Link copied!
Sign in / Sign up
8
Shares

BCG (ಬಿ.ಸಿ.ಜಿ) ಎಂದರೇನು? ಯಾರಿಗೆ ಮತ್ತು ಏನಾಗುತ್ತದೆ?

BCG (ಬಿ.ಸಿ.ಜಿ) ಎಂದರೆ “ಬೆಸಿಲ್ಲಿ ಕಾಲ್ಮೆಟ್- ಗುಯೇರಿನ್” ಎಂದು ಹಾಗು ಇದನ್ನ ಡಾ|| ಕಾಲ್ಮೆಟ್ ಮತ್ತು ಡಾ|| ಗುಯೇರಿನ್ ಅವರ ನೆನಪಿನಲ್ಲಿ ಹೆಸರಿಸಲಾಗಿದೆ. BCG ಅನ್ನು ಕ್ಷಯ ರೋಗ (ಟ್ಯೂಬರ್ಕ್ಯುಲೋಸಿಸ್/ ಟಿ.ಬಿ) ದೂರವಿಡಲು ನೀಡುವ ಔಷಧ. ಇದನ್ನು ಇಪ್ಪತ್ತನೆ ಶತಮಾನದ ಶುರುವಿನಲ್ಲಿ ಮೊದಲು ತಯಾರು ಮಾಡಿದ್ದು. ಕ್ಷಯ ರೋಗ ತಡೆಯಲಿಕ್ಕೆ ಇದನ್ನ ನಾವು 1921 ಇಂದ ಬಳಸುತ್ತಿದ್ದೇವೆ. ಇದನ್ನ ಮೈಕೋಬ್ಯಾಕ್ಟೀರಿಯಂ ಬೋವಿಸ್ ಎಂಬ ಕೀಟಾನು ಇಂದ ಮಾದಲಾಗುತ್ತಾದೆ. ಇದೊಂದು ಜೀವಂತ ಲಸಿಕೆ ಆಗಿದ್ದು, ಇದರಿಂದ ಮನುಷ್ಯರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಈ ಲಸಿಕೆಯು ಏನು ಮಾಡುತ್ತದೆ?

BCG ಲಸಿಕೆ ವ್ಯಕ್ತಿಗೆ ಟ್ಯೂಬರ್ಕ್ಯುಲೋಸಿಸ್ ತಾಕುವುದನ್ನ ತಪ್ಪಿಸುವುದಿಲ್ಲ, ಆದರೆ ಈ ಕಾಯಿಲೆ ಮತ್ತಷ್ಟು ಹೆಚ್ಚುವುದನ್ನು ನಿಲ್ಲಿಸಿ ಕಡಿವಾಣ ಹಾಕುತ್ತದೆ. ಇದು ವಿಶೇಷವಾಗಿ ಮಕ್ಕಳನ್ನ ಈ ಕಾಯಿಲೆ ಇಂದ ಮಕ್ಕಳನ್ನ ರಕ್ಷಿಸಲೆಂದು ರೂಪಿಸಲಾಗಿದೆ. ಇದು ಮಕ್ಕಳಲ್ಲಿ ತೀವ್ರ  ಸ್ವರೂಪದ ಟ್ಯೂಬರ್ಕ್ಯುಲೋಸಿಸ್ ಆದ ಮೆನಿಂಜೈಟಿಸ್(ಮೆದುಳು ಉರಿತ) ಅನ್ನು ನಿವಾರಿಸುವುದರಲ್ಲಿ ತುಂಬಾನೇ ಉಪಯುಕ್ತ ಆಗಿದೆ ಹಾಗು ಇದನ್ನ ಮಗು ಹುಟ್ಟಿದಾಗಿನಿಂದ ನೀಡಬಹುದು. BCG ಲಸಿಕೆಯು ಮಕ್ಕಳನ್ನ ಹತ್ತು ವರ್ಷಗಳವರೆಗೆ ಕಾಪಾಡಬಹುದು ಹಾಗು ವಿಶ್ವ ಆರೋಗ್ಯ ಸಂಸ್ಥೆ ಜೀವನಾವಧಿಯಲ್ಲಿ ಒಮ್ಮೆ ಇದನ್ನ ನೀಡಲು ಸೂಚಿಸುತ್ತಾರೆ.

ಇದನ್ನ ಯಾರು ಪಡೆಯಬೇಕು?

೧. ಕ್ಷಯ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುವ ದೇಶದ ಮಕ್ಕಳ, ವಿಶೇಷವಾಗಿ ಐದು ವರ್ಷಗಳಿಗಿಂತ ಚಿಕ್ಕ ಮಕ್ಕಳು.

೨. ಕ್ಷಯ ರೋಗ ಹೊಂದಿರುವ ತಾಯಿಯರ ಮಕ್ಕಳು.

BCG ಪಡೆದ ಮೇಲೆ ಏನು ಲಕ್ಷಣಗಳು ಕಾಣಿಸಿಕೊಳ್ಳಬಹುದು?

ಸಹಜವಾಗಿ BCG ಚುಚ್ಚುಮದ್ದು ಪಡೆದ ಜಾಗ ಕೆಂಪಗಾಗುತ್ತದೆ ಅಥವಾ ಸಣ್ಣ ಮಟ್ಟಿಗೆ ಊದಿಕೊಳ್ಳಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon