Link copied!
Sign in / Sign up
6
Shares

ನೀವು ಪ್ರಯತ್ನಿಸಲೇಬೇಕಾದ 5 ಅತ್ಯುತ್ತಮ ಎದೆಹಾಲುಣಿಸುವ ಭಂಗಿಗಳು

ಎದೆಹಾಲುಣಿಸುವುದು ತಾಯಿ ಮತ್ತು ಮಗುವಿನ ಜೀವನದ ಒಂದು ಅತಿಮುಖ್ಯ ವಿಷಯ. ಆದರೂ, ಹೊಸ ಅಮ್ಮಂದಿರಿಗೆ ಎದೆಹಾಲುಣಿಸುವುದು ಕಷ್ಟವೆನಿಸಬಹುದು. ಮಗುವಿಗೆ ಅಂತೂ ಎಲ್ಲವೂ ಹೊಸತೇ. ಆದರೆ ಇದಕ್ಕೆ ಇರುವ ಪ್ರಾಮುಖ್ಯತೆಗೆ ಆದರೂ ನೀವು ನಿಮ್ಮ ಎಲ್ಲಾ ಶಕ್ತಿಯನ್ನು, ಪ್ರಯತ್ನವನ್ನು ಇದರಲ್ಲಿ ಹಾಕುವುದು ಒಳ್ಳೆಯದು. ವಿಶ್ವದೆಲ್ಲೆಡೆ ವೈದ್ಯರು ಮಗುವಿಗೆ ಕನಿಷ್ಠ ಆರು ತಿಂಗಳುಗಳವರೆಗೆ ಎದೆಹಾಲು ನೀಡಲೇ ಬೇಕು ಎಂದು ಶಿಫಾರಸು ಮಾಡುವರು. ಎದೆಹಾಲಿನಲ್ಲಿರುವ ಪೋಷಕಾಂಶಗಳೇ ಮಗುವಿಗೆ ಮೊದಲ ಹಂತಗಳಲ್ಲಿ ಶಕ್ತಿ ನೀಡುವುದು ಮತ್ತು ಅದರ ಪ್ರತಿರಕ್ಷಣಾ ವ್ಯವಸ್ಥೆಯ ನಿರ್ಮಾಣದಲ್ಲಿ ತೊಡಗುವುದು.

ಕೆಲವೊಂದು ಬಾರಿ ಎದೆಹಾಲುಣಿಸುವುದು ನಿಮಗೆ ಕಷ್ಟ ಆಗುತ್ತದೆ ಎಂಬುದು ನಮಗೆ ಗೊತ್ತು. ಹೀಗಾಗಿ ನಾವು ನಿಮಗೆ ಎದೆಹಾಲುಣಿಸುವುದು ಸುಲಭವಾಗುವಂತ 3 ಭಂಗಿಗಳ ಪಟ್ಟಿ ಮಾಡಿದ್ದೇವೆ ಓದಿ :

೧. ಕ್ರೆಡಲ್ ಭಂಗಿ

ಇದು ಎಲ್ಲಾ ತಾಯಂದಿರಿಗೂ ಸಾಮಾನ್ಯವಾಗಿ ಹಿರಿಯರು ಕಲಿಸುವ ಭಂಗಿ. ಇದು ಸರಿಯಾದ ಸಮಯಕ್ಕೆ ಹೆರಿಗೆಯಾದ ಮಕ್ಕಳಿಗೆ ಸೂಕ್ತ ಭಂಗಿ. ನಿಮ್ಮ ಮಗುವಿಗೆ ಕನಿಷ್ಠ ಒಂದು ತಿಂಗಳಾದರೂ ತುಂಬಿದ ಮೇಲೆ ನೀವು ಈ ಭಂಗಿಯನ್ನು ಉಪಯೋಗಿಸಿ, ಏಕೆಂದರೆ ಈ ಭಂಗಿಯಲ್ಲಿ ಹಾಲು ಕುಡಿಯಲು ಕುತ್ತಿಗೆಯ ಸ್ನಾಯುಗಳು ಗಟ್ಟಿ ಇರಬೇಕು. ಆರಾಮಾಗಿ ಕುಳಿತುಕೊಳ್ಳಿ, ಪಕ್ಕದಲ್ಲಿ ಕೈ ಇಟ್ಟುಕೊಳ್ಳಲು ಆರ್ಮ್ ರೆಸ್ಟ್ ಇರುವಂತಹ ಕುರ್ಚಿ ಮೇಲೆ ಆದರೂ ಕೂತುಕೊಳ್ಳಿ ಅಥವಾ ಬೆಡ್ ಮೇಲೆ ಕುಳಿತಿಕೊಂಡು, ನಿಮ್ಮ ಕೈ ಮತ್ತು ಬೆನ್ನಿಗೆ ಬೆಂಬಲ ನೀಡಲು ದಿಂಬುಗಳನ್ನು ಇಟ್ಟುಕೊಂಡು ಕೂತುಕೊಳ್ಳಿ. ನೀವು ಬಲಗಡೆ ಇರುವ ಸ್ಥಾನದಿಂದ ಹಾಲುಣಿಸುತ್ತಿದ್ದರೆ, ಮಗುವನ್ನು ಬಲಗೈ ಅಲ್ಲಿಯೇ ಹಿಡಿಯಿರಿ. ಮಗುವಿನ ತಲೆಯನ್ನು ಬಲಗೈ ಅಲ್ಲಿ ಹಿಡಿದು, ಎಡಗೈ ಇಂದ ನಿಮ್ಮ ಸ್ತನಗಳನ್ನು ಹಿಡಿದಿಟ್ಟುಕೊಳ್ಳಿ.


೨. ಕ್ರಾಸ್-ಕ್ರೆಡಲ್ ಭಂಗಿ

ಇದು ಕೂಡ ಕ್ರೆಡಲ್ ಭಂಗಿಯಂತೆಯೇ, ಆದರೆ ಒಂದು ವ್ಯತ್ಯಾಸ ಎಂದರೆ ನೀವು ಹೇಗೆ ನಿಮ್ಮ ಕೈಗಳನ್ನು ಬಳಸುತ್ತೀರಾ ಎನ್ನುವುದು. ಮಗುವು ಸರಿಯಾಗಿ ಕಚ್ಚಿಕೊಳ್ಳುತ್ತಿಲ್ಲ ಎಂದರೆ, ಈ ಭಂಗಿ ಅಂತಹ ಮಕ್ಕಳಿಗೆ ಸೂಕ್ತವಾದದ್ದು. ಆರಾಮಾಗಿ ಕೂತುಕೊಂಡು, ನಿಮ್ಮ ಕೈಗಳಿಗೆ ಮತ್ತು ಬೆನ್ನಿಗೆ ದಿಂಬುಗಳಿಂದ ನೆರವು ನೀಡಿಕೊಳ್ಳಿ. ಮಗುವನ್ನು ನಿಮ್ಮ ಸ್ತನಗಳ ಕಡೆ ಮುಖ ಮಾಡಿ, ತಲೆದಿಂಬನ್ನು ಕೆಳಗೆ ಇಟ್ಟುಕೊಂಡು ಮಗುವನ್ನು ಮೇಲಕ್ಕೆ ತನ್ನಿ. ನೀವು ಒಂದು ವೇಳೆ ಬಲಗಡೆ ಸ್ತನದಿಂದ ಹಾಲುಣಿಸುತ್ತಿದ್ದರೆ, ನಿಮ್ಮ ಬಲಗೈನ ಅಂಗೈ ಇಂದ ಮಗುವಿನ ತಲೆಯನ್ನು ಹಿಡಿದಿಟ್ಟುಕೊಳ್ಳಿ ಮತ್ತು ನಿಮ್ಮ ಎಡಗೈ ಇಂದ ಮಗುವಿನ ಬೆನ್ನನ್ನು ಹಿಡಿದಿಟ್ಟುಕೊಳ್ಳಿ.


೩. ಬದಿಗೆ ಒರಗಿಕೊಂಡಿರುವ ಭಂಗಿ

ಅಮ್ಮಂದಿರು ಮಂಚದ ಮೇಲೆ ಮಲಗಿಕೊಂಡು ಮಗುವಿಗೆ ಹಾಲು ನೀಡಬೇಕೆಂದರೆ ಇದು ಅತ್ಯಂತ ಸೂಕ್ತವಾದ ಭಂಗಿ. ಬಹಳಷ್ಟು ತಾಯಂದಿರು ಹೀಗೆ ಹಾಲು ಕುದಿಸುವಾಗ ಕಡಿಮೆ ಆಯಾಸ ಆಗುವುದು ಎಂದು ಹೇಳಿಕೊಂಡಿದ್ದಾರೆ. ನಿಮ್ಮ ಬಲಕ್ಕೆ ಮುಖ ಮಾಡಿ ಮಲಗಿಕೊಳ್ಳಿ ಮತ್ತು ನಿಮ್ಮ ಮಗುವು ನಿಮ್ಮ ಕಡೆ ಮುಖ ಮಾಡಿರಲಿ. ನಿಮ್ಮ ಬಲಗೈ ತೋಳಿನಿಂದ ಮಗುವಿನ ತಲೆಯನ್ನು ಹಿಡಿದಿಟ್ಟುಕೊಳ್ಳಿ ಮತ್ತು ನಿಮ್ಮ ಅಂಗೈ ಇಂದ ಅದರ ದೇಹವನ್ನು ಮುಂದಕ್ಕೆ ಹಿಡಿದಿಡಿ. ಮಗುವು ತನ್ನ ಬೆನ್ನ ಮೇಲೆ ಮಲಗಬಾರದು ಮತ್ತು ಮೊಲೆತೊಟ್ಟುಗಳನ್ನು ತಲುಪಲು ಕಷ್ಟ ಪಡಬಾರದು. ಇದರ ಜೊತೆಗೆ ನೀವು ಕೂಡ ನಿಮ್ಮ ಬೆನ್ನು ಮತ್ತು ನಿಮ್ಮ ತಲೆಗೆ ನೆರವಾಗಲು ಕೆಳಗೆ ತಲೆದಿಂಬು ಇಟ್ಟುಕೊಳ್ಳಿ.


೪. ನೇರವಾದ ಭಂಗಿ

ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರೆ ಅಥವಾ ಅವರಿಗೆ ಉಸಿರಾಟದ ತೊಂದರೆ ಇದ್ದರೆ ಇದು ಸೂಕ್ತ ಭಂಗಿ. ಅಲ್ಲದೆ ಸ್ತನದಿಂದ ಹಾಲಿನ ಹರಿವು ವೇಗವಾಗಿ ಇದ್ದರೂ ಇದು ಬಹಳ ಸೂಕ್ತ ಭಂಗಿ. ನೆಟ್ಟಗೆ ಕೂತುಕೊಳ್ಳಿ ಮತ್ತು ನಿಮ್ಮ ಕಾಲುಗಳನ್ನು ಮಡಚಿಕೊಳ್ಳಿ . ಹಿಂದೆ ಯಾವುದಾದರು ಮೇಲೆ ವರಗಿಕೊಳ್ಳಿ. ಮಗುವನ್ನು ಸಹ ನೆಟ್ಟಗೆ ಇಟ್ಟುಕೊಳ್ಳಿ. ಮಗುವನ್ನು ನಿಮ್ಮ ತೊಡೆಗಳ ಮೇಲೆ ಕೂರಿಸಿಕೊಳ್ಳಿ. ಒಂದು ಕೈ ಇಂದ ಮಗುವಿನ ತಲೆಯನ್ನು ಹಿಡಿದಿಟ್ಟುಕೊಳ್ಳಿ ಮತ್ತು ಇನ್ನೊಂದರಿಂದ ನಿಮ್ಮ ಸ್ತನವನ್ನು ಹಿಡಿದಿಟ್ಟುಕೊಳ್ಳಿ.


೫. ಆರಾಮಾಗಿ ವರಗಿಕೊಂಡ ಭಂಗಿ

ಅಮ್ಮಂದಿರಿಗೆ ಸ್ವಲ್ಪ ಆರಾಮ ಸಿಗಲು ಮತ್ತು ಮಗುವು ತನ್ನ ಪ್ರತಿಫಲಿತ ಕಾರ್ಯಗಳನ್ನು ಕಲಿಯಲು ಮತ್ತು ಹೊಸ ವಾತಾವರಣ ಅನ್ವೇಷಿಸಲು, ಇದು ಅತ್ಯಂತ ಸೂಕ್ತ ಭಂಗಿ. ಈ ಭಂಗಿಯಲ್ಲಿ ಮಗುವು ಸರಿಯಾಗಿ ಕಚ್ಚಿಕೊಂಡರೆ ಮತ್ತು ಹಾಲನ್ನು ಹೀರಲು ಶುರು ಮಾಡಿದರೆ, ಉಂಟಾಗುವ ನರಗಳ ಪ್ರಚೋದನೆಯಿಂದ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆ ಆಗುತ್ತದೆ. ಇದು ಹಾಲಿನ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ. ಮಂಚದ ಮೇಲೆ ಕಾಲು ಚಾಚಿಕೊಂಡು, ಗೋಡೆಗೆ ಅಡ್ಡವಾಗಿ ದಿಂಬು ಇಟ್ಟ್ಕೊಂಡು ಅದರ ಮೇಲೆ ವರಗಿಕೊಳ್ಳಿ. ನಿಮ್ಮದು ನಾರ್ಮಲ್ ಹೆರಿಗೆ ಆಗಿದ್ದರೆ, ಮಗುವಿನ ಮುಖವನ್ನು ನಿಮ್ಮ ಸ್ತನಗಳ ಮೇಲೆ ಮತ್ತು ಅದರ ಉಳಿದ ದೇಹವನ್ನು ನಿಮ್ಮ ತೊಡೆಯ ಮೇಲೆ ಇಟ್ಟುಕೊಳ್ಳಿ. ನಿಮಗೆ ಸಿಸೇರಿಯನ್ ಹೆರಿಗೆ ಆಗಿದ್ದರೆ, ಮಗುವು ನಿಮ್ಮ ಗಾಯದ ಮೇಲೆ ಕೂರದಂತೆ ನಿಮ್ಮ ಎದೆಯ ಮೇಲೆ ಅಥವಾ ನಿಮ್ಮ ಭುಜದ ನೆರವು ಪಡೆದು ಕುರಿಸಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon