Link copied!
Sign in / Sign up
18
Shares

ಎಚ್ಚರ : ಬೆಂಗಳೂರಿನಲ್ಲಿ ಮಗುವಿನ ಖುಷಿಗೆಂದು ಕೊಡಿಸಿದ ಬಲೂನೇ ಮಗುವನ್ನು ಕೊಂದಿತು!

ಅದು ದಕ್ಷಿಣ ಬೆಂಗಳೂರಿನ ಹುಳಿಮಾವು ಬಳಿಯ ಚಿಕ್ಕಕಮ್ಮನಹಳ್ಳಿ ಅಲ್ಲಿ ನೆನ್ನೆ ನವಾಜ್ ಎಂಬ ಎರಡು ವರ್ಷದ ಮಗು ಬೆಳ್ಳಂಬೆಳಗ್ಗೆ 7 ಗಂಟೆಗೆ ತನ್ನ ಅಕ್ಕಪಕ್ಕದ ಮನೆಯಲ್ಲಿನ ಇತರೆ ಮಕ್ಕಳೊಂದಿಗೆ ಆಟವಾಡಲೆಂದು ಮನೆಯಿಂದ ಆಚೆ ಕಾಲಿಟ್ಟಿದ್ದಾನೆ. ನವಾಜ್ ಆಟ ಮುಗಿಸಿಕೊಂಡು 9:30 ಸುಮಾರಿಗೆ ಮನೆಗೆ ವಾಪಸ್ ಬಂದನು. ಮನೆಗೆ ಮರಳಿ ಬಂದ ಅವನು ಉಸಿರಾಡಲು ಕಷ್ಟ ಪಡುತ್ತಿದ್ದದ್ದನ್ನು ಕಂಡ ಅವನ ತಾಯಿ ರೇಷ್ಮಾ, ಗಾಬರಿಗೊಂಡು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಳು. ಆ ಆಸ್ಪತ್ರೆಯಲ್ಲಿ ಆಕೆಗೆ ಮಗುವನ್ನು ಮಕ್ಕಳ ತಜ್ಞರ ಬಳಿ ಕರೆದೊಯ್ಯಲು ಹೇಳಿದ್ದಾರೆ. ನಂತರ ಆಕೆಯು ಮಗುವನ್ನು ಎತ್ತಿಕೊಂಡು ಅಲ್ಲಿಂದ 5 ಕಿಲೋಮೀಟರು ದೂರವಿರುವ ಅಪೊಲೊ ಆಸ್ಪತ್ರೆಗೆ ತಂದಿದ್ದಾಳೆ. ಆದರೆ ಆಕೆ ಆಸ್ಪತ್ರೆಗೆ ಬಂದ ಮುಕ್ಕಾಲು ಗಂಟೆಯ ನಂತರ, ಅಂದರೆ 11:30 ಸುಮಾರಿಗೆ ಮಗುವು ಸಾವನ್ನಪ್ಪಿದೆ ಎಂಬ ಸುದ್ದಿ ಅವಳಿಗೆ ಮುಟ್ಟಿತು.

ಈ ಬಗ್ಗೆ ಅಪೊಲೊ ಆಸ್ಪತ್ರೆಯ ವೈದ್ಯರಿಗೆ ಕೇಳಿದಾಗ, ಅವರು ಗಾಬರಿಯಿಂದ ಹೇಳಿದ್ದು - “ಮಗುವಿನ ತಾಯಿಯು ಮಗುವನ್ನು ಇಲ್ಲಿಗೆ ಕರೆತರುವ ಮುನ್ನ ಬೇರೆ ಇಬ್ಬರು ವೈದ್ಯರ ಬಳಿ ಕರೆದೊಯ್ದಿದ್ದಾಳೆ. ನಂತರ ನಾವು ಲಾರಿಂಗೋಸ್ಕೊಪಿ ಮಾಡಿ, ಮಗುವಿನ ಉಸಿರಿನ ನಾಳದಲ್ಲಿ ಮತ್ತು ಗಂಟಲಿನಲ್ಲಿ ಏನಿದೆ ಎಂದು ನೋಡಿದೆವು. ಅನಂತರ ಫೋರ್ಸೆಪ್ಸ್ ಬಳಸಿ ಮಗುವಿನ ಉಸಿರಿನ ನಾಳದಲ್ಲಿ ಸಿಲುಕಿ ಹಾಕಿಕೊಂಡಿದ್ದ ಬಲೂನ್ ತುಂಡನ್ನು ಹೊರತೆಗೆದೆವು!”

ಹೌದು, ಒಂದು ಬಲೂನ್ ಮಗುವಿನ ಸಾವಿಗೆ ಕಾರಣವಾಗಿದೆ. ಮೊದಲಿಗೆ ಮಗುವಿನ ತಂದೆ ತಾಯಿ ಮಗುವು ನಿಪ್ಪಟ್ ಅನ್ನು ತಿನ್ನುತ್ತಿತ್ತು ಎಂದು ಮಾತ್ರ ವೈದ್ಯರಿಗೆ ಹೇಳಿಕೊಂಡಿದ್ದಾರೆ. ಆದರೆ ಮಗುವಿನ ದೇಹವು ನೀಲಿ ಬಣ್ಣಕ್ಕೆ ತಿರುಗುತ್ತಿದ್ದದ್ದನ್ನು ನೋಡಿ, ವೈದ್ಯರು X-ರೇ ಮತ್ತು ECG ಅನ್ನು ನಡೆಸಿದ್ದಾರೆ. ಆಗಲೇ ಗೊತ್ತಾಗಿರುವುದು ಮಗುವಿನ ಹೃದಯದಲ್ಲಿ ಗಂಟುಗಳು ಉಂಟಾಗಿದ್ದವು ಮತ್ತು ಬಲೂನ್ ತುಂಡೊಂದು ಮಗುವಿನ ಉಸಿರಾಟದ ನಾಳದಲ್ಲಿ ಸಿಲುಕಿ ಹಾಕಿಕೊಂಡಿದೆ ಎಂಬುದು.

ಆನಂತರವಷ್ಟೇ ಪೋಷಕರಿಗೂ ನೆನಪಾಗಿದ್ದು, ಆ ದಿನ ನವಾಜ್ ಗೆ ಹೊಸ ಬಲೂನ್ ಒಂದನ್ನು ಅವರ ಅಪ್ಪ ಉಡುಗೊರೆಯಾಗಿ  ಕೊಡಿಸಿದ್ದು, ಅದರೊಂದಿಗೆ ಆಟ ಆಡುವಾಗ ಬಲೂನ್ ಹರಿದು ಸ್ಪೋಟಗೊಂಡಿತ್ತು ಎಂಬುದು. ದೊಡ್ಡ ಮಕ್ಕಳು ಬಲೂನ್ ನುಂಗಿದರೆ, ಅದು ಅವರ ಹೊಟ್ಟೆ ಸೇರಿ ಮಲದಲ್ಲಿ ಹೊರಬರುತ್ತದೆ. ಆದರೆ, ಚಿಕ್ಕ ಮಕ್ಕಳಲ್ಲಿ ಉಸಿರಾಟದ ನಾಳವೇ ಚಿಕ್ಕದಿರುವುದರಿಂದ ಬಲೂನಿನ ರಬ್ಬರ್ ತುಂಡು ನಾಳದಲ್ಲೇ ಸಿಲುಕಿಕೊಳ್ಳುತ್ತದೆ. ಇದರಿಂದ ಹೈಪೊಕ್ಸಿಯಾ (ಆಮ್ಲಜನಕ ಕೊರತೆ ಉಂಟಾಗುತ್ತದೆ). ಇದೊಂದು ಬಹಳ ವಿರಳ ಪ್ರಕರಣವಾಗಿದ್ದು, ಸ್ವಲ್ಪ ಮುಂಚೆಯೇ ಮಗುವನ್ನ ಆಸ್ಪತ್ರೆಗೆ ಕರೆತಂದಿದ್ದರೆ, ಮಗುವನ್ನ ಉಳಿಸಿಕೊಳ್ಳಬಹುದಿತ್ತು.

ನೋಡಿದಿರಲ್ಲ ಪೋಷಕರೇ ನಿಮ್ಮ ಮಗುವಿನ ಖುಷಿಗೆಂದು ನೀವು ತಂದುಕೊಡುವ ಬಲೂನ್ ಕೂಡ ಹೇಗೆ ನಿಮ್ಮ ಮಗುವಿಗೆ ಕುತ್ತು ತರಬಹುದು ಎಂದು. ನಿಮ್ಮ ಕಣ್ಣುಗಳು ಅವರ ಮೇಲೆ ಇಲ್ಲದಂತೆ ಅವರ ಕೈಗೆ ಯಾವುದೇ ರೀತಿಯ ರಬ್ಬರ್ ಅಥವಾ ಸಿಡಿಯುವಂತಹ ವಸ್ತುಗಳನ್ನ ಕೊಡಬೇಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon