Link copied!
Sign in / Sign up
1
Shares

ಅವಿಭಕ್ತ ಕುಟುಂಬದಲ್ಲಿ ಬೆಳೆಯುವುದರಿಂದ ನಿಮ್ಮ ಮಗುವಿಗೆ ಲಭಿಸುವ ೭ ಅಪೂರ್ವ ರತ್ನಗಳು

ವಿಭಕ್ತ ಕುಟುಂಬಗಳು ಹೆಚ್ಚುತ್ತಿದ್ದರು, ಇನ್ನೂ ಕೂಡ ಬಹಳಷ್ಟು ಕುಟುಂಬಗಳು ಒಂದೇ ಸೂರಿನಡಿ ಬದುಕು ಹಂಚಿಕೊಳ್ಳಲು ಇಚ್ಚಿಸುತ್ತಾರೆ. ಅವಿಭಕ್ತ ಕುಟುಂಬಗಳಲ್ಲಿ ಬಾಳುವುದು ಎಂದರೆ, ಅದಕ್ಕೆ ಆದ ಕೆಲವು ಉಪಯೋಗಗಳು ಹಾಗು ಅನುಪಯೋಗಗಳು ಇದ್ದೆ ಇರುತ್ತವೆ. ಒಂದು ದೊಡ್ಡ ಕುಟುಂಬವನ್ನು ಸ್ವಂತ ಮಾಡಿಕೊಳ್ಳುವುದು ಮಕ್ಕಳಿಗೆ ಲಭಿಸುವ ತುಂಬಾ ದೊಡ್ಡ ಶಕ್ತಿ. ಯಾವಾಗ ಬೇಕಾದರೂ, ಏನು ಬೇಕಾದರೂ ಕೇಳಲಿಕ್ಕೆ, ಜೊತೆ ನಿಲ್ಲಲಿಕ್ಕೆ ಯಾರಾದರು ಇದ್ದೇ ಇರುತ್ತಾರೆ!

ಒಂದು ಅವಿಭಕ್ತ ಕುಟುಂಬದಲ್ಲಿ ಬೆಳೆಯುವುದರಿಂದ ನಿಮ್ಮ ಮಗುವಿಗೆ ಆಗುವ ೫ ಉಪಯೋಗಗಳು ಇಲ್ಲಿವೆ :

೧. ಮೌಲ್ಯಗಳು

ವಯಸ್ಸು, ಅನುಭವ ಹೊಂದಿರುವ ಹಿರಿಯರೊಡನೆ ಮಕ್ಕಳು ಬೆಳೆಯುವುದರಿಂದ, ತನ್ನ ಅಜ್ಜಿ-ತಾತ, ದೊಡ್ಡಪ್ಪ-ದೊಡ್ಡಮ್ಮ ರಿಂದ ಮೌಲ್ಯಗಳನ್ನು ಕಲಿತುಕೊಳ್ಳುತ್ತದೆ. ಇದು ಮುಂದೆ ಅವರ ನೈತಿಕ ನಡತೆ ಹಾಗು ಸಮಾಜಮುಖಿ ಮನಸ್ಥಿತಿ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಅವಿಭಕ್ತ ಕುಟುಂಬದಲ್ಲಿ ಸಿಗಲಿರುವ ಬೆಲೆಕಟ್ಟಲಾಗದ ಅಮೂಲ್ಯ ಅಂಶ.

೨. ಸದಾಕಾಲ ಕಾಳಜಿ

ನೀವು ಕೆಲಸಕ್ಕೆ ಹೋಗುತ್ತಿರುವ ಮಹಿಳೆ ಆದರೆ, ಕೆಲಸಕ್ಕೆ ಹೋಗುವಾಗ ನಿಮ್ಮ ಮಗುವನ್ನು ಪ್ಲೇ-ಹೋಂ ಅಥವಾ ಬೇರೆಡೆ ಬಿಟ್ಟು ಹೋಗುವುದರ ಬದಲು ಮಗುವನ್ನು ಕುಟುಂಬದೊಂದಿಗೆ ಬಿಟ್ಟು ಹೋದರೆ ನಿಮ್ಮ ಮಗುವಿನ ಹಾರೈಕೆ ಚೆನ್ನಾಗಿ ಆಗುತ್ತದೆ. ಇದರಿಂದ ನಿಮ್ಮ ಮಗುವಿನ ಮೇಲೆ ಸದಾ ಯಾರಾದರು ಗಮನ ನೀಡುತ್ತಿರುತ್ತಾರೆ ಹಾಗು ಅದರ ಬೇಕು ಬೇಡಗಳನ್ನ ನೋಡಿಕೊಳ್ಳುತ್ತಾರೆ. ಇದು ಮಗುವಿನಲ್ಲಿ ಸುರಕ್ಷಿತಾ ಮನೋಭಾವ ಬೆಳೆಸುತ್ತದೆ ಹಾಗು ತಾನು ನಿರ್ಲಕ್ಷಕ್ಕೆ ಒಳಗಾಗಿಲ್ಲವೆಂದು ತಿಳಿಸುತ್ತದೆ.

೩. ಶಿಸ್ತು

ವಿಭಕ್ತ ಕುಟುಂಬಗಳಿಂದ ಬಂದ ಮಕ್ಕಳಿಗಿಂತ, ಅವಿಭಕ್ತ ಕುಟುಂಬಗಳಿಂದ ಬಂದ ಮಕ್ಕಳು ಸಹಜವಾಗಿ ಹೆಚ್ಚು ಶಿಸ್ತು ಉಳ್ಳವರಾಗಿರುತ್ತಾರೆ. ಇದಕ್ಕೆ ಕಾರಣ ಏನು ಅಂದರೆ, ಮನೆಯಲ್ಲೇ ಅವರಿಗೆ ಮಾದರಿ ಆಗುವಂತ ಹಲವಾರು ವ್ಯಕ್ತಿಗಳು ಅವರಿಗೆ ದಿನ ಕಾಣಲು ಸಿಗುತ್ತಾರೆ. ಇದರಿಂದ ಮಗುವಿಗೆ ಶಿಸ್ತು ಹೇಳಿಕೊಡುವುದು ತಾಯಿಗೆ ಸುಲಭವಾಗುತ್ತದೆ.

೪. ಹೆಚ್ಚು ಪರಸ್ಪರ ವಿನಿಮಯಗಳು

ಅವಿಭಕ್ತ ಕುಟುಂಬಗಳಲ್ಲಿ ಬೆಳೆದ ಮಕ್ಕಳು ವಿಭಕ್ತ ಕುಟುಂಬಗಳಲ್ಲಿ ಬೆಳೆದ ಮಕ್ಕಳಿಗಿಂತ ವಿಷಯ ವಿನಿಮಯ ಮಾಡುವುದರಲ್ಲಾಗಲಿ ಅಥವ ಮಾತನಾಡುವುದರಲ್ಲಿ ಸಹಜವಾಗಿ ಮುಂದಿರುತ್ತಾರೆ. ಇದಕ್ಕೆ ಕಾರಣ ಏನು ಅಂದರೆ ಅವರು ತಮ್ಮ ಕುಟುಂಬದಲ್ಲಿನ ಇತರೆ ಸದಸ್ಯರೊಂದಿಗೆ ಮಾತಾಡಲು, ಚರ್ಚೆ ಮಾಡಲು ಕಲಿತಿರುತ್ತಾರೆ, ಇದರಿಂದ ಅವರಿಗೆ ಜನರ ಜೊತೆ ಬೆರೆಯಲು ಹೆಚ್ಚು ಕಷ್ಟವಾಗುವುದಿಲ್ಲ.

೫. ಏಕತೆ ಮನೋಭಾವ

ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುವದರಿಂದ ತುಂಬಾನೇ ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಮೈಗೂಡಿಸಿಕೊಳ್ಳುವ ಒಂದು ವಿಷಯ ಅಂದರೆ ಅದು “ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದನ್ನು. ಇವರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವುದರಲ್ಲಿ ನಂಬುತ್ತಾರೆ, ಇದರಿಂದ ಮುಂದೆ ಅವರ ಜೀವನದಲ್ಲೂ ಅವರು ಇತರರೊಂದಿಗೆ ಜೊತೆಗೂಡಿ ತಂಡವಾಗಿ ಕೆಲಸ ಮಾಡಲು ಯಾವುದೇ ಕಷ್ಟ ಅನುಭವಿಸುದಿಲ್ಲ.

೬. ಹಲವು ಸೋದರ ಸೋದರಿಯರು

ಅವಿಭಕ್ತ ಕುಟುಂಬದಲ್ಲಿ ಬೆಳೆಯುವುದು ಅಂದರೆ ನಿಮ್ಮ ಚಿಕ್ಕಪ್ಪನ ಮಕ್ಕಳು ಹಾಗು ದೊಡ್ಡಪ್ಪನ ಮಕ್ಕಳೊಂದಿಗೆ ಬೆಳೆಯುವುದು. ಹೀಗಾಗಿ ಇಲ್ಲಿ ಬೇಜಾರಿನ ಕ್ಷಣಗಳೇ ಇಲ್ಲ ! ಎಲ್ಲಾ ಮಕ್ಕಳಿಗೂ ತಮ್ಮ ಚಿಕ್ಕಪ್ಪ ದೊಡ್ಡಪ್ಪ ಮಕ್ಕಳೊಂದಿಗೆ ಒಂದು ವಿಶೇಷ ಬಂಧವಿರುತ್ತದೆ. ಅದರಲ್ಲೂ ಮುಖ್ಯವಾಗಿ ಹರೆಯದಲ್ಲಿ. ಸದಾಕಾಲ ಹರಟೆ ಹೊಡೆದುಕೊಂಡು, ದಿನವೆಲ್ಲಾ ಒಂದೇ ಸೂರಿನಡಿ ಮಜವಾಗಿ ಸಮಯ ಕಳೆಯಬಹುದು.

೭. ಜೀವನ ಪಾಠಗಳು

ಅಜ್ಜಿ ತಾತಂದಿರು ಒಳ್ಳೆ ಮಾತುಗಾರರು ಅಷ್ಟೇ ಅಲ್ಲದೆ ಒಳ್ಳೆ ಕಥೆಗಳನ್ನ ಹೇಳುವವರು! ಅವರು ತಮ್ಮ ಮೊಮ್ಮಕ್ಕಳಿಗೆ ನಿತ್ಯ ಕಥೆ ಹೇಳುವರು. ಆ ಕಥೆಗಳು ಪಾರಂಪರಿಕವಾದವು ಆಗಿರಬಹುದು ಅಥವಾ ಅವರದ್ದೇ ಜೀವನದ ಅನುಭವಗಳು ಆಗಿರಬಹುದು. ಇದರಿಂದ ಮಕ್ಕಳು ಅಗತ್ಯವಾಗಿ ಕಲಿಯುವುದು ತುಂಬಾನೇ ಇರುತ್ತದೆ.   

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon