Link copied!
Sign in / Sign up
1
Shares

ಭುಜದ ನೋವನ್ನು ಸರಳವಾಗಿ ನಿವಾರಿಸುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದು ನಿಮಗೆ ಮಾನಸಿಕವಾಗಿ ಕೂಡ ತೊಂದರೆ ಉಂಟು ಮಾಡುತ್ತದೆ ಎಂಬುದು ನಮಗೆ ಗೊತ್ತು. ಆದ್ದರಿಂದ ನಾವು ಪ್ರಯತ್ನಿಸಿ ನಮಗೆ ನೋವು ಕಡಿಮೆ ಆದ ನಂತರ ನಿಮಗೆ ಈ ಲೇಖನದ ಮೂಲಕ ಪರಿಹಾರವನ್ನು ತಿಳಿಸುತ್ತಿದ್ದೇವೆ. ಕೆಲವೊಮ್ಮೆ ನೋವು ಹೆಚ್ಚದಾಗ ನಿಮಗೆ ಕೈಯನ್ನು ಆಡಿಸಲು ಸಾಧ್ಯವಾಗುವುದಿಲ್ಲ.

ಎಚ್ಚರಿಕೆ: ಒಂದು ವೇಳೆ ತೀವ್ರ ನೀವು, ಸಮಾನ್ಯವಲ್ಲದ ನಡವಳಿಕೆ ಅಥವಾ ವಾಂತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ಭುಜದ ನೋವಿನಿಂದ ಮುಕ್ತಿ ಪಡೆಯಲು ಪರಿಣಾಮಕಾರಿಯಾದ ಸಲಹೆಗಳು/ವಿಧಾನಗಳು


೧.ಐಸ್ ಕ್ಯೂಬ್ ಒತ್ತುವುದು

ಭುಜದ ನೋವಿನ ವಿಷಯಕ್ಕೆ ಬಂದಾಗ ಮೊದಲ ಮನೆ ಮದ್ದು ನೀವು ಪ್ರಯತ್ನಿಸಬೇಕಿರುವುದು, ತಣ್ಣನೆಯ ಪದಾರ್ಥದಿಂದ ನೋವಿನ ಜಾಗವನ್ನು ಮಸಾಜ್ ಮಾಡುವುದು. ತಣ್ಣನೆಯ ಅನುಭವ ನೋವಿನ ಜಾಗದಲ್ಲಿ ಉರಿಯುತವನ್ನು ಕಡಿಮೆ ಮಾಡಿ, ನೋವನ್ನು ಕಡಿಮೆ ಮಾಡುತ್ತದೆ. ಸ್ನಾಯು ಮೇಲಿನ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.

ಸಣ್ಣ ಸಣ್ಣ ಐಸ್ ಕ್ಯೂಬ್ ಅನ್ನು ಒಂದು ಟವೆಲ್ ಗೆ ಸುತ್ತಿ ನೋವಿರುವ ವಿರುದ್ಧ ದಿಕ್ಕಿನಲ್ಲಿ ಒತ್ತಿ ಇಟ್ಟುಕೊಳ್ಳಿ. ೧೦-೧೫ ನಿಮಿಷ ಹೀಗೆ ಮಾಡಿ. ತ್ವರಿತ ಫಲಿತಾಂಶ ಪಡೆಯಲು ದಿನದಲ್ಲಿ ಎರಡು ಬಾರಿ ಇದನ್ನು ಮಾಡಿ. ಹೆಚ್ಚು ನೋವು ಇದ್ದರೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಇದನ್ನು ಮಾಡಿ.

ಎಚ್ಚರಿಕೆ : ಐಸ್ ಕ್ಯೂಬ್ ಅನ್ನು ನೇರವಾಗಿ ಚರ್ಮದ ಮೇಲೆ ಇರಿಸಬೇಡಿ, ಇದರಿಂದ ನೋವು ಮತ್ತಷ್ಟು ಕಠಿಣವಾಗಬಹುದು.


೨.ಶಾಖ ನೀಡುವುದು

ಹಾಟ್ ವಾಟರ್ ಬ್ಯಾಗ್ ಗೆ ಬಿಸಿ ನೀರನ್ನು ತುಂಬಿ ನೋವಿನ ಜಾಗಕ್ಕೆ ಇಡಿ. ಇದು ಇಲ್ಲದಿದ್ದರೆ, ಒಂದು ಬಟ್ಟೆಗೆ ಉರಿದ ಉಪ್ಪನ್ನು ಬಿಸಿ ಇರುವಂತೆ ಹಾಕಿ, ನೋವಿನ ಜಾಗಕ್ಕೆ ಇರಿಸಿ. ಉಪ್ಪಿನ ಶಾಖ ನೀಡಿ. ೫-೧೦ ನಿಮಿಷ ಕಾಲ ಇದನ್ನು ಮಾಡಿ.


೩.ಮಸಾಜ್ ಥೆರಪಿ

ನೈಸರ್ಗಿಕ ಎಣ್ಣೆಯನ್ನು ಅಥವಾ ಪೋಷಣೆಯುಳ್ಳ ಎಣ್ಣೆಯನ್ನು (ಕೈ ಎಣ್ಣೆ) ಬೆಚ್ಚಗೆ ಮಾಡಿ, ಇದನ್ನು ನೋವಿರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ ಕೆಲವು ಸಮಯದ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿ.ಹೆಚ್ಚು ಬಿಸಿ ನೀರು ತ್ವಚೆಗೆ ಒಳ್ಳೆಯದಲ್ಲ.


೪.ವ್ಯಾಯಾಮ

ಭುಜವನ್ನು ತಿರುಗಿಸುವ, ಹಿಗ್ಗಿಸುವ ಸುಲಭ ವ್ಯಾಯಾಮವನ್ನು ಪ್ರತಿದಿನ ಮಾಡಿ, ಇದರಿಂದ ಸ್ನಾಯುಗಳು ಉಚಿತವಾಗಿ, ಸುಲಭವಾಗಿ ಭುಜವನ್ನು ಆಡಿಸಲು ಸಹಾಯವಾಗುತ್ತದೆ. ಇದರಿಂದ ನೋವು ಮೊದಲು ಕಡಿಮೆ ಆಗುವುದಿಲ್ಲ ಆದರೆ ನೋವು ಹೆಚ್ಚಾದರೆ ನೀವು ಸರಿಯಾಗಿ ಮಾಡುತ್ತಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon