚಲು ಪ್ರಾರಂಭಿಸಿದರೆ ಬಿಳಿ ಕೂದಲು ಜಾಸ್ತಿ ಆಗುತ್ತದೆ ಮತ್ತು ಇದನ್ನು ನೀವು ಆಗಾಗ್ಗೆ ಮಾಡಬೇಕಾಗುತ್ತದೆ. ನೀವು ಬಿಳಿ ಕೂದಲನ್ನು ಕಂಡ ತಕ್ಷಣ ಯೋಚನೆ ಮಾಡದೇ ಬುದ್ದಿ ಉಪಯೋಗಿಸಿ ಮಾಡಬೇಕಾದ ಕೆಲವು ಸರಳ ಮತ್ತು ಸುಲಭ ಉಪಾಯಗಳನ್ನು ಇಲ್ಲಿ ನೀಡಲಾಗಿದೆ. ಇದು ನಿಮಗೆ ಖಂಡಿತ ಉಪಯೋಗವಾಗುವುದು.

೧.ನಿಮ್ಮ ಕೇಶಾಲಂಕಾರವನ್ನು ಬದಲಿಸಿ

ನಿಮ್ಮ ಬಿಳಿ ಕೂದಲನ್ನು ಮರೆ ಮಾಡಲು ಇರುವ ಉತ್ತಮ ಮಾರ್ಗವೆಂದರೆ ನಿಮ್ಮ ಕೂದಲ ಅಲಂಕಾರ ಶೈಲಿಯನ್ನು ಬದಲಿಸಿಕೊಳ್ಳುವುದು.

ನೀವು ಇತ್ತೀಚಿಗೆ ನಿಮ್ಮ ಶ್ಯಾಂಪೂ ಅಥವಾ ಕೂದಲಿಗೆ ಬಳಸುವ ದ್ರಾವಕವನ್ನು ಬದಲಿಸಿದರೆ ಅದನ್ನು ಉಪಯೋಗಿಸುವುದನ್ನು ನಿಲ್ಲಿಸುವುದು ಒಳ್ಳೆಯದು. ನೀವು ಬಳಸುತ್ತಿದ್ದ ಮೊದಲ ಶ್ಯಾಂಪೂ ಅಥವಾ ಲೋಷನ್ ಅನ್ನೇ ಬಳಸುವುದು ಉತ್ತಮ ಅಥವಾ ನೈಸರ್ಗಿಕ ವಸ್ತುಗಳಾದ ಸೀಗೆಕಾಯಿ ಪುಡಿಯನ್ನು ಬಳಸುವುದು ಕೂದಲು ತಾಜಾವಾಗಿ ಮತ್ತು ಹೊಳೆಯುವಂತೆ ಮಾಡಿ ಕಪ್ಪು ಬಣ್ಣವನ್ನು ಉಳಿಸಲು ಸಹಾಯ ಮಾಡುತ್ತದೆ.

೨.ಗಿಡ ಮೂಲಿಕೆಯನ್ನು ಬಳಸಿ

ಸೆಜ್ ಎಂಬ ಗಿಡ ಮೂಲಿಕೆಯನ್ನು ನಿಮ್ಮ ಕೂದಲಿಗೆ ಉಪಯೋಗಿಸುವುದರಿಂದ ನೀವು ನಿಮ್ಮ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಇದು ಕೂದಲು ಬೇಗನೆ ಬಿಳಿ ಅಥವಾ ನರೆ ಕೂದಲು ಆಗುವುದನ್ನು ತಡೆಯುತ್ತದೆ.

ನೀವು ಮಾಡಬೇಕಾಗಿರುವುದು

ಅರ್ಧ ಬಟ್ಟಲು ಸೆಜ್ ಅನ್ನು ೩ ಬಟ್ಟಲು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಕಷಾಯ ತಯಾರಿಸಿ.

ಇದನ್ನು ಆರಲು ಬಿಡಿ.

ನಿಮ್ಮ ಕೂದಲನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ(ನೀವು ಬಳಸುವ ಶ್ಯಾಂಪೂವನ್ನು ಉಪಯೋಗಿಸಿ).

ನಂತರ ಈ ಕಷಾಯವನ್ನು ಕೂದಲಿಗೆ ಸಂಪೂರ್ಣವಾಗಿ ಹಚ್ಚಿರಿ, ಅದು ತಲೆಯ ಬುಡಕ್ಕೆ ಸ್ಪರ್ಶಸುವಂತೆ.

ಕೆಲವು ನಿಮಿಷಗಳು ಅದು ಹಾಗೆಯೆ ಕೂದಲಿನಲ್ಲಿ ನೆನೆಯಲು ಬಿಡಿ.

ನಂತರ ತೊಳೆದುಕೊಳ್ಳಿ. ಬಿಳಿ ಕೂದಲನ್ನು ಬೇಗನೆ ಕಡಿಮೆ ಮಾಡಿಕೊಳ್ಳಲು ಇದನ್ನು ನಿರಂತರವಾಗಿ ಮಾಡಿ.

೩.ಮೆಹಂದಿಯನ್ನು ಉಪಯೋಗಿಸಿ

ಇದು ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಬಿಳಿಯಾಗುವುದನ್ನು ತಪ್ಪಿಸುತ್ತದೆ, ಮತ್ತು ದೇಹಕ್ಕೆ ತಂಪನ್ನು ನೀಡುತ್ತದೆ. ಇದನ್ನು ಒಮ್ಮೆ ಹಾಕಿದರೆ ಹಲವು ದಿನಗಳವರೆಗೆ ನೀವು ಬಿಳಿ ಕೂದಲನ್ನು ಕಾಣದೆ ಇರಬಹುದು.

ಇದು ನಿಮ್ಮ ಬಿಳಿ ಕೂದಲನ್ನು ಕಂದು ಬಣ್ಣಕ್ಕೆ ತಿರುಗಿಸುತ್ತದೆ, ಕಪ್ಪು ಬಣ್ಣದ ಕೂದಲನ್ನು ಅದೇ ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ನೀವು ಮಾಡಬೇಕಾಗಿರುವುದು

ಮೆಹಂದಿ ಎಲೆಗಳನ್ನು ಸ್ವಲ್ಪ ನೀರಿನ ಜೊತೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ(ಪೇಸ್ಟ್ ತರಹ).

ಇದನ್ನು ಕೂದಲಿಗೆ ಮತ್ತು ತಲೆಯ ಬುರುಡೆಗೆ ಹಚ್ಚಿರಿ, ಅರ್ಧ ಅಥವಾ ಒಂದು ಗಂಟೆ ನಂತರ ಸ್ನಾನ ಮಾಡಿ. ಒಂದು ವಾರದವರೆಗೂ ನೀವು ಬಿಳಿ ಕೂದಲ ಸಮಸ್ಯೆಯನ್ನು ಹೋಗಲಾಡಿಸಬಹುದು.

ಕಪ್ಪು ಬಣ್ಣ ಬಯಸಿದರೆ ನೀವು ಇದಕ್ಕೆ ಕಪ್ಪು ಕಾಫಿ(ಬ್ಲಾಕ್ ಕಾಫಿ) ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿಕೊಂಡು ಹಚ್ಚಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon