Link copied!
Sign in / Sign up
7
Shares

ಕಾಂಡೋಮ್ ಬಳಕೆಯ ಅಡ್ಡ ಪರಿಣಾಮಗಳು

ನಮಗೆಲ್ಲಾ ಗೊತ್ತಿರುವ ಹಾಗೆ ಕಾಂಡೋಮ್ ಏಡ್ಸ್, ಕ್ಲ್ಯಾಮಿಡಿಯಾ ಮತ್ತು ಹೆಚ್.ಪಿ.ವಿ. ಲೈಂಗಿಕವಾಗಿ ಹರಡಬಲ್ಲ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಮುಖ್ಯವಾಗಿ ಇದು ಗರ್ಭಧಾರಣೆ ಸಮಯದಲ್ಲಿ ಹೊಟ್ಟೆಯೊಳಗಿನ ಮಗುವನ್ನ ಇಂತಹ ಕಾಯಿಲೆಗಳಿಂದ ರಕ್ಷಿಸಿ ಬಹಳ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕಾಂಡೋಮ್ ಬೇಡದಿರುವ ಗರ್ಭವನ್ನ ತಡೆಯುತ್ತದೆ ಮತ್ತು ನೀವು ಇನ್ನೊಂದು ಮಗುವನ್ನ ಮಾಡಿಕೊಳ್ಳುವ ಇಷ್ಟವಿಲ್ಲದಿದ್ದರೆ, ಭಯವಿರದೆ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಬಹುದು. ಕಾಂಡೋಮುಗಳ ಅಡ್ಡಪರಿಣಾಮಗಳ ಬಗ್ಗೆ ಹೇಳುವ ಮುನ್ನ ಕಾಂಡೋಮ್ಸ್ ಬಗೆಗಿನ ಕೆಲವು ವಿಷಯಗಳನ್ನ ಚರ್ಚಿಸೋಣ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎರಡು ರೀತಿಯ ಕಾಂಡೋಮುಗಳು ಲಭ್ಯವಿವೆ - ಒಂದು ಗಂಡಸರ ಕಾಂಡೋಮ್ ಮತ್ತು ಇನ್ನೊಂದು ಹೆಂಗಸರ ಕಾಂಡೋಮ್. ಗಂಡಸರ ಕಾಂಡೋಮ್ ಅನ್ನು ಸಂಭೋಗ ನಡೆಸುವಾಗ ಶಿಶ್ನದ ಮೇಲೆ ಧರಿಸಬೇಕು. ಇಲ್ಲಿ ನಿಮಗೆ ಬೇಕಿದ್ದರೆ ಕೃತಕ ಲ್ಯೂಬ್ರಿಕ್ಯಾಂಟ್ (ಕೀಲೆಣ್ಣೆ) ಬಳಸಬಹುದು, ಇಲ್ಲವೆಂದರೆ ಯೋನಿಯ ನೈಸರ್ಗಿಕ ದ್ರವ್ಯವೇ ಸಾಕಾಗುತ್ತದೆ. ಹೆಂಗಸರ ಕಾಂಡೋಮ್ ಅನ್ನು ಯೋನಿಯೊಳಗೆ ಇಟ್ಟುಕೊಳ್ಳಲಾಗುತ್ತದೆ. ಇವುಗಳನ್ನ ಇಟ್ಟುಕೊಂಡಾಗ ಹೆಚ್ಚುವರಿ ಕೃತಕ ಲ್ಯೂಬ್ರಿಕ್ಯಾಂಟ್ ಅನ್ನು ಬಳಸಬೇಕಾಗುತ್ತದೆ. ಹೆಂಗಸರ ಕಾಂಡೋಮುಗಳು ಗಂಡಸರ ಕಾಂಡೋಮುಗಳಷ್ಟು ಜನಪ್ರಿಯತೆ ಹೊಂದಿಲ್ಲದಿದ್ದರು, ಇವೆರೆಡರ ಕೆಲಸವು ಒಂದೇ.


೧. ಲ್ಯಾಟೆಕ್ಸ್ ಅಲರ್ಜಿ

ಲ್ಯಾಟೆಕ್ಸ್ ಕಾಂಡೋಮುಗಳನ್ನ ಬಳಸಿದ ನಂತರ ಕೆಲವರು ಲ್ಯಾಟೆಕ್ಸ್ ಅಲರ್ಜಿ ಬೆಳೆಸಿಕೊಳ್ಳುತ್ತಾರೆ. ಇದು ಬಹುಷಃ ರಬ್ಬರ್ ಪದಾರ್ಥದಲ್ಲಿರುವ ಅಧಿಕ ಪ್ರೋಟೀನ್ ಅಂಶದ ಅಲರ್ಜಿ ಉಂಟುಮಾಡುವ ಪ್ರತಿಕ್ರಿಯೆಯಿಂದ ಆಗಬಹುದು. ಲ್ಯಾಟೆಕ್ಸ್ ಅಲರ್ಜಿಯ ಲಕ್ಷಣಗಳು ಎಂದರೆ ಅವು - ಉಬ್ಬಸ, ಸೀನುವುದು, ಸೋರುವ ಮೂಗು ಮತ್ತು ತಲೆಸುತ್ತುವುದು. ಹೀಗಾಗಿ ನೀವು ಅಥವಾ ನಿಮ್ಮ ಸಂಗಾತಿಯಲ್ಲಿ ಯಾರಾದರೂ ಒಬ್ಬರಿಗಾದರು ಲ್ಯಾಟೆಕ್ಸ್ ಅಲರ್ಜಿ ಇದ್ದರೆ, ಲ್ಯಾಟೆಕ್ಸ್ ಕಾಂಡೋಮ್ ಬದಲು ಪ್ಲಾಸ್ಟಿಕ್/ಸಿಂಥೆಟಿಕ್ ಕಾಂಡೋಮ್ಸ್ ಅನ್ನು ಬಳಸಿ.


೨. ಗರ್ಭಧಾರಣೆಯ ಅಪಾಯ

ಕಾಂಡೋಮುಗಳು ಬೇಡದ ಗರ್ಭಧಾರಣೆಯಿಂದ ಸಂಪೂರ್ಣ ರಕ್ಷಣೆ ನೀಡುತ್ತೇವೆ ಎಂದು ಹೇಳಿಕೊಂಡರು, ಅವುಗಳು 98% ಅಷ್ಟು ಮಾತ್ರ ಪರಿಣಾಮಕಾರಿ. ಇದರರ್ಥ, ಸಂಭೋಗ ನಡೆಸುವಾಗ ಕಾಂಡೋಮ್ ಜಾರಿದರೆ ಅಥವಾ ಹರಿದರೆ, ಅದು ಬೇಡದ ಗರ್ಭಧಾರಣೆಯಲ್ಲಿ ಅಂತ್ಯವಾಗುತ್ತದೆ. ಸರಿಯಾಗಿ ಕಾಂಡೋಮ್ ಅನ್ನು ಬಳಸಿದರೆ 100 ರಲ್ಲಿ 2 ಮಹಿಳೆಯರು ಗರ್ಭಧರಿಸುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ಸರಿಯಾಗಿ ಬಳಸಲಿಲ್ಲ ಎಂದರೆ ಈ ಸಾಧ್ಯತೆಗಳು 100 ರಲ್ಲಿ 15 ಕ್ಕೆ ಏರುತ್ತವೆ.


೩. ಇತರೆ ಲೈಂಗಿಕವಾಗಿ ಹರಡುವ ಕಾಯಿಲೆಗಳು ತಾಗುವ ಸಾಧ್ಯತೆ

ಕಾಂಡೋಮುಗಳು ಗಂಡಸರ ಶಿಶ್ನವನ್ನ ಸಂಪೂರ್ಣವಾಗಿ ಮುಚ್ಚುವುದರಿಂದ, ಅತ್ಯಂತ ಅಪಾಯಕಾರಿಯಾದ ಲೈಂಗಿಕವಾಗಿ ಹರಡುವ ಕಾಯಿಲೆಗಳಾದ ಏಡ್ಸ್, ಕ್ಲ್ಯಾಮಿಡಿಯಾ, ಸಿಫಿಲಿಸ್, ಹೆಚ್.ಪಿ.ವಿ, ಗೊನೊರಿಯಾ ಇಂದ ರಕ್ಷಿಸುತ್ತವೆ. ಇಷ್ಟಲ್ಲದೆ ಇದು ಈಗಾಗಲೇ ಜನನಾಂಗದ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯಿಂದ ಆ ವ್ಯಕ್ತಿಯ ಸಂಗಾತಿಗೆ ಸೋಂಕು ಹರಡುವುದು ತಪ್ಪುತ್ತದೆ. ಆದರೆ ಹರ್ಪಿಸ್ ಎಲ್ಲೆಲ್ಲಿ ಉಂಟಾಗಿರುತ್ತದೋ ಆ ಜಾಗಗಳನ್ನೆಲ್ಲಾ ಕಾಂಡೋಮ್ ತಡೆಯಲು ಆಗುವುದಿಲ್ಲ. ಇದರೊಂದಿಗೆ ಚರ್ಮದ ಹೊರ ಪದರಗಳಲ್ಲಿ ಹರಡುವ ಸೋಂಕುಗಳಾದ ಸ್ಕ್ಯಾಬಿಸ್, ಮೊಲ್ಲುಸ್ಕ್ಯುಮ್ ಮತ್ತು ಇನ್ನಿತರೆಯಿಂದ ಕಾಂಡೋಮ್ ರಕ್ಷಣೆ ನೀಡುವುದಿಲ್ಲ.


೪. ಲೈಂಗಿಕ ಕ್ರಿಯೆಗೆ ಅಡಚಣೆ

ಕಾಂಡೋಮ್ ಬಳಸುವುದರಿಂದ ಲೈಂಗಿಕ ಕ್ರಿಯೆಯಲ್ಲಿನ ಸುಖ ಕಡಿಮೆ ಆಗುತ್ತದೆ ಎಂಬುದು ಬಹಳಷ್ಟು ಜನರ ದೂರಾಗಿದೆ. ಬಹುಷಃ ಇದಕ್ಕೆ ಕಾರಣ ಹೆಚ್ಚುವರಿ ದ್ರವ್ಯ/ಲ್ಯೂಬ್ರಿಕ್ಯಾಂಟ್ ಅಗತ್ಯತೆ ಉಂಟಾಗುವುದು ಅಥವಾ ಚರ್ಮ-ಚರ್ಮ ಸ್ಪರ್ಶದಿಂದ ಸಿಗುವ ಸುಖ ಇದರಿಂದ ಸಿಗದೇ ಇರುವುದು ಇರಬಹುದು.

ನಮ್ಮ ಲೇಖನವನ್ನ ಓದಿದ ಸೂಪರ್ ಅಮ್ಮ ಆದ ನಿಮಗೆ ಥ್ಯಾಂಕ್ಸ್ !
ಇದೇ ಖುಷಿಯಲ್ಲಿ ನೀವು ಅಮೆಜಾನ್ ಇಂದ ಏನೇ ಖರೀದಿಸಿದರು ನಾವು ನಿಮಗೆ ವಿಶೇಷ ಡಿಸ್ಕೌಂಟ್ ಕೊಡುತ್ತಿದ್ದೇವೆ, ಹಾಗಿದ್ದರೆ ಇನ್ನೇಕೆ ತಡ? ಇಲ್ಲಿ ಕ್ಲಿಕ್ ಮಾಡಿ, ಡಿಸ್ಕೌಂಟ್ ಪಡೆಯಿರಿ, ಖರೀದಿಸಿ !
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon