Link copied!
Sign in / Sign up
0
Shares

2018ರಲ್ಲಿ ಅತ್ಯುತ್ತಮ ತಾಯಿ ಆಗಬೇಕೆಂದಿದ್ದರೆ ಈ 6 ಕೆಲಸಗಳನ್ನ ಮಾಡಿದರೆ ಸಾಕು !

ಈ ಕಾಲದಲ್ಲಿ ಒಂದು ಮಗುವನ್ನು ಸಾಕುವುದು, ಮನೆಯೊಳಗಿನ ಮತ್ತು ಹೊರಗಿನ ಜವಾಬ್ದಾರಿಗಳನ್ನ ನಿಭಾಯಿಸುವುದು ಎಂತಹ ತಾಯಿಗಾದರೂ ಹುಚ್ಚು ಹಿಡಿಸುವಷ್ಟು ಕಷ್ಟವಾಗಿದೆ. ಅದು ಏನೇ ಇದ್ದರೂ ಪ್ರತಿಯೊಂದು ತಾಯಿಯು ತಾನು ತನ್ನ ಮಗುವಿಗೆ ಅತ್ಯುತ್ತಮ ತಾಯಿ ಆಗಬೇಕೆಂದು ಬಯಸುತ್ತಾಳೆ. ನಾವು ಮಕ್ಕಳಾಗಿದ್ದ ನಮ್ಮ ತಾಯಿಯೊಡನೆ ಹೊಂದಿದ್ದ ಸಂಬಂಧಕ್ಕೆ ಭಿನ್ನವಾಗಿಯೇನೂ ಈಗಿನ ಕಾಲದ ತಾಯಿ-ಮಕ್ಕಳ ಸಂಬಂಧವಿಲ್ಲ. ಆದರೆ ಅಡಚಣೆಗಳು ಮಾತ್ರ ದುಪ್ಪಟ್ಟಾಗಿವೆ. ನಾವು ಫೇಸ್ಬುಕ್ ಅಲ್ಲಿ ನಮ್ಮ ಸಹಪಾಠಿಗಳು ಕೂಡ ತಾಯಿ ಆಗಿ ಫೋಟೋ ಹಾಕುವುದನ್ನು ನೋಡಿ, ನಾವು ಏಕೆ ಇಷ್ಟೊಂದು ಪರಿಪೂರ್ಣತೆ ಹೊಂದಿಲ್ಲ ಎಂದುಕೊಳ್ಳುವುದು ಸಹಜ. ಆದರೆ ಒಂದಂತೂ ನೆನಪಲ್ಲಿಡಿ, ನೀವು ಆ ಫೋಟೋದಲ್ಲಿ ನೋಡಿದಷ್ಟು ಪರಿಪೂರ್ಣವಾಗಿ ಯಾರ ಜೀವನವು ಇರುವುದಿಲ್ಲ. ಜನರು ಕೇವಲ ಅತ್ಯುತ್ತಮವಾದುದ್ದನ್ನು ಮಾತ್ರ ಇಂಟರ್ನೆಟ್ ಅಲ್ಲಿ ಹಾಕುವ ಮೂಲಕ ಉಳಿದವರಿಗೆಲ್ಲಾ ನಾವು ಮಾತ್ರ ಕಷ್ಟು ಪಡುತ್ತಿದ್ದೇವೇನೋ ಎನಿಸುವಂತೆ ಮಾಡುತ್ತಾರೆ.


ಆದರೆ ನಮ್ಮ ಮಕ್ಕಳೊಂದಿಗೆ ನಾವು ಬೆಳೆಸಿಕೊಳ್ಳುವ ಬಾಂಧವ್ಯವಷ್ಟೇ ಕೊನೆಯವರೆಗೂ ಉಳಿಯುವುದು ಮತ್ತು ಅವರು ನೆನಪಿಡುವುದು. ಇಲ್ಲಿ ನಾವು ನಿಮಗೆ ನೆನಪಿಸಬೇಕಿರುವುದು ಒಂದೇ - ನೀವು ಈಗಾಗಲೇ ಅತ್ಯುತ್ತಮ ತಾಯಿ. ಆದರೆ ನೀವು ಮತ್ತಷ್ಟು ಒಳ್ಳೆಯ ತಾಯಿ ಆಗಬೇಕೆಂದಿದ್ದರೆ ನೀವು ಈ ಸಲಹೆಗಳನ್ನ ಪಾಲಿಸಿ.


೧. ಫೋನ್ ಅನ್ನು ಹೆಚ್ಚು ಬಳಸಬೇಡಿ ಅಥವಾ ದಿನಕ್ಕೆ ಇಷ್ಟು ಸಮಯ ಎಂದು ನಿಗದಿಪಡಿಸಿಕೊಳ್ಳಿ

ಪೋಷಕರು ತಮ್ಮ ಮಕ್ಕಳು ಎಷ್ಟು ಹೊತ್ತು ಟಿವಿ ನೋಡಬೇಕು ಎಂಬುದನ್ನು ಬಹಳ ಶಿಸ್ತಿನಿಂದ ನಿಗದಿಪಡಿಸುತ್ತಾರೆ. ಆದರೆ ಸ್ವತಃ ತಾವೇ ಟಿವಿ ಮುಂದೆ ಅಥವಾ ಮೊಬೈಲ್ ಹಿಡಿದುಕೊಂಡು ಎಷ್ಟು ಹೊತ್ತು ಕುಳಿತುಕೊಳ್ಳಬೇಕು ಎಂಬುದನ್ನ ಯೋಚಿಸುವುದಿಲ್ಲ. ನೀವು ನಿಮ್ಮ ಮಗುವಿನ ಮಾತಿನ ಕಡೆ ಗಮನ ಕೊಡದೆ ನಿಮ್ಮ ಮೊಬೈಲ್ ಅಲ್ಲಿ ಮುಳುಗಿದ್ದರೆ, ಮಕ್ಕಳು ಖಂಡಿತವಾಗಿ ಇದನ್ನ ಅರ್ಥ ಮಾಡಿಕೊಳ್ಳುತ್ತಾರೆ, ಅವರಿಗೆ ಇದೆಲ್ಲಾ ನಿಜವಾಗಿಯೂ ಅರಿಯುತ್ತದೆ. ಹೀಗಾಗಿ ನಿಮ್ಮ ಮಕ್ಕಳು ನಿಮ್ಮೊಂದಿಗೆ ಮಾತಾಡುವಾಗ ಫೋನ್ ಅನ್ನು ಸ್ವಲ್ಪ ದೂರವಿಡಿ.


೨. ನಿಮ್ಮ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಲು ಸಮಯ ಮಾಡಿಕೊಳ್ಳಿ

ಆಯಾಸ ಮತ್ತು ಹತಾಶೆ ಭಾವನೆ ಉಂಟಾಗಿದೆಯೇ? ನಮಗೂ ಅಷ್ಟೇ. ನೀವು ನಿಮಗೆಂದೇ ಸ್ವಲ್ಪ ಏಕಾಂತದ ಸಮಯವನ್ನ ಮಾಡಿಕೊಂಡರೆ, ನಿಮಗೆ ಪಾಪಪ್ರಜ್ಞೆ ಉಂಟಾಗಬಹುದು. ಆದರೆ, ಮಕ್ಕಳನ್ನ ರೆಡಿ ಮಾಡುವುದು, ಅವರ ಶಾಲೆಯ ಚಟುವಟಿಕೆಗಳಿಗೆ ಸಹಾಯ ಮಾಡುವುದರಿಂದ ಹಿಡಿದು, ಅಡುಗೆ ಮಾಡುವುದು, ಮನೆಯನ್ನ ಸ್ವಚ್ಛವಾಗಿ ಇಡುವುದರವರೆಗೆ ಎಲ್ಲವೂ ನೀವೇ ಮಾಡಬೇಕು ಎಂದರೆ, ನೀವು ಅಪಾರವಾದ ಮಾನಸಿಕ ಒತ್ತಡ ನಿಭಾಯಿಸಬೇಕು ಮತ್ತು ಇದಕ್ಕೆ ಸ್ವಲ್ಪ ಸ್ವಯಂ ಕಾಳಜಿ ಬೇಕಾಗೇ ಬೇಕಾಗುತ್ತದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ನಿಮ್ಮನ್ನ ನೀವು ಚೆನ್ನಾಗಿ ಇಟ್ಟುಕೊಂಡರೆ ಮಾತ್ರ ನಿಮ್ಮ ಮಗುವಿಗೆ ಅತ್ಯುತ್ತಮ ತಾಯಿ ಮತ್ತು ಪತಿಗೆ ಅತ್ಯುತ್ತಮ ಪತ್ನಿ ಆಗಲು ಸಾಧ್ಯ.


೩. ನಿಮ್ಮ ಮಕ್ಕಳು ಅರ್ಥಪೂರ್ಣವಾದ ಉತ್ತರಗಳನ್ನ ಯೋಚಿಸುವಂತಹ ಪ್ರಶ್ನೆಗಳನ್ನ ಕೇಳಿ

ನಮ್ಮ ಮಕ್ಕಳು ಒಮ್ಮೆ ಶಾಲೆಗೇ ಸೇರಿದರೆಂದರೆ, ಅವರಿಗೆ ಕೇಳಲು ನಮಗೆ ಒಂದು ವಿಷಯ ಕಾಯಂ ಆಗಿ ಸಿಗುತ್ತದೆ, ಅದು - “ಹೆಂಗಿತ್ತು ಸ್ಕೂಲ್ ಇತ್ತು?” ಎಂಬುದು. ಆದರೆ ಇದು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಅವರು ಅವರ ಸ್ಕೂಲ್ ಬಸ್ ಇಂದ ಕೆಳಗಿಳಿದು ಮನೆಬಾಗಿಲಿಗೆ ಬಂದಾಗ, ಊಟಕ್ಕೆಂದು ಡೈನಿಂಗ್ ಟೇಬಲ್ ಹತ್ತಿರ ಕುಳಿತಾಗ, ಮಕ್ಕಳು ಯೋಚಿಸಿ, ಅರ್ಥಪೂರ್ಣವಾದ ಉತ್ತರಗಳನ್ನ ನೀಡಲು ಪ್ರಚೋದಿಸುವಂತಹ ಪ್ರಶ್ನೆಗಳನ್ನ ಕೇಳಿ.


೪. ಅವರ ಎಲ್ಲಾ ಉತ್ತರಗಳನ್ನ ಉತ್ತರಗಳನ್ನ ಸೂಕ್ಷ್ಮವಾಗಿ ಕೇಳಿಸಿಕೊಳ್ಳಿ

ಕೆಲವೊಮ್ಮೆ ಮಕ್ಕಳು ಒಂದೂ ಸೆಕೆಂಡ್ ಸುಮ್ಮನಿರದೆ ಏನಾದರೂ ಹೇಳುತ್ತಲೇ ಇರುತ್ತಾರೆ, ಕೆಲವೊಮ್ಮೆ ಕೇವಲ ಮೌನ. ನಿಮ್ಮ ಮಾತುಗಳನ್ನ ನೀವು ಕೇಳಿಸಿಕೊಳ್ಳುವ ಮೂಲಕ ನೀವು ಅವರನ್ನ ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಬಹುದು ಮತ್ತು ಅವರಿಗೆ ಏನು ಬೇಕೆಂಬುದು, ನಿಮ್ಮಿಂದ ಏನು ಬಯಸುತ್ತಿದ್ದಾರೆಂದು ನಿಮಗೆ ತಿಳಿಯುತ್ತದೆ. ಅಷ್ಟೇ ಅಲ್ಲದೆ ನೀವು ಅವರ ಮಾತು ಕೇಳುತ್ತೀರಾ ಎಂಬುದು ಒಮ್ಮೆ ಅವರಿಗೆ ಗೊತ್ತಾದರೆ, ಕೆಟ್ಟದ್ದು ಅಥವಾ ಒಳ್ಳೆಯದು ಏನೇ ಇದ್ದರು, ಅವರು ಅದನ್ನು ನಿಮ್ಮೊಂದಿಗೆ ಮಾತನಾಡಿ ಹಂಚಿಕೊಳ್ಳಲು ಬಯಸುತ್ತಾರೆ. ಆಗ ನೀವು ನಿಮ್ಮ ಮಕ್ಕಳ ಜೀವನದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಬಹುದು.


೫. ಪರಿಪೂರ್ಣತೆ ಹೊಂದಲು ಹೆಣಗಾಡಬೇಡಿ

ನಮ್ಮನ್ನು ನಾವು ಇತರೆ ಪೋಷಕರೊಂದಿಗೆ ಹೋಲಿಕೆ ಮಾಡಿಕೊಳ್ಳದಿದ್ದರೆ ನಾವು ಈ ನವಯುಗದ ತಾಯ್ತನದ ಯುದ್ಧವನ್ನ ಅರ್ಧ ಗೆದ್ದ ಹಾಗೆ. ಎಲ್ಲವು ಸರಿ ಇದೆ ತೋರಿಸಿಕೊಳ್ಳುವ ತಾಯಂದಿರ ನೋಡಿ, ನೀವು ಏನೋ ತಪ್ಪು ಮಾಡುತ್ತಿದ್ದೀರಾ ಎಂದು ಅಂದುಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ತಲೆಯಲ್ಲಿ ಏನಾದರು “ಪರಿಪೂರ್ಣ ತಾಯಿ” ಎಂಬ ವಿಷಯ ಇದ್ದರೆ, ಅದನ್ನ ಈಗಲೇ ಅಳಿಸಿ ಹಾಕಿಬಿಡಿ. ಏಕೆಂದರೆ, ಜಗತ್ತಿನಲ್ಲಿ ಪರಿಪೂರ್ಣ ತಾಯಿ, ಪರ್ಫೆಕ್ಟ್ ತಾಯಿ ಎಂದು ಯಾರೂ ಇಲ್ಲ. ಹೀಗಾಗಿ ನೀವು ಅದನ್ನ ಆಗಲು ಮುಗಿಬೀಳಬೇಡಿ. ನೀವು ನಿಮ್ಮ ಮಕ್ಕಳೊಂದಿಗಿನ ಕ್ಷಣಗಳಲ್ಲಿ ಹೆಚ್ಚು ತಲ್ಲೀನರಾಗಿದ್ದರೆ ಅಷ್ಟೇ ಸಾಕು. ಸದಾ ಯೋಚಿಸುವ, ಒತ್ತಡದಲ್ಲಿ ಇರುವ ಅಮ್ಮಂದಿರು ಮಕ್ಕಳಿಗೆ ಬೇಡ.


೬. ನಿಮ್ಮ ಮಕ್ಕಳಿಗೆ ಅರ್ಥವಾಗುವ, ಖುಷಿಪಡಿಸುವ ಪ್ರಶಂಸೆಗಳನ್ನ ನೀಡಿ

ನಾವು ಬದುಕುತ್ತಿರುವ ಜಗತ್ತಿನಲ್ಲಿ, “ಹೌದು” ಎನ್ನುವುದಕ್ಕಿಂತ “ಇಲ್ಲ” ಎನ್ನುವುದೇ ಹೆಚ್ಚು ಸುಲಭ. ಹೀಗಾಗಿ ಇಂತಹ ವಾತಾವರಣದಲ್ಲಿ ನೆಗಟಿವಿಟಿಗಿಂತ ಪೊಸಿಟಿವಿಟಿ ಒಳ್ಳೆಯದು ಎಂದು ಮಕ್ಕಳಿಗೆ ತಿಳಿಸಿ, ಬೆಳೆಸಲು ತುಂಬಾ ಕಷ್ಟವಾಗುತ್ತದೆ. ಹೀಗಾಗಿ ಪ್ರೋತ್ಸಾಹಿಸುವ, ಪ್ರಶಂಸಿಸುವ ನಿಮ್ಮ ಮಾತುಗಳು ಮಕ್ಕಳ ಮೇಲೆ ವರ್ಷಗಳ ಕಾಲ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳಿಗೆ ಒಳಗೂ ಮತ್ತು ಹೊರಗೂ ಖುಷಿ ನೀಡುವಂತಹ ಮಾತುಗಳನ್ನ ನಾವು ಆಡಬೇಕು. ಕಷ್ಟದ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲುವುದು ನಿಮ್ಮ ಈ ಪ್ರಶಂಸೆಯ ಮಾತುಗಳೇ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon