Link copied!
Sign in / Sign up
1
Shares

ನೀವೂ ಈ ಬ್ಯೂಟಿ ಟಿಪ್ಸ್ ಅನ್ನು ಬಳಸುತ್ತಿದ್ದೀರಾ ತಾನೇ? ಇಲ್ಲಿವೆ ನೋಡಿ..

ನಮ್ಮ ಹಿಂದಿನ ಲೇಖನಗಳಲ್ಲಿ ನೀವು ಹಲವು ಬಗೆಯ ಸೌಂದರ್ಯ ಸಲಹೆಗಳನ್ನು ಓದಿರುವಿರಿ. ಇದು ನೈಸರ್ಗಿಕ ಅಥವಾ ಆದುನಿಕ ಅಥವಾ ಯಾವುದೇ ಬಗೆಯ ವಿಧಾನ ಆದರೂ ನೀವು ಈ ಕೆಳಗಿನ ನಿಯಮದಂತೆ ಪಾಲಿಸಿದರೆ ಮಾತ್ರ ನಿಮಗೆ ಸಂಪೂರ್ಣ ಪರಿಹಾರ ಅಥವಾ ಫಲಿತಾಂಶ ಸಿಗುವುದು.

ಹೌದು, ನಮ್ಮ ಹಿಂದಿನ ಲೇಖನಗಳಲ್ಲಿ ಅಥವಾ ಸೌಂದರ್ಯ ಸಲಹೆ ನೀಡುವಾಗ ನೀವು ಅದನ್ನು ಹೇಗೆ ತ್ವಚೆಗೆ ಅನ್ವಯಿಸಬೇಕು, ಅನ್ವಯಿಸಿದ ನಂತರ ಏನು ಮಾಡಬೇಕು. ಅದನ್ನು ತ್ವಚೆಯ ಮೇಲೆ ಎಷ್ಟು ಸಮಯ ಬಿಡಬೇಕು ಮುಂತಾದ ಮತ್ತು ಅದನ್ನು ಉಪಯೋಗಿಸುವ ಬಗೆಯನ್ನು ತಿಳಿಸುವೆವು.

ಇಲ್ಲಿರುವ ಕೆಲವು ವಿಷಯಗಳು ನಿಮಗೆ ತಿಳಿದುರಬಹುದು, ಆದರೆ ಇದನ್ನು ಪಾಲಿಸುತ್ತಿರುವಿರಾ?

ನಿಮಗೆ ಸಂಪೂರ್ಣ ಫಲಿತಾಂಶ ಸಿಗಬೇಕು ಮತ್ತು ಬೇಗನೆ ಫಲಿತಾಂಶ ಕಾಣಬೇಕು ಹಾಗು ಯಾವುದೇ ಅಡ್ಡಪರಿಣಾಮ ಹಾಗಬಾರದು ಎಂದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಿ.


ನೀವು ಪಾಲಿಸಿಬೇಕಾದ ವಿಷಯಗಳು

೧.ಯಾವುದೇ ತೈಲ ಅಥವಾ ರಸವನ್ನು ತ್ವಚೆಗೆ ಅನ್ವಯಿಸುವ ಮೊದಲು ತ್ವಚೆಯನ್ನು ಚೆನ್ನಾಗಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೨.ನಂತರ ತ್ವಚೆಯನ್ನು ಒಂದು ಶುದ್ಧ ಬಟ್ಟೆ ಅಥವಾ ಟವೆಲ್ ನಿಂದ ತೇವಾಂಶ ಇರದಂತೆ ಒರೆಸಿಕೊಳ್ಳಿ.

೩.ನಂತರ ನಿಮ್ಮ ತ್ವಚೆಗೆ ಅಥವಾ ಚರ್ಮಕ್ಕೆ ಅನ್ವಯಿಸ ಬೇಕಾಗಿರುವ ದ್ರವ, ರಸ ಅಥವಾ ಪೇಸ್ಟ್ ಅನ್ನು ಹಚ್ಚಿರಿ.

೪.ನೆನಪಿರಲಿ ತ್ವಚೆಗೆ ಒಂದು ಬಾರಿ ನೀವು ದ್ರಾವ್ಯ ಅಥವಾ ಪೇಸ್ಟ್ ಅನ್ನು ಅನ್ವಯಿಸಿದ ಬಳಿಕ ಬಿಸಿಲಿಗೆ ಹೋಗುವಂತಿಲ್ಲ.

೫.ಉದಾಹರಣೆಗೆ ಮುಖದ ಸ್ಕ್ಯಾರ್ಸ್ ಅನ್ನು ಕಡಿಮೆ ಮಾಡಲು ನಿಂಬೆ ರಸವನ್ನು ಹಚ್ಜಿರುವಿರಿ ಎಂದುಕೊಳ್ಳಿ, ನಿಂಬೆರಸ ನಿಮ್ಮ ಮುಖದಲ್ಲಿ ಅಥವಾ ತ್ವಚೆಯ ಮೇಲೆ ಇರುವವರೆಗೂ ನೀವು ಸೂರ್ಯನ ಕಿರಣಗಳ ಕೆಳಗೆ ನೇರವಾಗಿ ಹೋಗಬೇಡಿ.

೬.ಇದರಿಂದ ತ್ವಚೆಯು ಸುಟ್ಟ ಕಲೆಗಳನ್ನು ಮತ್ತು ಮುಖವು ಕಪ್ಪು ಸುಟ್ಟುಕೊಳ್ಳುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ ಜೊತೆಗೆ ಮುಖದಲ್ಲಿ ಸಣ್ಣ ಸಣ್ಣ ಮೊಡವೆ ರೀತಿಯ ಗುಳ್ಳೆಗಳು ಬರುತ್ತವೆ.

೭.ತ್ವಚೆಯ ಮೇಲೆ ಅನ್ವಯಿಸಿರುವ ದ್ರಾವ್ಯವನ್ನು ಹೇಳಿರುವ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೮.ತೊಳೆದ ಬಳಿಕ ಟವೆಲ್ ಅಥವಾ ಶುದ್ಧ ಬಟ್ಟೆಯಿಂದ ಒರೆಸಿ, ತೇವಾಂಶ ಇರದಂತೆ ನೋಡಿಕೊಳ್ಳಿ.

೯.ತ್ವಚೆಯನ್ನು ಅನ್ವಯಿಸಿದ ದ್ರಾವ್ಯ ಅಥವಾ ಪೇಸ್ಟ್ ನಿಂದ ತೊಳೆದ ನಂತರ ಕನಿಷ್ಠ10 ನಿಮಿಷಗಳ ತನಕ ಮನೆಯಿಂದ ಹೊರಗೆ ಹೋಗಬೇಡಿ(ಅಂದರೆ ಸೂರ್ಯನ ಕಿರಣಗಳಿಗೆ ನಿಮ್ಮ ತ್ವಚೆಯನ್ನು ತೋರಿಸಬೇಡಿ).

೧೦.ಎಲ್ಲಾ ವಿಧಾನಗಳನ್ನು ಒಟ್ಟಿಗೆ ಅನ್ವಯಿಸಬೇಡಿ.

ನೈಸರ್ಗಿಕ ವಿಧಾನ ಬಳಸಿದ ನಂತರ ಕನಿಷ್ಠ ಒಂದು ಗಂಟೆ ಕಳೆಯುವವರೆಗೆ ಯಾವುದೇ ರಾಸಾಯನಿಕ ಕ್ರೀಮ್ ಅಥವಾ ಲೋಷನ್ ಅನ್ನು ಹಚ್ಚಬೇಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon