Link copied!
Sign in / Sign up
34
Shares

ಅತ್ಯುತ್ತಮ ಹೆಂಡತಿಯ 6 ಗುಣಗಳು

ನೀವು ನಿಮ್ಮ ಭವಿಷ್ಯವನ್ನ ಹಂಚಿಕೊಳ್ಳುವ ವ್ಯಕ್ತಿ ಬಗ್ಗೆ ಹೇಗೆ ಕನಸುಗಳನ್ನ ಕಟ್ಟಿಕೊಂಡಿರುತ್ತೀರೋ, ಏನೆಲ್ಲಾ ಅಪೇಕ್ಷೆಗಳನ್ನ ಇಟ್ಟುಕೊಂಡಿರುತ್ತೀರೋ, ಹಾಗೆಯೇ ಗಂಡಸರು ಕೂಡ ತಮ್ಮ ಪತ್ನಿ ಆಗುವವಳಲ್ಲಿ ಕೆಲವೊಂದು ಗುಣಗಳು ಇರಬೇಕೆಂದು ಬಯಸುತ್ತಾರೆ. ಚಿಂತಿಸಬೇಡಿ, ಎಲ್ಲರಿಗು ಒಬ್ಬರನ್ನು ಆ ದೇವರು ನಿಶ್ಚಿಸಿರುತ್ತಾನೆ ಆದರೆ ಎಲ್ಲರೂ ಹೆಂಗಸರಿಗೆ ಹೊಂದಿಕೊಂಡು ಹೋಗಲು ಏಕೆ ಕೇಳುತ್ತಾರೆ ಅನ್ನುವುದೇ ಗೊಂದಲ ಹುಟ್ಟಿಸುವಂತದ್ದು. ಅದರಲ್ಲೂ ಹೆಂಗಸರಲ್ಲಿ ಆಗಲೇ ಅಷ್ಟೊಂದು ಅದ್ಭುತ ಗುಣಗಳಿದ್ದು ಕೂಡ.

ಮದುವೆ ಅನ್ನುವುದು ಒಂದು ಸುಲಭದ ಸಂಬಂಧವಲ್ಲ, ಹೀಗಾಗಿ ಹೆಣ್ಣು ಆ ಸಂಬಂಧದ ಜೀವ ಆಗಿರಬೇಕು ಮತ್ತು ಸಂಸಾರವನ್ನು ಚೆನ್ನಾಗಿ ನಿಭಾಯಿಸುವಳು ಆಗಿರಬೇಕು. ಆಕೆ ಇಲ್ಲದಿದ್ದರೆ, ಮನೆಯಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತೆ ಆಗುತ್ತದೆ.

ಸಂಸಾರ ಎಂಬುದು ಒಂದು ದೋಣಿಯಂತೆ. ಅದು ಯಾವಾಗಲು ತೇಲುತ್ತಿರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಿದ್ದರೆ ಗಂಡಸರು ತಮಗೆ ಹೆಂಡತಿ ಆಗುವವರಲ್ಲಿ ಬಯಸುವ ಗುಣಗಳು ಯಾವುದು? ಇಲ್ಲಿವೆ ಓದಿ.

೧. ಅವರ ಸ್ವಾತಂತ್ರ ಅವರಿಗೆ ನೀಡಿ

ಯಾವುದೇ ಸಂಬಂಧ ಇರಲಿ, ಅಲ್ಲಿ ವಯಕ್ತಿಕ ಸ್ವಾತಂತ್ರ ಅಥವಾ ಪರ್ಸನಲ್ ಸ್ಪೇಸ್ ಎನ್ನುವುದು ತುಂಬಾನೇ ಮುಖ್ಯ. ನಿಮ್ಮನ್ನು ಹೊರತಾಗಿಯೂ ನಿಮ್ಮ ಪತಿಗೆ ಜೀವನ ಇದೆ. ಅವರಿಗೆ ಖುಷಿ ನೀಡುವಂತಹ ನಿಮಗೆ ಸಂಬಂಧ ಪಟ್ಟಿಲ್ಲದ ಇತರೆ ಕೆಲಸಗಳನ್ನ ಕೂಡ ಅವರು ಮಾಡಬೇಕು. ಚಿಂತಿಸಬೇಡಿ, ಅದೇನೇ ಇದ್ದರು ಅವರು ದಿನದ ಕೊನೆಗೆ ನಿಮ್ಮ ಬಳಿಯೇ ಬರುವುದು!

೨. ನಿಮ್ಮ ಸಾಂಸ್ಥಿಕ ಸಾಮರ್ಥ್ಯ

ಎಲ್ಲಾ ಚೆಲ್ಲಾಪಿಲ್ಲಿಯಾಗಿರುವ, ಗಲೀಜಾದ ಮನೆಯಲ್ಲಿ ಇರಲು ಯಾರಿಗೂ ಇಷ್ಟವಾಗುವುದಿಲ್ಲ, ನಿಮ್ಮ ಪತಿಯನ್ನೂ ಒಳಗೊಂಡು. ನಿಮ್ಮ ಸಂಬಂಧವು ಯಾವಾಗಲು ಸಕಾರಾತ್ಮಕ ಭಾವನೆಯಿಂದ ತುಂಬಿರಲು ನಿಮ್ಮ ಸುತ್ತಲಿನ ವಾತಾವರಣವು ಸರಿಯಾಗಿ ಇರಬೇಕು. ನೀವು ಮನೆಯ ವಸ್ತುಗಳ ಸ್ಥಾನಗಳನ್ನ ಬದಲಾಯಿಸಿ, ಅಲಂಕಾರ ಮಾಡಿ ಮನೆಯನ್ನ ಚೆನ್ನಾಗಿ ಇಟ್ಟುಕೊಳ್ಳಬಹುದು. ಅದನ್ನು ಅವರೂ ಖಂಡಿತವಾಗಿ ತುಂಬಾ ಇಷ್ಟಪಡುತ್ತಾರೆ!

೩. ನಿಮ್ಮನು ನೀವು ವ್ಯಕ್ತಪಡಿಸಿಕೊಳ್ಳಿ

ನೀವು ಒಬ್ಬರನ್ನು ಪ್ರೀತಿಸಿದರೆ, ಅದನ್ನು ಅವರಿಗೆ ತಿಳಿಸಿ. ನೀವು ನಿಮ್ಮ ಪತಿಯನ್ನು ಎಷ್ಟು ಪ್ರೀತಿಸುತ್ತೀರಾ ಮತ್ತು ಅವರ ಬಗ್ಗೆ ನಿಮ್ಮ ಭಾವನೆ ಏನು ಎಂದು ಕೇಳಲು ಅವರು ಕೂಡ ಕಾತುರದಿಂದ ಕಾಯುತ್ತಿರುತ್ತಾರೆ. ಅಲ್ಲದೆ, ಗಂಡಸರ ಹೃದಯಕ್ಕೆ ದಾರಿ ಇರುವುದು ಅವರ ಹೊಟ್ಟೆಯಿಂದ! ನೀವು ರುಚಿಯಾದ ಅಡುಗೆ ಮಾಡಿ ಬಡಿಸಿದರೆ, ಅಲ್ಲಿಗೆ ನೀವು ಅರ್ಧ ಯುದ್ಧ ಗೆದ್ದಂತೆ. ಅಲ್ಲದೆ ಅವರಿಗೆ ಸುರ್ಪ್ರೈಸ್ ಉಡುಗೊರೆಗಳನ್ನ ಕೊಡಿ ಮತ್ತು ವಿಶೇಷ ದಿನಗಳನ್ನ ಕೂಡಿ ಆಚರಿಸಿ. ನಂತರ ನಿಯಂತ್ರಣ ನಿಮ್ಮ ಕೈಯಲ್ಲೇ ಇರುತ್ತದೆ, ಅವರು ನಿಮ್ಮ ಕೈಗೊಂಬೆ ಆಗುವುದನ್ನ ನೋಡಿ!

೪. ಪ್ರಾಮಾಣಿಕತೆ

ನಂಬಿಕೆ ಅನ್ನುವುದು ಸಂಸಾರ ಎಂಬ ಚಕಡಿಯ ಗಾಲಿಗಳಂತೆ. ಅವು ಇಲ್ಲದೆಯೇ ನಿಮ್ಮ ಸಂಸಾರ ಮುಂದೆ ಸಾಗುವುದಿಲ್ಲ. ನೀವು ಪ್ರತಿಯೊಂದು ವಿಷಯದ ಬಗ್ಗೆಯೂ ಮುಕ್ತವಾಗಿರಬೇಕು ಮತ್ತು ನಿಮ್ಮ ಪತಿಯನ್ನು ಯಾವಾಗಲು ನಂಬಬೇಕು. ಯಾವಾಗ ಪರಸ್ಪರ ಒಬ್ಬರನ್ನೊಬ್ಬರು ನಂಬುತ್ತಾರೋ, ಆಗಲೇ ಸಂಬಂಧ ಯಶಸ್ವಿ ಆಗುವುದು. ನಿಮಗೆ ಬಾಧಿಸುವ ವಿಷಯಗಳ ಬಗ್ಗೆ ಜೊತೆಗೂಡಿ ಮಾತನಾಡಿ ಮತ್ತು ಅವುಗಳನ್ನ ಬಗೆಹರಿಸಿಕೊಳ್ಳಿ. ಇದು ಮುಂದೆ ಆಗುವ ತೊಂದರೆಗಳನ್ನೂ ತಡೆಯುತ್ತದೆ ಮತ್ತು ನಿಮ್ಮಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

೫. ನೀವು ಅವರಿಗೆ ಎಂದಿಗೂ ಸೂಕ್ತ ಜೋಡಿಯೇ

ಕೇವಲ ನಿಮ್ಮಿಬ್ಬರ ಅಭಿಪ್ರಾಯಗಳು ಬೇರೆ ಎಂದೊಡನೆ ನೀವು ಅವರಿಗೆ ಸೂಕ್ತ ಜೋಡಿ ಅಲ್ಲ ಎಂದರ್ಥವಲ್ಲ. ಒಂದು ಅತ್ಯುತ್ತಮ ಹೆಂಡತಿಯಾಗಿ, ನೀವು ನಿಮ್ಮ ಮಾತು ಸರಿ ಎಂದು ಸಾಬೀತು ಮಾಡುವ ಬದಲು, ಪರಿಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನ ಯೋಚಿಸಬೇಕು. ಹೀಗೆ ಮಾಡಿದ್ದಲ್ಲಿ, ಕಾಲಕ್ರಮೇಣ ನೀವು ಒಬ್ಬರಿಗೊಬ್ಬರು ಪಂಚಪ್ರಾಣ ಆಗುತ್ತೀರಾ.

೬. ನಿಮ್ಮ ಸಕಾರಾತ್ಮಕತೆ

ನೀವು ನಿಮ್ಮ ಜೀವನದ ಬಗ್ಗೆ ಯಾವಾಗಲು ಸಕಾರಾತ್ಮಕ ಭಾವನೆ - ಅಂದರೆ ಪಾಸಿಟಿವ್ ಭಾವನೆ ಹೊಂದಿರಬೇಕು. ಅದೇನೇ ಆದರೂ, ನೀವು ವಿನಮ್ರವಾಗಿ, ದಯಾಳುವಾಗಿ, ಪ್ರೀತಿಸುವವರಾಗಿ, ಕಾಳಜಿ ತೋರಿಸುವವರಾಗಿ, ತಾಳ್ಮೆ ಕಾಯ್ದುಕೊಳ್ಳುವವರಾಗಿ ಇರಬೇಕು. ನಿಮ್ಮ ಈ ಪಾಸಿಟಿವ್ ವ್ಯಕ್ತಿತ್ವ ನಿಮ್ಮ ಪತಿಯ ಮೇಲೆ ಜಾದುವಿನಂತೆ ಮೋಡಿ ಮಾಡುತ್ತದೆ. ಅದು ನಿಮ್ಮ ಪತಿಯು ಕೆಲಸದಿಂದ ಮನೆಗೆ ಬಂದಾಗ, ಮುಖದ ಮೇಲೆ ನಗು ಇಟ್ಟುಕೊಂಡು ಬಾಗಿಲು ತೆಗೆಯುವಂತ ಸರಳ ಕೆಲಸವೇ ಆಗಿರಲಿ. ನೀವು ಅವರ ಬೆನ್ನೆಲುಬಾಗಿ ಯಾವಾಗಲು ಇರಬೇಕು ಮತ್ತು ಜೀವನದ ರಸ್ತೆಯಲ್ಲಿ ಅವರ ದಾರಿದೀಪ ಆಗಿರಬೇಕು.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon