Link copied!
Sign in / Sign up
13
Shares

ಈ 5 ಕಾರಣಗಳಿಗೆ ನೀವು ಬೆಳಗಿನ ಜಾವ ಸಂಭೋಗದಲ್ಲಿ ತೊಡಗಿಕೊಳ್ಳಬೇಕು !

ನಮ್ಮಲ್ಲಿ ಬಹುತೇಕ ಜನ ಸೆಕ್ಸ್ ಎನ್ನುವುದು ನಿದ್ದೆಗೆ ಜಾರುವ ಮುನ್ನದ ಕಾರ್ಯ ಎಂದೇ ಅಂದುಕೊಂಡಿದ್ದೀವಿ. ಅದು ಆಗೆಯೇ ಇರಬಹುದು ಕೂಡ. ಆದರೆ, ಬೆಳಗ್ಗೆಯೇ ಆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ನೀವು ಈ ಕಾರಣಗಳನ್ನ ಪರಿಗಣಿಸಲೇ ಬೇಕು. ಬೆಳ್ಳಂ ಬೆಳಗ್ಗೆ ಮೂಡಿಗೆ ಜಾರುವುದು ಸಂಭೋಗವನ್ನ ಮತ್ತಷ್ಟು ಉಲ್ಲಾಸದಾಯಕ ಮಾಡುತ್ತದೆ. ಲೈಂಗಿಕ ತಜ್ಞರಾದ ಡಾ ।। ಜೆಸ್ ಅವರು ನೀವು ಬೆಳಗ್ಗೆ ಹೊತ್ತು ಏಕೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳುತ್ತಾರೆ ಓದಿ.

೧. ಅಂದಿನ ದಿನಕ್ಕೆ ಒಂದು ಸಕಾರಾತ್ಮಕ ಮುನ್ನುಡಿ ಬರೆಯುತ್ತದೆ

ನಿಮ್ಮ ದಿನವನ್ನ ಶುರು ಮಾಡಲಿಕ್ಕೆ ಇದು ಒಂದು ಅದ್ಭುತ ವಿಧಾನ. ನಿಮ್ಮ ಸಂಗಾತಿಯೊಂದಿಗೆ ಬಾಂಧವ್ಯ ಬೆಳೆಸುವ ಒಳ್ಳೆಯ ಹೆಜ್ಜೆಯೊಂದಿಗೆ ದಿನ ಶುರು ಮಾಡುವುದು ತುಂಬಾನೇ ಒಳ್ಳೆಯದು.

೨. ಇದು ನಿಮ್ಮನ್ನು ಅಂದವಾಗಿ ಕಾಣುವಂತೆ ಮಾಡುತ್ತದೆ

ನಿಜವಾಗಿಯೂ, ನೀವು ಕೇವಲ ಸಂಭೋಗದ ಖುಷಿಯನ್ನಷ್ಟೇ ಅನುಭವಿಸುವುದಿಲ್ಲ. ಅದರೊಂದಿಗೆ ಹೊಳೆಯುವ ಕೂದಲು ಮತ್ತು ತ್ವಚೆಯನ್ನು ಕೂಡ ಪಡೆಯುತ್ತೀರಿ! ಇದಕ್ಕೆ ಕಾರಣ ಡಿ.ಹೆಚ್.ಈ.ಎ (DHEA) ಆಗಿರುತ್ತದೆ ಮತ್ತು ಲೈಂಗಿಕ ಉದ್ರಿಕ್ತತೆ ಇಂದ ಹೆಚ್ಚಾಗುವ ರಕ್ತ ಸಂಚಾರ ಆಗಿರುತ್ತದೆ.

೩. ಇದು ನಿಮ್ಮನ್ನ ಆರೋಗ್ಯಕರವಾಗಿ ಇಡುತ್ತದೆ

ನೀವು ಬೆಳ್ಳಂ ಬೆಳ್ಳಗೆ ಕಚೇರಿಗೆ ಹೋಗುವಾಗ ಅಥವಾ ಅಂಗಡಿಗೆ ಹೋಗುವಾಗ ನಿಮ್ಮ ಸುತ್ತಮುತ್ತ ಬಹಳಷ್ಟು ಜನರು ಸೀನುವುದನ್ನು ಅಥವಾ ಕೆಮ್ಮುವುದನ್ನು ನೋಡಬಹುದು. ಆದರೆ, ನೀವು ಅವರಲ್ಲಿ ಒಬ್ಬರಾಗಿರುವುದಿಲ್ಲ. ಏಕೆಂದರೆ, ಲೈಂಗಿಕ ಕ್ರಿಯೆ ಮಾಡುವುದರಿಂದ ಇಮ್ಮುನೊಗ್ಲೋಬ್ಯುಲಿನ್ - ಎ ಹೆಚ್ಚಾಗುತ್ತದೆ ಹಾಗು ಇದರಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲವಾಗುತ್ತದೆ.

೪. ಇದು ನಿಮ್ಮನ್ನು ಕೇಂದ್ರೀಕೃತವಾಗಿ ಇರಿಸುತ್ತದೆ

ನಿಮ್ಮ ಮೆದುಳು ಹಿಂದಿನ ಕೆಲವು ಘಂಟೆಗಳ ಕಾಲ ಸ್ಥಗಿತವಾಗಿರುವ ಕಾರಣ ನೀವು ಯಾವುದೇ ಬಾಹ್ಯ ವಿಷಯಗಳ ಬಗ್ಗೆ ಯೋಚಿಸುತ್ತಿರುವುದಿಲ್ಲ. ನೀವು ಆ ಕ್ಷಣದಲ್ಲಿ ಮಗ್ನರಾಗಿರುತ್ತೀರಾ ಮತ್ತು ಸಂಪೂರ್ಣವಾಗಿ ನಿಮ್ಮ ದೇಹದಲ್ಲಿಯೇ ಇರುತ್ತೀರಾ. ನಿಮ್ಮ ಇಂದ್ರಿಯಗಳು ಈ ಸಮಯದಷ್ಟು ಸೂಕ್ಷ್ಮವಾಗಿ ಮತ್ತೆ ಯಾವಾಗಲೂ ಇರುವುದಿಲ್ಲ.

೫. ಪತಿ ಅತಿ ಹೆಚ್ಚು ಉದ್ರಿಕ್ತತೆ ಹೊಂದುವುದೇ ಈ ಸಮಯದಲ್ಲಿ

ಗಂಡಸರಲ್ಲೂ ಕೂಡ ಹಾರ್ಮೋನ್ ಸೈಕಲ್ ಇರುತ್ತದೆ ಹಾಗು ಇದು ದಿನವಿಡೀ ಬದಲಾಗುತ್ತಾ ಹೋಗುತ್ತದೆ. ಬಹಳಷ್ಟು ಗಂಡಸರಿಗೆ ಬೆಳಗಿನ ಜಾವ ೪-೬ ಘಂಟೆ ಸಮಯದಲ್ಲಿ ದೇಹದಲ್ಲಿ ಅತಿಹೆಚ್ಚು ಟೆಸ್ಟೋಸ್ಟೆರಾನ್ ಹೊಂದಿರುತ್ತಾರೆ. ಇದರೊಂದಿಗೆ ಒಳ್ಳೆಯ ವಿಶ್ರಾಂತಿ, ಒಳ್ಳೆಯ ನಿದ್ದೆ ಕೂಡಿಕೊಂಡರೆ, ಈ ಟೆಸ್ಟೋಸ್ಟೆರಾನ್ ಪ್ರಭಾವವೇ ಬೇರೆಯದ್ದಾಗಿರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon