Link copied!
Sign in / Sign up
48
Shares

ನಿಮ್ಮ ಅತ್ತೆ ರಾಶಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತೇ?

ನವದಂಪತಿಗಳೇ, ಮಧುಚಂದ್ರದ ಲಹರಿಯಲ್ಲರುವ ನಿಮ್ಮ ಈಗಿನ ಮನಸ್ಥಿತಿಯನ್ನು ನಾವು ಅರಿತುಕೊಳ್ಳಬಲ್ಲೆವು. ನೀರಸ ಜೀವನದ ದಾಂಪತ್ಯ ಬದುಕು ನಡೆಸುವವರಾಗೂ, ನಿಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲೆವು

ವಿವಾಹವೆಂಬುದು ಪ್ರೇಮಿಸುವುದನ್ನೂ, ದ್ವೇಷಿಸುವುದನ್ನೂ ಕಲಿಸಿಕೊಟ್ಟು, ನಮ್ಮನ್ನು ಹೆಂಡ ಕುಡಿದ ಹುಚ್ಚು ಕೋತಿ  ಕುಣಿಯುವಂತೆ ಕುಣಿಸುವ ಜೀವನದ ಅವಿಭಾಜ್ಯ ಘಟಕ. ಇವೆರಡನ್ನೂ, ಸಮತೋಲನದಿಂದ ನಿಭಾಯಿಸುವುದು ದೊಡ್ಡ ಸವಾಲೇ ಸರಿ. ನಿಮ್ಮ ಸುಗಮ ದಾಂಪತ್ಯ ಜೀವನ ಸವಾರಿಗೆ ತೊಡಕಾಗಿರುವ ಕಾರಣಗಳೇನಾಗಿರಬಹುದು ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ...??

ನಿಮ್ಮ ಅತ್ತೆಯೊಂದಿಗಿನ ಹಳಸಿದ ಸಂಬಂಧವೂ ಒಂದು ಕಾರಣವಾಗಿರಬಹುದು. ಕೆಲವರಿಗೆ ತಾಯಿಯಂತೆ ಓಲೈಸುವ ಅತ್ತೆಯ ವರಪ್ರಸಾದ ಲಭಿಸಿದ್ದರೆ, ಮತ್ತೆ ಕೆಲವರಿಗೆ ಅದೊಂದು ನುಂಗಲಾರದ ತುತ್ತು. ಹೊಸ ಮದುವಣಗಿತ್ತಿಯಾಗಿ, ಗಂಡನ ಮನೆಗೆ, ಬಲಗಾಲಿಟ್ಟ ಗಳಿಗೆಯಲ್ಲೇ, ನಿಮ್ಮ ಹಣೆಬರಹ ಬದಲಾಗುತ್ತದೆ

ನಿಮ್ಮ ಅತ್ತೆಯೊಂದಿಗಿನ ಬಿರುಕುಬಿಟ್ಟ ಸಂಬಂಧಕ್ಕೆ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನೇನಾದರೂ ಮಾಡಿದ್ದೀರಾ...? ನಿಮ್ಮ ಹಾಗೂ ನಿಮ್ಮ ಅತ್ತೆಯ ರಾಶಿಯ ಸಮೀಕರಣವೇ ಕಾರಣವೆಂಬ ಉತ್ತರ ನಿಮಗೆ ಸೋಜಿಗವೆನ್ನಿಸಬಹುದು

ನಿಮ್ಮ  ಅತ್ತೆ-ಮಾವಂದಿರೊಂದಿಗಿನ   ನಿಮ್ಮ ಸಂಬಂಧಗಳಲ್ಲಿ ಅವರ ರಾಶಿಯ ಪ್ರಭಾವ ಹೇಗಿರುವುದೆಂಬುದರ ಬಗ್ಗೆ ಒಂದು ಪಕ್ಷಿನೋಟ ಹರಿಸೋಣ ಬನ್ನಿ

1. ಕುಂಭ ರಾಶಿಯ ಅತ್ತೆಯರು-

ಕುಂಭರಾಶಿಯ ಅತ್ತೆಯಂದಿರು ಸ್ವಾವಲಂಬಿಗಳಾಗಿರುವುದರಿಂದ, ಅದೇ ನಡವಳಿಕೆಯನ್ನು ನಿಮ್ಮಿಂದಲೂ ಅಪೇಕ್ಷಿಸುವರು. ಅವರು "ಮೊದಲ ನೋಟದ ನಿರ್ಣಯಎಂಬ ಭ್ರಮೆಗಂತೂ ಒಳಗಾಗುವುದಿಲ್ಲ.

ನಿಮ್ಮ ಅತ್ತೆ ಕುಂಭರಾಶಿಯವರಾಗಿದ್ದರೆ, ನೀವಂತೂ ಬಹಳ ಪುಣ್ಯವಂತರೇ ಬಿಡಿ. ಆದರೆ,ಅವರನ್ನು ನಿರಾಸೆಗೊಳಿಸುವ ತಪ್ಪನ್ನಂತೂ ಖಂಡಿತಾ ಮಾಡಬೇಡಿ.

2. ಮೀನ ರಾಶಿಯ ಅತ್ತೆಯರು-

ಮೇಲ್ನೋಟಕ್ಕೆ, ಮೀನ ರಾಶಿಯ ಅತ್ತೆಯಂದಿರು ನಿಮಗೆ ವಿಧೇಯರಾಗಿರುವಂತೆ ಕಂಡರೂ, ನಿಮ್ಮನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಶ್ರಮಿಸುವರು.ಇಷ್ಟು ವರ್ಷಗಳಲ್ಲಿ, ತಾನು ಬೆಳೆಸಿಕೊಂಡು ಬಂದ ತನ್ನ ಕುಟುಂಬಕಾರ್ಯಗಳಲ್ಲಿ, ನಿಮ್ಮ ಹಸ್ತ ಕ್ಷೇಪವನ್ನಂತೂ ಖಂಡಿತಾ ಸಹಿಸಲಾರರು.ಬೆಣ್ಣೆಯಿಂದ ಕೂದಲನ್ನು ತೆಗೆಯುವ ಸಾಮರ್ಥ್ಯವಿರುವ ಮೀನ ರಾಶಿಯ ಅತ್ತೆಯರಲ್ಲಿ ವ್ಯವಹರಿಸುವಾಗ, ಸ್ವಲ್ಪ ಎಚ್ಚರವಾಗಿರುವುದೊಳ್ಳೆಯದು.

3. ಮೇಷ ರಾಶಿಯ ಅತ್ತೆಯರು-

ಶಿಸ್ತುಬದ್ಧವಾದ ಜೀವನ ನಡೆಸುವ ಮೇಷರಾಶಿಯ ಅತ್ತೆಯಂದಿರು, ತನ್ನ ಪ್ರತಿಯೊಂದು ಮಾತು ಹಾಗೂ ನಡವಳಿಕೆಯಲ್ಲಿ ಕಟ್ಟುನಿಟ್ಟಾಗಿರುವುದರಿಂದ, ಸ್ವಲ್ಪ ಕಠೋರರೆನಿಸಿಕೊಂಡರೂ, ಸ್ವಭಾವತ ಶಾಂತಚಿತ್ತರು ಹಾಗೂ ಕೋಮಲ ಮನಸ್ಸಿನವರಾಗಿರುತ್ತಾರೆ.ಅವರು ತೋರುವ ಮಮತೆಯೂ ನಿರ್ಮಲವಾದದ್ದು

ನಿಮ್ಮ ಸ್ನೇಹ ಹಾಗೂ ಅಪ್ಪುಗೆಗಳಿಂದ ಅವರ ಮನ ಗೆದ್ದರೆ, ನಿಮ್ಮ ಜೀವನ ಹೂವಿನ ಹಾಸಿಗೆಯಂತಾಗುವುದು.

4. ವೃಷಭರಾಶಿಯ ಅತ್ತೆಯರು-

ರಾಶಿಯ ಅತ್ತೆಯಂದಿರನ್ನು ಒಲಿಸಿಕೊಳ್ಳುವುದು ಒಂದು ಸವಾಲೇ ಸರಿ. ತನ್ನ ನಿರ್ಧಾರದಲ್ಲೇ ಅಚಲವಾಗಿರುವ ಇವರು, ನೀವೂ ಅವರನ್ನು ಅನುಸರಿಸಬೇಕೆಂದು ಬಯಸುತ್ತಾರೆ

5. ಮಿಥುನ ರಾಶಿಯ ಅತ್ತೆಯರು-

ನಿಮ್ಮ ಅತ್ತೆಯ ರಾಶಿಯು ಮಿಥುನ ಆಗಿದ್ದರೆ, ನಿಮ್ಮಷ್ಟು ಭಾಗ್ಯಶಾಲಿಗಳು ಬೇರೆ ಯಾರೂ ಇಲ್ಲ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದೇ ಇವರ ಶ್ರೇಷ್ಠಗುಣ. ಪ್ರತಿಯೊಂದು ಕಾರ್ಯಗಳಲ್ಲೂ ನಿಮಗೆ ಸ್ಪೂರ್ತಿ ನೀಡಿ ಬಂಬಲಿಸುವ ಜೆಮಿನಿ ಅತ್ತೆಯನ್ನು ಪಡೆದ ನೀವು ಭಾಗ್ಯಶಾಲಿಗಳೇ ಸರಿ

6. ಕರ್ಕಾಟಕ ಅತ್ತೆಯರು-

ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಎಲ್ಲಾ ಸೊಸೆಯರು, ತಮ್ಮ ತಾಯಿಯಂತೆ, ತಮ್ಮನ್ನು ಪ್ರೀತಿಸುವ ಅತ್ತೆಯಂದಿರ ಕನಸು ಕಾಣುತ್ತಾರೆ. ಕರ್ಕಾಟಕ ರಾಶಿಯವರು  ನಿಮಗೆ ಅತ್ತೆಯಾದರೆಂದರೆ, ನಿಮ್ಮ ಕನಸು ನನಸಾಯಿತೆಂದೇ ಅರ್ಥ. ಅಕ್ಷರಾರ್ಥದಲ್ಲಿ ಇವರು ನಿಮಗೆ ತಾಯಿಯಾಗಿರುತ್ತಾರೆ. ಮಮತೆಯ ಮಹಾಪೂರವನ್ನೇ ಹರಸುವ ಕರ್ಕಾಟಕ ರಾಶಿಯ ಅತ್ತೆಯಿಂದ, ತಾಯಿಯ ತೋಳ್ತೆಕ್ಕೆಯಲ್ಲಿ ಮತ್ತೆ ಮರಳಿದ ಅನುಭವ ಪಡೆಯುವಿರಿ.

7. ಸಿಂಹ ರಾಶಿಯ ಅತ್ತೆಯರು-

"ತಾನು ಹಿಡಿದ ಮೂರು ಮತ್ತೊಂದು ಕಾಲು " ಎಂದು ವಾದಿಸುವವರೇ ಸಿಂಹರಾಶಿಯ      ಅತ್ತೆಯಂದಿರ ಮನೋಭಾವ ನಿಮಗೆ ಮೈಪರಚಿಕೊಳ್ಳುವಂತೆ ಮಾಡಿದರೂ, ಅವರ ಮತ್ತೊಂದು ಮುಖದ ನೆನಪು, ನಿಮ್ಮನ್ನು ನೀವು ಹತೋಟಿಯಲ್ಲಿಟ್ಟುಕೊಳ್ಳಲು ನೆರವಾಗುತ್ತದೆ.

8. ಕನ್ಯಾ ರಾಶಿಯ ಅತ್ತೆಯರು-

ಕನ್ಯಾ ರಾಶಿಯ ಅತ್ತೆಯರ ನಡವಳಿಕೆಯು, ನಿಮ್ಮ ಬಾಲ್ಯದ ಗುರುಗಳನ್ನು ನೆನಪಿಸುವಂತಿರುತ್ತದೆ.ನಿಮ್ಮ ದಾಂಪತ್ಯಜೀವನವನ್ನು ಹಳಿತಪ್ಪಿಸುವಂತ ಯಾವುದೇ ಕಾರಣಗಳನ್ನೂ ಪ್ರೋತ್ಸಾಹಿಸಲಾರರುಸಾರ್ವಜನಿಕವಾಗಿ ನಿಮ್ಮನ್ನು ವಿಮರ್ಶಿಸಲೂ ಹಿಂದೆ ಮುಂದೆ ನೋಡಲಾರರು. ಆದರೆ, ಅವರೇನೇ ಮಾಡಿದರೂ ಅದು ನಿಮ್ಮ ಒಳಿತಿಗಾಗಿಯೇ ಎಂದು ನೀವು ಅರ್ಥ ಮಾಡಿಕೊಂಡರೆ ಒಳ್ಳೆಯದು.

9. ತುಲಾ ರಾಶಿಯ ಅತ್ತೆಯರು-

ಸದಾಕಾಲ ನೀವು ಸ್ಮರಿಸಿಕೊಳ್ಳುವಂತ ನಿಮ್ಮ ಆತ್ಮೀಯ ಗೆಳತಿಯಾಗಿರಬಲ್ಲವರೇ ತುಲಾ ರಾಶಿಯ ಅತ್ತೆಯರು. ನಿಮ್ಮ ಮಕ್ಕಳೊಂದಿಗೂ, ಮೊಮ್ಮಕ್ಕಳೊಂದಿಗೂ ನಿಮ್ಮ ಸಂಬಂಧ ಸುಮಧುರವಾಗಿ ಬೆಸೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನೂ ಮಾಡುವರು. ಇವರು ನಿಜಕ್ಕೂ ನಿಮ್ಮ ಪ್ರೀತಿ ಪಾತ್ರರು.

10. ವೃಶ್ಚಿಕ ರಾಶಿಯ ಅತ್ತೆಯರು-

ಬಲಹೀನತೆ ಮತ್ತು ಮನೋಬಲದ ಆರೋಗ್ಯಕರ ಸಮತೋಲನದ ಸಮ್ಮೇಳನಾ ಮೂರ್ತಿಯೇ ವ್ರಶ್ಚಿಕ ರಾಶಿಯ ಅತ್ತೆಯರು. ಕುಟುಂಬವೆಂದರೆ, ಪರಸ್ಪರ ಕೊಟ್ಟು-ತೆಗೆದುಕೊಳ್ಳುವಿಕೆಯ ಭಾವುಕ ಭಾವನೆಗಳ ಮಿಲನವೆಂದು ನಂಬಿರುವ ಇವರು, ನಿಮ್ಮನ್ನೂ ತನ್ನ ಕುಟುಂಬದ ಅವಿಭಾಜ್ಯ ಅಂಗವೆಂದೇ ಪರಿಗಣಿಸುವರು.ಅವರ ಜಾಣ್ಮೆಗಂತೂ ನೀವು ತಲೆದೂಗಲೇ ಬೇಕಾಗುತ್ತದೆ.

11. ಧನುಸ್ಸು ರಾಶಿಯ ಅತ್ತೆಯರು-
ಧನುರಾಶಿಯ ಅತ್ತೆಗಿಂತಾ ಮಿಗಿಲಾದ ಆಶ್ರಯ ನೀವು ಬೇರೆಲ್ಲೂ ಕಂಡುಕೊಳ್ಳಲಾರಿರಿ. ದುಷ್ಟತನವೆನ್ನುವುದು ಅವರ ನಿಘಂಟುವಿನಲ್ಲೇ ಇಲ್ಲ.  

12. ಮಕರ ರಾಶಿಯ ಅತ್ತೆಯರು-

ಅಚ್ಚುಕಟ್ಟಾಗಿ ತನ್ನೆಲ್ಲಾ ಕೆಲಸಕಾರ್ಯಗಳನ್ನು ನಿಭಾಯಿಸುವ ಮಕರ ರಾಶಿಯ ಅತ್ತೆಯರು, ನಿಮ್ಮಿಂದಲೂ ಅದೇ ಶಿಸ್ತನ್ನು ಬಯಸುತ್ತಾರೆ. ಸದಾ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುವ ಇವರು, ನಿಮ್ಮ ಖಾಸಗಿ ವಿಷಗಳಲ್ಲಿ ಮೂಗು ತೂರಿಸಲೂ ಇಚ್ಛಿಸಲಾರರು

ಇದಕ್ಕಿಂತಾ ಮಿಗಿಲಾಗಗಿ ನಿಮಗಿನ್ನೇನು ಬೇಕು....??

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon