Link copied!
Sign in / Sign up
13
Shares

ಮನೆಯಲ್ಲಿ ಥಟ್ಟನೆ ಬಿಸಿಬಿಸಿ ಬಾದಾಮಿ ಹಲ್ವಾ ಸುಲಭವಾಗಿ ತಯಾರಿಸುವುದನ್ನ ಹೇಳಿಕೊಡುತ್ತೇವೆ ನೋಡಿ!

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ, ಅದರಲ್ಲೂ ಬಗೆಬಗೆಯ ಸಿಹಿ ತಿನಿಸು ಮಾಡುವುದರಿಂದ ಮನೆಯ ಎಲ್ಲಾ ಸದಸ್ಯರಿಗೆ ಇದು ಇಷ್ಟವಾಗುತ್ತದೆ. ಯಾವುದೇ ಹಬ್ಬ ಸಮಾರಂಭಗಳಲ್ಲಿ ಇದನ್ನು ನೀವು ಮಾಡಬಹುದು. ಬಾದಾಮಿಯಲ್ಲಿ ಪೌಷ್ಟಿಕಾಂಶಗಳು ಇದ್ದು, ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು. ಸಕ್ಕರೆಯನ್ನು ಬಳಸುವುದರಿಂದ ಮಧುಮೇಹ ರೋಗ ಇರುವವರು ಇದನ್ನು ಸೇವಿಸದೇ ಇರುವುದು ಉತ್ತಮ.


 
ಇದನ್ನು ತಯಾರಿಸಲು ನಿಮಗೆ ಬೇಕಾಗಿರುವುದು

ಬಾದಾಮಿ - 1 ಬಟ್ಟಲು

ಸಕ್ಕರೆ - 1/2 ಬಟ್ಟಲು

ನೀರು

ತುಪ್ಪ - 1/2 ಬಟ್ಟಲು

ಕೇಸರಿ 7-8 ಎಳೆಗಳು


 
ಮಾಡುವ ವಿಧಾನ
  1. ಒಂದು ಪಾತ್ರೆಗೆ 4 ಬಟ್ಟಲು ನೀರನ್ನು ಹಾಕಿ.
  2. ನೀರನ್ನು ಚೆನ್ನಾಗಿ ಕುದಿಯಲು ಬಿಡಿ.
  3. ಇದಕ್ಕೆ ಬಾದಾಮಿಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ ಬೇಯಲು ಬಿಡಿ.
  4. ದೊಡ್ಡ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ.
  5. ಬಾದಾಮಿ ಬೆಂದಿದೆಯೇ ಎಂದು ಪರೀಕ್ಷಿಸಿ. (ಒಂದು ಬಾದಾಮಿಯನ್ನು ತೆಗೆದು, ಅದನ್ನು ಒತ್ತಿ ನೋಡಿ. ಬಾದಾಮಿಯ ಸಿಪ್ಪೆ ಸುಲಭವಾಗಿ ನುಣುಚಿಕೊಳ್ಳುತ್ತದೆ ಎಂದರೆ ಬೆಂದಿದೆ ಎಂದು ಅರ್ಥ).
  6. ಇದನ್ನು ಆರಿಸಿ, ಬೇರೆ ಪಾತ್ರೆಗೆ ಹಾಕಿ ಆರಲು ಬಿಡಿ.
  7. ಇನ್ನೊಂದು ಬೌಲ್‍ನಲ್ಲಿ ಒಂದು ಕಪ್ ನೀರನ್ನು ಹಾಕಿ.
  8. ಬಾದಾಮಿಯನ್ನು ಸ್ವಲ್ಪ ಒತ್ತಿದರೆ ಸಿಪ್ಪೆಯು ಕಳಚಿಕೊಳ್ಳುತ್ತದೆ. ಹಾಗೆಯೇ ಸುಲಭವಾಗಿ ಎಲ್ಲಾ ಬಾದಾಮಿಯ ಸಿಪ್ಪೆ ತೆಗೆದುಕೊಳ್ಳಿ.
  9. ಸಿಪ್ಪೆ ತೆಗೆದ ಬಾದಾಮಿಯನ್ನು ಒಂದು ಬೌಲ್‍ಗೆ ವರ್ಗಾಯಿಸಿಕೊಳ್ಳಿ.
  10. ಎಲ್ಲಾ ಬಾದಾಮಿಯ ಸಿಪ್ಪೆ ತೆಗೆದ ನಂತರ ಎಲ್ಲಾ ಬಾದಾಮಿಯನ್ನು ಮಿಕ್ಸರ್ ಜಾರ್‍ಗೆ ವರ್ಗಾಯಿಸಿ.
  11. ಸ್ವಲ್ಪ ನೀರನ್ನು ಸೇರಿಸಿ, ಮೃದುವಾಗಿ ರುಬ್ಬಿಕೊಳ್ಳಿ.
  12. ಇನ್ನೊಂದು ಪಾತ್ರೆಯಲ್ಲಿ ಕಾಲು ಕಪ್ ನೀರನ್ನು ಬಿಸಿಮಾಡಿ.
  13. ಅದಕ್ಕೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ತಿರುವಿ ಮತ್ತು ಪಾಕ ಬರಲು ಬಿಡಿ(ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ).
  14. ಕೇಸರಿ ಎಳೆಯನ್ನು ಸೇರಿಸಿ.
  15. ಕೆಲವು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ, ನಂತರ ಸಣ್ಣ ಉರಿಯಲ್ಲಿ ಇಡಿ.
  16. ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.
  17. ಒಮ್ಮೆ ಕರಗಿದ ಮೇಲೆ, ರುಬ್ಬಿಕೊಂಡ ಬಾದಾಮಿ ಪೇಸ್ಟ್ ಅನ್ನು ಸೇರಿಸಿ.
  18. ಮಿಶ್ರಣವು ತುಪ್ಪದೊಂದಿಗೆ ಮಿಶ್ರಿಸಿ, ಹರಳಿನ ಸ್ಥಿರತೆ ಬರುವ ತನಕ 8-10 ನಿಮಿಷಗಳ ಕಾಲ ನಿರಂತರವಾಗಿ ತಿರುವುತ್ತಲೇ ಇರಿ.
  19. ಒಮ್ಮೆ ಸ್ಥಿರತೆಗೆ ಬಂದ ಮೇಲೆ ಸಕ್ಕರೆ ಪಾಕವನ್ನು ಸೇರಿಸಿ. ತುಪ್ಪವು ಬೇರ್ಪಡುವ ವರೆಗೆ ಚೆನ್ನಾಗಿ ಮಿಶ್ರಗೊಳಿಸಿ.
  20. ಉರಿಯನ್ನು ಆರಿಸಿ. ಹಲ್ವಾ ಅನ್ನು ಒಂದು ಬೌಲ್‍ಗೆ ವರ್ಗಾಯಿಸಿ.
  21. ಆರಿದ ನಂತರ ಹಲ್ವಾವನ್ನು ಸವಿಯಲು ನೀಡಿ. ಅಥವಾ ಬಿಸಿ ಬಿಸಿಯಲ್ಲಿ ಸವಿಯಲು ನೀಡಿ.
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon