Link copied!
Sign in / Sign up
7
Shares

ಭಾರತೀಯ ಗಂಡಸರು ಸರಾಸರಿ ಮಂಚದ ಮೇಲೆ ಎಷ್ಟು ಸಮಯ ಸುಖ ನೀಡಬಲ್ಲರು?

ಗಂಡಸರು ಯಾವಾಗಲು ಮಂಚದಮೇಲೆ ಹೆಚ್ಚು ಸಮಯ ಸುಖಕೊಡಲು ಹಂಬಲಾಯಿಸುತ್ತಾರೆ  ಹಾಗು ಅವರನ್ನು ಈ ವಿಷಯ ಅವರನ್ನು ಕಾಡುತ್ತದೆ, ಕೆಲವೊಮ್ಮೆ ಹಾಸಿಗೆ ಮೇಲೆ ಬೇಗ  ಆಗಿಬಿಡುತ್ತದೆಂಬ ಒತ್ತಡ ಕಾಡುತ್ತದೆ ಆದರೆ ಅದನ್ನು ಹೇಳಿಕೊಳ್ಳಾಗುವುದಿಲ್ಲ. ಅಂದಹಾಗೆ ಗಂಡಸರು ಹಾಸಿಗೆಯಮೇಲೆ ಎಷ್ಟು ಹೊತ್ತು ಸುಖ ಕೊಡುವರು ಎಂಬುದನ್ನು ಯಾರು ಹೇಳಲಾಗುವುದಿಲ್ಲ, ವಾಸ್ತವವಾಗಿ ಎಷ್ಟು ನಿಮಿಷಗಳಕಾಲ ಲೈಂಗಿಕ ಸಾಮರ್ಥ್ಯವಿರುತ್ತದೆ ಎಂಬ ಪ್ರೆಶ್ನೆಗೆ  ನಿಖರಮಾಹಿತಿ ಇಲ್ಲದಿದ್ದರೂ  ಕೆಲವು  ದೇಶಗಳಲ್ಲಿ  ಈ ವಿಚಾರವನ್ನು  ಸಮೀಕ್ಷೆ ನಡೆಸಿದ್ದಾರೆ ಅದರ ಪ್ರಕಾರ ಸರಾಸರಿ ಅಮೆರಿಕಾದ ಗಂಡಸರು 13 ನಿಮಿಷಗಳಕಾಲ ಲೈಂಗಿಕ  ಕ್ಷಮತೆ  ಹೊಂದಿದ್ದಾರೆ  ಹಾಗೆಯೆ ಯುರೋಪಿನವರು 10 ನಿಮಿಷದಲ್ಲಿ ಹಾಗೆಯೇ ಜರ್ಮನಿ ಹಾಗು ಭಾರತದಲ್ಲಿ 7 ನಿಮಿಷಗಳೆಂದು ತಿಳಿದುಬಂದಿದೆ.

ಪೋರ್ನ್ ನಲ್ಲಿ ಅದು ಹೇಗೆ ಸಾಧ್ಯ ?

ನೀವು ಪೋರ್ನ್ ಅಥವಾ ಬ್ಲೂ ಫಿಲಂ ನಲ್ಲಿ ನೋಡಿ ಎಲ್ಲಾ  ಗಂಡಸರು ಹೀಗೆಯೇ ಹೆಚ್ಚು ಹೊತ್ತು ಅಂದರೆ ಸುಮಾರು ಅರ್ಧಗಂಟೆ ಇಂದ ಒಂದು ಗಂಟೆಗಳಕಾಲ ಸತತ ಸೆಕ್ಸ್ ನಲ್ಲಿ ತೊಡಗಿರುತ್ತಾರೆ  ಎಂದು ಭಾವಿಸಿದರೆ ಅದು ತಪ್ಪು. ಅದು ಅವರು ಮಾಡುವ ಟ್ರಿಕ್ಸ್ ಅಷ್ಟೇ. ನಿಜ ಜೀವನದಲ್ಲಿ ಅದು ಸಾಧ್ಯವಾಗುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಗಂಡಸರು ವೀರ್ಯವನ್ನು ಹೊರಹಾಕುತ್ತಾರೆ. ಪೋರ್ನ್ ನೋಡಿ ಎಲ್ಲರು ಗಂಟೆಗಳಕಾಲ ಲೈಂಗಿಕ ಸಾಮರ್ಥ್ಯ ಹೊಂದಿರುತ್ತಾರೆ ಎಂಬುದು ಶುದ್ದ ಸುಳ್ಳು. ಅಷ್ಟಲ್ಲದೇ ಬ್ಲೂ ಫಿಲಂ ಚಿತ್ರೀಕರಣ ಕೆಲವು ದಿನಗಳಕಾಲ ನಡೆಯುತ್ತದೆ ಹಾಗೆಯೆ ಅಲ್ಲಿ ನಟಿಸುವವರು ಸಹ ಹೆಚ್ಚು ಕ್ಷಮತೆಯುಳ್ಳವರಂತೆ ನಟಿಸುತ್ತಾರೆ ಹಾಗೆಯೆ   ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.

ನಿಜ ಜೀವನದಲ್ಲಿ ಎಷ್ಟು ಹೊತ್ತು?

ನಾವು ಮೇಲೆ ಹೇಳಿದಂತೆ, ಸರಾಸರಿ ಲೈಂಗಿಕ ಕ್ರಿಯೆಯ  ಸಮಯ ಅಮೆರಿಕಕ್ಕೆ ಗರಿಷ್ಠ 13 ನಿಮಿಷಗಳು ಆದರೆ ಭಾರತಕ್ಕೆ ಬಂದಾಗ ಅದು ಬೇರೆಯಾಗಿರುತ್ತದೆ. ಇಲ್ಲಿನ ಸರಾಸರಿ  ಸಮಯ 7 ನಿಮಿಷಗಳಿಗಿಂತ ಕಡಿಮೆಯಿದೆ. NHSLS ಸಮೀಕ್ಷೆಯ ಪ್ರಕಾರ, 30-39 ವಯಸ್ಸಿನ 32 ಶೇಕಡಾ ಪುರುಷರು, 40-49 ಮತ್ತು ಶೇ. 31 ರ ವಯಸ್ಸಿನ 50-59 ವಯಸ್ಸಿನ ಶೇ. 28 ರಷ್ಟು ಜನರು ಇಷ್ಟು ನಿಮಿಷಗಳೊಳಗೆ ವೀರ್ಯವನ್ನು ಹೊರಹಾಕುತ್ತಾರೆಂದು ತಿಳಿಸಿದ್ದಾರೆ.

ಸೆಕ್ಷುಯಲ್ ಹೆಲ್ತ್ ಸೆಂಟರ್ ಪ್ರಕಾರ  ಶೀಘ್ರ ವೀರ್ಯ ಸ್ಕಲನ ಎಂದರೆ ಕೇವಲ ಒಂದು ನಿಮಿಷದೊಳಗೆ ವೀರ್ಯವನ್ನು ಹೊರಹಾಕುವುದು ಎಂದು ಹೇಳಲಾಗುತ್ತದೆ. ಶೀಘ್ರ ವೀರ್ಯ ಸ್ಕಲನಕ್ಕೆ ಹಲವಾರು ಕಾರಣಗಳಿವೆ ಹೆಚ್ಚು ಪೋರ್ನ್ ವೀಕ್ಷಣೆಯೂ ಸಹ ಒಂದು. ಸೆಕ್ಸ್ ಎನ್ನುವುದು ಕೇವಲ ದೈಹಿಕ ಕ್ರಿಯೆಯಲ್ಲ ಅದರಲ್ಲಿ ನಿಮ್ಮ ಆಲೋಚನೆಗಳು ಸಹ ಕೂಡಿರುತ್ತದೆ. ಒಳ್ಳೆಯ ಸೆಕ್ಸ್ ಜೀವನವನ್ನು ಅನುಭವಿಸಬೇಕಾದರೆ ದೈಹಿಕ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon