Link copied!
Sign in / Sign up
27
Shares

ನೀವು ಸುಸ್ತಾಗಿದ್ದೀರಿ ಎಂದರೆ, ಈ 5 ಚಾಣಾಕ್ಷ ದಾರಿಗಳಿಂದ ಮಗುವನ್ನು ಬೇಗನೆ ಮಲಗಿಸಬಹುದು!

ಎಲ್ಲಾ ತಾಯಂದಿರು ಹಾಗು ತಾಯಿ ಆಗುವವರು ತಮ್ಮ ತಾಯ್ತನದ ಬಗ್ಗೆ ಎಷ್ಟು ಉತ್ಸಾಹಿಗಳಾಗಿದ್ದರು, ಒಂದು ಶಿಶುವಿನ ಕಾಳಜಿವಹಿಸುವುದು ತುಂಬಾನೇ ಆಯಾಸದಾಯಕ. ನೀವು ಹಲವು ಘಂಟೆಗಳ ಕಾಲ ನಿಮ್ಮ ಮಗುವನ್ನು ನೋಡಿಕೊಳ್ಳುತ್ತಲೇ ಇರಬೇಕು, ಇದು ನಿಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ನಡುರಾತ್ರಿಯಲ್ಲಿ ಎಚ್ಚರಗೊಂಡು ನಿಮ್ಮ ಮಗುವಿನ ಬೇಡಿಕೆಗಳನ್ನು ಈಡೇರಿಸುವುದು ನಿಮ್ಮ ಇಡೀ ರಾತ್ರಿಯನ್ನು ಹಾಗು ಮಾರನೆ ದಿನವನ್ನೂ ಹಾಳು ಮಾಡುತ್ತದೆ.

ಇವುಗಳನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು, ನಿಮ್ಮ ತಾಯ್ತನದ ನಿತ್ಯಕ್ರಮಗಳ ನಡುವೆಯೇ ಹೇಗೆ ನಿಮ್ಮ ನಿದ್ದೆಗೆ ಸ್ವಲ್ಪ ಸಮಯ ಕದಿಯಬಹುದು ಎಂಬುದನ್ನು ಹೇಳಿಕೊಡಲು ಕೆಲವೊಂದು ಅಂಶಗಳನ್ನ ಕಲೆಹಾಕಿದ್ದೇವೆ. ಇದರಿಂದ ನೀವು ದಿನವಿಡೀ ಆಯಾಸದಿಂದ ಕಾಲ ಕಳೆಯುವುದನ್ನು ತಪ್ಪಿಸಬಹುದು.

೧. ಜೊತೆಯಲ್ಲಿ ಮಲಗುವುದು

ಒಂದು ಉಪಾಯ ಏನೆಂದರೆ ನಿಮ್ಮ ಮಗುವನ್ನು ನಿಮ್ಮ ರೂಮಿನಲ್ಲೇ ಮಲಗಿಸಿಕೊಳ್ಳುವುದು. ನಿಮ್ಮ ಮಗುವಿನ ತೊಟ್ಟಿಲನ್ನು ನಿಮ್ಮ ಕೋಣೆಯಲ್ಲಿಯೇ ಇರಿಸಿಕೊಳ್ಳಿ. ಕೆಲವು ಮಕ್ಕಳು ತಮ್ಮ ಅಮ್ಮ ಅಥವ ಪೋಷಕರಿಬ್ಬರು ಅಕ್ಕಪಕ್ಕದಲ್ಲಿ ಇದ್ದರೆ ಮಾತ್ರ ನಿದ್ರೆಗೆ ಜಾರುವರು. ಈ ರೀತಿಯಾಗಿ ಮಾಡಿದ್ದಲ್ಲಿ, ನಿಮ್ಮ ಮಗುವು ರಾತ್ರಿ ಅಳಲು ಶುರು ಮಾಡಿದಾಗ, ನೀವು ನಿಮ್ಮ ಕೊನೆಯಿಂದ ಎದ್ದು ಹೋಗುವ ಪ್ರಮೇಯ ಇರುವುದಿಲ್ಲ. ನೀವು ಅವರನ್ನು ಹಾಗೆಯೇ ಸಮಾಧಾನಗೊಳಿಸಿ ಕೂಡಲೇ ನಿದ್ರೆಗೆ ಜಾರಬಹುದು.

೨. ನಿದ್ದೆಯ ಸಮಯ ನಿಗದಿಪಡಿಸಿ

ನಿಮ್ಮ ಮಕ್ಕಳು ನಿಯತವಾದ ನಿದ್ರಾವೇಳಾಪಟ್ಟಿ ಪಾಲಿಸುವಂತೆ ನೋಡಿಕೊಳ್ಳಿ. ಇದನ್ನು ನೀವು ನಿಮ್ಮ ಮಗುವನ್ನು ದಿನದ ನಿಗದಿತ ಸಮಯಕ್ಕೆ ಮಲಗಿಸಿ ಹಾಗು ನಿಗದಿತ ಸಮಯಕ್ಕೆ ಎಚ್ಚರಗೊಳಿಸಿ ಅಭ್ಯಾಸ ಮಾಡಿಸಬಹುದು. ನಿಮ್ಮ ಮಗು ಮಲಗಿದ ವೇಳೆ ನೀವು ಕೂಡ ಮಲಗುವಂತೆ ನೋಡಿಕೊಳ್ಳಿ. ಈ ರೀತಿ ನಿಮಗೆ ಬೇಕಾದ ನಿದ್ದೆಯೂ ನಿಮಗೆ ಲಭ್ಯವಾಗುತ್ತದೆ.

೩. ರಾತ್ರಿ ಸಮಯದ ವಾಡಿಕೆ

ಇನ್ನೊಂದು ಉಪಾಯವೆಂದರೆ ರಾತ್ರಿ ಸಮಯಕ್ಕೆಂದು ಯಾವುದಾದರು ವಾಡಿಕೆಯನ್ನು ಪಾಲಿಸುವುದು ಹಾಗು ಇದರಿಂದ ನಿಮ್ಮ ಮಗುವಿಗೆ ಇದು ಮಲಗುವ ಸಮಯ ಎಂದು ಸೂಚನೆ ನೀಡುವುದು. ಈ ವಾಡಿಕೆಯು ಊಟ ಆಗಲಿ, ಮೃದು ಸಂಗೀತವಾಗಲಿ ಅಥವ ಸಣ್ಣಕಥೆಗಳು ಹೇಳುವುದನ್ನ ಒಳಗೊಂಡಿರಬಹುದು. ನೀವು ಪ್ರತಿದಿನ ಪಾಲಿಸಬಹುದಾದಂತ ವಾಡಿಕೆಗಳನ್ನು ರೂಪಿಸಿಕೊಳ್ಳಿ. ಆ ವಾದಿಕೆಯು ಚಿಕ್ಕ ಅವಧಿಯದ್ದಾಗಿರಲಿ ಆದರೆ ನಿಯತವಾಗಿ ಪಾಲಿಸುವುದಾಗಲಿ. ಈ ರೀತಿ ಪ್ರತಿದಿನಿ ಆ ಕಾರ್ಯ ಮಾಡಿದೊನೆ ನಿಮ್ಮ ಮಗುವಿಗೆ ಇದು ಮಲಗಲು ಸಮಯ ಎಂದು ತಿಳಿಯಬೇಕು. ಕಾಲಕ್ರಮೇಣ ನಿಮ್ಮ ಮಗುವು ಆ ಸಮಯದಲ್ಲಿ ತಾನಾಗಿಯೇ ನಿದ್ರೆಗೆ ಜಾರುತ್ತದೆ.

೪. ಸ್ವಯಂ ಸುಧಾರಣೆ

ನಿಮ್ಮ ಮಗು ಬೆಳೆಯುತ್ತಾ ಹೋದ ಹಾಗೆ, ನೀವು ಅವರು ತಾವಾಗಿಯೇ ಮಲಗುವಂತೆ ತಯಾರು ಮಾಡಬಹುದು. ಅವರು ಇದಕ್ಕೆ ಹೊಂದಿಕೊಂಡ ನಂತರ ಅವರು ಎಚ್ಚರವಿದ್ದಾಗಲೇ ನೀವು ಅವರನ್ನ ತೊಟ್ಟಿಲಲ್ಲಿ ಮಲಗಿಸಬಹುದು, ಆಗ ಅವರು ತಾವಾಗಿಯೇ ಸ್ವಲ್ಪ ಹೊತ್ತಿನ ನಂತರ ನಿದ್ರೆಗೆ ಜಾರುವರು. ಅದು ಎಷ್ಟೇ ಕಷ್ಟವಾದರೂ, ಅವರನ್ನ ಕೈಗೆತ್ತುಕೊಳ್ಳಬೇಡಿ, ಅವರು ಅತ್ತರೂ ಸಹಾ. ೩ ನಿಮಿಷಗಳ ನಂತರ ಅವರ ತೊಟ್ಟಿಲನ್ನು ತೂಗಿ ಸಮಾಧಾನಪಡಿಸಿ. ಆಗ ಅವರು ಮತ್ತೆ ನಿದ್ರೆಗೆ ಜಾರುವರು. ಅವರು ಮತ್ತೊಮ್ಮೆ ಅಳಲು ಶುರು ಮಾಡಿದರೆ, ಪುನಃ 3 ನಿಮಿಷಗಳವರೆಗೆ ಕಾದು ನಂತರ ಅವರನ್ನ ಸಮಾಧಾನಗೊಳಿಸಿ. ಮಗುವು ಮಲಗುವವರೆಗೂ ಇದನ್ನು ಮುಂದವರೆಸಿರಿ. ಇದನ್ನು ಒಂದು ವಾರದವರೆಗೂ ಮಾಡುತ್ತಲೇ ಹೋಗಿ ಹಾಗು ಜೊತೆಯಲ್ಲಿ ನೀವು ಸಮಾಧಾನ ಮಾಡಲು ಕಾಯುತ್ತಿದ್ದ ಸಮಯವನ್ನು ೩ ರಿಂದ ೬,೮,೧೦,೧೫ ನಿಮಿಷಗಳಿಗೆ ಏರಿಸುತ್ತಾ ಹೋಗಿ.  

೫. ಮಲಗುವ ವಾತಾವರಣ

ನಮಗೆಲ್ಲಾ ತಿಳಿದಿರುವಂತೆ ಪ್ರಕಾಶಮಾನವಾದ ಕೋಣೆಗಿಂತ ಕಟ್ಟಲು ತುಂಬಿದ ಕೋಣೆಯಲ್ಲಿ ನಿದ್ರೆಗೆ ಜಾರುವುದು ಸುಲಭ. ಇದಕ್ಕೆ ಕಾರಣ ಕತ್ತಲಲ್ಲಿ ನಮ್ಮ ಮೆದುಳು ಮೆಲಟೋನಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಒಂದು ನಿದ್ರೆ ತರಿಸುವಂತಹ ಹಾರ್ಮೋನ್. ನೀವು ಎಚ್ಚರಗೊಂಡು ಕಣ್ಣು ಬಿಟ್ಟೊಡನೆ ಬೆಳಕು ನಿಮ್ಮ ಕಣ್ಣುಗಳ ಮೇಲೆ ಬೀಳುತ್ತದೆ. ಆಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ, ಇದು ನಿಮ್ಮನ್ನು ಎಚ್ಚರಗೊಳಿಸುತ್ತದೆ. ಈ ಕಾರಣಕ್ಕಾಗಿ ನಿಮ್ಮ ಮಗುವನ್ನು ಮಲಗಿಸುವಾಗ ಕೋಣೆಯನ್ನು ಎಷ್ಟು ಸಾಧ್ಯವೋ ಅಷ್ಟು ಕತ್ತಲಿನಿಂದ ಕೂಡಿರುವಂತೆ ನೋಡಿಕೊಳ್ಳಿ.

ಈ ಉಪಾಯದೊಂದಿಗೆ ಮೇಲಿನ ಎಲ್ಲಾ ಉಪಾಯಗಳನ್ನು ನೀವು ಅಳವಡಿಸಿಕೊಂಡಲ್ಲಿ, ನಿಮ್ಮ ಮಗುವನ್ನು ಬೇಗ ಮಲಗಿಸುವ ಕಾರ್ಯದಲ್ಲಿ ಸಫಲರಾಗುತ್ತೀರ. ಇದರಿಂದ ನಿಮಗೆ ಸುಧಾರಿಸಿಕೊಳ್ಳಲು ಹೆಚ್ಚಿನ ಸಮಯ ಸಿಗುತ್ತದೆ ಹಾಗು ನಿಮ್ಮ ಮಗುವಿಗೆ ನಿಯತವಾದ ನಿದ್ರಾಸಮಯ ನಿಗದಿಪಡಿಸಿದಂತೆಯೂ ಆಗಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon