Link copied!
Sign in / Sign up
4
Shares

ಇಲ್ಲಿದೆ ನೋಡಿ ರೇಪ್-ನಿರೋಧಕ ಅಂಡರ್ವೇರ್ ಮತ್ತು ಅದರ ಕಾರ್ಯಗಳು!

ನಮ್ಮ ದೇಶದಲ್ಲಿ ದಿನಕ್ಕೆ ಒಮ್ಮೆಯಾದರೂ ನಾವು ಎಲ್ಲಿಯಾದರೂ ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ಆಗುವುದು, ಅತ್ಯಾಚಾರ ಆಗುವುದರ ಬಗ್ಗೆ ಕೇಳುತ್ತಲೇ ಇರುತ್ತೇವೆ. ಕಾನೂನಿನ ಅಡಿ ಇಂತಹ ಕೃತ್ಯಗಳಿಗೆ ಶಿಕ್ಷೆಯನ್ನ ಇನ್ನಷ್ಟು ಕಠಿಣವಾಗಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದ್ದರೂ, ವಿಕೃತ ಜನರು ಯಾವುದೇ ಭಯವಿಲ್ಲದೆ ನೀಚ ಕೃತ್ಯಗಳಲ್ಲಿ ತೊಡಗುತ್ತಲೇ ಇದ್ದಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಮತ್ತು ಹೆಂಗಸರ ಸೇಫ್ಟಿ ಹೆಚ್ಚಿಸಬೇಕೆಂದೇ ಇಲ್ಲೊಂದು ವಿದ್ಯಾರ್ಥಿನಿ ಹೊಸದೊಂದು ಅನ್ವೇಷಣೆ ಮಾಡಿದ್ದಾಳೆ. ಅದುವೇ “ರೇಪ್ ನಿರೋಧಕ ಅಂಡರ್ವೇರ್”.


ಇದು ಒಂದು ಹೈ-ಟೆಕ್ ಅಂಡರ್ವೇರ್ ಆಗಿದ್ದು, ಇದುವೇ ರೇಪಿಸ್ಟ್ ಗಳ ವಿರುದ್ಧದ ಕೊನೆಯ ಸಾಲಿನ ಪ್ರತಿರೋಧವಾಗಿದೆ. ಇದನ್ನು ತಯಾರಿಸಿರುವುದು 19 ವರ್ಷದ ವಿದ್ಯಾರ್ಥಿನಿ ಸೀನು ಕುಮಾರಿ. ಇದರಲ್ಲಿ ಕೇವಲ ಧರಿಸುವವರು ಮಾತ್ರ ತೆರೆಯಬಲ್ಲ ಕಾಂಬಿನೇಶನ್ ಲಾಕ್ ಇದೆ ಮತ್ತು ಪೊಲೀಸರಿಗೆ ಸಂದೇಶ ರವಾನಿಸುವ GPS ವ್ಯವಸ್ಥೆ ಕೂಡ ಇದೆ. ಅಷ್ಟೇ ಅಲ್ಲದೆ, ಆರೋಪಿಯ ಮುಖವನ್ನ ಸೆರೆಹಿಡಿಯಲು ಪುಟ್ಟದೊಂದು ಕ್ಯಾಮೆರಾ ಕೂಡ ಇದೆ.


ಇದು ವಾಸ್ತವಿಕವಾಗಿ ಎಲ್ಲರೂ ಉಪಯೋಗಿಸಲು ಸಾಧ್ಯವಿಲ್ಲ ಎಂದರೂ, ಈ ವಸ್ತ್ರವು ಪ್ರತಿದಿನವೂ ಹೆಂಗಸರು ಅನುಭವಿಸುವ ಅಪಾಯಗಳಿಗೆ ಮತ್ತು ಅವರು ಅವುಗಳನ್ನ ಎದುರಿಸಲು ಅನುಭವಿಸುವ ಯಾತನೆಗೆ ಹಿಡಿದ ಕೈಗನ್ನಡಿ ಆಗಿದೆ. ಲೈಂಗಿಕ ದೌರ್ಜನ್ಯವು ವಿಶ್ವದೆಲ್ಲೆಡೆ, ಮುಖ್ಯವಾಗಿ ಭಾರತದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.

ಸೀನು ಕುಮಾರಿ ತಯಾರಿಸಿರುವ ಈ ವಿಶೇಷ ಅಂಡರ್ವೇರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon