Link copied!
Sign in / Sign up
14
Shares

ಬ್ಯೂಟಿ ತಜ್ಞರ ಪ್ರಕಾರ ಟಾಪ್ 10 ಬ್ಯೂಟಿ ಟ್ರಿಕ್ಸ್ ಇವುಗಳೇ!

ಬ್ಯೂಟಿ ಎಡಿಟರ್ ಆಗಿ 10 ವರ್ಷಗಳ ಕಾಲ ದುಡಿದಿರುವ ರಾಚೆಲ್ ಜಾಕೋಬಿ ಅವರು ತಮ್ಮ ವೃತ್ತಿ ಅನುಭವದಿಂದ ಮತ್ತು ವಯಕ್ತಿಕ ಅನುಭವದಿಂದ ಸೌಂದರ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವರ ವೃತ್ತಿ ಜೀವನದ ಅನುಭವದಲ್ಲಿ ಅವರು ಬಳಸಿರುವಂತಹ ಮತ್ತು ಅತ್ಯಂತ ಪರಿಣಾಮಕಾರಿ ಎಂದು ನಂಬುವಂತಹ ಬ್ಯೂಟಿ ಟ್ರಿಕ್ಸ್ ಅಥವಾ ಟಿಪ್ಸ್ ಆಗಲಿ ಯಾವುದು ಎಂದು ಅವರ ಮಾತಿನಲ್ಲೇ ನಾವು ಇಲ್ಲಿ ನಿಮಗೆ ತಿಳಿಸಲಿದ್ದೇವೆ ಓದಿ.

“ನಾನು ಈ ಬ್ಯೂಟಿ ಇಂಡಸ್ಟ್ರಿ ಅಲ್ಲಿ ಕೆಲಸ ಮಾಡಲು ಶುರು ಮಾಡಿದ್ದು 2007ರಲ್ಲಿ. ಆಗಿನಿಂದ ಈಗಿನವರೆಗೆ ಬ್ಯೂಟಿ ಎನ್ನುವುದೇ ಬದಲಾಗಿದೆ. 2007ರಲ್ಲಿ ಇದ್ದ ಟ್ರೆಂಡ್ಸ್ ಅನ್ನು ನೋಡಿ, ಅವುಗಳಿಗೆ ಈಗಿನ ಟ್ರೆಂಡ್ಸ್ ಅನ್ನು ಹೋಲಿಸಿದರೆ, ವ್ಯತ್ಯಾಸ ಎಂತದ್ದು ಎಂಬುದು ನಿಮಗೇ ತಿಳಿಯುತ್ತದೆ. ಒಂದು ದಶಕಗಳ ಕಾಲ ಎಲ್ಲಾ ರೀತಿಯ ಬ್ಯೂಟಿ ಪ್ರಾಡಕ್ಟ್ಸ್ ಅನ್ನು ಬಳಸಿ, ಎಲ್ಲಾ ಟೂಲ್ಸ್ ಅನ್ನು ಪರೀಕ್ಷಿಸಿ, ಅನೇಕಾನೇಕ ಮೇಕ್ಅಪ್ ಆರ್ಟಿಸ್ಟ್ಸ್, ಹೇರ್ ಕಲರಿಸ್ಟ್, ಹೇರ್ ಸ್ಟೈಲಿಸ್ಟ್ , ನೈಲ್ ಆರ್ಟಿಸ್ಟ್ , ಚರ್ಮರೋಗ ತಜ್ಞರೊಡನೆ ವಿಚಾರ ವಿನಿಮಯ ಮಾಡಿಕೊಂಡ ನಾನು, ಅವರಿಂದೆಲ್ಲಾ ಸಹಸ್ರ ಬ್ಯೂಟಿ ಟ್ರಿಕ್ಸ್ ಮತ್ತು ಟಿಪ್ಸ್ ಅನ್ನು ಕಲೆಹಾಕಿದ್ದೇನೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ನಾನು ನಿಮಗೆ ತಿಳಿಸುತ್ತೇನೆ ಓದಿ”.

 

೧. ನಿಮ್ಮ ಐ ಕ್ರೀಮ್ ಮತ್ತು ನೈಲ್ ಪೋಲಿಷ್ ಅನ್ನು ಫ್ರಿಡ್ಜ್ ಅಲ್ಲಿ ಇಡಿ

ನೀವು ಕೆಲವೊಂದು ಐ ಕ್ರೀಮ್ಗಳು ಮೆಟಾಲಿಕ್ ಮೂತಿ ಹೊಂದಿರುವ ಟ್ಯೂಬ್ ಅಲ್ಲಿ ಏಕೆ ಬರುತ್ತದೆ ಎಂದು ಯೋಚಿಸಿದಿರಾ? ಏಕೆಂದರೆ ಈ ಮೆಟಾಲಿಕ್ ಮೂತಿಯು ಚರ್ಮವನ್ನು ತಣ್ಣಗೆ ಮಾಡಿ, ಊದಿಕೊಂಡಿರುವ ಚರ್ಮವನ್ನು ಫ್ಲಾಟ್ ಮಾಡುತ್ತದೆ. ಆದರೆ ಇದೆ ರೀತಿಯ ಫಲಿತಾಂಶವನ್ನು ನಿಮ್ಮ ಕ್ರೀಮ್ ಅನ್ನು ಫ್ರಿಡ್ಜ್ ಅಲ್ಲಿ ಇಡುವುದರ ಮೂಲಕವೂ ಪಡೆದುಕೊಳ್ಳಬಹುದು. ಅಲ್ಲದೆ ನೈಲ್ ಪೋಲಿಷ್ ಅನ್ನು ಕೂಡ ನೀವು ಫ್ರಿಡ್ಜ್ ಅಲ್ಲಿ ಇಡುವುದರ ಮೂಲಕ ಅದು ದಪ್ಪ ಆಗದಂತೆ ಕಾಪಾಡಬಹುದು.

 

೨. ಯಾವಾಗಲೂ ಮೊದಲು ತೆಳು ವಿನ್ಯಾಸದ ಬ್ಯೂಟಿ ಪ್ರಾಡಕ್ಟ್ಸ್ ಅನ್ನು ಮೊದಲು ಮುಖಕ್ಕೆ ಹಚ್ಚಿ ನಂತರ ದಪ್ಪ ವಿನ್ಯಾಸದ ಪ್ರಾಡಕ್ಟ್ಸ್ ಹಚ್ಚಿ

ನೀವು ನಿಮ್ಮ ಚರ್ಮವನ್ನು ಒಂದು ಸ್ಪಂಜು ಎಂದು ಯೋಚಿಸಿದರೆ, ಆ ಸ್ಪಂಜು ನೀವು ಮುಖಕ್ಕೆ ಮತ್ತು ದೇಹಕ್ಕೆ ಬಳಸುವ ಎಲ್ಲಾ ಸೌಂದರ್ಯವರ್ಧಕಗಳನ್ನ ಚೆನ್ನಾಗಿ ಹೀರಿಕೊಳ್ಳಬೇಕು. ಈ ಕಾರಣಕ್ಕಾಗಿ ನೀವು ಸರಿಯಾದ ಕ್ರಮದಲ್ಲಿ ಲೇಯರ್ ಮಾಡುವುದು ತುಂಬಾನೇ ಮುಖ್ಯ. ನಿಮ್ಮ ಮುಖಕ್ಕೆ ಮೊದಲು ತೆಳುವಾದ ಅಥವಾ ನೀರಿನಾಂಶ ಇರುವ ಪ್ರಾಡಕ್ಟ್ಸ್ ಅನ್ನು ಮೊದಲು ಹಚ್ಚಿಕೊಳ್ಳಿ ಹಾಗು ಕೊನೆಯಲ್ಲಿ ದಪ್ಪವಾದ, ಗಟ್ಟಿಯಾದ ಕ್ರೀಂಗಳು ಅಥವಾ ತೈಲಗಳನ್ನ ಹಚ್ಚಿಕೊಳ್ಳಿ. ತೈಲಗಳು ಮೊದಲಿಗೆ ಹಚ್ಚಿಕೊಂಡ ಉತ್ಪನ್ನಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಹೀಗಾಗಿ ನೀವು ಮೊದಲಿಗೇನೆ ತೈಲವನ್ನು ಅಥವಾ ದಪ್ಪ ಕ್ರೀಂ ಅನ್ನು ಹಚ್ಚಿಕೊಂಡು ಅದರ ಮೇಲೆ ಹಯಲರುನಿಕ್ ಆಸಿಡ್ ಸೀರಂ ಅಂತಹ ತೆಳುವಾದ ಪ್ರಾಡಕ್ಟ್ ಅನ್ನು ಹಚ್ಚಿಕೊಂಡರೆ, ಸೀರಂ ಪರಿಣಾಮವೇ ನಿಮಗೆ ಗೊತ್ತಾಗುವುದಿಲ್ಲ.

 

೩. ನಿಮ್ಮ ಮುಖವನ್ನು ಮುಟ್ಟಿಕೊಳ್ಳಲೇ ಬೇಡಿ

ಹೌದು! ಯಾವುದೇ ಕಾರಣಕ್ಕೂ ತುಂಬಾ ಅವಶ್ಯಕತೆ ಇಲ್ಲದಿದ್ದರೆ ನಿಮ್ಮ ಮುಖವನ್ನು ನಿಮ್ಮ ಕೈಗಳಿಂದ ಮುಟ್ಟಿಕೊಳ್ಳಬೇಡಿ. ನೀವು ಸ್ಯಾನಿಟೈಝೆರ್ ಬಳಸಿ ಕೈ ತೊಳೆದುಕೊಂಡಿದ್ದರೂ ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ. ಇದು ಚಿಕ್ಕ ವಿಷಯ ಎಂದು ನಿಮಗೆ ಅನಿಸಿದರೂ ನಿಮಗೆ ಗೊತ್ತಿರದ ಹಾಗೆಯೇ ನಿಮ್ಮ ಮೇಕ್ಅಪ್ ಅನ್ನು ಹಾಳು ಮಾಡಿಕೊಳ್ಳುತ್ತೀರಾ. ಯಾವುದೋ ಯೋಚನೆಯಲ್ಲಿ ಮುಳುಗಿಕೊಂಡು ನಿಮ್ಮ ಗಲ್ಲದ ಮೇಲೆ ಬೆರಳು ಇಟ್ಟುಕೊಳ್ಳುವುದು ಅಥವಾ ನಿಮ್ಮ ಕೆನ್ನೆ ಮೇಲೆ ಕೈ ಇಟ್ಟುಕೊಳ್ಳುವುದು, ಇಂತಹ ಕೆಲಸಗಳನ್ನ ಮಾಡಿದಾಗ ನಿಮ್ಮ ಬೆರಳುಗಳು ನಿಮ್ಮ ಮುಖದ ಮೇಲೆ ಕೀಟಾಣುಗಳನ್ನು ಬಿಟ್ಟು ಹೋಗುತ್ತವೆ. ಇದು ಪುನಃ ಗುಳ್ಳೆಗಳಾಗಿ ಪರಿವರ್ತನೆ ಆಗುತ್ತದೆ.

 

೪. ಸ್ವಿಮ್ಮಿಂಗ್ ಪೂಲ್ ಅಥವಾ ಸಮುದ್ರ/ನದಿ ನೀರಿಗೆ ಇಳಿಯುವ ಮುನ್ನ ನಿಮ್ಮ ಕೂದಲಿಗೆ ಕಂಡೀಷನರ್ ಹಚ್ಚಿಕೊಳ್ಳಿ

ನೀವು ಯಾವುದಾದರೂ ಪಬ್ಲಿಕ್ ಸ್ವಿಮ್ಮಿಂಗ್ ಪೂಲ್ ಅಲ್ಲಿ ಈಜಲು ಹೋದರೆ, ಅಲ್ಲಿನ ಸಂಬಂಧಿಗಳು ಮೊದಲು ನೀವು ಒಂದು ಬಾರಿ ಶವರ್ ಅಲ್ಲಿ ತಲೆ ತೊಳೆದುಕೊಂಡು ಆನಂತರ ಪೂಲ್ ಒಳಗೆ ಇಳಿಯಲು ಹೇಳುತ್ತಾರೆ. ಅದಕ್ಕೆ ಕಾರಣ ಮೊದಲು ನಿಮ್ಮ ಕೂದಲಿನಲ್ಲಿರುವ ಕೊಳೆಯು ತೊಳೆದು ಹೋಗಲಿ ಎಂಬುದು. ಆದರೆ ಸ್ವಿಮ್ಮಿಂಗ್ ಪೂಲಿನ ಕ್ಲೋರಿನ್ ನೀರು ಅಥವಾ ಸಮುದ್ರದ ಉಪ್ಪುನೀರಿನಿಂದ ನಿಮ್ಮ ಕೂದಲು ಸ್ವಲ್ಪವಾದರೂ ಸುರಕ್ಷಿತವಾಗಿರಬೇಕು ಎಂದರೆ ನೀರಿಗೆ ಇಳಿಯುವ ಮುನ್ನ ನಿಮ್ಮ ಕೂದಲನ್ನು ಫಾಸ್ಫೇಟ್ ರಹಿತ ಕಂಡೀಷನರ್ ಅಲ್ಲಿ ಕೋಟಿಂಗ್ ಮಾಡಿಕೊಳ್ಳಿ. ಈ ಕಂಡಿಷನರ್ ಕೂದಲಲ್ಲಿ ಇರುವ ತೂತುಗಳನ್ನು ಮುಚ್ಚಿ ಮತ್ತಷ್ಟು ಹಾನಿ ಆಗದಂತೆ ತಡೆಯುತ್ತದೆ.

 

೫. ಎಣ್ಣೆಯುಕ್ತ ತ್ವಚೆಗೆ ಉತ್ತರ ಫೇಸ್ ಆಯಿಲ್ಸ್!

ಎಣ್ಣೆಯುಕ್ತ ತ್ವಚೆ ಅನ್ನುವುದು ಹೋಗಲಾಡಿಸುವಂತದ್ದು ಅಲ್ಲ. ಅದನ್ನ ನೀವು ನಿಭಾಯಿಸಬೇಕು ಅಷ್ಟೇ. ನೀವು ಸ್ಕ್ರಬ್ ತೆಗೆದುಕೊಂಡು ಚೆನ್ನಾಗಿ ಉಜ್ಜಿಕೊಳ್ಳುವುದು ಅಥವಾ ಲೋಷನ್ ಅನ್ನು ಹಚ್ಚಿಕೊಳ್ಳುವುದರ ಬದಲು, ಇದನ್ನು ನಿಭಾಯಿಸಲು ಅತ್ಯಂತ ಸೂಕ್ತ ವಿಧಾನ ಎಂದರೆ ಫೇಸ್ ಆಯಿಲ್ಸ್ ಬಳಸುವುದು. ನಿಮ್ಮ ಚರ್ಮಕ್ಕೆ ಮತ್ತು ಚರ್ಮದ ಬಣ್ಣಕ್ಕೆ ಹೊಂದುವ ಫೇಸ್ ಆಯಿಲ್ ಅನ್ನು ಬಳಸುವುದು ಮುಖ್ಯ. ಉದಾಹರಣೆಗೆ ಗ್ರೇಪ್ ಸೀಡ್ ಆಯಿಲ್ ಅನ್ನು ನೀವು ನಿಮ್ಮ ಸನ್ ಸ್ಕ್ರೀನ್ ಕ್ರೀಂ ಹಚ್ಚಿಕೊಳ್ಳುವ ಮುನ್ನ ಬಳಸುವುದು ಉತ್ತಮ. ಟೀ ಟ್ರೀ ಆಯಿಲ್ ಅಂತಹ ಇತರೆ ಆಯಿಲ್ಸ್ ಬ್ಯಾಕ್ಟೀರಿಯಾ ಮತ್ತು ಸೆಬಮ್ ಹೆಪ್ಪುಗಟ್ಟುವಿಕೆ ವಿರುದ್ಧ ಹೋರಾಡುತ್ತವೆ.

 

೬. ಮೃದುವಾದ ಬೆನ್ನು ಹೊಂದಿ ಆರಾಮಾಗಿ!

ಲೊ-ಬ್ಯಾಕ್ ಬ್ಲೌಸ್ ಅಥವಾ ಬ್ಯಾಕ್ಲೆಸ್ ಡ್ರೆಸ್ ಅಥವಾ ಚೋಲಿ ಧರಿಸಬೇಕು ಎಂದುಕೊಂಡಿದ್ದೀರಾ ಆದರೆ ನಿಮ್ಮ ಬೆನ್ನನ್ನು ಮೃದುವಾಗಿ ಕಾಣಿಸುವಂತೆ ಮಾಡಲು ಬಾಡಿ ಸ್ಕ್ರಬ್ ಮಾಡುವಷ್ಟು ಸಮಯ ನಿಮ್ಮ ಬಳಿ ಇಲ್ಲವೇ? ಇಲ್ಲಿದೆ ನೋಡಿ ಅದಕ್ಕೊಂದು ಉಪಾಯ. ಒಂದು ಟೀ ಲೋಟದಷ್ಟು ಕಲ್ಲು ಉಪ್ಪು ತೆಗೆದುಕೊಂಡು ಅದನ್ನು ಒಂದು ಲೋಟ ಆಲಿವ್ ಆಯಿಲ್ ಒಳಗೆ ಹಾಕಿ. ಇದಕ್ಕೆ 5 ಹನಿಗಳಷ್ಟು ಗಂಧದ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಅದನ್ನು ಒಂದು ಜಾರ್ ಅಲ್ಲಿ ಶೇಖರಿಸಿ ಇಡಿ. ನೀವು ನಿಮ್ಮ ದೇಹದ ಯಾವೆಲ್ಲಾ ಭಾಗಗಳನ್ನ ತೋರಿಸಬೇಕು ಎಂದಿದ್ದೀರಿ ಅವುಗಳ ಮೇಲೆಲ್ಲಾ ಈ ಮಿಶ್ರಣವನ್ನು ಚೆನ್ನಾಗಿ ತಿಕ್ಕಿ. ನಂತರ ಹಸಿ ಟವೆಲ್ ಇಂದ ಆ ಭಾಗಗಳನ್ನ ಒರೆಸಿಕೊಳ್ಳಿ.

 

೭. ಆಯಾಸಗೊಂಡಿರುವ ಕಣ್ಣುಗಳು?

ತಡರಾತ್ರಿವರೆಗೂ ಆಫೀಸ್ ಕೆಲಸಗಳು ಅಥವಾ ಸಮಾರಂಭಕ್ಕೆಂದು ತಯಾರಿ ಮಾಡಿಕೊಳ್ಳಲು ಹಿಂದಿನ ರಾತ್ರಿಯೆಲ್ಲಾ ಕಳೆದಿದ್ದರೆ, ಸಮಾರಂಭದ ದಿನ ಆಯಾಸಗೊಂಡು ಜೀವ ಇಲ್ಲದಂತೆ ಕಾಣುತ್ತಿರುತ್ತೀರಿ. ಹೀಗಾಗಿ ನೀವು ಒಂದೇ ಕ್ಷಣದಲ್ಲಿ ಫ್ರೆಶ್ ಆಗುವಂತಹ ಐ-ವಾಶ್ ಅನ್ನು ನೀವೇ ತಯಾರಿಸಿ ಬಳಸುವುದು ಹೇಗೆಂದು ಹೇಳುತ್ತೇನೆ ಓದಿ. ಮೊದಲಿಗೆ ಒಂದು ಬಟ್ಟಲಿನಲ್ಲಿ ಫ್ರಿಡ್ಜ್ ಅಲ್ಲಿ ಇಟ್ಟಿದ್ದ ತಣ್ಣೀರನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಕೆಲವು ಹನಿಗಳಷ್ಟು ರೋಸ್ ವಾಟರ್ ಹಾಕಿ. ನಂತರ ಈ ಮಿಶ್ರಣಕ್ಕೆ 2-3 ಹನಿಗಳಷ್ಟು ಜೇನುತುಪ್ಪವನ್ನು ಬೆರೆಸಿ, ನಿಮ್ಮ ಒಂದು ಕಣ್ಣನ್ನು ಇದರೊಳಗೆ ಇಡಿ. ನಂತರ ಆ ಮಿಶ್ರಣವನ್ನು ಎಸೆದು, ಇನ್ನೊಂದು ಕಣ್ಣಿಗೆ ಇನ್ನೊಂದು ಬಾರಿ ಅದೇ ರೀತಿ ಮಿಶ್ರಣವನ್ನು ತಯಾರಿಸಿಕೊಳ್ಳಿ.ಇದಾದ ಮೇಲೆ ತಣ್ಣೀರನ್ನು ಕಣ್ಣುಗಳಿಗೆ ಎರೆಚಿಕೊಳ್ಳಿ. ಮೊದಲಿಗೆ ನಿಮ್ಮ ಕಣ್ಣುಗಳು ಸ್ವಲ್ಪ ಕೆಂಪಾಗಿರುವಂತೆ ಕಾಣಿಸಬಹುದು ಆದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಕಣ್ಣುಗಳಿಗೆ ಫ್ರೆಶ್ ಎನಿಸುತ್ತದೆ.

 

೮. ನೈಸರ್ಗಿಕ ಕೂದಲ ಬಣ್ಣ ಬೇಕೇ?

ನಿಮ್ಮ ಕೂದಲಲ್ಲಿ ಸ್ವಲ್ಪ ಕಂದು ಬಣ್ಣ ಹೊಂದಿದ್ದರೆ ಮತ್ತು ಅದಕ್ಕೆ ಮೆಹೆಂದಿ ಅಥವಾ ಇತರೆ ಬಣ್ಣಗಳನ್ನ ಹಚ್ಚಿಕೊಳ್ಳಲು ನಿಮ್ಮಲ್ಲಿ ಸಮಯ ಇಲ್ಲದಿದ್ದರೆ, ಮಾಡಬೇಕಿರುವುದು ಇಷ್ಟೇ. ಮೊದಲಿಗೆ ಎರಡು ಲೋಟದಷ್ಟು ನೀರಿಗೆ 2 ಚಮಚ ಬ್ಲಾಕ್ ಟೀ ಅನ್ನು ಬೆರೆಸಿ. ನಂತರ ಇದಕ್ಕೆ ನಿಮ್ಮ ಮನೆಯಲ್ಲೇ ಇರುವ ರೋಸ್ಮರಿ ಚಿಗುರುಗಳನ್ನು ತಂದು ಹಾಕಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಕಾಯಿಸಿ. ಪಾತ್ರೆಯಲ್ಲಿರುವ ನೀವು ಹಾಕಿದ ನೀರು ಅರ್ಧ ಪ್ರಮಾಣಕ್ಕೆ ಇಳಿದ ನಂತರ ಉರಿಯನ್ನು ಆಫ್ ಮಾಡಿ. ನಂತರ ಇದನ್ನು ¼ ಲೋಟ ಶಾಂಪೂ ಜೊತೆಗೆ ಬೆರೆಸಿ. ಪ್ರತಿ ಬಾರಿ ನೀವು ಶಾಂಪೂ ಬಳಸಬೇಕಾದರೆ ಈ ಮಿಶ್ರಣವನ್ನೇ ಬಳಸಿ. ಈ ಶಾಂಪೂ ಅನ್ನು ನಿಮ್ಮ ಕೂದಲಲ್ಲಿ 15 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆದುಕೊಳ್ಳಿ. ವ್ಯತ್ಯಾಸ ನೋಡಿ ಅಚ್ಚರಿ ಪಡಿ!

೯. ಕೆಲವೇ ನಿಮಿಷಗಳಲ್ಲಿ ನೈಲ್ ಪಾಲಿಶ್ ಹಚ್ಚಿಕೊಂಡು ರೆಡಿ ಆಗಬೇಕೆ?

ಎಲ್ಲಿಗೋ ಹೋಗಬೇಕಾಗಿದೆ ಆದರೆ ನೀವಿನ್ನೂ ನೈಲ್ ಪಾಲಿಶ್ ಹಚ್ಚಿಕೊಂಡು ಹಚ್ಚಿಕೊಂಡು ರೆಡಿ ಆಗಬೇಕೆ? ಅಯ್ಯೋ! ನೈಲ್ ಪಾಲಿಶ್ ಒಣಗಲು ಸಮಯ ತೆಗೆದುಕೊಳ್ಳುತ್ತದೆ ಎಂಬ ಯೋಚನೆ ಬಿಟ್ಟುಬಿಡಿ. ಒಂದು ಬೌಲ್ ಅಲ್ಲಿ ನೀರು ಮತ್ತು ಐಸ್ ಕ್ಯೂಬ್ಸ್ ಅನ್ನು ಹಾಕಿ. ನಂತರ ನಿಮ್ಮ ಬೆರಳುಗಳನ್ನು ಅವುಗಳಲ್ಲಿ ಅದ್ದಿ. ತಣ್ಣೀರು ನಿಮ್ಮ ಉಗುರುಗಳ ಮೇಲಿನ ನೈಲ್ ಪಾಲಿಶ್ ಬೇಗ ಒಣಗುವಂತೆ ಮಾಡುತ್ತದೆ.

 

೧೦. ಪೆನ್ಸಿಲ್ ಐ-ಲೈನರ್ ಅನ್ನು ಬೆಂಕಿ ಕಡ್ಡಿಯೊಂದಿಗೆ ಜೆಲ್ ಫಾರ್ಮುಲಾ ಮಾಡಿ

ನಿಮ್ಮ ಕಪ್ಪು, ಹಸಿರು, ಬರ್ಗಂಡಿ ಅಥವಾ ಯಾವುದೇ ಬಣ್ಣದ ಪೆನ್ಸಿಲ್ ಐ-ಲೈನರ್ ತುಂಬಾ ತೆಳುವಾಗಿರುವ, ಬಿಡಿಸಲು ಕಷ್ಟವಾಗುವಂತಹ ಗೆರೆಗಳನ್ನ ಬಿಡಿಸುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಪೆನ್ಸಿಲ್ ಅನ್ನು ಬೆಂಕಿ ಕಡ್ಡಿ ಅಥವಾ ಲೈಟರ್ ಬೆಂಕಿಗೆ ಕೇವಲ ಒಂದೆರೆಡು ಸೆಕೆಂಡ್ ಇಡಿ ಮತ್ತು ಅದು ತಣ್ಣಗಾಗಲು 15 ಸೆಕೆಂಡ್ಸ್ ಸಮಯ ಕೊಡಿ. ಆಗ ನೋಡಿ ಅದರ ಸಾಂದ್ರತೆಯೇ ಬದಲಾಗುತ್ತದೆ. ಸ್ಮಡ್ಜ್ ಮಾಡಿಕೊಳ್ಳಲು ಈಗ ನಿಮ್ಮ ಹೊಸ ಜೆಲ್ ಲೈನರ್ ಅನ್ನು ಬಳಸಿಕೊಳ್ಳಿ!

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon