Link copied!
Sign in / Sign up
2
Shares

ಬಸುರಿ ಹೊಟ್ಟೆ ಸಣ್ಣದಿದ್ದರೆ ಜನರು ಆಡುವ 5 ಮಾತುಗಳು ಮತ್ತು ಅವುಗಳ ಹಿಂದಿನ ಸತ್ಯ

ಪ್ರತಿಯೊಂದು ಗರ್ಭಧಾರಣೆಯಲ್ಲೂ ತಾಯಿ ಆಗಲಿರುವವರು ಅಪೇಕ್ಷಿಸಬಹುದಾದ ಒಂದು ವಿಷಯ ಎಂದರೆ ಅದು ಪ್ರತಿಯೊಂದು ಗರ್ಭಧಾರಣೆಯು ವಿಭಿನ್ನ ಆಗಿರುತ್ತದೆ ಎಂಬುದು. ಅದು ಲಕ್ಷಣಗಳು ಇರಬಹುದು, ಗಾತ್ರಗಳು ಇರಬಹುದು, ಅಥವಾ ಹೆರಿಗೆ ಇರಬಹುದು. ಬಹುತೇಕ ತಾಯಂದಿರಿಗೆ ಇದು ಗರ್ಭಧಾರಣೆಯಲ್ಲಿ ಸಾಗುತ್ತಾ ಗೊತ್ತಾಗುತ್ತಾ ಹೋಗುತ್ತದೆ. ಆದರೆ, ಈಗಲೂ ಸಣ್ಣ ಬಸುರಿ ಹೊಟ್ಟೆಯ ಬಗ್ಗೆ ಅನೇಕ ಮೂಢನಂಬಿಕೆಗಳು ಚಾಲನೆಯಲ್ಲಿವೆ. ಅಂತಹ ಮೂಢನಂಬಿಕೆಗಳು ಯಾವು ಮತ್ತು ಅವುಗಳಿಗೆ ನೀವು ಏಕೆ ಕಿವಿ ಕೊಡಬಾರದೆಂದು ನಾವು ಇಲ್ಲಿ ಬರೆದಿದ್ದೇವೆ ಓದಿರಿ.

 

೧. ಸಣ್ಣ ಬಸುರಿ ಹೊಟ್ಟೆ ಎಂದರೆ ಸಣ್ಣ ಮಗು ಎಂದರ್ಥ

ಇದೊಂದು ಸಾಮನ್ಯವಾಗಿ ಕೇಳಿಬರುವ ಮಾತು. ಸಣ್ಣ ಬಸುರಿ ಹೊಟ್ಟೆ ಸಣ್ಣ ಮಗು ಎಂಬುದು. ಬಸುರಿ ಹೊಟ್ಟೆಯು ಸಣ್ಣದಿದೆ ಎಂದರೆ ಮಗು ಚಿಕ್ಕದಾಗಿರಬೇಕು ಎಂದರ್ಥವಲ್ಲ. ವಾಸ್ತವದಲ್ಲಿ ನಿಮ್ಮ ಬಸುರಿ ಹೊಟ್ಟೆಯ ಗಾತ್ರವು ನಿಮ್ಮ ಅಂದರೆ ಅಮ್ಮನ ಗಾತ್ರ ಮತ್ತು ನಿಮ್ಮ ಮೈಕಟ್ಟಿನ ಮೇಲೆ ಆಧಾರಿತವಾಗಿರುತ್ತದೆ. ಒಂದು ವೇಳೆ ನೀವು ತುಂಬಾ ಎತ್ತರ ಹೊಂದಿದ್ದು ನಿಮ್ಮ ಹೊಟ್ಟೆಯು ಉದ್ದವಾಗಿದ್ದರೆ ನಿಮ್ಮ ಮಗುವಿಗೆ ಹೆಚ್ಚು ಜಾಗ ಸಿಗುತ್ತದೆ. ಆಗ ನಿಮ್ಮ ಬಸುರಿ ಹೊಟ್ಟೆ ಅಷ್ಟು ದೊಡ್ಡದಾಗಿ ಕಾಣುವುದಿಲ್ಲ.


೨. ಸಣ್ಣ ಬಸುರಿ ಹೊಟ್ಟೆ ಎಂದರೆ ಹೆರಿಗೆ ಸುಲಭವಿರುತ್ತದೆ

ಕೇವಲ ನಿಮ್ಮ ಹೊಟ್ಟೆಯ ಸುತ್ತಳತೆ ನೋಡಿ ಮಗುವಿನ ಗಾತ್ರ ಇಷ್ಟೇ ಎಂದು ಹೇಳಲು ಆಗುವುದಿಲ್ಲ. ಅದರೊಂದಿಗೆ ಕೇವಲ ಬಸುರಿ ಹೊಟ್ಟೆ ಸಣ್ಣದಿದೆ ಎಂದ ಮಾತ್ರಕ್ಕೆ ಹೆರಿಗೆ ಸುಲಭವಾಗಿ ಆಗುತ್ತದೆ ಎಂಬುದು ಕೂಡ ನಿಜವಲ್ಲ. ಒಂದು ವೇಳೆ ನಿಮ್ಮ ಬಸುರಿ ಹೊಟ್ಟೆಯು ಸಣ್ಣದಿದ್ದು, ನೀವು ನಿಮ್ಮ ಹೆರಿಗೆ ಸುಲಭವಿರುತ್ತದೆ ಎಂದು ಅಪೇಕ್ಷೆ ಇಟ್ಟುಕೊಂಡಿದ್ದರೆ, ಕೂಡಲೇ ಅದನ್ನು ಬಿಟ್ಟುಬಿಡಿ. ಹೆರಿಗೆ ಸುಲಭವಾಗಿಯೂ ಆಗಬಹುದು ಅಥವಾ ಕಷ್ಟಕರ ಕೂಡ ಆಗಬಹುದು.


೩. ಬಸುರಿ ಹೊಟ್ಟೆ ಸಣ್ಣದಿದ್ದಷ್ಟು ದೇಹದ ಮೇಲೆ ಹೊರೆ ಕಡಿಮೆ

ಬಸುರಿ ಹೊಟ್ಟೆಯ ಗಾತ್ರ ಹೇಗೇ ಇದ್ದರೂ, ಪ್ರತಿಯೊಂದು ಹೆಣ್ಣಿನ ಗರ್ಭಧಾರಣೆಯ ಅನುಭವ ಬೇರೆ ಬೇರೆ ಆಗಿರುತ್ತದೆ. ನಿಮ್ಮ ಬಸುರಿ ಹೊಟ್ಟೆ ಸಣ್ಣದಿದ್ದರು ನೀವು ಬೆಳಗಿನ ಬೇನೆ, ಸ್ಟ್ರೆಚ್ ಮಾರ್ಕುಗಳಂತಹ ಲಕ್ಷಣಗಳನ್ನು ಕಾಣಬಹುದು. ಉದಾಹರಣೆಗೆ, ಸ್ಟ್ರೆಚ್ ಮಾರ್ಕುಗಳು ಉಂಟಾಗುವುದು ಪ್ರೆಗ್ನನ್ಸಿ ಹಾರ್ಮೋನುಗಳಲ್ಲಿ ಆಗುವ ಏರಿಕೆ ಮತ್ತು ಚರ್ಮದ ಕೆಳಗಿರುವ ಅಂಗಾಂಶಗಳ ಹಿಗ್ಗುವಿಕೆ. ನಿಮ್ಮ ಬಸುರಿ ಹೊಟ್ಟೆಯ ಗಾತ್ರ ಚಿಕ್ಕದಿರುವ ಮಾತ್ರಕ್ಕೆ ನಿಮ್ಮ ಗರ್ಭಧಾರಣೆ ಸುಲಭವಿರುತ್ತದೆ ಎಂದಾಗಲಿ ಅಥವಾ ನಿಮ್ಮ ದೇಹ ಏನು ಬದಲಾವಣೆ ಹೊಂದುವುದಿಲ್ಲ ಎಂದಾಗಲಿ ಅಂದುಕೊಳ್ಳಬೇಡಿ.


೪. ಬಸುರಿ ಹೊಟ್ಟೆ ಸಣ್ಣದಿದ್ದರೆ ನೀವು ಜಾಸ್ತಿ ತಿನ್ನಬೇಕು

“ನೀನು ಇವಾಗ ಇಬ್ಬರಿಗೆ ಆಗೋ ಅಷ್ಟು ತಿನ್ನಬೇಕಮ್ಮ” ಎಂಬ ಮಾತು ನೀವು ಕೇಳೇ ಇರುತ್ತೀರಾ. ಅದೇನೇ ಇರಲಿ, ನಿಮ್ಮ ಬಸುರಿ ಹೊಟ್ಟೆಯ ಗಾತ್ರ ಎಷ್ಟೇ ಇರಲಿ, ನೀವು ಗರ್ಭಧಾರಣೆ ವೇಳೆ ಇಬ್ಬರಿಗೆ ಆಗುವಷ್ಟು ತಿನ್ನಬೇಕು ಎಂಬ ನಂಬಿಕೆಯೇ ಸುಳ್ಳು. ಒಂದು ವೇಳೆ ನೀವು ಹೀಗೆ ಮಾಡಿದರೆ, ಮಗುವಾದ ನಂತರ ನಿಮ್ಮ ದೇಹವನ್ನು ಕರಗಿಸಲಿಕ್ಕೆ ಇನ್ನಷ್ಟು ಕಷ್ಟ ಆಗುತ್ತದೆ. ಹೀಗಾಗಿ ಅದರ ಬದಲಿಗೆ ನೀವು ಸಕ್ರಿಯವಾಗಿರಲು, ಆರೋಗ್ಯಕ್ರವಾಗಿರಲು ಎಷ್ಟು ಬೇಕೋ ಅಷ್ಟು ತಿನ್ನಿ.


೫. ಸಣ್ಣ ಬಸುರಿ ಹೊಟ್ಟೆ ಎಂದರೆ ಮಗುವು ಆರೋಗ್ಯವಾಗಿಲ್ಲ ಎಂದು

ಇದು ಕೂಡ ಸಾಮಾನ್ಯವಾಗಿ ಕೇಳಿ ಬರುವ ಮಾತು. ಬಸುರಿ ಹೊಟ್ಟೆ ದೊಡ್ಡದಿಲ್ಲ ಎಂದರೆ ಮಗುವಿನಲ್ಲಿ ಏನೋ ತೊಂದರೆ ಇರಬೇಕು ಮತ್ತು ಅನಾರೋಗ್ಯಕ್ಕೆ ತುತ್ತಾಗಿರಬೇಕು ಎಂದು. ಮಗುವು ಸರಿಯಾದ ಬೆಳವಣಿಗೆ ಹೊಂದದೆ ಗಾತ್ರದಲ್ಲಿ ಚಿಕ್ಕದಿರುವುದಕ್ಕೂ, ನಿಮ್ಮ ದೇಹದ ಗಾತ್ರಕ್ಕೆ ಅನುಗುಣವಾಗಿ ನಿಮ್ಮ ಬಸುರಿ ಹೊಟ್ಟೆಗೂ ವ್ಯತ್ಯಾಸವಿದೆ. ಒಂದು ವೇಳೆ ನಿಮ್ಮ ಮಗುವು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅಥವಾ ಸರಿಯಾದ ಬೆಳವಣಿಗೆ ಹೊಂದುತ್ತಿಲ್ಲವೆಂದರೆ, ಬೇರೆ ಬೇರೆ ವಿಧಾನಗಳ ಮೂಲಕ ಅದುನ್ನ ಕಂಡು ಹಿಡಿದು ನಿಮಗೆ ತಿಳಿಸುವರು. ಬಸುರಿ ಹೊಟ್ಟೆ ನೋಡಿ ಏನು ಹೇಳಲು ಬರುವುದಿಲ್ಲ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon