Link copied!
Sign in / Sign up
34
Shares

ಇವುಗಳನ್ನ ಸೇವಿಸಿದರೆ ಬಂಜೆತನ ಹತ್ತಿರಕ್ಕೆ ಬರುವುದಿಲ್ಲ !

ಒಂದು ಹೆಣ್ಣು ತಾಯಿಯಾದಾಗ ನಾನು ಪರಿಪೂರ್ಣಳಾದೆ ಎಂದು ಅತ್ಯಂತ ಸಂತೋಷ ಪಡುತ್ತಾಳೆ. ಪರಿಪೂರ್ಣ ಮಹಿಳೆಯಾಗುವುದು ಪ್ರತಿಯೊಂದು  ಹೆಣ್ಣಿನ ಕನಸು, ಬಯಕೆ, ಆಸೆ ಇತ್ಯಾದಿ. ಅದು ಏನೇ ಇರಲಿ, ಆದರೆ ಇತ್ತೀಚಿನ ದಿನಗಳಲ್ಲಿ ಅವರ ಈ ಆಸೆ, ಕನಸುಗಳು ಈಡೇರದೆ ತುಂಬಾ ಚಿಂತಿತರಾಗಿರುವುದು ದುಃಖದ ವಿಷಯ. ಹೆಣ್ಣು ಪರಿಪೂರ್ಣಳಾಗಲು, ಅಂದರೆ ತಾಯಿಯಾಗಲು, ಪತಿ ಪತ್ನಿ ಇಬ್ಬರ ಪಾತ್ರವು ಬಹಳ ಮುಖ್ಯ ಮತ್ತು ಇಬ್ಬರದೂ ಸಮಾನ ಪಾತ್ರ. ಆದರೆ ಸಮಾಜ ಮಗುವಾಗಿಲ್ಲ ಅಂದರೆ ಹೆಣ್ಣನ್ನೇ ಧೂಷಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಬಂಜೆತನವೂ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಆಧುನಿಕ ಜೀವನ ಶೈಲಿ, ಒತ್ತಡ ಮುಂತಾದ ಹಲವು ವಿಷಯಗಳು ಕಾರಣ. ಆದರೆ ನಮ್ಮ ಕೆಲವು ದೈನಂದಿನ ಚಟುವಟಿಕೆಯು ಕೂಡ ಬಂಜೆತನಕ್ಕೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.

ನೆನಪಿಡಿ ಮಗುವಾಗಿಲ್ಲ ಎಂದರೆ ಹೆಣ್ಣು ಮಾತ್ರ ಅದಕ್ಕೆ ಕಾರಣವಲ್ಲ, ಅದಕ್ಕೆ ಗಂಡು, ಹೆಣ್ಣು ಇಬ್ಬರು ಸಮನಾಗಿ ಕಾರಣವಾಗುತ್ತಾರೆ. ಹೆಣ್ಣನ್ನು ಧೂಷಿಸುವ ಬದಲು ಮಗುವಾಗದಿರಲು ಏನು ಕಾರಣ ಎಂದು ತಿಳಿಯುದು ಒಳ್ಳೆಯದು.

ಮಹಿಳೆಯಲ್ಲಿ ತೊಂದರೆ ಇದೆ ಎಂದರೆ, ಅದು,  ಅವರ ದೇಹದಲ್ಲಿ ಆಗುವ ಹಾರ್ಮೋನುಗಳ ಏರುಪೇರು, ಸರಿಯಾದ ಪೌಷ್ಟಿಕದ ಕೊರತೆ, ಋತುಚಕ್ರದಲ್ಲಿ ಏರುಪೇರು, ಗರ್ಭನಾಳದಲ್ಲಿ ಸೋಂಕು ಮತ್ತು ಮುಂತಾದ ತೊಂದರೆಗಳ ಕಾರಣದಿಂದ ಇರಬಹುದು. ಚಿಂತಿಸದಿರಿ, ಕೆಲವೊಂದು ಆಹಾರಗಳನ್ನು ಸಮರ್ಪಕವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಆಗುವ ಏರುಪೇರುಗಳಿಂದ ಮುಕ್ತಿಯೊಂದು ನೀವೂ ಗರ್ಭಧರಿಸಬಹುದು. ಇದು ಪ್ರತಿ ಹೆಣ್ಣಿನಲ್ಲೂ ಸಂತಸ ತರಿಸುವ ವಿಷಯ ಇದನ್ನು ಪ್ರಯತ್ನಿಸಿ ಪರಿಪೂರ್ಣ ಮಹಿಳೆಯಾಗಿ.

೧.ಬೆಳ್ಳುಳ್ಳಿ

ಇದು ತನ್ನ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದ್ದು, ಪ್ರತಿಮನೆಯಲ್ಲೂ ಕಾಣುವಂತ್ತದ್ದೆ. ಗರ್ಭಧರಿಸಬೇಕಾದರೆ, ಅಂಡಾಣುವಿನಲ್ಲಿ ವೀರ್ಯ ಸೇರಿ, ಭ್ರೂಣವನ್ನು ಉತ್ಪತ್ತಿ ಮಾಡಬೇಕು, ಅದಕ್ಕೆ ಫಲಿತವಾದ ಅಂಡಾಣು ಮುಖ್ಯ, ಬೆಳ್ಳುಳ್ಳಿಯಲ್ಲಿರುವ ಸೆಲೆನಿಯಮ್ ಎಂಬ ಖನಿಜ ಅಂಡಾಣು ಫಲಿತವಾಗಲು ಮತ್ತು ಫಲಿತವಾಗಿರುವ ಅಂಡಾಣುವನ್ನು ದೇಹದಿಂದ ಹೊರಹೋಗದಂತೆ ತಡೆಯುತ್ತದೆ. ಇದರಿಂದ ಗರ್ಭನಿಲ್ಲುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಈ ಕಾರಣದಿಂದ ಫಲವತ್ತತ್ತೆ ನೀಡುವುದರಲ್ಲಿ ಬೆಳ್ಳುಳ್ಳಿಯು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

೨.ಎಲೆಕೋಸು

ಸಾಮಾನ್ಯವಾಗಿ ಇದನ್ನು ಹೆಚ್ಚು ಸೇವಿಸುವುದಿಲ್ಲ, ಆದರೆ ಗರ್ಭಿಣಿಯಾಗಲು ಬಯಸುವ ಪ್ರತಿ ಹೆಣ್ಣು ಇದರ ಸೇವನೆಯಿಂದ ಅತ್ಯಂತ ಉಪಯೋಗವನ್ನು ಪಡೆಯಬಹುದು, ಮುಖ್ಯವಾಗಿ ತನ್ನ ಗರ್ಭಿಣಿಯಾಗುವ ಕನಸನ್ನು ನನಸಾಗಿಸಿಕೊಳ್ಳಬಹುದು. ಎಲೆಕೋಸಿನಲ್ಲಿರುವ ಡೈ-ಇಂಡೋಲ್ ಮಿಥೇನ್ ಎಂಬ ಪೋಷಕಾಂಶವು ಮಹಿಳೆಯರ ದೇಹದಲ್ಲಿ ಸ್ರವಿತವಾಗುವ ಈಸ್ಟ್ರೋಜೆನ್ ಎಂಬ ಹಾರ್ಮೋನನ್ನು ಸೂಕ್ತಪ್ರಮಾಣದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಸ್ರವಿಸಿ ತಂತಿರೂಪಗಳು ಮತ್ತು ಎಂಡೊಮೆಟ್ರೋಸಿಸ್ ಎಂಬ ಕಾರ್ಯಗಳು ಸುಗಮವಾಗಿ ಜರುಗಲು ಸಹಾಯಮಾಡುತ್ತವೆ. ಎಲೆಕೋಸನ್ನು ಆಯ್ದುಕೊಳ್ಳುವಾಗ ಮೇಲಿನ ತುದಿಯನ್ನು ಬೆರಳಿನಿಂದ ಒತ್ತಿದಾಗ ಗಟ್ಟಿಯಾಗಿ ಕಲ್ಲಿನಂತಿರುವ ಕೋಸನ್ನು ಆರಿಸಿಕೊಳ್ಳಿ, ಒತ್ತಿದಾಗ ಸ್ಪಂಜಿನಂತಿರುವ ಕೋಸು ಪೋಷಕಾಂಶಗಳ ಮಟ್ಟಿಗೆ ಉಪಯುಕ್ತವಲ್ಲ.

೩.ವಿಟಮಿನ್ ಡಿ(D)ಯನ್ನು ಹೆಚ್ಚು ಸೇವಿಸಿ

ವಿಟಮಿನ್ ಡಿ(D) ಕೊರತೆಯಿಂದ ಬಂಜೆತನ ಅಥವಾ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ವಿಟಮಿನ್ ಡಿ ಯನ್ನು ಪಡೆಯಲು ಬೆಳಗಿನ ಸೂರ್ಯನ ಹೊಂಗಿರಣಗಳಿಗೆ ನಿಮ್ಮ ಮೈ ಒಡ್ಡಿ, ವಿಟಮಿನ್ ಡಿ ಇರುವ ಆಹಾರಗಳನ್ನು ಹೆಚ್ಚು ಸೇವಿಸಿ. ಮೊಟ್ಟೆ, ಗೆಣಸು, ಸಲ್ಮಾನ್ ನಂತಹ ಆಹಾರ ಸೇವನೆಯಿಂದ ವಿಟಮಿನ್ ಡಿ ಕೊರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಯಾವುದೇ ಕಾರಣಕ್ಕೂ ನಿಮ್ಮ ದೇಹದಲ್ಲಿ ವಿಟಮಿನ್ ಡಿ(D)ಯ ಕೊರತೆಯಾಗದಂತೆ ನೋಡಿಕೊಳ್ಳಿ.

೪.ದಾಳಿಂಬೆ

ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಪ್ರತಿದಿನ ಒಂದು ಹಣ್ಣನ್ನು ಅಥವಾ ಅದರ ರಸವನ್ನು ಸೇವಿಸುವುದು ಒಳ್ಳೆಯದು.

೫.ಅಶ್ವಗಂಧ

ಇದು ಒಂದು ಔಷಧೀಯ ಗುಣವುಳ್ಳ ಅದ್ಭುತ ಸಸ್ಯ. ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಹೋಗಾಲಾಡಿಸುವ ಗುಣವಿದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಇದಕ್ಕೆ ಹಿರೇಮದ್ದು ಎಂಬ ಹೆಸರು ಇದೆ. ಇದನ್ನು ಪುಡಿ ಮಾಡಿ ಬೆಚ್ಚಗಿನ ನೀರಿಗೆ ಒಂದು ಚಮಚ ಪುಡಿ ಹಾಕಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಪುರುಷರಲ್ಲಿ ವೀರ್ಯ ಪ್ರಮಾಣ ಹೆಚ್ಚುವುದರ ಜೊತೆಗೆ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ. ಮಹಿಳೆಯ ಅಂಡಾಣು ಆಕರ್ಷಿಸಲು ಕೂಡ ಇದು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರ ಮೊದಲು ವೈದ್ಯರ ಸಲಹೆ ಪಡೆಯಿರಿ(ಇದನ್ನು ಆಯುರ್ವೇಧದಲ್ಲಿ ಹೆಚ್ಚಾಗಿ ಬಳಸುತ್ತಾರೆ).

೬.ಮೊಟ್ಟೆ

ಮೊಟ್ಟೆ ಫಲವತ್ತತೆಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕೋಲಿನ್, ಫೋಲಿಕ್ ಆಮ್ಲ, ಒಮೆಗಾ ೩ ಕೊಬ್ಬಿನ ಆಮ್ಲ (omega 3 fatty acid) ಮತ್ತು ವಿಟಮಿನ್ ಡಿ ಇದ್ದು ಎಲ್ಲವೂ ಗರ್ಭಾಂಕುರಕ್ಕೆ ನೆರವಾಗುತ್ತವೆ.

೭.ಆಲೂಗಡ್ಡೆ

ಗರ್ಭಿಣಿಯಾಗ ಬಯಸುವ ಪ್ರತಿಯೊಬ್ಬ ಹೆಣ್ಣು ನಿಯಮಿತವಾಗಿ ಬೇಯಿಸಿದ ಆಲೂಗಡ್ಡೆಯನ್ನು ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು. ಏಕೆಂದರೆ ಇದರಲ್ಲಿ, ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಾಂಶಾ, ಜೀವಸತ್ವಗಳು, ವಿಟಮಿನ್ ಬಿ ಮತ್ತು ಇ ಜೀವಕೋಶಗಳ ಉತ್ಪತ್ತಿಗೆ ಸಹಕರಿಸುತ್ತವೆ. ಅಂಡಾಶಯದಲ್ಲಿ ಆರೋಗ್ಯವಂತ ಅಂಡ ಉತ್ಪತ್ತಿಯಾಗಲು ಈ ಎರಡು ವಿಟಮಿನ್ ಗಳು ಅತ್ಯಗತ್ಯವಾಗಿವೆ.

೮.ಸೊಪ್ಪು ತರಕಾರಿಗಳು

ತಜ್ಞರ ಪ್ರಕಾರ ಗಾಢ ಹಸಿರು ಬಣ್ಣದ ಎಲೆಗಳಲ್ಲಿ(/ಸೊಪ್ಪುಗಳಲ್ಲಿ) ಹೆಚ್ಚಿನ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣಾಂಶ ಇರುವುದರಿಂದ ಗರ್ಭಧರಿಸಲು ಬಯಸುವ ಪ್ರತಿ ಹೆಣ್ಣಿಗೂ ಅತ್ಯುತ್ತಮವಾದ ಆಹಾರವಾಗಿದೆ ಎಂದು ಸಲಹಿಸುತ್ತಾರೆ. ಈ ಪೋಷಕಾಂಶಗಳು ಗರ್ಭಾಶಯದ ಒಳಭಾಗದ ಪದರವನ್ನು ಬಲಪಡಿಸುತ್ತದೆ. ವಿಶೇಷವಾಗಿ ಕಬ್ಬಿಣಾಂಶ ಅಂಡವನ್ನು ಗರ್ಭಾಶಯದಲ್ಲಿ ಅಂಟಿಕೊಂಡಿರಲು ಸಹಕರಿಸುತ್ತದೆ. ಬಸಲೆ, ಪಾಲಕ್ ಮತ್ತು ಮೆಂತೆ ಮೊದಲಾದ ಸೊಪ್ಪುಗಳು ಉತ್ತಮವಾಗಿವೆ.

೯.ಅರಿಶಿಣ

ಭಾರತೀಯರು ಹೆಚ್ಚಾಗಿ ತಮ್ಮ ಅಡುಗೆಗಳಲ್ಲಿ ಅರಿಶಿಣವನ್ನು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡೇ ಅರಿಶಿಣವನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಹಲವು ಔಷಧೀಯ ಗುಣಗಳು ಇವೆ, ಮತ್ತು ಇದು ಹೆಚ್ಚು ಉತ್ಕರ್ಷಣ ನಿರೋಧಕಗಳು, ಮತ್ತು ಪ್ರತಿ ರಕ್ಷಣಾ ವ್ಯವಸ್ಥೆ ಹೆಚ್ಚಿಸುವ ಗುಣವನ್ನು ಹೊಂದಿದೆ, ಪ್ರತಿದಿನ ಇದನ್ನು ನೀವು ಮಾಡುವ ಪ್ರತಿ ಅಡುಗೆಯಲ್ಲೂ ಚಿಟಕೆ ಬಳಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿರ. ಹೆಣ್ಣು ಗರ್ಭಧರಿಸಲು ಆರೋಗ್ಯವಾಗಿರುವುದು ಮುಖ್ಯ ಮತ್ತು ಗರ್ಭಕೋಶಕ್ಕೆ ಯಾವುದೇ ಹಾನಿ ಅಥವಾ ಸೋಂಕು ತಗಲದಿರುವಂತೆ ನೋಡಿಕೊಳ್ಳಲು ಅರಿಶಿಣ ಸಹಾಯ ಮಾಡುತ್ತದೆ.

ಮಗುವಾಗಲು/ಗರ್ಭನಿಲ್ಲಲು ಗರ್ಭಕೋಶವು ಆರೋಗ್ಯವಾಗಿರುವಂತೆ ಮತ್ತು ಅದಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ನಿಮ್ಮ ದೇಹದಲ್ಲಿ ಬದಲಾಗುವ ಹಾರ್ಮೋನುಗಳಿಂದ, ದೇಹಕ್ಕೆ ತಗುಲುವ ಸೋಂಕಿನಿಂದ ತಪ್ಪಿಸಿಕೊಳ್ಳಲು, ಆರೋಗ್ಯಕರ ಆಹಾರ ಮುಖ್ಯ, ಮೇಲಿನ ಆಹಾರಗಳನ್ನು ಗಂಡು ಹೆಣ್ಣು ಇಬ್ಬರು ಸೇವಿಸಬೇಕು, ಏಕೆಂದರೆ ಗರ್ಭಧರಿಸಲು ಇಬ್ಬರ ಪಾತ್ರವು ಸಮಾನವಾದದ್ದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon