Link copied!
Sign in / Sign up
39
Shares

ಅತ್ಯಂತ ಅಪಾಯಕಾರಿ ಸಂಭೋಗ ಭಂಗಿಗಳು ಯಾವುದು ಗೊತ್ತಾ?

ಇಂಟರ್ನ್ಯಾಷನಲ್ ಜರ್ನಲ್ ಆಫ್ ಇಂಪೋಟೆನ್ಸ್ ರಿಸರ್ಚ್ ಅವರು ನಡೆಸಿರುವ ಅಧ್ಯಯನದಲ್ಲಿ ಹೀಗೊಂದು ವಿಷಯವನ್ನ ಬೆಳಕಿಗೆ ತರಲಾಯಿತು. ಅದು ಏನೆಂದರೆ, ತುಂಬಾನೇ ಅಪಾಯಕಾರಿ ಸಂಭೋಗ ಭಂಗಿಗಳು ಯಾವುದು ಎಂದು. ಆ ಭಂಗಿಗಳು ಯಾವು ಎಂದು ತಿಳಿಯುವ ಮುನ್ನ ಅಪಾಯ ಏನೆಂದು ತಿಳಿಯಿರಿ. ಈ ಭಂಗಿಗಳಲ್ಲಿ ಸಂಭೋಗದಲ್ಲಿ ತೊಡಗಿಕೊಳ್ಳುವುದು ಶಿಶ್ನ ಮುರಿತ ಅಥವಾ ಪೆನೈಲ್ ಫ್ರಾಕ್ಚರ್ ಉಂಟು ಮಾಡುವ ಸಾಧ್ಯತೆಗಳು ಇರುತ್ತವೆ. ಮೊದಲು ಈ ಶಿಶ್ನ ಮುರಿತ ಎನ್ನುವುದು ಹೇಗೆ ಉಂಟಾಗುತ್ತದೆ ಎಂಬುದನ್ನ ಓದಿರಿ, ಅದರ ನಂತರ ಅದನ್ನು ಉಂಟು ಮಾಡುವ ಸಾಧ್ಯತೆ ಉಳ್ಳ ಭಂಗಿಗಳು ಯಾವು ಎಂದು ನಾವು ಹೇಳುತ್ತೇವೆ.

ಶಿಶ್ನ ಮುರಿತ

ಶಿಶ್ನ ಮುರಿತ ಅಥವಾ (ಪೆನೈಲ್ ಫ್ರಾಕ್ಟ್ಚರ್). ಇದು ನೆಟ್ಟಗೆ ನಿಂತ ಶಿಶ್ನದ ಮೇಲೆ ಒತ್ತಡ ಬಿದ್ದಾಗ ಅಥವಾ ಬಲಪ್ರಯೋಗ ಆದಾಗ ಆಗುವಂತ್ತದು. ಮೊದಲಿಗೆ ಶಿಶ್ನವು ಹೇಗೆ ರೂಪುಗೊಂಡಿರುತ್ತದೆ ಎಂಬುದನ್ನ ನೋಡೋಣ. ಶಿಶ್ನವು ಮೂರು ಸಿಲಿಂಡ್ರಿಕಲ್ ಟ್ಯೂಬ್ ಗಳಿಂದ ಮಾಡಲಾಗಿರುತ್ತದೆ. ಅವುಗಳಲ್ಲಿ ಎರಡು ದೊಡ್ಡ ಟ್ಯೂಬ್ ಗಳನ್ನ ಕಾರ್ಪೋರಿಯಲ್ ಬಾಡೀಸ್ ಎಂದು ಕರೆಯಲಾಗುತ್ತದೆ.

ಗಂಡಸರು ಉದ್ರೇಕಕ್ಕೆ ಒಳಗಾದಾಗ ರಕ್ತವು ಈ ಎರಡು ದೊಡ್ಡ ಬಲೂನ್ ರೀತಿಯ ಟ್ಯೂಬ್ (ಚಿತ್ರದಲ್ಲಿರುವ ನೀಲಿ ಬಣ್ಣದ ಟ್ಯೂಬ್)ಗಳಿಗೆ  ನುಗ್ಗುತ್ತದೆ ಮತ್ತು ಅವುಗಳಲ್ಲಿ ಒತ್ತಡ ಹೆಚ್ಚುತ್ತದೆ. ಇದು ಶಿಶ್ನವನ್ನ ಗಟ್ಟಿ ಮತ್ತು ನೆಟ್ಟಗೆ ನಿಲ್ಲುವಂತೆ ಮಾಡುತ್ತದೆ. ಹೀಗಾಗಿ  ನೆಟ್ಟಗೆ ನಿಂತ ಶಿಶ್ನವನ್ನ ಬಾಗಿಸುವುದು ಕಷ್ಟ. ಹೀಗಾಗಿ ಅದರ ಮೇಲೆ ಆಗಲೇ ಒತ್ತಡ ಬಿದ್ದಿರುತ್ತದೆ. ಹೀಗಾಗಿ ಸಂಭೋಗದ ಸಮಯದಲ್ಲಿ ಶಿಶ್ನವು ಸಂಗಾತಿಯ ಮೂಲಾಧಾರಕ್ಕೆ (ಯೋನಿ ಹಾಗು ಗುದದ್ವಾರದ ನಡುವಿನ ಜಾಗ) ರಭಸವಾಗಿ ಡಿಕ್ಕಿ ಹೊಡೆದರೆ ಅಥವಾ ಸಂಭೋಗದ ಯಾವುದಾದರೂ ಭಂಗಿಯಲ್ಲಿ ಶಿಶ್ನವನ್ನ ತುಂಬಾನೇ ವಾಲಿಸಿದರೆ, ಮುರಿತ ಉಂಟಾಗಬಹುದು.

ಅಪಾಯಕಾರಿ ಭಂಗಿಗಳು

ಈಗ ಭಂಗಿಗಳ ವಿಷಯಕ್ಕೆ ಬಂದರೆ, ಮೇಲೆ ಹೇಳಿದ ಅಧ್ಯಯನದಲ್ಲಿ ತಿಳಿದು ಬಂದಂತೆ ಅಪಾಯಕಾರಿ ಭಂಗಿಗಳು ಯಾವು ಎಂದರೆ ಅವು ಈ ಕೆಳಗಿನ ಚಿತ್ರಗಳಲ್ಲಿ ಇರುವಂತದ್ದು.


ಮೊದಲ ಚಿತ್ರದಲ್ಲಿ ತೋರಿಸಿರುವ ಭಂಗಿ ಅಂದರೆ ಹಿಂಬಂದಿಯಿಂದ ಶಿಶ್ನ ನುಗ್ಗಿಸುವ ಭಂಗಿಯು ಜಗತ್ತಿನ 41% ಅಷ್ಟು ಶಿಶ್ನ ಮುರಿತಕ್ಕೆ ಕಾರಣ ಆಗಿದೆ. ಏಕೆಂದರೆ ಈ ರೀತಿಯ ಭಂಗಿಯಲ್ಲಿ ಶಿಶ್ನವು ಹೆಣ್ಣಿನ ಶ್ರೋಣಿಯ ಮೂಳೆಗೆ ತಾಗುವ ಸಾಧ್ಯತೆ ಇರುತ್ತದೆ. ಹೀಗೆ ಜೋರಾಗಿ ತಾಗಿದಾಗ ಶಿಶ್ನ ಮುರಿಯುವ ಸಾಧ್ಯತೆ ಇರುತ್ತದೆ.

ಎರಡನೇ ಚಿತ್ರದಲ್ಲಿ ಇರುವ ಭಂಗಿಯು ಜಗತ್ತಿನ 25% ಅಷ್ಟು ಶಿಶ್ನ ಮುರಿತಗಳಿಗೆ ಕಾರಣ ಆಗಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon