Link copied!
Sign in / Sign up
1
Shares

ಗರ್ಭಾವಸ್ಥೆಯಲ್ಲಿ ಬೇಡದ ಸಲಹೆಗಳನ್ನು ನಿಭಾಯಿಸುವುದು ಹೇಗೆ?

ನಿಮ್ಮ ಪ್ರೀತಿ ಪಾತ್ರರಿಂದ, ಬಂಧು ಬಳಗ, ಮಿತ್ರವರ್ಗ, ನೆಂಟರಿಷ್ಟರು, ಕೊನೆಗೆ ಅಪರಿಚಿತರಿಂದಲೂ ಪುಕ್ಕಟ್ಟೆ ಸಲಹೆ ನೀವು ಗರ್ಭಿಣಿಯಾದಾಗಿನಿಂದ ದೊರೆಯಲು ಪ್ರಾರಂಭಿಸುತ್ತದೆ. ಗರ್ಭಿಣಿಯರನ್ನು ಕಂಡೊಡನೆ ಇತರ ಮಹಿಳೆಯರಿಗೆ ಅವರೊಂದಿಗೆ ತೋರುವ ನಿಕಟ ಬಾಂಧವ್ಯವೇ ಇದಕ್ಕೆ ಕಾರಣ. ಈ ಪ್ರೇಮವು ಎಲ್ಲಾ ಅಡ್ಡಗೋಡೆಗಳನ್ನು ಮೀರಿ, ಗರ್ಭಿಣಿಯರಿಗೆ ಉಪದೇಶ ನೀಡುವುದೇ ನಮ್ಮ ಆಜನ್ಮ ಹಕ್ಕೆಂದು ತಿಳಿದುಕೊಂಡು,ತಮ್ಮ ಅನುಭವವನ್ನು ಹಂಚಿಕೊಳ್ಳಲು ಪ್ರೇರೇಪಿಸುತ್ತದೆ. ನಿಜ ಹೇಳಬೇಕೆಂದರೆ ಈ ಉಪದೇಶಗಳೆಲ್ಲವೂ ಉಪಯುಕ್ತ ಮಾಹಿತಿಯನ್ನು ನೀಡುತ್ತವಾದರೂ, ಕೆಲವೊಮ್ಮೆ ಅನಪೇಕ್ಷಿತವಾಗಿರುತ್ತದೆ ಕೂಡ. ಗರ್ಭಿಣಿಯರ ಹಾರ್ಮೋನುಗಳ ಏರಿಳಿತದಿಂದ ಉಂಟಾಗುವ ಮಾನಸಿಕ ಅವಸ್ಥೆಯೇ ಕೆಲವೊಮ್ಮೆ ಇಂತಹ ಪುಕ್ಕಟೆ ಸಲಹೆಯನ್ನು ಕೇಳಿಸಿಕೊಳ್ಳಲು ತಯಾರಾಗುವುದಿಲ್ಲ. ಮೂಗು ತೋರಿಸುವಂತಹ ಇಂತಹ ವ್ಯಕ್ತಿಗಳನ್ನು ಬುದ್ಧಿಪೂರ್ವಕವಾಗಿ ಹೇಗೆ ನಿಭಾಯಿಸಬಹುದೆಂದು ಕಲಿಯೋಣ ಬನ್ನಿ.

೧.ವೈದ್ಯರ ಸಲಹೆಯಂತೆ ನಡೆದುಕೊಳ್ಳುವೆವು

ಯಾವುದೇ ಸಂದರ್ಭದಲ್ಲೂ ಈ ಮಾತುಗಳು ಅನುಯೋಜ್ಯವೆನಿಸುತ್ತದೆ. “ಈ ಆಹಾರವನ್ನು ಸೇವಿಸುವುದು ಒಳ್ಳೆಯದು”, “ಇದನ್ನು ಮುಟ್ಟಬಾರದು” “ ಹೆಚ್ಚಾಗಿ ವ್ಯಾಯಾಮ ಮಾಡದಿರು”- ಇಂತಹ ಯಾವುದೇ ಉಪದೇಶವಾಗಿರಲಿ, “ವೈದ್ಯರ ಸಲಹೆಯಂತೆ ನಡೆದುಕೊಳ್ಳುತ್ತಿದ್ದೇವೆ”- ಎನ್ನುವ ಮಾತುಗಳು ಆಪದ್ಬಾಂಧವನಂತೆ ನಮ್ಮನ್ನು ಕಾಯುತ್ತದೆ. ಅನಗತ್ಯ ಉಪದೇಶಗಳನ್ನು ತಡೆಗಟ್ಟಲು ಇದಕ್ಕಿಂತ ಬೇರೆ ಮಾರ್ಗವಿಲ್ಲ.

೨.ನಿಮ್ಮ ಪ್ರೀತಿಗೆ ಧನ್ಯವಾದಗಳು

“ಮಹಾ ಉಪಕಾರವಾಯಿತು, ಧನ್ಯವಾದಗಳು” ಎನ್ನುವ ಮಾತುಗಳು ಉಪದೇಶ ನೀಡಿದವರ ‘ಅಹಂ’ ಅನ್ನು ತೃಪ್ತಿಗೊಳಿಸುವುದಲ್ಲದೆ, ಮುಂದಕ್ಕೆ ಮಾತು ಬೆಳೆಸದಂತೆ ತಡೆಯುತ್ತದೆ. “ಧನ್ಯವಾದಗಳು ನಾನು ಅದನ್ನು ಖಂಡಿತವಾಗಿಯೂ ಪ್ರಯತ್ನಿಸುವೆ” “ಧನ್ಯವಾದಗಳು, ನಿಮ್ಮ ಪ್ರೀತಿ ವಿಶ್ವಾಸಕ್ಕಾಗಿ ನಾನು ಸದಾ ಋಣಿಯಾಗಿರುವೆ” ಎನ್ನುವ ಮಾತುಗಳು ಕೂಡ ಇದೇ ಫಲಿತಾಂಶವನ್ನು ನೀಡುತ್ತದೆ.

೩.ಗಂಟಿಕ್ಕಿದ ಮುಖ

ನೀಡಿದ ಸಲಹೆಗಳು ಅಹಿತವೆನಿಸಿದರೆ, ತಿರುಗಿ ಉತ್ತರ ಕೊಡುವುದು ಪರಿಸ್ಥಿತಿ ಕೈಮೀರುವುದೆನ್ನುವ ಭಯವಿರುತ್ತದೆ. ಕೈಕಟ್ಟಿ ಕುಳಿತುಕೊಳ್ಳುವುದು, ನೇರವಾಗಿ ಮುಖ ಕೊಡದಿರುವುದು ಅಥವಾ ಬೇರೆ ಕೆಲಸಗಳಲ್ಲಿ ವ್ಯಸ್ಥವಾಗಿರುವುದು- ಇವೇ ಮುಂತಾದ ಪ್ರವೃತ್ತಿಗಳಿಂದ ನಿಮ್ಮ ತಣ್ಣಗಿನ ಪ್ರತಿಕ್ರಿಯೆಯನ್ನು ತೋರಿಸಿ. ಇದರಿಂದ ನಿಮ್ಮ ಸಮಯ ಹಾಗೂ ಚೈತನ್ಯವನ್ನು ಉಳಿಸಬಹುದು.

೪.ಪ್ರಾಮಾಣಿಕವಾಗಿರಿ

ನಮ್ಮ ಹಿತಚಿಂತಕರು ನಮಗೆ ನೀಡುವ ಉಪದೇಶ ಅಥವಾ ಸಲಹೆಗಳು ಕೆಲವೊಮ್ಮೆ ನಮಗೆ ಮುಜುಗರವನ್ನೀಯುವುದು. ಇಂತಹ ಸಂದರ್ಭಗಳಲ್ಲಿ “ನಿಮ್ಮ ಮಾತುಗಳು ನನಗೆ ಬೇಸರ ಮೂಡಿತು”-ಎಂದು ಮನ ಬಿಚ್ಚಿ ಹೇಳುವುದರಿಂದ ಅಥವಾ ಅಲ್ಲಿಂದ ಹೊರಗೆ ನಡೆಯುವುದರಿಂದ ನಿಮ್ಮ ಮನಸ್ಸಿನ ಸಂತುಲನವನ್ನು ಕಾಪಾಡಿಕೊಳ್ಳಬಹುದು. ನಿಜವಾಗಿಯೂ ಅವರು ನಿಮ್ಮ ಶುಭಕಾಂಕ್ಷಿಗಳು ಆಗಿದ್ದರೆ ನಿಮ್ಮನ್ನು ಖಂಡಿತಾ ಅರ್ಥಮಾಡಿಕೊಳ್ಳುವರು.

೫.ನಗೆ ಚಟಾಕಿಯಿಂದ ಮಾತನ್ನು ತೇಲಿಸಿಬಿಡಿ

ತಮಾಷೆಯಿಂದ ಕೂಡಿದ ಮಾತುಗಳು ನಿಮ್ಮ ದಿನವನ್ನು ಕಾಯಬಲ್ಲದು. ಇಂತಹ ನಡವಳಿಕೆಯಿಂದ ನಿಮ್ಮ ರಕ್ಷಣಾ ಮನೋಭಾವ ಜಾಗೃತವಾಗುವುದಲ್ಲದೆ, ನಿಮ್ಮ ಮಾತಿನ ಮೇಲೆ ಹಿಡಿತ ಸಾಧಿಸಲು ನೆರವಾಗುವುದು. ಉದಾಹರಣೆಗೆ ಯಾರಾದರೂ ನಿಮ್ಮ ಹೊಟ್ಟೆಯನ್ನು ಸವರಲು ಆಗ್ರಹಿಸಿದರೆ, ನಿಮ್ಮ ಮುಖದಲ್ಲಿ ನಗುತಂದುಕೊಂಡೇ, ನಿಮ್ಮ ಉದರವನ್ನು ನನಗೆ ಮುಟ್ಟಲು ಬಿಟ್ಟರೆ, ನೀವು ನನ್ನದನ್ನು ಸ್ಪರ್ಶಿಸಬಹುದು”- ಎಂದು ಉತ್ತರಿಸಬಹುದು. “ಮಗುವಿಗೇಕೆ ಇನ್ನೂ ಬಟ್ಟೆ ತೊಡಿಸಿಲ್ಲ?” ಎಂದು ಯಾರಾದರೂ ಪ್ರಶ್ನಿಸಿದರೆ ಕಳೆದ ವಾರ ಬಟ್ಟೆಯಲ್ಲಿ ಸುತ್ತಿದ್ದರಿಂದ ಅವನಿಗೆ ಬೆವರುಸಾಲೆ ಉಂಟಾಯಿತು. ಅದಕ್ಕೇ ಹೊಸತನವನ್ನು ಪರೀಕ್ಷಿಸುತ್ತಿದ್ದೇವೆ ಎಂದು ತಿರುಗೇಟು ನೀಡಬಹುದು.

೬.ಮನಸ್ಸು ಬಿಚ್ಚಬೇಡಿ

ನಿಮ್ಮ ಅಚ್ಚುಮೆಚ್ಚಿನ ವ್ಯಕ್ತಿಯಾಗಿರಲಿ ಅಥವಾ ಅಪರಿಚಿತರೇ ಆಗಿರಲಿ. ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮೂಗು ತೋರಿಸಿದಾಗ, ನೀವು ನಿಮ್ಮ ಅಸ್ಪಷ್ಟವಾಗಿ ಉತ್ತರಿಸಬಹುದು. “ನೀವೇನಾದರೂ ಚಿಕಿತ್ಸೆಗೊಳಗಾಗಿದ್ದೀರಾ?” ಎಂದು ಯಾರಾದರೂ ಪ್ರಶ್ನಿಸಿದರೆ, “ಅದು ನನ್ನ ಖಾಸಗಿ ವಿಷಯ” ಅಥವಾ ಡೆಲಿವರಿ ಡೇಟ್ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದರೆ “ತೀರಾ ಹತ್ತಿರವಾಗಿದೆ” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಬಹುದು. ಇದು ನಿಮ್ಮನ್ನು ಅನಗತ್ಯ ಉಪದೇಶಗಳಿಂದ ರಕ್ಷಿಸುತ್ತದೆ

೭.ಅವರಿಗೇ ತಿರುಗುಬಾಣ

ನಿಮ್ಮನ್ನು ಉಪದೇಶ ನೀಡುವವರು ಕೆಲವು ಭಯಾನಕ,ಸಂಕಟ ಭರಿತ ಅಥವಾ ವೇದನಾ ಜನಕ ಕಥೆಗಳನ್ನು ಅರುಹುವಾಗ, ಮುಂದೆ ನಿಮಗೆ ದುಸ್ವಪ್ನವಾಗಿ ಕಾಣಬಹುದೆಂದು ಅನಿಸಿದರೆ “ ಓ ದೇವರೇ, ನಿಮಗೆ ಎಷ್ಟು ಕಷ್ಟದ ಪರಿಸ್ಥಿತಿ ಎದುರಾಗಿತ್ತೆಂದು ನಾನು ಖಂಡಿತವಾಗಿಯೂ ಭಾವಿಸಿರಲಿಲ್ಲ” ಎಂದು ಹೇಳಿ ನಿಟ್ಟುಸಿರು ಬಿಟ್ಟು ಮಾತು ಮುಗಿಸಿ.ಇದರಿಂದ ನಿಮಗೆ ಯಾರನ್ನು ಅಪಮಾನಿಸಿದಂತೆ ಸಂದರ್ಭಗಳನ್ನು ನಿಭಾಯಿಸಲು ಹಾಗೂ ಮಾತು ಮುಗಿಸಲು ಸಾಧ್ಯವಾಗುವುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon