Link copied!
Sign in / Sign up
17
Shares

ಬೀಟ್ರೂಟ್ ಇಂದ ನಿಮ್ಮ ಕೂದಲನ್ನ ಕಲರ್ ಮಾಡಿಕೊಳ್ಳುವುದು ಹೇಗೆ?

ಮಾರುಕಟ್ಟೆಯಲ್ಲಿ ಲಭ್ಯವಿರುವ ತಲೆಗೂದಲಿನ ಬಣ್ಣಗಳು ವಿವಿಧ ಚರ್ಮದ ಕಾಯಿಲೆಗಳಿಗೆ ಕಾರಣವಾಗುವ ಹಾನಿಕಾರಕ ರಾಸಾಯನಿಕಗಳಿಂದ ತುಂಬಿರುತ್ತವೆ.ಈ ರೀತಿ ಹೇಳಿದರೂ ಸಹ ನಿಮ್ಮ ಕೂದಲಿಗೆ ಬಣ್ಣ ಬಳಿಯುವುದರಿಂದ ನಿಮ್ಮನ್ನು ತಡೆಯಲಾಗುವುದಿಲ್ಲ.ಈ ಕೂದಲು ಬಣ್ಣಗಳಿಗೆ ಹೆಚ್ಚು ನೈಸರ್ಗಿಕ ಪರ್ಯಾಯವೆಂದರೆ ಬೀಟ್ರೂಟ್ ರಸ. ಅದು ಸರಿ, ನಂಬಲರ್ಹವಾದ  ಬೀಟ್ರೂಟ್ ಗಳು ಪೋಷಕಾಂಶ ಮತ್ತು ಖನಿಜಗಳಷ್ಟೇ ಅಲ್ಲ, ಆದರೆ ನಿಮ್ಮ ಕೂದಲಿನ ಕೆಂಪು ಬಣ್ಣದ ಛಾಯೆಗೆ ಸಹಕರಿಸುತ್ತವೆ.

ಬೀಟ್ರೂಟ್ ಗಳು  ನಿಮ್ಮ ಬೆರಳುಗಳ ಮೇಲೆ ಬಿಟ್ಟುಹೋಗುವ ಕೆನ್ನೇರಳೆ ಕೆಂಪು ಬಣ್ಣದ ಛಾಯೆಯನ್ನು ನೀವು ಗಮನಿಸಿದ್ದೀರಾ? ಅದೇ ಸಮಯದಲ್ಲಿ ನಿಮ್ಮ ಕೂದಲಿಗೆ ಅದೇ ರೀತಿ ಸಂಭವಿಸುತ್ತದೆ. ನಿಮ್ಮ ಕೂದಲಿನ  ನೈಸರ್ಗಿಕ ಬಣ್ಣವನ್ನು ಅವಲಂಬಿಸಿ, ಬೀಟ್ರೂಟ್ ಗಾಲ ಪರಿಣಾಮವು ಬದಲಾಗಬಹುದು. ಉದಾಹರಣೆಗೆ, ಕಪ್ಪು ಕೂದಲಿನೊಂದಿಗೆ ಹೋಲಿಸಿದಾಗ ತಿಳಿ ಅಥವಾ ಗಾಢ ಕಂದು ಬಣ್ಣದ ಕೂದಲಿನ ಜನರಲ್ಲಿ ಹೆಚ್ಚಿನ ಕೆಂಪು ಬಣ್ಣದ ಛಾಯೆಯನ್ನು ನೋಡಬಹುದು.

 

ವಿಧಾನ:

೧.ಬೀಟ್ ರೂಟ್ ಗಳನ್ನೂ ತುಂಡರಿಸುವ ಮೊದಲು ಅವುಗಳನ್ನು ತೊಳೆಯಿರಿ. ದಪ್ಪ, ಕೆಂಪು ರಸವನ್ನು ಹೊರತೆಗೆಯಲು ಅವುಗಳನ್ನು ಬ್ಲೆಂಡರ್ ಅಥವಾ ಜ್ಯೂಸರ್ನಲ್ಲಿ ಇರಿಸಿ.

೨.ರಸವನ್ನು ಮಾತ್ರ ನೀವು ಶೇಖರಿಸುವಂತೆ ಮಾಡಲು ,ತಿರುಳನ್ನು ತೊಡೆದುಹಾಕಲು ,ಸೋಸುವ ಜಾಲರಿಯನ್ನು ಬಳಸಿ.

೩.ಕೆಲವು ಟೇಬಲ್ ಚಮಚ  ಜೇನುತುಪ್ಪವನ್ನು ಸೇರಿಸಿ ಮತ್ತು ಬೀಟ್ ರಸ ಮತ್ತು ಜೇನುತುಪ್ಪವನ್ನು ಸಂಪೂರ್ಣವಾಗಿ ಬೆರೆಯುವ  ತನಕ ಮಿಶ್ರಣವನ್ನು ಬೆರೆಸಿ.

೪.ಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ ಆದರೆ ಕಂಡೀಷನರ್ ಅನ್ನು ಬಳಸದಿರಿ ,ಏಕೆಂದರೆ  ಬೀಟ್ ರಸವು ಕೂದಲಿನ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಂಡೀಶನರ್ ನ ಯಾವುದೇ ಶೇಷವನ್ನು ಹೊಂದಿರುವುದಿಲ್ಲ.

೫.ಟವೆಲ್ ನಿಂದ ನಿಮ್ಮ ಕೂದಲನ್ನು ಒಣಗಿಸಿ ಮತ್ತು ಯಾವುದೇ ಗಂಟುಗಳು ಇದ್ದರೆ, ನಿಮ್ಮ ಬೆರಳುಗಳನ್ನು ಅಥವಾ ವಿಶಾಲ-ಹಲ್ಲಿನ ಬಾಚಣಿಗೆಯನ್ನು ಬಳಸಿ ಅವುಗಳನ್ನು ತೆಗೆದುಹಾಕಿ.

೬.ಈಗ ತಯಾರಿಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿರಿ , ಪ್ರತಿ ಎಳೆಯು ಸಹ  ಲೇಪಿತವಾಗಿದೆಯೆಂದು ಖಚಿತಪಡಿಸಿಕೊಳ್ಳಿ. ನೀವು ಹೈಲೈಟ್ ಗಳನ್ನು ಬಯಸಿದರೆ ಕೆಲವು ಎಳೆಗಳಿಗೆ ಮಾತ್ರ ಲೇಪಿಸಿ . ನಿಮ್ಮ ಕೈಗಳಿಗೆ ಬಣ್ಣವಾಗುವುದನ್ನು  ತಪ್ಪಿಸಲು ಕೈಗವಸುಗಳನ್ನು ಧರಿಸಿರಿ.

೭.ಪ್ಲ್ಯಾಸ್ಟಿಕ್ ಹಾಳೆಯಲ್ಲಿ ನಿಮ್ಮ ಕೂದಲನ್ನು ಸುತ್ತಿ  ಅಥವಾ ಶವರ್ ಕ್ಯಾಪ್ ಧರಿಸಿ. ಮಿಶ್ರಣವು ಕನಿಷ್ಟ ೪ ಗಂಟೆಗಳ ಕಾಲ ಇರಲು ಬಿಡಿ , ನೀವು ಅದನ್ನು ರಾತ್ರಿ ಇಡೀ  ಬಿಡಬಹುದು.

೮ . ಯಾವಾಗಿನಂತೆ ನಿಯಮಿತ ಶಾಂಪೂ ಮತ್ತು ಕಂಡಿಷನರ್ ನೊಂದಿಗೆ  ನಿಮ್ಮ ಕೂದಲನ್ನು ತೊಳೆಯಿರಿ. ಬಣ್ಣವನ್ನು ತಕ್ಷಣವೇ ನೀವು ಕಾಣದಿರಬಹುದು  ನಿಮ್ಮ ಕೂದಲನ್ನು ಒಣಗಿಸಿದ ನಂತರ, ಕೆಂಪು-ಕೆನ್ನೇರಳೆ ಬಣ್ಣವು ಹೊಳೆಯುತ್ತದೆ.

ಈ ಬಣ್ಣವು ಕೂದಲನ್ನು ನೀವು ಎಷ್ಟು ಬಾರಿ ನಿಮ್ಮ ಕೂದಲು ತೊಳೆಯುತ್ತೀರಿ  ಎಂಬುದರ ಮೇಲೆ ಅವಲಂಬಿಸಿ ಕೆಲವು ವಾರಗಳ ಕಾಲ ಉಳಿಯಬಹುದು.

ಪ್ರಥಮ ಸಲಹೆ-ನಿಮ್ಮ ಶಾಂಪೂವಿನ ಜೊತೆ  ಬೀಟ್ರೂಟ್ ರಸವನ್ನು ಸ್ವಲ್ಪ ಮಿಶ್ರಣ ಮಾಡಬಹುದು ಮತ್ತು ನಿಮ್ಮ ಕೂದಲಿನ ಎಳೆಗಳಿಗೆ  ಸ್ವಲ್ಪ ಕೆಂಪು ಬಣ್ಣವನ್ನು ನೀಡಲು ನಿಮ್ಮ ಕೂದಲನ್ನು ಇದರಿಂದ ತೊಳೆಯಬಹುದು.

ನಿಮ್ಮ ಕೂದಲಿಗೆ  ಬಣ್ಣ ನೀಡುವುದನ್ನು ಹೊರತುಪಡಿಸಿ, ಬೀಟ್ರೂಟ್ ರಸವು ನಿಮ್ಮ ಕೂದಲನ್ನು ಆರೈಕೆ ಮಾಡಲು  ಮತ್ತು ಆರ್ಧ್ರಕಗೊಳಿಸಲು ಒಳ್ಳೆಯದು. ನೆತ್ತಿಯ ಮೇಲೆ ಇದನ್ನು ಹಚ್ಚುವುದರಿಂದ ನಿಮ್ಮ ಕೂದಲನ್ನು ಬಲಗೊಳಿಸುತ್ತದೆ ಮತ್ತು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಆದ್ದರಿಂದ, ತಾಯಂದಿರೇ ,ನೀವು ಏನು ಯೋಚಿಸುತ್ತೀರಿ? ಆ ವಿಷಕಾರಿ ಕೂದಲಿನ ಬಣ್ಣಗಳನ್ನು ಹೊರದೂಡಲು ಮತ್ತು ಬೀಟ್ರೂಟ್ ರಸಕ್ಕೆ ಬದಲಿಸಲು ತಯಾರಾಗಿದ್ದೀರಾ?

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon