Link copied!
Sign in / Sign up
2
Shares

ಭಾರತಾಂಬೆ ಬಗ್ಗೆ ನಿಮಗೆ ತಿಳಿದಿರದ 10 ಸಂಗತಿಗಳು

ಪುರಾತನ ಕಾಲದಿಂದಲೇ ಸಂಸ್ಕೃತಿ ಹಾಗೂ ಸಂಸ್ಕಾರಗಳ ತವರಾದ ಭಾರತವು ತನ್ನ ಮಡಿಲಲ್ಲಿ ಅಡಗಿಸಿಟ್ಟ ಕೆಲವು ರಹಸ್ಯಗಳನ್ನು ತಿಳಿದುಕೊಳ್ಳೋಣ ಬನ್ನಿ. ಭಾರತ ದೇಶವನ್ನು ಇನ್ನೂ ಸುಂದರಗೊಳಿಸುವ ಘಟಕಗಳಲ್ಲಿರುವ ಕೆಲವು ವಿಶೇಷತೆಗಳ ಮೇಲೆ ಬೆಳಕು ಚೆಲ್ಲೋಣ.

೧. ಸ್ವಿಜರ್ ಲ್ಯಾಂಡ್ ನಲ್ಲಿ ಸಯನ್ಸ್ ಡೇಯು ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂರವರಿಗಾಗಿ ಮೀಸಲಾಗಿರಿಸಲಾಗಿದೆ

ಈ ರಾಕೆಟ್ ಮಾನವನನ್ನು ಕೇವಲ ಭಾರತ ಮಾತ್ರವಲ್ಲ, ಇತರ ರಾಷ್ಟ್ರಗಳು ಕೂಡಾ ಆದರಿಸುತ್ತವೆ. ಸ್ವಿಜರ್ಲೆಂಡ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ತನ್ನ ಇಡೀ ಒಂದು ದಿನವನ್ನು ಭಾರತದ ಮಾಜಿ ರಾಷ್ಟ್ರಪತಿಗೆ ಮುಡಿಪಾಗಿಟ್ಟಿದೆ.

 

೨. ಪ್ರಪಂಚದಲ್ಲಿ ಅತಿ ಹೆಚ್ಚು ಇಂಗ್ಲೀಷ್ ಮಾತನಾಡುವ ದೇಶ -ಭಾರತ

ಅಮೆರಿಕದ ನಂತರ ಭಾರತವು ಅತಿ ಹೆಚ್ಚು ಇಂಗ್ಲಿಷ್ ಮಾತನಾಡುವ ಜನರಿರುವ ದೇಶವೆಂಬ ಪ್ರಖ್ಯಾತಿಗೆ ಒಳಗಾಗಿದೆ. ದೇಶದ ಜನಸಂಖ್ಯೆ ಕೇವಲ ೧೦% ಮಾತ್ರವಾದ ೧೨೫ ಮಿಲಿಯನ್ ಜನರು ಯಾವುದೇ ವ್ಯಾಕರಣ ದೋಷಗಳಿಲ್ಲದೇ ಇಂಗ್ಲಿಷ್ ಮಾತನಾಡಬಲ್ಲರು.

 

೩. ವಜ್ರವನ್ನು ಮೊತ್ತಮೊದಲ ಬಾರಿಗೆ ಖನನ ಮಾಡಿದ ದೇಶ-ಭಾರತ

ಭಾರತದ ನದಿ ತೀರದ ಪ್ರದೇಶಗಳಾದ ಗುಂಟೂರು ಮತ್ತು ಕೃಷ್ಣಾ ಪ್ರಾಂತ್ಯಗಳಲ್ಲಿ ಮಾತ್ರ ಕಂಡುಬಂದಿದ್ದು, ಭಾರತ ದೇಶ ಮಾತ್ರ ಈ ಅತ್ಯಮೂಲ್ಯವಾದ ವಜ್ರವನ್ನು ಖನ‌ನ ಮಾಡುತಿತ್ತು. ವಿಶ್ವವಿಖ್ಯಾತ ಕೊಹಿನೂರ್ ವಜ್ರವನ್ನು ಕೂಡ ಭಾರತದಲ್ಲಿ ಖನನ ಮಾಡುತ್ತಿದ್ದರು.

 

೪. ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ರಚಿಸಿದವರು ಭಾರತೀಯರಾದ ಶ್ರೀ ರವೀಂದ್ರನಾಥ ಠಾಗೂರರು

ಅತ್ಯಂತ ಪ್ರತಿಭಾನ್ವಿತ, ತನ್ನ ಕಾಲದ ಸರ್ವಶ್ರೇಷ್ಠ ಕವಿ ಶ್ರೀ ರವೀಂದ್ರನಾಥ ಠಾಗೂರವರು ಕೇವಲ ಭಾರತದ ರಾಷ್ಟ್ರಗೀತೆ ಮಾತ್ರವಲ್ಲ; ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕೂಡ ರಚಿಸಿದ್ದಾರೆ. ಅಷ್ಟಕ್ಕೇ ಮುಗಿದಿಲ್ಲ. ಬ್ರಿಟಿಷರು ಈ ಮಹಾನ್ ವ್ಯಕ್ತಿಯನ್ನು ಕ್ನೈಟ್ ಹುಡ್ ಪುರಸ್ಕಾರವನ್ನು ನೀಡಿ ಆದರಿಸುವುದೆಂದು ತೀರ್ಮಾನಿಸಿದ್ದರು. ಆದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಮನನೊಂದ ಠಾಕೂರರು ಅದನ್ನು ತಿರಸ್ಕರಿಸಿದರು.

 

೫. ಅತೀ ಹೆಚ್ಚು ಶಾಕಾಹಾರಿ ಜನರನ್ನ ಹೊಂದಿರುವ ದೇಶ

ಪ್ರಪಂಚದಲ್ಲಿ ಅತಿ ಹೆಚ್ಚು ಶಾಖಾಹಾರಿಗಳು ಇರುವುದೂ ಭಾರತದಲ್ಲೆ. ತತ್ಪರಿಣಾಮವಾಗಿ ಗಿಡ ಮರಗಳ ಫಲವನ್ನು ಸೇವಿಸುವವರು ಭಾರತದವರೇ. ೩೦%-೪೦% ಜನರು ಶಾಖಾಹಾರಿಗಳಾದ ಕಾರಣ ಭಾರತವು ತರಕಾರಿ ಸ್ನೇಹಿ ದೇಶವಾಗಿ ಮಾರ್ಪಾಡಾಗಿದೆ.

 

೬.ಹಾವು ಏಣಿ ಆಟ ಆರಂಭಗೊಂಡದ್ದು ಭಾರತದಲ್ಲಿಯೇ

ಮೋಕ್ಷಪಟಂ ಎಂದು ಗುರುತಿಸಲ್ಪಟ್ಟಿದ್ದ ಈ ಆಟದಿಂದ ಮಕ್ಕಳಿಗೆ ಕರ್ಮ ಹಾಗೂ ಕರ್ಮಫಲಗಳೆಂಬ ನೈತಿಕ ಪಾಠಗಳನ್ನು ಬೋಧಿಸಲು ಬಳಸಲಾಗುತ್ತಿತ್ತು. ನಂತರ ವ್ಯಾಪಾರೀಕರಣಗೊಂಡ ಪ್ರಪಂಚದ ಮನೋರಂಜನಾ ಕ್ರೀಡೆಯಾಗಿ ಬೆಳೆಯಿತು

 

೭. ಕಬಡ್ಡಿ ಪಂದ್ಯದಲ್ಲಿ ಸೋತ ಚರಿತ್ರೆಯೇ ಭಾರತಕ್ಕಿಲ್ಲ

 ಬಲಿಷ್ಠವಾದ ಕಬಡ್ಡಿ ತಂಡವನ್ನು ಕಟ್ಟಿಕೊಂಡಿರುವ ಭಾರತವು ಇದುವರೆಗೂ ಆಡಿದ ಯಾವುದೇ ಕಬಡ್ಡಿ ಪಂದ್ಯವನ್ನು ಸೋತಿಲ್ಲ ವೆಂಬ ಚರಿತ್ರೆಯನ್ನು ದಾಖಲಿಸಿದೆ ಈ ದಾಖಲೆಯು ಕೇವಲ ಪುರುಷರ ಕಬಡ್ಡಿ ಪಂದ್ಯ ಮಾತ್ರವಲ್ಲ ಸ್ತ್ರೀಯರ ಕಬಡ್ಡಿ ಪಂದ್ಯಕ್ಕೂ ಅನ್ವಯಿಸುತ್ತವೆ.

 

೮. ಅತೀ ಎತ್ತರದ ಕ್ರಿಕೆಟ್ ಅಂಗಣ

ಕ್ರಿಕೆಟ್ ನ ಬಗ್ಗೆ ಭಾರತೀಯರಿಗಿರುವ ಅಭಿಮಾನ ಹಾಗೂ ಪ್ರೇಮವು ಕ್ರಿಕೆಟ್ ನ ಸ್ಥಾನವನ್ನೇ ಬದಲಾಯಿಸಿದೆ. ಹಿಮಾಚಲ ಪ್ರದೇಶದಲ್ಲಿರುವ ಚೈಲ್ ಕ್ರಿಕೆಟ್ ಮೈದಾನವು ಅತ್ಯಂತ ಎತ್ತರದ ಕ್ರಿಕೆಟ್ ಗ್ರೌಂಡ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೮೯೩ ರಲ್ಲಿ ನಿರ್ಮಿಸಲಾದ ಈ ಅದ್ಭುತವಾದ ಕ್ರಿಕೆಟ್ ಮೈದಾನವು ಸಮುದ್ರ ಮಟ್ಟದಿಂದ ೧೮೯೩ ಮೀ. ಮೇಲಿದೆ .

 

೯. ತೇಲುವ ಅಂಚೆ ಕಛೇರಿ

೧,೫೫,೦೧೫ ಗಳಷ್ಟು ಅಂಚೆ ಕಚೇರಿಯನ್ನು ಹೊಂದಿರುವ ಭಾರತವು ಪ್ರಪಂಚದ ಅತಿ ದೊಡ್ಡ ಜಾಲವನ್ನು ಹೊಂದಿದೆ. ಒಂದು ಅಂಚೆ ಕಚೇರಿಯ ಸರಾಸರಿ ೭,೧೭೫ ಜನರ ಸೇವೆ ನಿರ್ವಹಿಸುತ್ತದೆ. ನಗರದಲ್ಲಿರುವ ದಾಲ್ ಲೇಕ್‍ನ ಮೇಲೆ ಸ್ಥಿತಿಗೊಂಡಿರುವ ಅಂತಹ ಒಂದು ಅಂಚೆ ಕಛೇರಿಯ ಬೋಟಿನ ಮೇಲೆ ಕಟ್ಟಲ್ಪಟ್ಟಿದೆ .

 

೧೦. ಅತ್ಯಂತ ಆರ್ದ್ರಪ್ರದೇಶ

ಮೇಘಾಲಯದ ಮಾಸಿ ರಾಮ್ ಎಂಬ ಹಳ್ಳಿಯ ಕೇನ್ ಹಿಲ್ ಎಂಬ ಗುಡ್ಡಗಾಡು ಪ್ರದೇಶವು ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಉತ್ತರ ಪೂರ್ವ ಭಾಗಗಳಲ್ಲಿ ಚಾಚಿಕೊಂಡಿರುವ ಈ ಪ್ರದೇಶವು ಪ್ರಪಂಚದ ಹೆಚ್ಚಿನ ಆದ್ಯತೆಯಿಂದ ಕೂಡಿದ ವಾಸ ಸ್ಥಳವೆಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ನಿಮ್ಮ ಸಮಯವನ್ನು ನಮಗಾಗಿ ಮೀಸಲಾಗಿರಿಸಿದ್ದಕ್ಕೆ ಕೃತಜ್ಞತೆಗಳು. ಓದಿದ್ದಕ್ಕೆ ಧನ್ಯವಾದಗಳು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon