Link copied!
Sign in / Sign up
12
Shares

ಬೇಬಿ ಪೌಡರ್ ಅನ್ನು ಈ 6 ವಿಶಿಷ್ಟ ಟ್ರಿಕ್ಸ್ ಇಂದ ಮನೆಯನ್ನ ಸ್ವಚ್ಛವಿಡಲು ಉಪಯೋಗಿಸಿ ಪ್ರಶಂಸೆ ಪಡೆಯಿರಿ

ನಮಗೆಲ್ಲ ತಿಳಿದಿರುವ ಹಾಗೆ, ಹೆಚ್ಚಿನ ತಾಯಂದಿರು ಮಗುವಿನ ಸ್ನಾನದ ನಂತರ ತಾಲ್ಕ೦ಮ್ ಪೌಡರ್(talcum powder) ಅನ್ನು, ತಾಜಾತನ ಹಾಗೂ ಸುಗಂಧಕ್ಕಾಗಿ  ಮಗುವಿನ ತ್ವಚೆಯ ಮೇಲೆ ಸವರುತ್ತಾರೆ. ಇಷ್ಟಲ್ಲದೆ, ಇದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ತ್ವಚೆಗು ಸಹ ಇದನ್ನು ಬಳಸಬಹುದು ಎಂದು ಯೋಚಿಸುತ್ತಿರುವಿರಲ್ಲವೇ? ಹೌದು, ಆದರೆ ಇದೆಲ್ಲದ್ದಕ್ಕಿ೦ತ ಹೆಚ್ಚಿನ, ದಿನನಿತ್ಯದ ಉಪಯೋಗಗಳಿವೆ. ಅದೇನೆಂದು ತಿಳಿಯೋಣ ಬನ್ನಿ.

 

೧.ಎಣ್ಣೆ/ಜಿಡ್ಡಿನ ಕಲೆಗಳನ್ನು ತೆಗೆಯುತ್ತದೆ

ನಮ್ಮ ಬಟ್ಟೆಗಳ ಮೇಲೆ ಒಂದು ಸಣ್ಣ ಕಲೆ ಬಿದ್ದರೆ ಸಾಕು, ಅದನ್ನು ತೆಗೆಯಲು ಎಷ್ಟು ಸಾಹಸ ಪಡುತ್ತೇವೆಯಲ್ಲವೇ?. ದುಬಾರಿ ಬೆಲೆಯ ಮಾರ್ಜಕಗಳನ್ನು ಬಳಸಿದರೂ, ಕಲೆಗಳು ಪೂರ್ತಿಯಾಗಿ ಹೋಗುವುದಿಲ್ಲ. ಇಲ್ಲಿದೆ ಇದಕ್ಕೊಂದು ಒಳ್ಳೆಯ ಉಪಾಯ. ನಿಮ್ಮ ಮಗುವಿನ ಪೌಡರ್ ಅನ್ನು ಕಲೆಯಾದ ಜಾಗದ ಮೇಲೆ ಹಾಕಿ, ಅದನ್ನು ಸಣ್ಣ ಹತ್ತಿಯ ಉಂಡೆಯಿಂದ, ಅದರ ಮೇಲೆ ಉಜ್ಜಿ. ಹೀಗೆ ೩-೪ ಬಾರಿ ಮಾಡಿ, ನಂತರ ಮಾಮೂಲಿ ಬಟ್ಟೆಗಳ ಜೊತೆಯಲ್ಲಿ ಹಾಕಿ ಒಗೆಯಿರಿ, ಅಲ್ಲಿಗೆ ನಿಮ್ಮ ಬಟ್ಟೆಯ ಕಲೆಗಳು ಮಾಯಾ. ಹೇಗಿದೆ ಈ ಜಾದು. ಪ್ರಯೋಗಿಸಿ ಹಾಗು ಅದರ ಉಪಯೋಗವನ್ನು ಪಡೆಯಿರಿ.

 

೨.ಪಾದರಕ್ಷೆಗಳ ದುರ್ವಾಸನೆಯನ್ನು ಹೋಗಲಾಡಿಸುತ್ತದೆ

ನಮಗೆಲ್ಲರಿಗು ಒಮ್ಮೆಯಾದರು ಜೀವನದಲ್ಲಿ ಈ ರೀತಿಯ ಅನುಭವವಾಗಿರುತ್ತದೆ. ಪದರಕ್ಷೆಗಳಿಂದ ಹೊರಬರುವ ವಾಸಿನೆ ಹೀಗಿರುತ್ತದೆಂದರೆ, ನಮ್ಮ ಅಕ್ಕ ಪಕ್ಕ ಕುಳಿತವರಿಗು, ಸಹ ಇದರ ಅನುಭವವಾಗುತ್ತದೆ. ಇದರಿಂದ ಇರುಸು ಮುರುಸಿನ ಪರಿಸ್ಥಿತಿಗೆ ಒಳಗಾಗುತ್ತೇವೆ. ಇದಕ್ಕೆ ಒಂದು ಸಣ್ಣ ಉಪಾಯವೇನೆಂದರೆ, ನೀವು ಪಾದರಕ್ಷೆಗಳ್ಳನ್ನು ದರಿಸುವ ಹಿಂದಿನ ದಿನ, ಅದರ ಒಳಭಾಗಕ್ಕೆ ಮಗುವಿನ ಪೌಡರ್ ಅನ್ನು ಉದುರಿಸಿ ಗಾಳಿಯಾಡಲು ಬಿಡಿ. ಮರುದಿನ ಪಾದರಕ್ಷೆಯನ್ನು ಕೊಡವಿ ಹಾಕಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ಪಾದರಕ್ಷೆಗಳ ಒಳಗಿರುವ ತೀವಾಂಶವನ್ನು ಪೌಡರ್ ಹೀರಿಕೊಂಡು, ದುರ್ವಾಸನೆಯನ್ನು ದೂರ ಮಾಡುತ್ತದೆ.

 

೩.ಚಾದರದ ತಾಜಾತನಕ್ಕೆ

ಮಡಿಯಾದ ಹಾಸಿಗೆ ಹಾಗೂ ಚಾದರದ ಮೇಲೆ ಮಲಗಿ, ತಮ್ಮ ದೈನಂದಿನ ಆಯಾಸವನ್ನು ಕಳೆಯಲು ಯಾರಿಗೆ ಇಷ್ಟವಿರುವುದ್ದಿಲ್ಲ ಹೇಳಿ? ಆದರೆ ಪ್ರತಿ ದಿನ ಬೆವರಿನಿಂದ ಕೂಡಿದ,  ಚಾದರವನ್ನು ಬದಲಾಯಿಸುವಷ್ಟು ತಾಳ್ಮೆ ಯಾರಿಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಮಗುವಿನ ಪೌಡರ್ ಅನ್ನು ಚಾದರದ ಮೇಲೆ ಉದುರಿಸಿದರೆ ಸಾಕು, ತಾಜಾತನದ ಅನುಭವವು, ಮುಂದೆ ಅಗಸನಿಗೆ ಬಟ್ಟೆಗಳ್ಳನ್ನು ಕೊಡುವವರೆಗೂ ಹಾಗೇ ಉಳಿದಿರುತ್ತದೆ.

 

೪.ಇರುವೆಗಳ ಶತ್ರು

ಸಿಹಿ ಪದಾರ್ಥಗಳು ಇದ್ದಲ್ಲಿ, ಇರುವೆಗಳ ಸಾಲು ಇರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಒಳ್ಳೆಯ ಉಪಾಯವೇನೆಂದರೆ, ಮಗುವಿನ ಪೌಡರ್ ಅನ್ನು ಕಿಟಕಿ ಸಂದಿ, ಗೋಡೆಯ ಬಿರುಕುಗಳ ಮಧ್ಯೆ, ಮುಂತಾದ ಜಾಗಗಳ್ಳಲ್ಲಿ  ಉದುರಿಸಿದರೆ,  ೨-೩ ದಿನಗಳ ನಂತರ ಇರುವೆಗಳ ಸಾಲು ಮಾಯವಾಗುತ್ತವೆ. ಹೀಗೆ ಈ ಪೌಡರನ್ನು ಬಳಸುವುದರಿಂದ , ಹಾನಿಕಾರಕ ರಾಸಾಯನಿಕ ದ್ರವ್ಯೌಷಧಿಗಳ ಸಿಂಪಡನೆಯಿಂದಾಗುವ ದುಷ್ಪರಿಣಾಮಗಳ್ಳನ್ನು ತಡೆಯಬಹುದು.

 

೫. ಒಣ ನವಿರುಕ(ಶ್ಯಾಂಪು):

ಕೆಲವೊಮ್ಮೆ ಕೂದಲಿಗೆ ಸ್ನಾನ ಮಾಡಲಾಗದಂತಹ, ಪರಿಸ್ಥಿತಿಗೆ ನಾವೆಲ್ಲರು ಸಿಲುಕಿರುತ್ತೇವೆ. ಅದೇ ಜಿಡ್ಡು, ಬೆವರಿನ ಕೂದಲೊಂದಿಗೆ ಹೊರಗೆ ಹೋಗಲು ಮುಜುಗರವೆನಿಸುವ ಸ್ಥಿತಿ ಎದುರಾದಾಗ, ನಿಮ್ಮ ಮಗುವಿನ ಪೌಡರ್ ಅನ್ನು ಶ್ಯಾಂಪು ರೀತಿಯಲ್ಲಿಯೂ ಸಹ ಬಳಸಬಹುದು. ಆದರೆ, ಅತೀ ಹೆಚ್ಚಿನ ಪ್ರಮಾಣದಲ್ಲಿ ಶ್ಯಾಂಪು ಆಗಿ ಬಳಸಿದ್ದಲ್ಲಿ, ನಿಮ್ಮ ಕೂದಲು ಬಿಳಿ ಕೂದಲಿನಂತೆ ಕಾಣಿಸುತ್ತದೆ. ನಿಮಗೆ ಕಪ್ಪು ಕೂದಲು ಇದ್ದಲ್ಲಿ, ಸ್ವಲ್ಪ ಪ್ರಮಾಣದ್ದಲ್ಲಿ, ಕೋಕೋ ಪುಡಿ ಹಾಗೂ ಮಗುವಿನ ಪೌಡರ್ರನ್ನು ಮಿಶ್ರಣ ಮಾಡಿ ಬಳಸಿದರೆ, ಇದು ಒಣ ಶ್ಯಾಂಪುವಿನ ರೀತಿಯಲ್ಲಿ ಕೆಲಸ ಮಾಡುತ್ತದೆ.

 

೬. ಉದ್ದವಾದ ಕಣ್ಣು ರೆಪ್ಪೆಗಳಿಗೆ

ಸಿನಿಮಾ ನಟಿಯರಂತೆ ಉದ್ದವಾದ ಕಣ್ಣು ರೆಪ್ಪೆಗಳ್ಳನ್ನು ಹೊಂದುವ ಆಸೆ ಯಾರಿಗಿರುವುದಿಲ್ಲ? ಇಲ್ಲಿದೆ ಜಾದು, ಅಲ್ಪ ಪ್ರಮಾಣದ್ದಲ್ಲಿ ಮಗುವಿನ ಪೌಡರ್ ಅನ್ನು ಕಣ್ಣಿನ ರೆಪ್ಪೆಗಳ ಮೇಲೆ ಉದುರಿಸಿ, ಅದರ ಮೇಲೆ ಕಣ್ಕಪ್ಪು/ಕಾಡಿಗೆಯನ್ನು ಹಚ್ಚಿ. ಹೀಗೆ ಮಾಡುವುದರಿಂದ ರೆಪ್ಪೆಗಳ ಗಾತ್ರವು ಹೆಚ್ಚದಂತೆ ಹಾಗೂ ನೀಳವಾದಂತೆ ಕಾಣಿಸುತ್ತದೆ. ಸೌಂದರ್ಯ ವರ್ಧಕಗಳ್ಳನ್ನು ಮುಖಕ್ಕೆ ಹಚ್ಚಿದ ನಂತರ ಹೆಚ್ಚಿನ ಕಾಲ ಉಳಿಯಬೇಕಾದರೆ, ಕೊನೆಯಲ್ಲಿ ಈ ಪೌಡರ್ ಅನ್ನು ಮುಖದಮೇಲೆ ತೆಳುವಾದ ಪದರದಲ್ಲಿ ಲೇಪಿಸಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon