Link copied!
Sign in / Sign up
1
Shares

ನಿಮ್ಮ ಮಗುವನ್ನು ಬೆನ್ನಿನ ಮೇಲೆಯೇ ಮಲಗಿಸಿ - ಒಂದು ತುಂಬಾ ದೊಡ್ಡ ಕಾರಣಕ್ಕೆ!

ದಿನದಲ್ಲಿ ಒಂದಲ್ಲವೆಂದರೆ ಹಲವಾರು ಬಾರಿ ಮಗುವನ್ನು ಮಲಗಿಸುವುದು ನಿಜಕ್ಕೂ ಒಂದು ಸವಾಲೇ. ಇದಕ್ಕೆ ಪೋಷಕರು ಏನೇನೋ ವಾಡಿಕೆಗಳನ್ನ ಕೂಡ ರೂಪಿಸಿಕೊಳ್ಳುತ್ತಾರೆ. ಅದು ಸುಮ್ಮನೆ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವುದರಿಂದ ಹಿಡಿದು, ಮಗುವಿಗೆ ಸ್ನಾನ ಮಾಡಿಸಿ, ಅದಕ್ಕೊಂದು ಕಥೆ ಹೇಳಿ, ತಂಪಾದ ಸಂಗೀತ ಮತ್ತು ಇನ್ನಷ್ಟನ್ನು ಮಾಡಬಹುದು. ಇದು ನಿಮ್ಮ ವಯಕ್ತಿಕ ಆಯ್ಕೆಯಾಗಿದ್ದು, ನಿಮ್ಮ ಮತ್ತು ನಿಮ್ಮ ಮಗುವಿಗೆ ಸೂಕ್ತವಾದ ವಿಧಾನವನ್ನು ಆಯ್ದುಕೊಳ್ಳಿ. ಅದು ಏನೇ ಇದ್ದರೂ, ಮಲಗಿಸುವುದರ ಹೊರತಾಗಿ ಎಲ್ಲರೂ ನಿಮಗೆ ಒಂದೇ ಸಲಹೆ ನೀಡುತ್ತಾರೆ, ಅದೇನೆಂದರೆ ಮಗುವನ್ನು ಬೆನ್ನಿನ ಮೇಲೆ ಮಲಗಿಸಿ ಎಂದು. ಆದರೆ ಮಗುವನ್ನ ಬೆನ್ನಿನ ಮೇಲೆಯೇ ಏಕೆ ಮಲಗಿಸಬೇಕು?

ಮಗುವು ತನ್ನ ಹೊಟ್ಟೆಯ ಮೇಲೆ ಮಲಗಿ, ಅಮ್ಮನ ಅಪ್ಪಿಕೊಂಡು ಮಲಗಿದರೆ ಮಗುವಿಗೆ ಒಳ್ಳೆಯ ನಿದ್ದೆ ಬರಬಹುದು ಎಂಬುದು ನಿಮ್ಮ ಯೋಚನೆ ಆಗಿರುತ್ತದೆ. ನಿಮಗೆ ಸುಸ್ತಾದಾಗ ನಿಮ್ಮ ಎದೆಯ ಮೇಲೆ ಮಗುವನ್ನು ಮಲಗಿಸಿಕೊಂಡು ನಿದ್ದೆ ಮಾಡಿಸಲು ನಿಮಗೆ ಇನ್ನಷ್ಟು ಆಸೆ ಆಗಬಹುದು. ಆದರೆ ಎಲ್ಲಾ ವೈದ್ಯರೂ ಮಗುವನ್ನು ಬೆನ್ನಿನ ಮೇಲೆಯೇ ಮಲಗಿಸಿ ಎಂದು ಹೇಳುತ್ತಾರೆ ಎಂದರೆ, ಅದಕ್ಕೆ ಕಾರಣ ಏನಿರಬಹುದು? ಒಂದು ಮುಖ್ಯ ಕಾರಣ ಇದೆ. ಅದೇನೆಂದರೆ ಮಗುವನ್ನು ಬೆನ್ನಿನ ಮೇಲೆ ಮಲಗಿಸುವುದನ್ನು ವೈದ್ಯರು ಶಿಫಾರಸು ಮಾಡಲು ಶುರು ಮಾಡಿದಾಗಿಲಿನಿಂದ ದಿಢೀರ್ ನವಜಾತ ಶಿಶು ಮರಣ ಸಿಂಡ್ರೋಮ್ (SIDS) ಉಂಟಾಗುವುದನ್ನು ಗಣನೀಯವಾಗಿ ಕಡಿಮೆ ಆಗಿದೆ.

ಆದರೆ ನಿಮ್ಮ ಮಗುವಿಗೆ ಸ್ವಲ್ಪ ವಯಸ್ಸಾದ ನಂತರ ಮತ್ತು ತಾನಾಗಿಯೇ ಹೊರಳಾಡಿ ಮಲಗುವಷ್ಟು ಶಕ್ತಿ ಹೊಂದಿದಮೇಲೆ, ನೀವು ಅವರು ಇದೇನಪಾ ಎಂತೆಂತಹ ಭಂಗಿಯಲ್ಲೆಲ್ಲಾ ಮಲಗುತ್ತದೆ ಈ ಮಗು ಎಂದುಕೊಳ್ಳುವಿರಿ. ನಿಮ್ಮ ಮಗುವು ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ಭಂಗಿಯಲ್ಲಿ ಮಲಗಲು ಇಷ್ಟ ಪಡುತ್ತದೆ. ಇದೇ ಕಾರಣಕ್ಕೆ ನವಜಾತ ಮಕ್ಕಳು ತಮ್ಮ ಬೆನ್ನ ಮೇಲೆಯೇ ಮಲಗುವುದು. ಅವುಗಳಿಗೆ ತಿಳಿಯದೆಯೇ ಅವುಗಳ ದೇಹಕ್ಕೆ ಸೂಕ್ತವಾದ ಭಂಗಿಯನ್ನೇ ಅವು ಆಯ್ದುಕೊಳ್ಳುತ್ತವೆ.


Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon