Link copied!
Sign in / Sign up
2
Shares

ನಿಮ್ಮ ಮಕ್ಕಳಿಗೆ ಬರಿಗಾಲಿನಲ್ಲೇ ಆಡಲು ಬಿಟ್ಟರೆ ನಿಮಗೆ ಅಚ್ಚರಿಯ ಉಪಯೋಗಗಳು ಲಭಿಸುತ್ತವೆ!

ಹೌದು, ಚಪ್ಪಲಿ ಅಥವಾ ಶೂಗಳು ಎಲ್ಲಿರಗೂ ಬೇಕೇ ಬೇಕಾಗಿರುವ ವಸ್ತು. ಪಾದರಕ್ಷೆಗಳನ್ನು ಧರಿಸುವುದರಿಂದ ಅನೇಕ ನೀಡುತ್ತದೆ, ಕೆಳಗೆ ಬಿದ್ದಿರುವ ಗಾಜಿನ ತುಂಡುಗಳ ಮೇಲೆ ನಾವು ಬರಿಗಾಲಿಟ್ಟು ಗಾಯಕ್ಕೆ ಒಳಗಾಗದಂತೆ ಕಾಪಾಡುತ್ತದೆ. ಆದರೆ ಮಕ್ಕಳು ಚಿಕ್ಕವರಿದ್ದಾಗ, ಅವರಿಗೆ ಚಪ್ಪಲಿಯನ್ನು ಹಾಕಿಸದೇ ಇದ್ದರೆ ಏನಾಗುತ್ತದೆ? ಹೊಸದೊಂದು ಸಂಶೋಧನೆಯ ಪ್ರಕಾರ, ನಿಮ್ಮ ಮಗುವನ್ನು ಬರಿಗಾಲಿನಲ್ಲಿ ಓಡಾಡಲು ಬಿಡುವುದರಿಂದ ಅವರ ಚಲನಾ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ತಿಳಿದು ಬಂದಿದೆ.


ಜರ್ಮನಿ ಮತ್ತು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಬರಿಗಾಲಿನಲ್ಲಿ ಬೆಳೆಯುವುದಕ್ಕೂ ಮತ್ತು ಪಾದರಕ್ಷೆಗಳನ್ನು ಧರಿಸಿಕೊಂಡು ಬೆಳೆಯುವುದಕ್ಕೂ ನಡುವಿನ ವ್ಯತ್ಯಾಸಗಳನ್ನ ವಿಶ್ಲೇಷಿಸಿದ್ದಾರೆ. ಇವರ ಈ ಸಂಶೋಧನೆಯಲ್ಲಿ ಪರಿಗಣನೆಗೆ ತೆಗೆದುಕೊಂಡಿದ್ದು ಉಪಯೋಗಗಳು ಇವೆ ಎಂಬುದನ್ನು ನಾವು ತಳ್ಳಿ ಹಾಕಲು ಸಾಧ್ಯವೇ ಇಲ್ಲ. ಗೊತ್ತಿಲ್ಲದ ಜಾಗದಲ್ಲಿ ನಡೆಯುವಾಗ ಇದು ರಕ್ಷಣೆ 810 ಮಕ್ಕಳನ್ನು. ಅವರಿಗೆಲ್ಲಾ ಬ್ಯಾಲೆನ್ಸ್ ಟೆಸ್ಟ್ , ನಿಂತಲ್ಲೇ ಎತ್ತರಕ್ಕೆ ಜಿಗಿಯುವ ಟೆಸ್ಟ್ ಮತ್ತು 20 ಮೀಟರ್ ವೇಗದ ಓಟದ ಸ್ಪರ್ಧೆಗಳನ್ನ ಮಾಡಿಸಿದರು. ಈ 810 ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ದಕ್ಷಿಣ ಆಫ್ರಿಕಾದ ಬಡ ಪ್ರದೇಶಗಳಿಂದ ಬಂದಿದ್ದು, ಅವರಿಗೆ ಹುಟ್ಟಿದಾಗಿನಿಂದ ಪಾದರಕ್ಷೆಗಳನ್ನ ತೊಟ್ಟು ಅಭ್ಯಾಸವೇ ಇಲ್ಲ. ಇನ್ನು ಅರ್ಧದಷ್ಟು ಮಕ್ಕಳು ಜರ್ಮನಿ ದೇಶದ ಮಕ್ಕಳಾಗಿದ್ದು, ಇವರಿಗೆ ಚಿಕ್ಕವರಿದ್ದಾಗಿನಿಂದಲೂ ಬಹುತೇಕ ಸಮಯ ಪಾದರಕ್ಷೆಗಳನ್ನ ತೊಡುವ ಅಭ್ಯಾಸವಿತ್ತು.


ಸಂಶೋಧಕರು 6-10, 11-14 ಮತ್ತು 15-18 ವಯಸ್ಸಿನ ಗುಂಪುಗಳ ಮೇಲೆ ಗಮನವಹಿಸಿದರು ಮತ್ತು ಅವರಿಗೆ ಸಿಕ್ಕ ಫಲಿತಾಂಶಗಳು ಅಚ್ಚರಿ ಮೂಡಿಸುವಂತಿತ್ತು. ಬರಿಗಾಲಿನಲ್ಲೇ ಹೆಚ್ಚು ಬಾಲ್ಯ ಕಳೆದ ಮಕ್ಕಳು ಶೂ ಧರಿಸುತ್ತಿದ್ದ ಮಕ್ಕಳಿಗಿಂತ ಬ್ಯಾಲೆನ್ಸ್ ಟೆಸ್ಟ್ ಮತ್ತು ಜಿಗಿತದ ಟೆಸ್ಟ್ ಅಲ್ಲಿ ಉತ್ತಮ ಪ್ರದರ್ಶನ ತೋರಿದರು. ಅದರಲ್ಲೂ 6-10 ವರ್ಷದ ಗುಂಪಿನ ಮಕ್ಕಳಲ್ಲಿ ವ್ಯತ್ಯಾಸ ಇನ್ನೂ ಹೆಚ್ಚಾಗಿ ಗೋಚರಿಸುತ್ತಿತ್ತು. ಆದರೆ ಓಟದ ಸ್ಪರ್ಧೆಯಲ್ಲಿ ಮಾತ್ರ ಶೂ ಧರಿಸುತ್ತಿದ್ದ ಮಕ್ಕಳು ಉತ್ತಮ ಪ್ರದರ್ಶನ ತೋರಿಸಿದರು.

ಬರಿಗಾಲಿನಲ್ಲೇ ನಡೆಯುವುದು ಹೆಚ್ಚು ನೈಸರ್ಗಿಕ ಎಂದು, ಪಾದರಕ್ಷೆಗಳನ್ನ ಬಳಸುವುದು ನಮ್ಮ ಚಲನಾ ಸಾಮರ್ಥ್ಯ, ವಿನ್ಯಾಸದ ಮೇಲೆ ಪ್ರಭಾವ ಬೀರುವ ಒಂದು ವಿಷಯ ಎಂದು ಬಹಳ ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಅದೇನಿದ್ದರೂ, ಬರಿಗಾಲಲ್ಲಿ ನಡೆಯುವುದರ ಪರಿಣಾಮಗಳು ಸ್ವಲ್ಪ ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ ಕ್ಷೀಣಿಸುತ್ತದೆ ಎಂದೂ ತಿಳಿದುಬಂದಿದೆ.


ಹೀಗಿದ್ದರೂ, ಬರಿಗಾಲಿನಲ್ಲಿ ನಡೆಯುವುದರಿಂದ ಉಂಟಾಗಬಹುದಾದ ಉಪಯೋಗಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಬೇಸಿಗೆ ರಜದಲ್ಲಿ ಮೊದಲೇ ಸೆಕೆ ಜಾಸ್ತಿ ಇರುವ ಕಾರಣಕ್ಕೂ ಮತ್ತು ಮೇಲೆ ತಿಳಿಸಿರುವ ಕಾರಣಕ್ಕೂ, ನಿಮ್ಮ ಮಕ್ಕಳು ಶೂ ಅನ್ನು ತೊರೆದು, ಬರಿಗಾಲಿನಲ್ಲೇ ಆಟವಾಡಲಿ. ಅಲ್ಲದೆ ಬಹಳಷ್ಟು ಪೋಷಕರೇ, ನೀವೂ ನಿಮ್ಮ ಮಕ್ಕಳೊಂದಿಗೆ ಇದರಲ್ಲಿ ಪಾಲ್ಗೊಳ್ಳಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon