Link copied!
Sign in / Sign up
0
Shares

ಬೇಸಿಗೆ ಕಾಲದಲ್ಲಿ ನವಜಾತ ಶಿಶುಗಳಿಗೆ ಕಾಡುವ ರೋಗಗಳು

ಬೇಸಿಗೆಯ ಸೂರ್ಯನು ಹೊರಬಂದು ಭೀಕರ ಬಿಸಿಲು ಬೀರುತ್ತಿರುವನು. ಅವನ ಕೆಂಗಣ್ಣಿಗೆ ಗುರಿಯಾದಾಗ ಎಲ್ಲಾ ತಂದೆ ತಾಯಂದಿರಿಗೆ ತಮ್ಮ ಮುದ್ದು ಕಂದಮ್ಮನನ್ನು ಈ ಕಟುವಾದ ಬಿಸಿಲಿನಿಂದ ಹೇಗೆ ಕಾಪಾಡುವುದು ಎನ್ನುವುದೇ ತಲೆನೋವು. ಆಹಾರ ಪದ್ದತಿಯಲ್ಲಿ ಬದಲಾವಣೆ ಇಂದ ಹಿಡಿದು ನಿಮ್ಮ ಮಗುವಿನ ಉಡುಪುಗಳ ಬದಲಾವಣೆಯವರೆಗೂ ನೀವು ಕಾರ್ಯಸನ್ನಧರಾಗಿರಬೇಕು. ಈಗಾಗಲೇ ನೀವು ಬೇಸಿಗೆ ಕಾಲಕ್ಕೆ ತಕ್ಕ ಉಡುಪುಗಳನ್ನು ಹಾಗು ಬೇಸಿಗೆಯ ಆಹಾರಗಳ ಪಾಕವಿಧಾನಗಳನ್ನು ಪಟ್ಟಿ ಮಾಡಿಕೊಂಡು ಇರಿಸಿಕೊಂಡಿರಬೇಕು. ನಿಮ್ಮ ಮಗುವಿನ ಹಾರೈಕೆ ತುಂಬಾ ಶಿಸ್ತುವಹಿಸಿ ಮಾಡದಿದ್ದಲ್ಲಿ ಬೇಸಿಗೆಯಲ್ಲಿ ನಿಮ್ಮ ಮಗುವು ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕ ಬೇಸಿಗೆ ಕಾಲವನ್ನು ಕಟುವಾದ ಕಾಲ ಎನ್ನುವುದು. ಆದರೆ ಚಿಂತಿಸಬೇಡಿ. ನೀವು ನಿಮ್ಮ ಮಗುವಿಗೆ ಯಾವುದೇ ರೀತಿ ಅನಾರೋಗ್ಯ ಕಾಡಿದರು ಎದುರಿಸಲು ಸಿದ್ಧರಾಗಲು, ಇಲ್ಲಿ ನಾವು ಪಟ್ಟಿ ಮಾಡಿರುವ ಸಾಮಾನ್ಯವಾಗಿ ಕಾಡುವ ರೋಗಗಳ ಬಗ್ಗೆ ತಿಳಿಯಿರಿ.

೧. ನಿರ್ಜಲೀಕರಣ 

ಸೂರ್ಯನ ಅತಿಯಾದ ಬಿಸಿಲಿನಿಂದ ಹಾಗು ತುಂಬಾ ಬೆವರುವುದರಿಂದ, ನಿಮ್ಮ ಮಗು ನಿರ್ಜಲೀಕರಣ (dehydration)ಕ್ಕೆ ಈಡಾಗಬಹುದು. ಅದರಲ್ಲೂ ಮಗು ಹೊರಗಡೆ ಬಿಸಿಲಲ್ಲಿ ಕಾಲ ಕಳೆದಾಗ ಅಥವಾ ಬೇಕಾದಷ್ಟು ನೀರು ಅಥವಾ ಬೇರ ದ್ರವ್ಯಗಳನ್ನು ಸೇವಿಸದೆ ಇದ್ದಾಗ ಈ ರೀತಿ ಆಗುವುದು ಹೆಚ್ಚು. ಇದು ತೀವ್ರ ಜ್ವರಕ್ಕೆ ಕಾರಣವಾಗಬಹುದು.

೨. ಬಿಸಿಲಿಗೆ ಚರ್ಮ ಸುಡುವುದು

 ನಿಮ್ಮ ಮಗುವಿನ ಚರ್ಮವು ತುಂಬಾನೇ ನಾಜೂಕು. ಕಠಿಣ ವಾತಾವರಣ ನಿಮ್ಮ ಮಗುವಿನ ಚರ್ಮಕ್ಕೆ ಭೀಕರವಾಗಬಹುದು. ವಯಸ್ಕರರಾದ ನಮ್ಮಗಳ ಚರ್ಮಕ್ಕೆ ಸೂರ್ಯನ ಬಿಸಿಲು ಮಾಡುವ ಹಾನಿಯನ್ನು ಗಮನಿಸಿದರೆ, ನಿಮ್ಮ ಮಗುವಿನ ಎಳೆ ಚರ್ಮಕ್ಕೆ ಇನ್ನೆಷ್ಟು ಹಾನಿ ಮಾಡಬಹುದು ಎಂಬುದನ್ನು ಸ್ವಲ್ಪ ಊಹೆ ಮಾಡಿಕೊಳ್ಳಿ.

೩. ಚರ್ಮ ಒಡೆಯುವುದು ಹಾಗು ಸುಲಿಯುವುದು

ಈ ಬಿರುಬೇಸಿಗೆಯ ಸಮಯದಲ್ಲಿ ನಿಮ್ಮ ಮಗುವಿಗೆ ಚರ್ಮ ಒದೆಯುತ್ತಾದೆ ಹಾಗು ಸುಲಿತಕ್ಕೆ ಒಳಗಾಗುತ್ತದೆ. ಕೆಲವೊಮ್ಮೆ ನಿಮ್ಮ ಮಗುವಿಗೆ ತುಂಬಾ ಅಹಿತಕರವೆನಿಸುವ ಹಾಗು ನೋವು ಮಾಡುವ ಜಾಗಗಳಲ್ಲಿ ಹೀಗೆ ಆಗುತ್ತದೆ. ಹೀಗೆ ಆದ್ದಲ್ಲಿ, ಕೂಡಲೇ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಪಡೆದುಕೊಳ್ಳಿ.

೪. ಸೊಳ್ಳೆಯಿಂದ ಹಬ್ಬುವ ರೋಗಗಳು  

ಚಳಿಗಾಲ ಮುಗಿದಂತೆಯೇ, ಸೊಳ್ಳೆಗಳ ಕಾಟ ಇಲ್ಲದ ಕಾಲವು ಮುಗಿಯುತ್ತೆ. ಸೊಳ್ಳೆಗಳು ತಮ್ಮೊಂದಿಗೆ ಡೆಂಗ್ಯು, ಮಲೇರಿಯ,  ಚಿಕಂಗುನ್ಯ ಅಂತಹ ತುಂಬಾ ಗಂಭಿರವಾದ ಹಾಗು ಜೀವಕ್ಕೆ ತುತ್ತು ತರುವಂತ ರೋಗಗಳನ್ನು ಹೊತ್ತು ತರುತ್ತವೆ. ಮಗುವಿಗೆ ಮಾರಕವಾಗದಂತೆ ಹಾಗು ಎಲ್ಲ ವಿಧಗಳಲ್ಲೂ ಸುರಿಕ್ಷಿತವಾಗಿರುವ ಸೊಳ್ಳೆ ನಿರೋಧಕ ಉತ್ಪನ್ನಗಳನ್ನು ಪ್ರತಿದಿನ ಉಪಯೋಗಿಸಿ. ಇದರೊಂದಿಗೆ, ನಿಮ್ಮ ಮಗು ಮಲಗುವ ಜಾಗದ ಸುತ್ತ ಸೊಳ್ಳೆ ಪರದೆಯನ್ನು ಕಟ್ಟಿ.

೫ . ನೀರಿನಿಂದ ಹಬ್ಬುವ ರೋಗಗಳು  

ಸೊಳ್ಳೆಗಳು ಹೇಗೆ ಬೇಸಿಗೆಯಲ್ಲಿ ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತವೋ, ಹಾಗೆಯೇ ವೈರಸ್ಗಳು ಹಾಗು ಬ್ಯಾಕ್ಟೀರಿಯಾಗಳು ಸಹಾ ತಮ್ಮ ಸಂತತಿ ಹೆಚ್ಚಿಸಿಕೊಳ್ಳುತ್ತವೆ. ನೀರಿನಿಂದ ಹಬ್ಬುವ ಕಾಯಿಲೆಗಳಾದ ಟೈಫಾಯಿಡ್, ಕಾಲರಾ, ಕಾಮಾಲೆ, ಬೇಧಿ ಹಾಗು ಇನ್ನಿತರೆ ಕಾಯಿಲೆಗಳು ನಿಮ್ಮ ಮಗುವಿಗೆ ಶುದ್ದ್ಹೀಕರಿಸದ ನೀರು ಸೇವನೆ ಮಾಡಿಸಿದಾಗ ಅವರಿಗೆ ಹಬ್ಬುತ್ತದೆ. ನೀವು ಮನೆಯಿಂದ ಹೊರಗೆ ತಿನ್ನಲು ಬಂದಾಗ ಈ ರೀತಿ ಆಗುವ ಸಾಧ್ಯತೆ ಬಹಳ. ಆದರಿಂದ, ನೀವು ನಿಮ್ಮ ಮಗುವಿನೊಂದಿಗೆ ಮನೆ ಹೊರಗೆ ಕಾಲಿಡುತ್ತೀರ ಎಂದೊಡನೆ, ನಿಮ್ಮ ಬ್ಯಾಗಿನಲ್ಲಿ ಒಂದು ಬಾಟಲಿಯಲ್ಲಿ ಶುದ್ದೀಕರಿಸಿದ ನೀರು ಇದ್ದೆ ಇರಲಿ.

೬. ಮೈನೂರತೆಗಳು ಹಾಗು ದದ್ದುಗಳು 

ಅಂದರೆ ಅಲರ್ಜಿ ಹಾಗು ರಾಷೆಸ್ ಗಳು. ನಿಮ್ಮ ಮಗುವು ಬೇಸಿಗೆಯಲ್ಲಿ ಸೂರ್ಯನಿಗೆ ಅಥವ ಬಸಿಲಿಗೆ ಮೈನೂರತೆ ಬೆಳೆಸಿಕೊಳ್ಳಬಹುದು. ಅದಲ್ಲದೆ ಮೈ ಮೇಲಿನ ಚರ್ಮದ ಮೇಲೆ ಹಲವಾರು ಕಡೆ ದದ್ದುಗಳು ಕಾಣಿಸಿಕೊಳ್ಳಬಹುದು. ಇದು ಕೂಡ ಮಗುವಿಗೆ ವೇದನೆ ನೀಡುತ್ತವೆ.

ಬೇಸಿಗೆಯಲ್ಲಿ ನಿಮ್ಮ ಮಗುವಿನ ಮೈಯನ್ನು ಸಮರ್ಪಕವಾಗಿ ಬಟ್ಟೆಯಲ್ಲಿ ಮುಚ್ಚಿಡಿ, ಆದರೆ ಮಗುವಿಗೆ ಅಹಿತಕರ ಎನಿಸುವಷ್ಟು ಅಲ್ಲದೆ.  ಅವರನ್ನು ಜನನಿಬಿಡ ಜಾಗಗಳಿಂದ ದೂರನೇ ಇಡಿ, ಮುಖ್ಯವಾಗಿ ಈ ಬೇಸಿಗೆಯಲ್ಲಿ. ಎಕೆಂದರೆ ಇಂತಹ ಜಾಗಗಳು ಅನಾರೋಗ್ಯಕರವಾಗಿರುತ್ತವ ಹಾಗು ನಿಮ್ಮ ಮಗುವಿಗೆ ಕಾಯಿಲೆ ಅಥವಾ ಸೋಂಕು ಹಬ್ಬುವ ಸಾಧ್ಯತೆಗಳು ಹೆಚ್ಚಿರುತ್ತವೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon