Link copied!
Sign in / Sign up
7
Shares

ಬೇಸಿಗೆಯಲ್ಲಿ ಗಂಡಸರಲ್ಲಿ ಗುಪ್ತಾಂಗ ತುರಿಕೆ (ಜಾಕ್ ಇಚ್) : ಕಾರಣ ಮತ್ತು ಪರಿಹಾರ !

ಬೇಸಿಗೆ ಕಾಲ ಬಂದೇ ಬಿಟ್ಟಿತು. ಸುಡುವ ಬಿಸಿಲಿಗೆ ದೇಹದ ಎಲ್ಲಾ ಭಾಗಗಳಿಂದಲೂ ಬೆವರು ಕಿತ್ತುಕೊಂಡು ಬರುತ್ತದೆ. ಅದರಲ್ಲೂ ಗಾಳಿ ಆಡದಂತಹ ಜಾಗಗಳಲ್ಲಿ, ಬೆವರಿನಿಂದ ಉಂಟಾಗುವ ಇರಿಸುಮುರಿಸು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಇದು ಹೆಂಗಸರಲ್ಲಿ ಒಂದು ರೀತಿಯ ಸಮಸ್ಯೆಯನ್ನು ಹುಟ್ಟು ಹಾಕಿದರೆ, ಗಂಡಸರಲ್ಲಿ ಇನ್ನೊಂದು ರೀತಿಯ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಗಂಡಸರಿಗೆ ಏಕಾದರೂ ಈ ವೃಷಣಗಳು ಇವೆಯೋ ಎನಿಸುವಂತೆ ತುರಿಕೆ ಕಾಡುತ್ತದೆ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಇದು ಉಂಟಾದಾಗ ನಾವು ಸಂಕಟಕ್ಕೆ ಸಿಲುಕಿ ಬಿಡುತ್ತೇವೆ. ಇದನ್ನು ಇಂಗ್ಲೀಷ್ ಅಲ್ಲಿ ಜಾಕ್ ಇಚ್ ಎಂದು ಕರೆಯುವರು.

ಬನ್ನಿ ಈ ಗುಪ್ತಾಂಗದ ತುರಿಕೆ ಅಥವಾ ಜಾಕ್ ಇಚ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜಾಕ್ ಇಚ್ ಏಕೆ ಉಂಟಾಗುತ್ತದೆ?


ಮೊದಲನೆಯದಾಗಿ, ನಿಮ್ಮ ಗುಪ್ತಾಂಗವು ಫಂಗಸ್ ಬೆಳೆಯಲು ಅತ್ಯುತ್ತಮವಾದ ಜಾಗವಾಗಿರುತ್ತದೆ. ಅದರಲ್ಲೂ ಅದು ಬೆವರಿನಿಂದ ಕುಡಿದಾಗ, ಫಂಗಸ್ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ. ನಾವು ವ್ಯಾಯಾಮ ಮಾಡಿದ ಮೇಲೆ ಅಥವಾ ಶ್ರಮವುಳ್ಳ ಕೆಲಸ ಮಾಡಿದ ನಂತರ ನಮ್ಮ ದೇಹವು ನೈಸರ್ಗಿಕವಾಗಿ ತಾನೇ ತ್ವಚೆಯ ರಂಧ್ರಗಳ ಮೂಲಕ ಹೊರ ಹಾಕುವ ಬೆವರು ಮತ್ತು ಕೀಟಾಣುಗಳಿಗೆ ಹೊರಹೋಗಲು ಜಾಗವೇ ಇರುವುದಿಲ್ಲ.

ಒಂದು ವೇಳೆ ನಿಮಗೆ ಡಯಾಬಿಟಿಸ್ ಇದ್ದರಂತೂ, ಇದು ನಿಮಗೆ ಇನ್ನಷ್ಟು ಕಷ್ಟ ಉಂಟು ಮಾಡುತ್ತದೆ. ಏಕೇಂದರೆ, ನಿಮ್ಮ ಬೆವರಿನಲ್ಲಿ ಹೆಚ್ಚು ಪ್ರಮಾಣದ ಸಕ್ಕರೆಗಳು ಇದ್ದು, ಇದು ಫಂಗಸ್ ಗೆ ಒಳ್ಳೆಯ ಆಹಾರ ಆಗುತ್ತದೆ ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಇತರೆ ಸಮಯಕ್ಕಿಂತ ಕಡಿಮೆ ಬಲ ಹೊಂದಿರುವ ಕಾರಣ, ಸಾಮಾನ್ಯ ತ್ವಚೆಯ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.


ಜಾಕ್ ಇಚ್ ಅಥವಾ ಗುಪ್ತಾಂಗದ ತುರಿಕೆಯನ್ನು ಹೇಗೆ ನಿಭಾಯಿಸುವುದು?


ಅದೃಷ್ಟವಶಾತ್ ಇವುಗಳಿಗೆ ಸೀದಾ ಸಾದಾ ಪರಿಹಾರಗಳು ಇವೆ. ನೀವು ಮೆಡಿಕಲ್ ಸ್ಟೋರ್ ಅಲ್ಲಿ ಸಿಗುವ ಉತ್ಪನ್ನಗಳನ್ನ ಬಳಸಬಹುದು. ಒಂದು ವೇಳೆ ನಿಮಗೆ ಆ ಜಾಗದಲ್ಲಿ ತುರಿಕೆ ಮತ್ತು ಕೆಂಪಾಗುವಿಕೆ ಕಂಡು ಬಂದರೆ, ತೇವಾಂಶವನ್ನ ಹೀರಿಕೊಳ್ಳುವ ಜಿಂಕ್ ಆಕ್ಸೈಡ್ ಪೌಡರ್ ಅನ್ನು ಬಳಸಬಹುದು.

ಒಂದು ವೇಳೆ ಕೇವಲ ಪೌಡರ್ ನಿಮ್ಮ ತೊಂದರೆಯನ್ನು ಬಗೆಹರಿಸಲಿಲ್ಲ ಎಂದರೆ, ನೀವು ಆಂಟಿ-ಫಂಗಲ್ ಕ್ರೀಮ್ ಅನ್ನು ಬಳಸಬಹುದು. ಮೆಡಿಕಲ್ ಸ್ಟೋರ್ ಅಲ್ಲಿ ನಿಮಗೆ ಹಲವಾರು ಆಂಟಿ-ಫಂಗಲ್ ಕ್ರೀಮ್ಗಳು ಲಭ್ಯವಿವೆ. ನೀವು ಅದನ್ನು ಹಚ್ಚಿಕೊಂಡು, ಅದರ ಮೇಲೆ ಪೌಡರ್ ಹಾಕಿಕೊಳ್ಳಬಹುದು.

ಒಂದು ವೇಳೆ ನೀವು ಹಲವು ವಾರಗಳು ಆದರೂ ಏನು ಬದಲಾವಣೆಯನ್ನು ಕಾಣಲಿಲ್ಲ ಎಂದರೆ ಅಥವಾ ಕೆಂಪಾಗುವಿಕೆಯು ಹರಡುತ್ತಿದ್ದರೆ ಅಥವಾ ಚರ್ಮ ಒಡೆದು ನೋವು ಉಂಟಾಗುತ್ತಿದ್ದರೆ, ವೈದ್ಯರನ್ನ ಸಂಪರ್ಕಿಸುವುದು ಒಳ್ಳೆಯದು.


ಜಾಕ್ ಇಚ್ ನಿವಾರಣೆ ಹೇಗೆ?


ಈ ಗುಪ್ತಾಂಗದ ತುರಿಕೆಯಿಂದ ತಪ್ಪಿಸಿಕೊಳ್ಳಲು ಒಂದು ಒಳ್ಳೆಯ ದಾರಿ ಎಂದರೆ, ಅದು ಕೆಲಸ ಮುಗಿಸಿ ಮನೆಗೆ ಬಂದೊಡನೆ ಸ್ನಾನ ಮಾಡುವುದು ಮತ್ತು ಅದನ್ನು ಚೆನ್ನಾಗಿ ಒರೆಸಿ, ಒಣಗಿಸಿಕೊಳ್ಳುವುದು. ನೀವು ಲೂಸ್ ಆಗಿರುವ ಕಾಟನ್ ಚಡ್ಡಿಯನ್ನು ಧರಿಸಬೇಕು. ಕಾಟನ್ ಹೊರತು ಬೇರೆ ವಸ್ತ್ರಗಳನ್ನ ಧರಿಸುವುದನ್ನೇ ನೀವು ಕಡಿಮೆ ಮಾಡಬೇಕು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon