Link copied!
Sign in / Sign up
0
Shares

ಆಟಿಸಂ ಸೆಕ್ಟ್ರಮ್ ರೋಗ: ರೋಗಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ (Autism Sectrum Disorder: Symptoms, Causes And Treatment In Kannada)

ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ (ASD) ಅಥವಾ ಕನ್ನಡದಲ್ಲಿ ಸ್ವಲೀನತೆ ಎಂದು ಕರೆಯಲ್ಪಡುವ ರೋಗ ಸಾಮಾನ್ಯವಾಗಿ ಕಂಡರೂ ಸಂಯುಕ್ತತೆಯಿಂದ ಕೂಡಿರುವ ರೋಗ. ಈ ರೋಗ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸಮಾಜದಲ್ಲಿ ಹಲವಾರು ಜನರು ಈ ರೋಗದಿಂದ ಬಳಲುತ್ತಿದ್ದರೆ. ಆಟಿಸಂ ರೋಗದ ಲಕ್ಷಣಗಳು, ಅದರ ಚಿಕಿತ್ಸಾ ವಿಧಾನ, ಆ ರೋಗ ಉಂಟಾಗಲು ಕಾರಣ್ ಮತ್ತು ಅದರ ವಿವಿಧತೆಗಳನ್ನೂ ಅರ್ಥೈಸಿಕೊಳ್ಳುವುದರಿಂದ ಆ ರೋಗದಿಂದ ಬಳಲುತ್ತಿರುವವರ ಲೋಕವನ್ನು ಮತ್ತು ಅವರು ಅನುಭವಿಸುತ್ತಿರುವ ತೊಂದರೆಗಳನ್ನು ತಕ್ಕಮಟ್ಟಿಗೆ ಅವರ ದೃಷ್ಟಿಕೋನದಿಂದ ತಿಳಿದುಕೊಳ್ಳಬಹುದು. ಆಟಿಸಂ ರೋಗವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲದಿದ್ದರೂ, ಪ್ರತಿಯೊಬ್ಬ ನಾಗರಿಕ ಈ ರೋಗದಿಂದ ಬಳಲುತ್ತಿರುವವರ ಜೀವನ ಸುಧಾರಿಸಲು ಸಹಾಯ ಮಾಡಬಹುದು. ಈ ಲೇಖನದಲ್ಲಿ ಆಟಿಸಂಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇದೆ. 

ಪರಿವಿಡಿ:

೧. ಆಟಿಸಂ ಎಂದರೇನು?
೨. ಮಕ್ಕಳಲ್ಲಿ ಆಟಿಸಂ 
೩. ಆಟಿಸಂ ರೋಗದ ಕಾರಣಗಳು 
೪. ಆಟಿಸಂ ರೋಗದ ಬಗೆಗಳು 
೫. ಆಟಿಸಂ ರೋಗಲಕ್ಷಣಗಳು 
೬. ಆಟಿಸಂ ಚಿಕಿತ್ಸಾ ವಿಧಾನ 

 

೧. ಆಟಿಸಂ ಎಂದರೇನು?

ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ (ASD), ಅಥವಾ ಆಟಿಸಂ ಅತಿರೇಖದ ನರವೈಜ್ಞಾನಿಕ ರೋಗ. ಈ ರೋಗದಿಂದಾಗಿ ನರಮಂಡಲ ದುರ್ಬಲಗೊಂಡಿರುತ್ತದೆ. ಈ ರೋಗದಿಂದ ಬಳಲುತ್ತಿರುವವರು ಸಾಮಾನ್ಯ ಸಾಮಾಜಿಕ ಕೌಶಲ್ಯಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಅಸಾಮರ್ಥ್ಯರಾಗಿರುತ್ತಾರೆ. ಹಾಗಾಗಿ ಈ ಸಮಾಜದಲ್ಲಿ ಅವರು ಹೊಂದಿಕೊಳ್ಳುವುದಕ್ಕೆ ಕಷ್ಟಪಡುತ್ತಾರೆ. ಭಾಷಣದಲ್ಲಿ ದುರ್ಬಲತೆ, ತರ್ಕಹೀನ ವರ್ತನೆ ಮತ್ತು ಸಂವಹನಾ ಕಾರ್ಯದಲ್ಲಿ ಅಸಾಮರ್ಥ್ಯತೆ - ಇವುಗಳು ಇದಾನಿತ್ಯ ಬದುಕಿನಲ್ಲಿ ಆಟಿಸಂನಿಂದ ಬಳಲುತ್ತಿರುವವರು ಎದುರಿಸುವ ಸವಾಲುಗಳು. 

ಆಟಿಸಂ ರೋಗದಿಂದ ಬಳಲುತ್ತಿರುವವರನ್ನು ಆಟಿಸ್ಟಿಕ್ ರೋಗಿ ಎಂದು ಕರೆಯುತ್ತಾರೆ. ನಮ್ಮ ಸಮಾಜದಲ್ಲಿ ಅವರು ಹೊಂದಿಕೊಳ್ಳಲು ಹಲವಾರು ದೇಶಗಳಲ್ಲಿ ದೇಶದ ಸಾಮಾಜಿಕ ಸ್ವರೂಪವನ್ನೇ ಬದಲಾಯಿಸಿದ್ದಾರೆ. 

೨. ಮಕ್ಕಳಲ್ಲಿ ಆಟಿಸಂ:

ಆಟಿಸಂ ರೋಗಲಕ್ಷಣಗಳು ಸಾಮಾನ್ಯವಾಗಿ ಮಗುವಿನ ಎರಡು ಅಥವಾ ಮೂರೂರ ವಯಸ್ಸಿನಲ್ಲಿ ಕಂಡುಬರಲು ಪ್ರಾರಂಭಿಸುತ್ತವೆ. ಆದರೆ ಕೆಲವು ಪ್ರಕರಣಗಳಲ್ಲಿ, ಆಟಿಸಂ ರೋಗಲಕ್ಷಣಗಳು ಮಗು ೧೮ ತಿಂಗಳಿದ್ದಾಗ ಕಂಡುಬರಬಹುದು. ಆಟಿಸ್ಟಿಕ್ ಮಕ್ಕಳು ಎದುರಿಸುವ ಅತಿ ದೊಡ್ಡ ಸಮಸ್ಯೆ ಸಂವಹನ ಕ್ರಿಯೆಯಲ್ಲಿ ಅಸಾಮರ್ಥ್ಯರಾಗುವುದು. ಹಾಗಾಗಿ ಅವರು ಈ ಸಮಾಜದಲ್ಲಿ ಹೊಂದಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಆದರೆ, ಇಂತಹ ಮಕ್ಕಳಿಗೆ ಸಹಾಯವಾಗಲು ಹಲವಾರು ಆಟಿಸಂ ಶಾಲೆಗಳನ್ನು ತೆರೆಯಲಾಗಿದೆ. ಅಲ್ಲಿ ಈ ಮಕ್ಕಳಿಗೆ ಅಗತ್ಯವಿರುವ ಕಾಳಜಿ ಹಾಗೂ ಗಮನ ನೀಡಲಾಗುತ್ತದೆ. ಅದರಿಂದ ಈ ಮಕ್ಕಳಲ್ಲಿ ತಾವು ಈ ಸಮಾಜದ ಒಂದು ಭಾಗ ಎನ್ನುವ ಭಾವನೆ ಮೂಡುತ್ತದೆ.  

[Back To Top]

೩. ಆಟಿಸಂ ರೋಗದ ಕಾರಣಗಳು: 

ಆಟಿಸಂ ಒಂದು ಜಟಿಲ ಸಮಸ್ಯೆ. ಅದು ಜಟಿಲಗೊಳ್ಳಲು ಹಲವಾರು ಕಾರಣಗಳಿವೆ. ಆ ಕಾರಣಗಳಲ್ಲಿ ಒಂದು - ಈ ರೋಗದ ಹಿಂದಿರುವ ಸಮಸ್ಯೆಗಳನ್ನು ತಿಳಿದುಕೊಳ್ಳದೆ ಇರುವುದು. ಈಗಲೂ ಸಹ ವಿಜ್ಞಾನಿಗಳು ಆಟಿಸಂ ಹಿಂದಿರುವ ಕಾರಣಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಇರುವ ಜ್ಞಾನದ ಪ್ರಕಾರ, ಆಟಿಸಂಗೆ ಮುಖ್ಯ ಕಾರಣಗಳು ಇಂತಿವೆ:

೧. ವಂಶವಾಹಿಗಳು: ಪಾರಂಪರಿಕವಾಗಿ ಬಂದಿರುವ ವಂಶವಾಹಿಗಳು ಈ ರೋಗಕ್ಕೆ ಕಾರಣವಾಗಿರಬಹುದು.

೨. ಮಗುವಿನ ತಂದೆ ಅಥವಾ ತಾಯಿಗೆ ಗರ್ಭಾವಸ್ಥೆಯ ಸಮಯದಲ್ಲಿ ಅಪರಾವಯಸ್ಸಾಗಿದ್ದರೆ

೩. ಕೆಲವು ಔಷಧಿಗಳು ಈ ರೋಗಗಳನ್ನು ಉಂಟುಮಾಡಬಹುದು

೪. ಬೇರೆ ರೋಗಗಳು 

ವಿಜ್ಞಾನಿಗಳ ಪ್ರಕಾರ ರೋಗದ ಕಾರಣಗಳು ಇನ್ನೂ ಅನಿಶ್ಚಿತ. 

೪. ಆಟಿಸಂ ರೋಗದ ಬಗೆಗಳು:

ಆಟಿಸಂ ರೋಗವನ್ನು ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ ಎಂದು ಕರೆಯಲು ಕಾರಣ ಇಲ್ಲಿದೆ. ಈ ರೋಗ ಹಲವಾರು ಸಾಮಾಜಿಕ ಅಸ್ವಸ್ಥತೆಗಳನ್ನು ಒಳಗೊಂಡಿದೆ. ಆ ಅಸ್ವಸ್ಥತೆಗಳ ಪಟ್ಟಿ ಕೆಳಗಿದೆ:

೧. ಆಟಿಸ್ಟಿಕ್ ಡಿಸ್ಆರ್ಡರ್: ಮಕ್ಕಳ ಸಂವಹನ ಮತ್ತು ಸಾಮಾಜಿಕ ನಡುವಳಿಕೆಗೆ ಈ ಡಿಸ್ಆರ್ಡರ್ ತೊಂದರೆಯುಂಟು ಮಾಡುತ್ತದೆ. ಸಾಮಾನ್ಯವಾಗಿ ಈ ರೋಗ ೩ ವರ್ಷದ ಕೆಳಗಿನ ಮಕ್ಕಳಲ್ಲಿ ಕಂಡುಬರುತ್ತದೆ. 

೨. ಅಸ್ಪೆರ್ಜರ್ ಸಿಂಡ್ರೋಮ್: ಈ ರೋಗದ ಲಕ್ಷಣಗಳು - ಸಾಮಾಜಿಕ ತೊಂದರೆ ಹಾಗೂ ನಿರಾಸಕ್ತಿ ತೋರುವುದು. ಸಂವಹನ ಸಾಮರ್ಥ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಮತ್ತು ಸಾಮಾನ್ಯ ಬುದ್ಧಿವಂತಿಕೆ ಅಥವಾ ಹೆಚ್ಚಿನ ಬುದ್ಧಿ ಸಾಮರ್ಥ್ಯವನ್ನು ಹೊಂದಿರುತ್ತಾರೆ. 

೩. ಪೆರ್ವಸಿವ್ ದೆವೆಲೋಪ್ಮೆಂಟಲ್ ಡಿಸ್ಆರ್ಡರ್: ಸಾಮಾನ್ಯವಾದ ಆಟಿಸ್ಟಿಕ್ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ರೋಗಕ್ಕೆ ಎಂದೇ ಯಾವುದೇ ಪ್ರತ್ಯೇಕ ಲಕ್ಷಣಗಳು ಕಂಡುಬರುವುದಿಲ್ಲ. 

೫. ಆಟಿಸಂ ರೋಗಲಕ್ಷಣಗಳು: 

 

ಆಟಿಸಂ ರೋಗಲಕ್ಷಣಗಳನ್ನು ಎರಡು ಭಾಗವಾಗಿ ವಿಂಗಡಿಸಬಹುದು: ಸಾಮಾಜಿಕ ತೊಂದರೆಗಳು ಮತ್ತು ಸಂವಹನ ತೊಂದರೆಗಳು. ಈ ತೊಂದರೆಗಳು ಮಗುವಿನ ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು. ಆದರೆ, ಸಾಮಾನ್ಯವಾಗಿ ರೋಗಲಕ್ಷಣಗಳು ಒಂದು ಮತ್ತು ಮೂರು ವಯಸ್ಸಿನ ಮಕ್ಕಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ರೋಗಲಕ್ಷಣಗಳು ಇಂತಿವೆ:

ಸಾಮಾಜಿಕ ತೊಂದರೆಗಳು (೮ ರಿಂದ  ೧೦ ತಿಂಗಳ ವಯಸ್ಸಿನ ಮಕ್ಕಳಲ್ಲಿ) :

೧. ಮೊದಲ ವರ್ಷ ತುಂಬುವುದರೊಳಗೆ ತಮ್ಮ ಹೆಸರನ್ನು ಗ್ರಹಿಸಿ, ಅದಕ್ಕೆ ಉತ್ತರಿಸದಿರುವುದು. 

೨. ಸಂಭಾಷಿಸುವಾಗ ನಿರಾಸಕ್ತಿ ತೋರುವುದು.

೩. ದೈಹಿಕ ಸಂಪರ್ಕವನ್ನು ತಿರಸ್ಕರಿಸುವುದು.

೪. ಯಾತನೆಯಲ್ಲಿರುವಾಗ ಹುರಿದುಂಬಿಸುವ ಪರಿಕಲ್ಪನೆಯನ್ನು ಪ್ರಶಂಸಿಸಲು ಮತ್ತು ಅರ್ಥೈಸಿಕೊಳ್ಳಲು ವಿಫಲರಾಗುವುದು. 

೫. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಸಮರ್ಥತೆ ತೋರುವುದು. 

ಸಂವಹನ ತೊಂದರೆಗಳು:

೧. ಮಾತಾನಾಡುವಾಗ ಧ್ವನಿಯಲ್ಲಿ ಏರಿಳಿತದ ಕೊರತೆ.

೨. ತಡವಾದ ಭಾಷಣ ಮತ್ತು ಪರಿಭಾಷೆಯ ಕೌಶಲ್ಯಗಳು.

೩. ಒಂದೇ ಪದ ಅಥವಾ ವಾಕ್ಯವನ್ನು ಪದೇ ಪದೇ ಪುನರುಚ್ಛರಿಸುವುದು.

೪. ಆಡುಗಪದ ಅಥವಾ ಸರ್ವನಾಮಗಳ ಬಳಕೆಯನ್ನು ಅರ್ಥೈಸಿಕೊಳ್ಳುವಲ್ಲಿ ಅಸಾಮರ್ಥ್ಯತೆ.

೫. ಜಗತ್ತಿನ ಸಾರ್ವತ್ರಿಕ ಸನ್ನೆಗಳಿಗೆ ಪ್ರತಿಕ್ರಿಯೆ ನೀಡದಿರುವುದು (ಅದಕ್ಕೆ ಕಾರಣ ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಅವರಿಗೆ ಕಷ್ಟಸಾಧ್ಯ).

೬.ಯಾವುದೇ ಚರ್ಚೆಯ ಸಮಯದಲ್ಲಿ ಅದರಿಂದ ರುದವಿರಲು ಬಯಸುವುದು.

೭. ವಿವಿಧ ರೀತಿಯ ಸಂವಹನಗಳನ್ನು ಅರ್ಥೈಸಿಕೊಳ್ಳುವಲ್ಲಿ ತೊಂದರೆ. (ಉದಾಹರಣೆಗೆ: ನಗು,  ಅಳು,ಚುಚ್ಚುಮಾತು, ಮುಂತಾದವು)

ಕೆಲವು ಬಾರಿ, ಮಕ್ಕಳಲ್ಲಿ ಸ್ವಲೀನತೆ ಅಥವಾ ಆಟಿಸಂ ಲಕ್ಷಣಗಳು ನಡವಳಿಕೆಯ ಮಾದರಿಯಲ್ಲಿ ವ್ಯತ್ಯಾಸಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಅಂತಹ ಸ್ವಲೀನತೆ ಲಕ್ಷಣಗಳು ಇಲ್ಲಿವೇ:

೧. ದೇಹದ ಭಾಗಗಳು ಅವಿಶ್ರಾಂತವಾಗಿ, ಪುನರಾವರ್ತಿತ ಚಲನೆಗಳನ್ನು ತೋರುವುದು. 

೨. ವಿವರಿಸಲಾಗದಂತಹ ಕಾಡುಚುಟಿತನ ತೋರುವುದು.

೩. ಆಚರಣೆಗಳು ಮತ್ತು ಪದ್ಧತಿಗಳ ಅತಿಯಾದ ಅವಲಂಬನೆ.

೪. ವಸ್ತುಗಳ ಮೇಲೆ ಯಾದೃಚ್ಛಿಕ ಸ್ಥಿರೀಕರಣ.

೫. ಚಡಪಡಿಕೆಯ ಮತ್ತು ಅಕ್ರಮಣಾಕಾರಿ ವರ್ತನೆ.

೬. ದೈಹಿಕ ಸಂಪರ್ಕವನ್ನು ಇಷ್ಟ ಪಡದಿರುವುದು.

[Back To Top]

೬. ಆಟಿಸಂ ಚಿಕಿತ್ಸಾ ವಿಧಾನ: 

ಆಟಿಸಂನ ವಿವಿಧ ಬಗೆಗಳಿಂದ ಆಟಿಸಂ ರೋಗಲಕ್ಷಣಗಳನ್ನು ತಿಳಿದುಕೊಂಡಾಗಿದೆ. ಈಗ ಅದರ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳೋಣ. ಆಟಿಸಂನ ಚಿಕಿತ್ಸೆ ಕೇವಲ ಥೆರಪಿಯಾಗಿದೆ. ಥೆರಪಿ ಎಂದರೆ  ಪ್ರೀತಿಯಿಂದ ಕಾಳಜಿ ವಹಿಸಿ ನೋಡಿಕೊಳ್ಳುವುದು. ಆಟಿಸಂ ಥೆರಪಿಯನ್ನು ಎರಡು ಬಗೆಯಾಗಿ ವಿಂಗಡಿಸಬಹುದು: ೧. ಅರ್ಲಿ ಇಂಟರ್ವೆನ್ಶನ್ ಥೆರಪಿ ಅಥವಾ ಆರಂಭಿಕ ಹಸ್ತಕ್ಷೇಪ ಚಿಕಿತ್ಸೆ ಮತ್ತು ೨. ಶಾಲಾಪೂರ್ವದ ಮಕ್ಕಳು ಮತ್ತು ಇನ್ನುಳಿದ ಮಕ್ಕಳಿಗಾಗಿ ಇರುವ ಥೆರಪಿ

೧. ಅರ್ಲಿ ಇಂಟರ್ವೆನ್ಷನ್ ಥೆರಪಿ: ಮಕ್ಕಳಲ್ಲಿ ಆಟಿಸಂ ರೋಗ ನಿರ್ಣಯ ಮಾಡಿದ ಕೂಡಲೇ ಮಕ್ಕಳಿಗೆ ಚಿಕಿತ್ಸೆ ನೀಡುವುದು ಸೂಕ್ತ. ಅರ್ಲಿ ಇಂಟರ್ವೆನ್ಷನ್ ಥೆರಪಿಯನ್ನು ಕೂಸಿಗೆ ಅಥವಾ ಶಾಲಾಪೂರ್ವದ ಮಕ್ಕಳಿಗೆ ಉಪಯೋಗಿಸಲಾಗುತ್ತದೆ. ಈ ಚಿಕಿತ್ಸೆಗೆ ಎರಡು ಮಾದರಿ ಇದೆ: ಲೊವಾಸ್ ಮಾದರಿ, ಅರ್ಲಿ ಸ್ಟಾರ್ಟ್ ಡೆನ್ವರ್ ಮಾದರಿ.

೨.  ಶಾಲಾಪೂರ್ವದ ಮಕ್ಕಳು ಮತ್ತು ಇನ್ನುಳಿದ ಮಕ್ಕಳಿಗಾಗಿ ಇರುವ ಥೆರಪಿ: ಆಟಿಸಂ ಚಿಕಿತ್ಸೆ ಬೇಗೆ ಶುರು ಮಾಡಿದಷ್ಟು ನಿಮ್ಮ ಮಗುವಿಗೆ ಒಳಿತು. ಚಿಕಿತ್ಸೆಯ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದಾದರೂ, ಅದರ ಪ್ರಯೋಜನಗಳು ಸಾಬೀತಾಗಿದೆ. ಈ ಕೆಳಗಿರುವ ಚಟುವಟಿಕೆಗಳು ಆಟಿಸಂ ರೋಗದ ಚಿಕಿತ್ಸೆಯ ಭಾಗವಾಗಿದೆ. 

     ೨.೧. ಒಂದು ವಾರದಲ್ಲಿ ಕನಿಷ್ಠ ಪಕ್ಷ ೨೫ ಘಂಟೆಗಳ ಚಿಕಿತ್ಸೆ ಪಡೆಯಬೇಕು.

     ೨.೨. ವೃತ್ತಿಪರ ಅಥವಾ ಅನುಭವಿ ಚಿಕಿತ್ಸಕರ ನೆವಕಾತಿ ಮಾಡಿಕೊಳ್ಳುವುದು ಒಳಿತು.

     ೨.೩.  ಚಿಕಿತ್ಸಾ ಮಾಡ್ಯುಲ್ ಗಳು ನಿಯಮಿತವಾಗಿ ಪರಿಶೀಲಿಸಿದ ತರಬೇತಿ ಉದ್ದೇಶಗಳೊಂದಿಗೆ ಸ್ಥಾಪಿಸಲ್ಪಟ್ಟಿರುತ್ತದೆ. ಈ ಉದ್ದೇಶಗಳಿಗೆ ಹೋಲಿಸಿ ಮಗುವಿನ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ. 

     ೨.೪. ಆಟಿಸ್ಟಿಕ್ ಮಕ್ಕಳಿಗೆ ಬೇರೆ ಆಟಿಸ್ಟಿಕ್ ಮಕ್ಕಳೊಂದಿಗೆ ಸಂವಹಿಸಲು ಅವಕಾಶ ನೀಡಬೇಕು.

     ೨.೫. ನಿರ್ದಿಷ್ಟ ಕೊರತೆಯನ್ನು ಮದ್ದು ನೀಡಲು ನಿರ್ದಿಷ್ಟ ಚಿಕಿತ್ಸೆ.  

     ೨.೬. ಆಟಿಸಂ ಚಿಕಿತ್ಸೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಪೋಷಕರು ಸಂಪೂರ್ಣವಾಗಿ ಭಾಗವಹಿಸುವಂತೆ ಮಾಡುವುದು. 

     ೨.೭. ವಿವಿಧ ವೈದ್ಯರಿಂದ ವಿವಿಧ ಚಿಕಿತ್ಸೆ ಪಡೆಯುವುದು - ವಾಕ್ ಚಿಕಿತ್ಸೆ, ಮನೋವೈದ್ಯಕೀಯ ಚಿಕಿತ್ಸೆ, ಇತ್ಯಾದಿ. 

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon