Link copied!
Sign in / Sign up
1
Shares

ಬಂಜೆತನಕ್ಕೆ ಎಲ್ಲಿ, ಯಾವಾಗ ತಜ್ನರನ್ನ ಕಾಣಬೇಕು ಮತ್ತು ಏನು ಮಾಡಬೇಕು : ಸಂಪೂರ್ಣ ಮಾಹಿತಿ

ಗರ್ಭಿಣಿಯಾಗುವುದು ಸುಲಭದ ಮಾತಲ್ಲ. ಸಾವಿರಾರು ಹೆಣ್ಣು ಮಕ್ಕಳು, ತಾವು ತಾಯಿಯಾಗಬೇಕೆಂದು ತಮ್ಮ ಆರೋಗ್ಯದ ಬಗ್ಗೆ, ಮುಟ್ಟಿನ ಬಗ್ಗೆ ಗಮನವಹಿಸುತ್ತಾರೆ. ಇಷ್ಟೆಲ್ಲಾ ಪ್ರಯತ್ನಗಳ ನಂತರವೂ ಗರ್ಭದರಿಸದಿದ್ದರೆ, ಅದಕ್ಕೆ ಕಾರಣಗಳೇನೆಂದು ತಿಳಿಯದೆ ಗೊಂದಲಕ್ಕೆ  ಒಳಗಾಗುತ್ತಾರೆ. ಹೀಗೆ ಬಂಜೆತನಕ್ಕೆ ಕಾರಣಗಳೇನು, ಯಾವ ಸಮಯದಲ್ಲಿ ವೈದ್ಯರನ್ನು ಕಾಣಬೇಕು, ಯಾವ ರೀತಿಯ ಔಷಧಗಳ್ಳನ್ನು ಸೇವಿಸಬೇಕು ಎಂದು ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರಿಂದ ತಿಳಿಯೋಣ ಬನ್ನಿ.

ವೈದ್ಯರನ್ನು ಯಾವಾಗ ಕಾಣಬೇಕು?


ಅಮೆರಿಕನ್ ಸೊಸೈಟಿ ಆಫ್ ರೀಪ್ರೋದಕ್ಟಿವ್ ಮೆಡಿಸಿನ್ ನ ಪ್ರಕಾರ ದಂಪತಿಗಳು ಒಂದು ವರ್ಷದವರೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೂ, ಗರ್ಭವತಿಯಾಗದಿದ್ದರೆ ಅಥವಾ ೩೫ ವರ್ಷಕ್ಕಿಂತ ಮೇಲ್ಪಟ ಹೆಂಗಸರಲ್ಲಿ ೬ ತಿಂಗಳ ಕಾಲ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೂ ಗರ್ಭಿಣಿಯಾಗದಿದ್ದಾಗ ಮಾತ್ರ, ಬಂತೆತನ ಎಂದು ಕರೆಯುತ್ತಾರೆ. ಈ ರೀತಿ ನೀವು ೧ ವರುಷ ಸತತ ಸಂಭೋಗ ನಡೆಸಿ, ಗರ್ಭಿಣಿಯಾಗದಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಹೆಂಗಸರು ಮತ್ತು ಗಂಡಸರಲ್ಲಿ ವಯಸಾಗುತ್ತಿದಂತೆ ಫಲವತ್ತತೆಯ ಪ್ರಮಾಣ ಕುಂದುತ್ತಾ ಹೋಗುತ್ತದೆ.

ಬಂಜೆತನಕ್ಕೆ ಕಾರಣಗಳೇನು ಎಂಬುದನ್ನು ಮೊದಲು ವೈದ್ಯರಿಂದ ತಿಳಿದುಕೊಳ್ಳಿ. ಕೆಲವೊಂದು ಬಾರಿ ನಿಮ್ಮ ದೇಹದಲ್ಲಿ ಮತ್ಯಾವುದೋ ರೋಗದ ಲಕ್ಷಣ ಈ ಬಂಜೆತನ ಕಾರಣವಾಗಿರಬಹುದು. ಉದಾ. pcos, ಅನಿಯಮಿತ ರಕ್ತಸ್ರಾವ, ಗರ್ಭಕೋಶದ ಸೋಂಕು, ಗುಪ್ತ ರೋಗಗಳು, ಥೈರಾಯಿಡ್ ಸಮಸ್ಯೆ, ಮಧುಮೇಹ ಮುಂತಾದ ರೋಗಗಳು ಬಂಜೆತನಕ್ಕೆ ಕಾರಣವಾಗಬಹುದು.  ೨ ಅಥವ ೩ ಗರ್ಭಪಾತಗಳು ಬಂಜೆತನಕ್ಕೆ ಕಾರಣವಾಗಬಹುದು. ಆದ್ದರಿಂದ ಬಂಜೆತನಕ್ಕೆ ಸರಿಯಾದ ಕಾರಣಗಳೇನೆಂದು ಸೂಕ್ತ ಪರೀಕ್ಷೆಗಳಿಂದ ತಿಳಿಯಿರಿ.

ಹಾಗಾದರೆ ಈ ಬಂಜೆತನಕ್ಕೆ ನೀವು ಏನು ಮಾಡಬೇಕೆಂದು ನಾವು ನಿಮಗೆ ತಿಳಿಸುತ್ತೇವೆ.

೧. ನಿಮ್ಮ ಹತ್ತಿರದ ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞರನ್ನು ಭೇಟಿ ಮಾಡಿ

ಕೃತಕ ಗರ್ಭಧಾರಣೆಯ ವೈದ್ಯರನ್ನು ಕಾಣುವ ಮೊದಲು, ಹೆಂಗಸರು ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರನ್ನು ಹಾಗು ಗಂಡಸರು ಯುರೋಲೋಜಿಸ್ಟ್ ಗಳ ಸಲಹೆಯನ್ನು ಪಡೆಯಬೇಕು. ಈ ವೈದ್ಯರು ಸಾಮಾನ್ಯ ಪರೀಕ್ಷೆಗಳ್ಳನ್ನು ಮಾಡಿ, ನಂತರ ಬೇರೆ ಆಸ್ಪತ್ರೆಗಳಿಗೆ ತೆರೆಳುವ ಅಗತ್ಯತೆಯ ಬಗ್ಗೆ ವಿವರಿಸುತ್ತಾರೆ. ಕೆಲವೊಂದು ಬಾರಿ ಕೇವಲ ಮಾತ್ರೆಗಳ ಸಹಾಯದಿಂದ ಗರ್ಭದರಿಸುವ ಸಾಧ್ಯತೆಗಳಿವೆ.


೨. ಸಾಮಾನ್ಯ ಫಲವತ್ತತೆಯ ಪರೀಕ್ಷೆ

ಹೆಂಗಸರಲ್ಲಿ ರಕ್ತ ಪರೀಕ್ಷೆ ಹಾಗು ಗಂಡಸರಲ್ಲಿ ವೀರ್ಯದ ಪರೀಕ್ಷೆಯನ್ನು ಸಾಮಾನ್ಯವಾಗಿ ಮಾಡಿಸಲು ಹೇಳುತ್ತಾರೆ. ಇದರೊಂದಿಗೆ ಪೆಲ್ವಿಕ್ ಸ್ಕ್ಯಾನ್, pap smear, ಅಲ್ಟ್ರಾಸೌಂಡ್, ಗುಪ್ತರೋಗಗಳ ಪರೀಕ್ಷೆಯನ್ನು ಮಾಡಿಸಲು ಹೇಳುತ್ತಾರೆ.


೩. ಸಾಮಾನ್ಯ ಫಲವತ್ತತೆಯ ಚಿಕಿತ್ಸೆಗಳು

ಸಾಮಾನ್ಯ ಚಿಕಿತ್ಸೆಗಳಾದ ಮಾತ್ರೆಗಳ ಸೇವನೆ ಉದಾ. ಕ್ಲೋಮಿಡ್, ಮೆತಫಾರ್ಮಿನ್ ಇತ್ಯಾದಿ ಮಾತ್ರೆಗಳ ಮೂಲಕ ಗರ್ಭಧರಿಸುವಂತೆ ಮಾಡುತ್ತಾರೆ. ಪುರುಷರಿಗೆ ಸಮಸ್ಯೆ ಇದ್ದರೆ ಅವರನ್ನು ಆಂಡ್ರೋಲೋಜಿಸ್ಟ್ ಬಳಿ ತೆರಳಲು ಸೂಚಿಸುತ್ತಾರೆ.


೪. ಫಲವತ್ತತೆಯ ಆಸ್ಪತ್ರೆಗಳು

ಮೇಲೆ ಹೇಳಿದ ಎಲ್ಲಾ ವಿಧಾನಗಳು ಫಲಿಸದಿದ್ದರೆ ಮಾತ್ರ, ನಿಮ್ಮನ್ನು ಫರ್ಟಿಲಿಟಿ ಎಕ್ಸ್ಪರ್ಟ್ಗಳ (ಫಲವತ್ತತೆ ತಜ್ಞರು) ಬಳಿ ಹೋಗಲು ಸೂಚಿಸುತ್ತಾರೆ.


೫. ಹೆಚ್ಚಿನ ಫಲವತ್ತತೆಯ ಪರೀಕ್ಷೆಗಳು

ಫಲವತ್ತತೆಯ ಆಸ್ಪತ್ರೆಯಲ್ಲಿ ಬೇರೆ ಪರೀಕ್ಷೆಗಳೊಂದಿಗೆ, ಮೇಲೆ ಹೇಳಿದ ಪರೀಕ್ಷೆಗಳ್ಳನ್ನು ಮತ್ತೊಮ್ಮೆ ಮಾಡಿಸುವಂತೆ ಸೂಚಿಸುತ್ತಾರೆ.


೭. ಮಾಡಬೇಕಾದ ಕೆಲಸಗಳು

ಪರೀಕ್ಷೆಗಳ ಫಲಿತಾಂಶ ಬರುತ್ತಿದ್ದಂತೆ, ಯಾವ ರೀತಿಯ ಚಿಕಿತ್ಸೆ ನಿಮಗೆ ಸೂಕ್ತ , ಔಷಧಿಗಳ ವಿವರ ಹಾಗು ಚಿಕಿತ್ಸೆಯ ಖರ್ಚು-ವೆಚ್ಚದ ಬಗ್ಗೆ ವಿವರಿಸುತ್ತಾರೆ.


೭. ಚಿಕಿತ್ಸೆಯನ್ನು ಪ್ರಾರಂಭಿಸಿ

ನೀವು, ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಿ ಯಾವುದಾದರು ಸಂಶಯ, ಸಂದೇಹಗಳಿದ್ದರೆ ವೈದ್ಯರ ಬಳಿ ಮಾತನಾಡಿ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರ ಚಿಕಿತ್ಸೆಯನ್ನು ಪ್ರಾರಂಭಿಸಿ.


೮. ಚಿಕಿತ್ಸೆ ಫಲಕಾರಿಯಾಗದಿದ್ದಾಗ

ಕೃತಕ ಗರ್ಭಧಾರಣೆಯೇ ಹಾಗೆ, ಮೊದಲ ಬಾರಿ ಫಲಕಾರಿಯಾಗುವುದು ತುಂಬಾ ಕಡಿಮೆ. ಆದ್ದರಿಂದ ವೈದ್ಯರ ಸಲಹೆಯಂತೆ ಎದೆಗುಂದದೆ , ಇನ್ನೊಂದು ಬಾರಿ ಪ್ರಯತ್ನಿಸಿ.


೯. ಫಲಿಸಿದರೆ, ಆರೋಗ್ಯಕರ ಗರ್ಭಾವಸ್ಥೆ ನಿಮ್ಮದಾಗುತ್ತೆದೆ.

ಗರ್ಭಿಣಿಯಾದರೂ ಸಹ, ನೀವು ನಿಮ್ಮ ಫರ್ಟಿಲಿಟಿ ವೈದ್ಯರ ಬಳಿ ಪರೀಕ್ಷೆಗಳಿಗೆ ಹೋಗುತ್ತಿರಬೇಕು. ಗರ್ಭಪಾತವಾಗದಂತೆ ವೈದ್ಯರು ನಿಮಗೆ ಏನು ಮಾಡ್ಬೇಕು/ಮಾಡಬಾರದು ಎಂದು ಹೇಳಿಕೊಡುತ್ತಾರೆ.

ಮೇಲೆ ಹೇಳಿದ ಎಲ್ಲಾ ವಿಷಯಗಳ್ಳನ್ನು ಪಾಲಿಸಿದ್ದಲ್ಲಿ, ಸಂತೋಷದ ಗರ್ಭಾವಸ್ಥೆ ನಿಮ್ಮದಾಗುತ್ತದೆ.


Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon