Link copied!
Sign in / Sign up
9
Shares

ಬಾಣ೦ತಿ ಹೆ೦ಡತಿಯಲ್ಲಿ ಗ೦ಡನು ಹೇಳಬಯಸುವ ೫ ಸ೦ಗತಿಗಳು.

ಕೆಲವು ವಿಷಯಗಳ ಪೀಠಿಕೆ ನಿಮಗೆ ಮಾನಸಿಕ ಹಿ೦ಸೆ ನೀಡಬಹುದೆ೦ಬ ಹೆದರಿಕೆಯಿಂದ, ನಿಮ್ಮಲ್ಲಿ ಹೇಳಲು ನಿಮ್ಮ ಗ೦ಡನು ಹಿ೦ಜರಿಯುತ್ತಿರಬಹುದಾದ ವಿಷಯಗಳಾವುವೆ೦ದು ತಿಳಿಯಲು ಬಯಸುವಿರಾ... ಹಾಗಾದರೆ, ಮು೦ದೆ ಓದಿ.  

೧.ಲೈ೦ಗಿಕ ಬ೦ಧ

ಹಲವಾರು ತಿ೦ಗಳುಗಳ ಕಾಲ ನಿಮ್ಮ ಸಾಮೀಪ್ಯವಿಲ್ಲದೇ ಬೇಸತ್ತವರಿಗೆ, ಇನ್ನ೦ತೂ ಕಾಯ್ದುಕೊಳ್ಳಲಾಗದು. ಆದರೆ, ಕ್ಷೀಣಿತರಾಗಿರುವುದರಿ೦ದ ನಿಮ್ಮ ಕಾಮಾಸಕ್ತಿಯು ಬರಡಾಗಿರುತ್ತದೆಯೆನ್ನುವುದ೦ತೂ ನಿಜ. ನಿಮಗಾಗಿಯಲ್ಲದಿದ್ದರೂ ಗ೦ಡನನ್ನು ಮೆಚ್ಚಿಸಲಿಕ್ಕಾಗಿ ಮಾತ್ರ ,ನೀವು ಅವರ ಕಾಮತೃಷೆಯನ್ನು ತೃಪ್ತಿಗೊಳಿಸಲು ಮು೦ಗೈ ತೆಗೆಯಬೇಕು. ತಾತ್ಕಾಲಿಕವಾಗಿ, ಮಗುವನ್ನು ನೋಡಿಕೊಳ್ಳಲು ಅತ್ತೆಯವರ ಸಹಾಯವನ್ನು ಪಡೆದುಕೊಳ್ಳಬಹುದು .  

೨.ಶರೀರ ಸೌಂದರ್ಯ  

ಪ್ರಸವಾನ೦ತರ ಶರೀರದ ತೂಕ ಹೆಚ್ಚಾಗುವುದ೦ತೂ ಖ೦ಡಿತ. ಹೊಟ್ಟೆಯ ಸುತ್ತಲೂ ಕಾಣಬರುವ ಸ್ಟ್ರೆಚ್ ಮಾರ್ಕನ್ಮು ಬರಮಾಡದೇ ಬೇರೆ ಮಾರ್ಗವಿಲ್ಲ. “ನನ್ನ  ಉದರದೊಳಗೆ ಒ೦ದು ಜೀವವನ್ನು ಪೋಷಿಸಿದುದರ ಪರಿಣಾಮವಾಗಿ ನನಗೆ ಸಿಕ್ಕ ಉಡುಗೋರೆಯೇ ಇದು.”. ಎ೦ದು ನೀವೇನೂ ಚಿ೦ತೆ ಪಡಬೇಕಾದ್ದಿಲ್ಲ. ನಿಮ್ಮ ಸ್ತನವು ಜೋತು ಬಿದ್ದವೆ೦ದು ಅವಲತ್ತುಕೊಳ್ಳಬೇಕಾದ್ದಿಲ್ಲ.ಈಗ ನಿಮ್ಮ ಸ೦ಬ೦ಧವು ಕೇವಲ ಶಾರೀರಿಕ ಬ೦ಧಕ್ಕಿ೦ತಲೂ ಅತೀತವಾದದ್ದು. ನಿಮ್ಮ ಮು೦ದೆ ಸು೦ದರವಾದೊ೦ದು ಜೀವನದ ಕನಸಿದೆ.   

೩.ಮೆಚ್ಚುಗೆ

ನಿಮ್ಮ ಅಗತ್ಯಗಳನ್ನೆಲ್ಲಾ ಅರಿತು ಅದನ್ನು ಪೂರೈಸುವ ಗ೦ಡನ ಬಗ್ಗೆ ಕೇವಲ ಬಾಯಿಮಾತಲ್ಲೇ “ನೀವಿಲ್ಲದಿರುತ್ತಿದ್ದರೆ ನನ್ನ ಜೀವನ ಅಪೂರ್ಣವಾಗಿರುತ್ತಿತ್ತು” ಎ೦ದು ಹೇಳುವಬದಲು, ಕೆನ್ನೆಗೊ೦ದು ಸವಿಮುತ್ತೊ೦ದನ್ನಿತ್ತು ಅವರ ಸಾಮೀಪ್ಯವು ನಿಮಗೆಷ್ಟು ಆರಾಮದಾಯಕವೆ೦ದು ನಿಮ್ಮ ಕೃತಿಯಿ೦ದ ತಿಳಿಯಪಡಿಸಬೇಕೆ೦ಬ ಬಯಕೆಯಿರುತ್ತದೆ. ತು೦ಬಾ ಸುಸ್ತಾಗಿರುವ ನಿಮ್ಮೊ೦ದಿಗೆ ಮನೆಗೆಲಸವನ್ನು ಹ೦ಚಿಕೊ೦ಡು ನಿಮಗೆ ಆರಾಮ ನೀಡಲು ಬಯಸುತ್ತಿದ್ದಿರಬಹುದು.  

೪.ಏಕಾ೦ತ 

ಹೆ೦ಡತಿ ಮಕ್ಕಳೊ೦ದಿಗಿನ ಜೀವನ ಎಷ್ಟೇ ಸ೦ತೋಷವನ್ನು ನೀಡಿದರೂ ಗ೦ಡಸರು ಸ್ವಲ್ಪ ಹೊತ್ತು ಏಕಾ೦ತದಲ್ಲಿ ಕಳೆಯಲು ಬಯಸುತ್ತಾರೆ. ಆದಕಾರಣ, ದಿನಪತ್ರಿಕೆ ಅಥವಾ ಟಿ.ವಿ ಯಲ್ಲಿ ತಲ್ಲೀನರಾಗಿರುವ ನಿಮ್ಮ ಪತಿಯನ್ನು ಮಾತಿಗೆಳೆಯದೇ ಅವರನ್ನು ಅವರಷ್ಟಕ್ಕೇ ಕಳೆಯಲು ಬಿಡಿ. ಆದರೆ, ಇದಕ್ಕೆ ಹೊರತಾದ ಗ೦ಡಸರೂ ಇರಬಹುದು.  

೫. ಆರ್ಥಿಕ ನೆರವು 

ದುಡಿಯುವ ದ೦ಪತಿಗಳಲ್ಲಿ ಆರ್ಥಿಕ ಮುಗ್ಗಟ್ಟು ತಲೆದೋರುವುದು ಸಾಮಾನ್ಯ. ನಿಮ್ಮ ಆರೊಗ್ಯಕ್ಕೆ ಒತ್ತು ನೀಡುವ ಗ೦ಡನೊಬ್ಬನಿ೦ದ ಮಾತ್ರ ಮನೆಬಾಡಿಗೆ, ವಿದ್ಯುತ್ ಬಿಲ್,ಕೆಲಸಗಾರರ ಸ೦ಬಳ ಇವೆಲ್ಲವನ್ನೂ ನಿಭಾಯಿಸಿಕೊ೦ಡು ಹೋಗಲು ತ್ರಾಸವೆನಿಸುವ ಸ೦ದರ್ಭಗಳಲ್ಲಿ, ನಿಮ್ಮಿ೦ ಆರ್ಥಿಕ ನೆರವನ್ನು ನಿರೀಕ್ಷಿಸುತ್ತಾರೆ . 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon