Link copied!
Sign in / Sign up
5
Shares

ಅವಳಿ ಜವಳಿ ಮಕ್ಕಳನ್ನ ಪಡೆಯುವುದು : 5 ಅಂಶಗಳು ಮತ್ತು ಸಲಹೆಗಳು

ಮಕ್ಕಳು ನಮ್ಮ ಬಾಳಿನ ಮಿನುಗುವ ನಕ್ಷತ್ರಗಳು. ಭೂಮಿಯ ಮೇಲಿನ ಅತ್ಯಂತ ಮುದ್ದಾದ ಜೀವಿಗಳೆಂದರೆ ಅದು ಪುಟ್ಟ ಮಕ್ಕಳು. ನಮ್ಮ ಭಾರತ ದೇಶದಲ್ಲಿ ಮಗು ಆಗುವುದರ ಬಗ್ಗೆ ಮತ್ತು ಮಕ್ಕಳ ಬಗ್ಗೆ ಅನೇಕ ಪುರಾಣಗಳು, ಮೂಢನಂಬಿಕೆಗಳು ಇವೆ. ಅವಳಿ ಜವಳಿ ಮಕ್ಕಳ ಬಗ್ಗೆಯೂ ಹೀಗೆ ಅನೇಕ ನಂಬಿಕೆಗಳಿವೆ. ಅವಳಿ ಜವಳಿ ಮನೆಗೆ ಕಾಲಿಟ್ಟರೆ, ಅವರು ಅವರೊಂದಿಗೆ ಐಶ್ವರ್ಯ, ಸಂಪತ್ತು, ಸಂತೋಷ ಮತ್ತು ನೆಮ್ಮದಿ ತರುವರು ಎಂಬ ನಂಬಿಕೆಯಿದೆ. ಹೀಗಾಗಿ ಜನರು ಅವಳಿ ಜವಳಿ ಪಡೆದುಕೊಳ್ಳಲು ಹಪಹಪಿಸುವರು. ನಮಗೆ ನಿಮ್ಮ ಆಸೆ ಏನೆಂಬುದು ಅರ್ಥವಾಗುತ್ತದೆ, ಹೀಗಾಗಿ ನೀವು ಅವಳಿ ಜವಳಿ ಮಕ್ಕಳನ್ನ ಪಡೆಯುವ ಸಾಧ್ಯತೆಗಳನ್ನ ಹೆಚ್ಚಿಸಿಕೊಳ್ಳಲು ಇರವ 5 ದಾರಿಗಳು ಯಾವು ಎಂದು ತಿಳಿಸಿದ್ದೇವೆ ಓದಿ :

೧. ನಿಮ್ಮ ವಂಶದ ಪರಂಪರೆ

ನಮ್ಮ ಅನುವಂಷಿಕ ಧಾತುಗಳು(ಜೀನ್ಸ್) ನಮ್ಮ ಜೀವನದಲ್ಲಿ ಒಂದು ಮುಖ್ಯವಾದ ಪಾತ್ರ ವಹಿಸುತ್ತವೆ. ನಮ್ಮ ಕಣ್ಣಿನ ಬಣ್ಣ ಯಾವುದಿರಬೇಕು ಎಂಬುದರಿಂದ ಹಿಡಿದು ನಮಗೆ ಅವಳಿ ಜವಳಿ ಮಕ್ಕಳು ಆಗುತ್ತದೆಯೋ ಇಲ್ಲವೋ ಎಂಬುದರ ವರೆಗೂ ಇವು ನಿರ್ಧರಿಸುತ್ತವೆ. ಹೀಗಾಗಿ ನೀವು ನಿಮ್ಮ ಹಾಗು ನಿಮ್ಮ ಪತಿಯ ವಂಶದಲ್ಲಿ ಯಾರಿಗಾದರು ಅವಳಿ ಜವಳಿ ಮಕ್ಕಳಾಗಿದ್ದವೆ ಎಂದು ಹಾಗು ಅದು ಆಗಿದ್ದು ಯಾವ ಕಾಲದಲ್ಲಿ ಎಂಬುದನ್ನ ತಿಳಿಯುವುದು ಒಳ್ಳೆಯದು. ನಿಮ್ಮ ವಂಶಗಳಲ್ಲಿ ಯಾರಿಗೂ ಅವಳಿ ಜವಳಿ ಮಕ್ಕಳು ಆಗಿರದೆ ಇದ್ದರೆ, ನಿಮಗೆ ಅವಳಿ ಜವಳಿ ಮಕ್ಕಳಾಗುವ ಸಾಧ್ಯತೆಗಳೇ ಇಲ್ಲ ಎಂದಲ್ಲ, ಆದರೆ ಸ್ವಲ್ಪ ಕಷ್ಟವಾಗಬಹುದು.

೨. ನೀವು ಒಳ್ಳೆಯದನ್ನ ತಿಂದಷ್ಟು ಒಳ್ಳೆಯದು

ಒಳ್ಳೆಯ ಆಹಾರ ಸೇವಿಸುವುದು, ಅದು ಹಣ್ಣುಗಳು ಇರಬಹುದು, ಅಥವಾ ಡ್ರೈ ಫ್ರೂಟ್ ಗಳು ಇರಬಹುದು, ನೀವು ಒಳ್ಳೆಯ ಗುಣಮಟ್ಟದ ಆಹಾರವನ್ನ ಸೇವಿಸಿವುದು ಬಹಳಷ್ಟು ವ್ಯತ್ಯಾಸವನ್ನ ಉಂಟು ಮಾಡುತ್ತವೆ ಹಾಗು ನಿಮ್ಮ ಫಲವತ್ತತೆಯನ್ನ ಹೆಚ್ಚಿಸುತ್ತದೆ. ಹೀಗೆ ಹೆಚ್ಚು ಫಲವತ್ತತೆ ಇಂದ ನೀವು ಅವಳಿ ಜವಳಿ ಮಕ್ಕಳನ್ನ ಹೊರುವ ಸಾಧ್ಯತೆಗಳು ಹೆಚ್ಚುತ್ತದೆ.

೩. ಪೂರಕಗಳ(ಸುಪ್ಲಿಮೆಂಟ್) ಸೇವನೆ

ಫೋಲಿಕ್ ಆಮ್ಲ (ಫೋಲಿಕ್ ಆಸಿಡ್) ಹೆಣ್ಣಿನ ಫಲವತ್ತತೆ ಹೆಚ್ಚಿಸಲು ತುಂಬಾನೇ ಉಪಯುಕ್ತ. ಹೀಗಾಗಿ ನೀವು ಫೋಲಿಕ್ ಆಮ್ಲವುಳ್ಳ ಪೋಷಕಾಂಶಗಳನ್ನು ಹೊಂದಿರುವಂತ ಸುಪ್ಲಿಮೆಂಟ್ ಗಳನ್ನ ಸೇವಿಸಿದರೆ, ನಿಮ್ಮ ಫಲವತ್ತತೆಯು ಹೆಚ್ಚುತ್ತದೆ ಹಾಗು ಅವಳಿ ಜವಳಿ ಮಕ್ಕಳು ಪಡೆಯುವ ಅವಕಾಶಗಳು ಜಾಸ್ತಿ ಆಗುತ್ತವೆ. ಫಲವತ್ತತೆ ಹೆಚ್ಚಾದಂತೆ, ವೀರ್ಯವು ಅಂಡಾಣು ಜೊತೆ ಫಲೀಕರಣ ಹೊಂದುವ ಸಾಧ್ಯತೆಗಳು ಹೆಚ್ಚುವುದು. ಎರಡು ಅಂಡಾಣುಗಳು ಫಲೀಕರಣ ಹೊಂದಿದಾಗ ಅವಳಿ ಜವಳಿ ಮಕ್ಕಳು ಜನಿಸುತ್ತಾರೆ.

೪. ಹಾಲಿನ ಉತ್ಪನ್ನಗಳ ಸೇವನೆ

ನೀವು ಅವಳಿ ಜವಳಿ ಮಕ್ಕಳನ್ನ ಪಡೆಯಬೇಕೆಂದರೆ ನಿಮ್ಮ ಫಲವತ್ತತೆಯು ಜಾಸ್ತಿ ಇರಲೆಬೇಕು. ಹೀಗಾಗಿ ನೀವು ವಿವಿಧ ಹಾಲಿನ ಉತ್ಪನ್ನಗಳನ್ನ ಯಥೇಚ್ಛವಾಗಿ ಸೇವಿಸಬೇಕು. ಈ ಉತ್ಪನ್ನಗಳಲ್ಲಿ ಲಭ್ಯವಾಗುವ ಅಂಶಗಳು ನಿಮ್ಮ ಹಾರ್ಮೋನ್ ಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿ, ನೀವು ಗರ್ಭತಾಳಲು ಸಹಕರಿಸುತ್ತವೆ.

೫. ಬೇರು ಆಹಾರಗಳು

ಬೇರು ಆಹಾರಗಳು ನೆಲದೆ ಕೆಳಗೆ ಬೆಳೆಯುವ ತರಕಾರಿಗಳು, ಹಣ್ಣುಗಳು ಹಾಗು ಇನ್ನಿತರೆ. ಇವುಗಳು ಯಾವುದೆಂದರೆ ಆಲೂಗಡ್ಡೆ, ಕ್ಯಾರಟ್, ಮೂಲಂಗಿ, ಈರುಳ್ಳಿ ಹಾಗು ಮತ್ತಿತರೆ. ಇವುಗಳು ಪೋಷಕಾಂಶಗಳಿಂದ ಕೂಡಿದ್ದು ನಿಮ್ಮ ಫಲವತ್ತತೆಯನ್ನು ವೃದ್ಧಿಸುತ್ತವೆ. ಹೀಗಾಗಿ ಈ ಆಹಾರಗಳು ನೇರವಾಗಿ ನೀವು ಅವಳಿ ಜವಳಿ ಮಕ್ಕಳನ್ನ ಪಡೆಯಲು ಸಹಕರಿಸುವವು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon