Link copied!
Sign in / Sign up
6
Shares

ಗರ್ಭದ ಒಳಗೆ ಜೀವ ಹೇಗೆ ಸೃಷ್ಟಿಯಾಗುತ್ತದೆ ಎಂಬುದನ್ನು ಈ ನಂಬಲಾಗದ ಚಿತ್ರಗಳು ತೋರಿಸುತ್ತವೆ

ದೇವರ ಸೃಷ್ಟಿಯೇ ಹಾಗೆ, ಒಂದು ಜೀವದ ಒಳಗೆ ಇನ್ನೊಂದು ಜೀವದ ಸೃಷ್ಟಿ, ಕೇಳಲು ಕುತೂಹಲ ಅನಿಸಬಹುದು, ಆದರೆ ಅದರ ಭಾವನೆ, ಮತ್ತು ಖುಷಿ ನೋವುಗಳನ್ನು ಅನುಭವಿಸುವ ತಾಯಿಯರಿಗೆ ಮಾತ್ರ ಗೊತ್ತು. ೯ ತಿಂಗಳ ಆ ಭಾವನೆ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಈ ಚಿತ್ರಗಳು ನಿಮ್ಮ ಉದರದೊಳಗೆ ಮಗುವು ಬೆಳೆಯುವ ದೃಶ್ಯಗಳಾಗಿದ್ದು, ನಿಮ್ಮ ಕಣ್ಣುಗಳು ನಂಬಲಾಗದ ರೀತಿಯಲ್ಲಿ ಇವೆ. ಕಣ್ಣಿಗೆ ಕಾಣದ ದೇಹದ ಒಳಗೆ ಆಗುವ ಈ ಪ್ರಕ್ರಿಯೆಗಳು ನಿಜಕ್ಕೂ ಅವಿಸ್ಮರಣೀಯ.

೧.ಫಾಲೋಪಿಯನ್ ಟ್ಯೂಬ್ ನಲ್ಲಿ ವೀರ್ಯ

ಈ ಫೋಟೋವನ್ನು ಸಾಂಪ್ರದಾಯಿಕ ಕ್ಯಾಮೆರಾದಲ್ಲಿ ಮ್ಯಾಕ್ರೋ ಲೆನ್ಸ್ ಬಳಸಿ ಮತ್ತು ಎಂಡೊಸ್ಕೋಪ್ ಮತ್ತು ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಅನ್ನು ಉಪಯೋಗಿಸಿಕೊಂಡು ತೆಗೆಯಲಾಯಿತು. ಈ ಚಿತ್ರ ವೀರ್ಯ ಮಹಿಳೆಯ ದೇಹದ ಗರ್ಭದೊಳಗಿರುವ ಫಾಲೋಪಿಯನ್ ಟ್ಯೂಬ್ ನ ಪ್ರವೇಶವನ್ನು ಮಾಡುತ್ತಿರುವ ಚಿತ್ರವಾಗಿದೆ.

೨.ಮೊಟ್ಟೆಯ ಕೋಶ

೩.ವೀರ್ಯ ಮತ್ತು ಮೊಟ್ಟೆ

೪.ವೀರ್ಯ ಮೊಟ್ಟೆಯೊಳಗಡೆ ನುಗ್ಗುತ್ತಿರುವ ಚಿತ್ರ

ಎರಡು ವೀರ್ಯಗಳು ಮೊಟ್ಟೆಯ ಕೋಶವನ್ನು ಪ್ರವೇಶಿಸುತ್ತಿರುವ ಚಿತ್ರ ಇದು.

೫.ವೀರ್ಯದ ಯಶಸ್ಸು

ಮೊಟ್ಟೆಯು ತನ್ನೊಳಗೆ ವೀರ್ಯ ಪ್ರವೇಶವನ್ನು ನಿರಾಕರಿಸುತ್ತದೆ, ಸಾವಿರಾರು ವೀರ್ಯದಲ್ಲಿ ಕೇವಲ ಒಂದು ವೀರ್ಯ ಮಾತ್ರ ಒಳನುಗ್ಗುವುದರಲ್ಲಿ ಯಶಸ್ಸು ಕಾಣುತ್ತದೆ.

೬.ಗೆಲುವಿನ ಕ್ಷಣಗಳು

ವೀರ್ಯ ಯಶಸ್ವಿಯಾಗಿ ಒಳನುಗ್ಗಿದ ಮೇಲೆ ಮೊಟ್ಟೆ ಪಲವತ್ತತೆ ಆಗುವುದು ಮತ್ತು ಹೊಸ ಜೀವದ ಸೃಷ್ಟಿ ಕಾರ್ಯ ಪ್ರಾರಂಭವಾಗುವುದು.

೭.೫-೬ ದಿನದ ಭ್ರೂಣ

ಗರ್ಭದೊಳಗೆ ೫-೬ ದಿನದ ವೀರ್ಯ ಭ್ರೂಣವಾಗುತ್ತಿರುವುದು ಮತ್ತು ಗರ್ಭದೊಳಗೆ ಇರುವುದು.

೮.೮ನೇ ದಿನ

ಮಾನವ ಭ್ರೂಣ ತಾಯಿಯ ಗರ್ಭಕೋಶದ ಗೋಡೆಗೆ ಅಂಟಿಕೊಂಡಿರುವ ಚಿತ್ರ.

೯.ಮೆದುಳು ಬೆಳವಣಿಗೆ ಹೊಂದಲು ಶುರುವಾಗುತ್ತದೆ

ಭ್ರೂಣದ ಮೆದುಳು ಅಭಿವೃದ್ಧಿ ಹೊಂದಲು ಪ್ರಾರಂಭವಾಗುತ್ತದೆ. ಮೆದುಳು ಸ್ವಲ್ಪ ಬೆಳೆದ ತಕ್ಷಣ ಪುಟ್ಟ ಮಾನವ ಭಾವನೆಗಳನ್ನು ಅನುಭವಿಸಲು ಪ್ರಾರಂಭಿಸುವನು.

೧೦.೨೪ ದಿನ

ಒಂದು ತಿಂಗಳ ಭ್ರೂಣವು ಮೂಳೆ ಅಥವಾ ಅಸ್ಥಿಪಂಜರವನ್ನು ಹೊಂದಿರುವುದಿಲ್ಲ. ಈ ಸಮಯದಲ್ಲಿ ಭ್ರೂಣದಲ್ಲಿ ಹೃದಯ ಬೆಳವಣಿಗೆ ಪ್ರಾರಂಭವಾಗಿ ೧೮ನೇ ದಿನದ ನಂತರ ಹೃದಯ ಬಡಿತವನ್ನು ಆರಂಭಿಸುತ್ತದೆ.

೧೧.೪ ವಾರ

೧೨.೫ನೇ ವಾರ

ಈ ಸಮಯದಲ್ಲಿ, ಮಗುವಿನ ಮುಖದಲ್ಲಿ ಕಣ್ಣು ಮತ್ತು ಮೂಗನ್ನು ಗುರುತಿಸಬಹುದು.

೧೩.೪೦ ದಿನ

ಜರಾಯುವಿನ ಭ್ರೂಣದ ಜೀವಕೋಶಗಳು. ಗರ್ಭಕೋಶದ ಗೋಡೆಗೆ ಮತ್ತು ಭ್ರೂಣಕ್ಕೆ ಸಂಪರ್ಕ ಹೊಂದಿರುವ ಅಂಗವು ಭ್ರೂಣಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

೧೪.೮ ವಾರಗಳು

ತ್ವರಿತವಾಗಿ ಬೆಳೆಯುತ್ತಿರುವ ಭ್ರೂಣ ಈಗ ಗರ್ಭಚೀಲದಲ್ಲಿ ಸುರಕ್ಷಿತವಾಗಿದೆ.

೧೫.೧೦ ವಾರಗಳು

ಕಣ್ಣಿನ ರೆಪ್ಪೆಗಳು ಬೆಳೆದಿದ್ದು, ಕೆಲವೇ ದಿನಗಳಲ್ಲಿ ಕಣ್ಣು ಮಿಟುಕಿಸಲು ಪ್ರಾರಂಭಿಸುತ್ತವೆ.

೧೬.೧೬ ವಾರಗಳು

ಶಿಶುವು ತನ್ನ ಕೈ ಕಾಲುಗಳನ್ನು ಆಡಿಸಲು ಶುರು ಮಾಡುವುದು.

೧೭.ರಕ್ತನಾಳಗಳು ಕಾಣಿಸುತ್ತವೆ

ಶಿಶುವಿನ ಸೂಕ್ಷ್ಮ ಮತ್ತು ತೆಳುವಾದ ಚರ್ಮದ ಮೂಲಕ ರಕ್ತನಾಳಗಳು ಕಾಣಿಸುತ್ತವೆ.

೧೮.೧೮ ವಾರಗಳು

ಮಗುವು ಈಗ ಒಂದು ಚಿಕ್ಕ ಸ್ಕೇಲಿನಷ್ಟು ಉದ್ದ ಇರುತ್ತದೆ ಮತ್ತು ಹೊರ ಪ್ರಪಂಚದ ಶಬ್ದಗಳನ್ನು ಗ್ರಹಿಸಬಲ್ಲದು.

೧೯.೧೯ ವಾರಗಳು

ಮಗುವಿನ ಬೆರಳಿನ ಉಗುರುಗಳು ಬೆಳೆಯಲು ಪ್ರಾರಂಭಿಸುತ್ತದೆ ಮತ್ತು ಬೇರೆ ಅಂಗಗಳು ಬೆಳವಣಿಗೆಯನ್ನು ಶುರುಮಾಡುತ್ತವೆ.

೨೦.೨೬ ವಾರಗಳು

ಕಣ್ಣಿನ ರೆಪೆಗಳನ್ನು ಬಡಿಯಲು ಪ್ರಾರಂಭಿಸಿದ್ದರು, ಮಗುವಿನಲ್ಲಿ ದೃಷ್ಟಿಯ ಸಂಪೂರ್ಣ ಬೆಳವಣಿಗೆ ಅಗುರಿವುದಿಲ್ಲ, ಈ ಸಮಯದಲ್ಲಿ ಮಗುವು ಅಸ್ಪಷ್ಟ ನೋಟವನ್ನು ಕಾಣಬಹುದು. ಮೆದುಳು ಸಕ್ರಿಯೆ ಆಗಿದ್ದು, ಹೊರಗಿನ ಶಬ್ದಕ್ಕೆ ಪ್ರತಿಕ್ರಿಯೆ ನೀಡುತ್ತದೆ.

೨೧.೬ ತಿಂಗಳು

ಮಗುವು ಈ ಸಮಯದಲ್ಲಿ ತನ್ನ ತಲೆಯನ್ನು ಕೆಳಮುಖವಾಗಿ ಅಂದರೆ ತಾಯಿಯ ಯೋನಿಯ ಕಡೆ ತಿರುಗಿಕೊಳ್ಳುತ್ತದೆ.

೨೨.೩೬ ವಾರಗಳು

ಇನ್ನು ಕೆಲವೇ ವಾರಗಳಲ್ಲಿ ಮಗುವು ತನ್ನ ತಾಯಿಯ ಮುಖವನ್ನು ನೋಡಲು ಭೂಮಿಗೆ ಕಾಲಿಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon