Link copied!
Sign in / Sign up
18
Shares

ಬೆಳ್ಳುಳ್ಳಿಯ ಸೇವನೆಯಿಂದುಂಟಾಗುವ 6 ಆರೋಗ್ಯ ಲಾಭಗಳು

ಈರುಳ್ಳಿಯ ಕುಟುಂಬಕ್ಕೆ ಸೇರಿದ ಬೆಳ್ಳುಳ್ಳಿಯು, ಆರೋಗ್ಯದ ವಿಷಯದಲ್ಲಿ ಬಹಳ ಪರಿಣಾಮಕಾರಿ. ನಮ್ಮ ನಿತ್ಯ ಜೀವನದಲ್ಲಿ ಹಲವಾರು ತರದ ಆಹಾರ ಪದಾರ್ಥಗಳಲ್ಲಿ ರುಚಿ ಹಾಗೂ ಸುವಾಸನೆಗೆ ಬಳಸುವ ಬೆಳ್ಳುಳ್ಳಿಯನ್ನು ಕೆಲವರು ಖಾದ್ಯಗಳ ಅಲಂಕಾರಕ್ಕೂ ಬಳಸುತ್ತಾರೆ. ಬಾಯಿಯ ದುರ್ಗಂಧಕ್ಕೆ ಕಾರಣವಾಗುತ್ತದೆ ಎಂಬ ಕಲ್ಪನೆಯಿಂದ ಹಲವರು ಬೆಳ್ಳುಳ್ಳಿಯ ಸೇವನೆಯನ್ನು ತ್ಯಜಿಸುತ್ತಾರೆ. ಆಹಾರ ಸೇವನೆಯ ಬಳಿಕ ಚೆನ್ನಾಗಿ ಬಾಯಿಯನ್ನು ಮುಕ್ಕಳಿಸುವುದರಿಂದ ಅಥವಾ ಸ್ಪ್ರೇಯನ್ನು ಬಳಸುವುದರಿಂದ ಬಾಯಿ ವಾಸನೆಯಿಂದ ಮುಕ್ತಿ ಪಡೆಯಬಹುದು. ಆದರೆ ಆಹಾರ ಪದಾರ್ಥಗಳಲ್ಲಿ ಅಳವಡಿಸುವುದನ್ನು ಹಾಗೂ ಸೇವಿಸುವುದನ್ನು ಮಾತ್ರ ತ್ಯಜಿಸಬೇಡಿ. ಗರ್ಭಿಣಿಯರು ಬೆಳ್ಳುಳ್ಳಿಯನ್ನು ಸೇವಿಸುವುದು ಹಲವಾರು ರೀತಿಯ ಪೋಷಕಾಂಶಗಳನ್ನು ಶರೀರಕ್ಕೆ ನೀಡುತ್ತದೆ. ಪ್ರಸವ ನಂತರವೂ ಬೆಳ್ಳುಳ್ಳಿಯ ಸೇವನೆಯು ಆರೋಗ್ಯದ ವಿಷಯದಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿಯ ಸೇವನೆಯಿಂದ ಸಿಗುವ ಮಹತ್ವಪೂರ್ಣ ಲಾಭಗಳೇನು ಗೊತ್ತೇ ?

(೧) ಸರಾಗ ರಕ್ತದ ಸಾಗಾಟ

ರಕ್ತ ಕಣಗಳ ಪುನರುತ್ಪಾದನೆ ಕಾರಣವಾಗುವ ಬೆಳ್ಳುಳ್ಳಿಯು ರಕ್ತದ ಪರಿಚಲನೆಗೆ ಕೂಡಾ ಸಹಾಯ ಮಾಡುವುದು. ಹೆಚ್ಚಿನ ರಕ್ತದೊತ್ತಡ ಅನುಭವಿಸುವ ಸ್ತ್ರೀಯರ ಒತ್ತಡವನ್ನು ಸಮತೋಲನಗೊಳಿಸಿ, ಆಯಾಸವನ್ನು ನಿವಾರಿಸುವುದರ ಜತೆಗೆ ಗರ್ಭಿಣಿಯರಿಗೆ ಅತೀ ಅಗತ್ಯವಾದ ಎಲುಬುಗಳ ಶಕ್ತಿಯನ್ನೂ ನೀಡುತ್ತದೆ. 

(೨) ಔಷಧೀಯ ಗುಣಗಳು

ಬೆಳ್ಳುಳ್ಳಿಯ ವಾಸನೆಗೆ ಕಾರಣವಾಗಿರುವ ಅಲ್ಲಿಸಿನ್ ಎಂದು ಕರೆಯಲ್ಪಡುವ ಘಟಕವು ಹಲವಾರು ಔಷಧೀಯ ಸತ್ವಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಸಾಮಾನ್ಯ ನೆಗಡಿ ಜ್ವರಗಳ ಶಮನಕ್ಕೂ ಕಾರಣವಾಗುವ ಬೆಳ್ಳುಳ್ಳಿಯು ಹೃದ್ರೋಗ ನಿವಾರಕವೂ ಹೌದು. ಕೆಟ್ಟ ಕೊಬ್ಬನ್ನು ಕರಗಿಸಿ ಕೊಲೆಸ್ಟ್ರಾಲ್ ಲೆವೆಲ್ಗಳನ್ನು ಸಮಾನವಾಗಿಟ್ಟುಕೊಳ್ಳುವಲ್ಲೂ ಸಹಕರಿಸುವ ಬೆಳ್ಳುಳ್ಳಿಯು ಶರೀರದ ಇತರ ರೋಗಗಳನ್ನು ನಿವಾರಿಸುತ್ತದೆ.ಆದ ಕಾರಣ ಒಂದು ಎಸಳು ಬೆಳ್ಳುಳ್ಳಿಯನ್ನಾದರೂ ಪ್ರತಿದಿನವೂ ಆಹಾರದ ಮೂಲಕ ನೀವು ಹಾಗೂ ನಿಮ್ಮ ಕುಟುಂಬದವರು ಸೇವಿಸುವುದು ಉತ್ತಮ.

(೩) ಕಡಿಮೆ ಕೇಲರಿ;ಹೇರಳ ಪೋಷಕಾಂಶಗಳು

ಕಡಿಮೆ ಕ್ಯಾಲರಿಯನ್ನು ಒಳಗೊಂಡು ಹೇರಳವಾಗಿ ಪೋಷಕಾಂಶಗಳನ್ನು ಒಳಗೊಂಡ ಆಹಾರ ಯಾವುದೆಂದು ಎಷ್ಟು ಬಾರಿ ಯೋಚಿಸಿ ಹಣ್ಣಾಗಿದ್ದರೆ ತಿಳಿದುಕೊಳ್ಳಿ-“ಬೆಳ್ಳುಳ್ಳಿ” !! ಮ್ಯಾಂಗನೀಸ್, ವಿಟಮಿನ್ ಬಿ,ವಿಟಮಿನ್ ಸಿ, ಸೆಲೆನಿಯಂ, ಫೈಬರ್ ಅಥವಾ ನಾರಿನ ಅಂಶಗಳನ್ನು ಒಳಗೊಂಡಿರುವ ಬೆಳ್ಳುಳ್ಳಿಯು ಶರೀರಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ. ಒಂದೇ ಮಾತಿನಲ್ಲಿ ಹೇಳಿ ಮುಗಿಸುವುದಾದರೆ, ಬೆಳ್ಳುಳ್ಳಿ ಶರೀರವು ಬಯಸುವ ಎಲ್ಲಾ ಪೋಷಕಾಂಶಗಳನ್ನು ಹೊಂದಿದೆ.

(೪) ಹ್ರದಯ ಸಂಬಂಧಿತ ಖಾಯಿಲೆಗಳ ಪರಿಹಾರಿ

ಹೃದಯ ಸಂಬಂಧಿತ ರೋಗಗಳಾದ ಸ್ಟ್ರೋಕ್ ಅಥವಾ ಹಾರ್ಟ್ ಅಟ್ಯಾಕ್ ಗಳು ಕೆಲವೊಮ್ಮೆ ವ್ಯಕ್ತಿಯ ಮರಣಕ್ಕೆ ಕಾರಣವಾಗುತ್ತದೆ. ಹೈಪರ್ ಟೆನ್ಷನ್ ಅಥವಾ ಹೆಚ್ಚಿನ ರಕ್ತದೊತ್ತಡವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹಾಗೂ ಹೃದಯ ರೋಗವನ್ನು ಸುವ್ಯವಸ್ಥಿತವಾಗಿಟ್ಟುಕೊಳ್ಳುವಲ್ಲೂ ಬೆಳ್ಳುಳ್ಳಿಯು ಪ್ರಧಾನ ಪಾತ್ರ ವಹಿಸುತ್ತದೆ. ಬಲಿತ ಬೆಳ್ಳುಳ್ಳಿಯು ಹೃದಯ ರೋಗಗಳಿಗೆ ಔಷಧವಾಗಿ ನೀಡಲಾಗುವ ಅಟೆನಾಲಿನಷ್ಟೇ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.

(೫) ಯೋನಿಯ ಸೋಂಕುರೋಗಗಳ ನಿವಾರಣೆ

ಸಾಮಾನ್ಯವಾಗಿ ಮಹಿಳೆಯರು ಪ್ರಸವಾನಂತರ ಯೋನಿಯ ಸೋಂಕಿಗೊಳಾಗುತ್ತಾರೆ. ಗುಪ್ತಾಂಗಗಳನ್ನು ಶುಚಿಯಾಗಿಟ್ಟುಕೊಳ್ಳಬೇಕಾದದ್ದು ಆರೋಗ್ಯದ ದೃಷ್ಟಿಯಿಂದಲೂ ಅತೀ ಅಗತ್ಯ. ಆಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿ ಸೇವನೆ ಅಥವಾ ಅಗತ್ಯದ ಭಾಗಗಳ ಮೇಲಿನ ಲೇಪನವು ಪರಿಣಾಮಕಾರಿಯಾದ ಫಲ ನೀಡುವುದು. ಇದು ಉಪದ್ರವಿಗಳಾದ ಬ್ಯಾಕ್ಟೀರಿಯಾ ಫಂಗಸ್ ಅಥವಾ ವೈರಸ್ ಗಳನ್ನು ನಾಶಪಡಿಸುತ್ತದೆ. ಚರ್ಮರೋಗ ತಜ್ಞರ ಅಭಿಪ್ರಾಯವನ್ನು ತಿಳಿದು ಬೆಳ್ಳುಳ್ಳಿಯ ಪ್ರಯೋಗವನ್ನು ಪರೀಕ್ಷಿಸಿ ನೋಡಬಹುದು.

(೬) ಡಿ-ಟೋಕ್ಸಿಫಿಕೇಷನ್ (ನಿರ್ವಿಷಕಾರಕ)

ಮೆಟಲ್ ಟಾಕ್ಸಿಸಿಟಿ ಮತ್ತು ಅಂಗಾಂಶಗಳ ನಶಿಸುವಿಕೆಯನ್ನು ಗುಣಪಡಿಸುವಲ್ಲಿ ಬೆಳ್ಳುಳ್ಳಿಯು ಬಹಳ ಪರಿಣಾಮಕಾರಿಯಾಗಿದೆ. ಉಸಿರಾಟದ ಮೂಲಕ ಲೆಡ್ಡಿನ (ಸೀಸ)ಅತ್ಯಧಿಕ ಸೇವನೆಗೆ ಕಾರಣವಾಗಿರುವ ಕಾರಿನ ಬ್ಯಾಟರಿಯನ್ನು ಉತ್ಪಾದಿಸುವ ಕಂಪೆನಿಯ ಕಾರ್ಮಿಕರಲ್ಲಿ ಬೆಳ್ಳುಳ್ಳಿಯ ಸೇವನೆಯಿಂದ ರಕ್ತದಲ್ಲಿ ಸೇರಿಕೊಂಡಿರುವ ಸೀಸಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ಬೆಳ್ಳುಳ್ಳಿಯ ಸೇವನೆಯು ಮೈಗ್ರೇನ್ ಮತ್ತು ಇತರ ತಲೆನೋವುಗಳ ನಿವಾರಕವಾಗಿಯೂ ವರ್ತಿಸುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon