Link copied!
Sign in / Sign up
3
Shares

ಮೊದಲಸಲ ನೀವು, ನಿಮ್ಮ ಅತ್ತೆ-ಮಾವನೊಂದಿಗೆ ಹೇಗೆ ಮಾತನಾಡಬೇಕು?

ಹೆಣ್ಣಿಗೆ ಮದುವೆಯೆಂದರೆ, ಅವಳ ನೆಚ್ಚಿನ ಬಾಳಸಂಗಾತಿಯೊಂದಿಗೆ, ಕಳೆಯುವ ಮಧುರ ಕ್ಷಣಗಳು ಎಂದರೆ ತಪ್ಪಾಗುವುದಿಲ್ಲ. ಮದುವೆ ಹೆಣ್ಣಿಗೆ ಒಂದು ಕಡೆ ಖುಷಿಕೊಟ್ಟರೆ ಮತ್ತೊಂದು ಕಡೆ ದುಃಖವನ್ನು ನೀಡುತ್ತದೆ.  ತನಗೆ ಕೈ ತುತ್ತು ನೀಡಿದ ತಂದೆ-ತಾಯಿ, ಸಹೋದರ, ಸಹೋದರಿಯರು , ಬಂಧು-ಮಿತ್ರರೆಲ್ಲರಿಂದ ದೂರ ಹೋಗುತ್ತೇನೆ ಎಂಬ ಚಿಂತೆ ಅವಳ್ಳನ್ನು ಸದಾ ಕಾಡುತ್ತಿರುತ್ತದೆ. ಇತ್ತ ಕಡೆ ಗಂಡನ ಮನೆ, ಅವನ ಕುಟುಂಬದವರು, ಹೊಸ ವಾತಾವರಣ ಇವೆಲ್ಲವುದರೊಂದಿಗೆ ಹೊಂದಿಕೊಂಡು ಹೋಗುವ ಗುಣ ಕೇವಲ ಹೆಣ್ಣು ಮಕ್ಕಳಿಗಿದೆ. ಸೊಸೆಯು ಮನೆಯಲ್ಲಿ,  ಅತ್ತೆಯೊಂದಿಗೆ ಹೆಚ್ಚಿನ ಕಾಲ ಕಳೆಯುತ್ತಾಳೆ. ಹೊಸ ಜೀವನ, ಹೊಸ ಪರಿಚಯಗಳು, ಅತ್ತೆ ಮಾವನ ಜೊತೆ ಹೊಂದಿಕೊಂಡು ಹೋಗುವುದು, ಎಲ್ಲವು ಹೆಣ್ಣಿನ ಮನಸ್ಸಿನ್ನಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಹೀಗೆ ಒಂದು ಸಂಸಾರದ ಭಾಗವಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕಾದರೆ, ನೀವು ಏನು ಮಾಡಬೇಕು ಎಂಬುದರ ಮಾಹಿತಿಯನ್ನು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.

೧. ಸಹಜ ಮಾತುಗಳು

ಸಹಜವಾಗಿ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಅಥವಾ ದೂರದರ್ಶನದಲ್ಲಿ ಬರುವ ಧಾರಾವಾಹಿಗಳ ಬಗ್ಗೆ ಚರ್ಚಿಸುವುದರಿಂದ, ನಿಮಗೆ ನಿಮ್ಮ ಮನೆಯವರ ಅಭಿಪ್ರಾಯಗಳ್ಳನ್ನು ತಿಳಿದುಕೊಳ್ಳುವುದು ಸುಲಭವಾಗುತ್ತದೆ. ಧಾರ್ಮಿಕ ಹಾಗು ರಾಜಕೀಯ ವಿಷಯಗಳ ಬಗ್ಗೆ  ಈಗಲೇ ಚರ್ಚಿಸದಿರಿ. ನಿಮ್ಮ ಕುಟುಂಬದವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ನಂತರ, ಈ ಎರಡು ವಿಷಯಗಳ್ಳನ್ನು ಚರ್ಚಿಸಿ. ಇತ್ತೀಚಿನ ಪ್ರವಾಸದ ಬಗ್ಗೆ, ಸಂಬಂಧಿಕರ ಮದುವೆಯ ಬಗ್ಗೆ ಮಾತನಾಡಿ. ಹೀಗೆ ಮಾಡುವುದರಿಂದ ನಿಮಗೆ ಅವರೆಲ್ಲರ ಅಭಿಪ್ರಾಯಗಳು ತಿಳಿದುಬರುತ್ತದೆ ಹಾಗು ಮುಂದೊಂದು ದಿನ ಅವರಿಗೆ ಇಷ್ಟವಾಗದ ವಿಷಯಗಳ ಬಗ್ಗೆ ಚರ್ಚಿಸುವುದ್ದನ್ನು ತಡೆಯಬಹುದು.

೨.ಕುಟುಂಬದವರ ಬಾಲ್ಯದ ಬಗ್ಗೆ ತಿಳಿದುಕೊಳ್ಳಿ

ಎಲ್ಲರು ಅವರವರ ಬಾಲ್ಯದ ನೆನಪನ್ನು ಮೆಲುಕು ಹಾಕಲು, ಯಾವ ಸಮಯದ್ದಲ್ಲಾದರು ಸಿದ್ಧರಿರುತ್ತಾರೆ. ನೀವು ನಿಮ್ಮ ಕುಟುಂಬದವರೊಂದಿಗೆ ಹತ್ತಿರವಾಗಲು, ಇದು ಸೂಕ್ತವಾಗಿದೆ. ಅವರು ತಮ್ಮ ತಮ್ಮ ಬಾಲ್ಯದ ಅನುಭವವನ್ನು ಹೇಳುತ್ತಾ, ಅದರೊಳಗೆ ಮುಳುಗಿ ಹೋಗುತ್ತಾರೆ. ನಿಮ್ಮ ಗಂಡನ ಬಾಲ್ಯದ ಭಾವಚಿತ್ರವನ್ನು ತೋರಿಸಲು ಹೇಳಿ, ಇದರಿಂದ  ನಿಮಗೂ ಖುಷಿ ಸಿಕ್ಕಂತಾಗುತ್ತದೆ. ಅತ್ತೆಯೊಂದಿಗೆ ಅವರ ಮಗನ ಇಷ್ಟವಾದ ತಿಂಡಿ-ತಿನಿಸುಗಳು, ಮಗನ ಇಷ್ಟ-ಕಷ್ಟದ ಬಗ್ಗೆ ವಿಚಾರಿಸಿ. ಹೀಗೆ ಮಾಡುವುದರಿಂದ ನಿಮ್ಮ ಗಂಡನ ಬಗ್ಗೆ, ನೀವು ಇನ್ನಷ್ಟು ಹೊಸ ವಿಷಯಗಳ್ಳನ್ನು ತಿಳಿದುಕೊಳ್ಳುತ್ತೀರ.

೩.ಎಲ್ಲರ ಹವ್ಯಾಸದ ಬಗ್ಗೆ ತಿಳಿದುಕೊಳ್ಳಿ

ಬಿಡುವಿನ ವೇಳೆ ಎಲ್ಲರಿಗೂ ಒಂದಲ್ಲಾ ಒಂದು ಹವ್ಯಾಸಗಳಿರುತ್ತದೆ. ಏನು ಇಲ್ಲದ್ದಿದ್ದರೆ  ಟಿ.ವಿ. ನೋಡುವುದೇ ಕೆಲವರಿಗೆ ಒಳ್ಳೆಯ ಹವ್ಯಾಸವಿದ್ದಂತೆ. ಹೀಗೆ ನಿಮ್ಮ ಕುಟುಂಬದವರ ಬೇಕು-ಬೇಡಗಳ್ಳನ್ನು ತಿಳಿದುಕೊಳ್ಳುವುದು ನಿಮಗೇ ಒಳ್ಳೆಯದು. ಇಲ್ಲವಾದ್ದಲ್ಲಿ, ಮುಂಬರುವ ದಿನಗಳ್ಳಲ್ಲಿ ಚಿಕ್ಕ ಪುಟ್ಟ ವಿಷಯಗಳಿಗೆ ಮನಸ್ತಾಪಗಳಾಗುವ ಸಂಭವವಿರುತ್ತದೆ.

೪. ದೂರದ ನೆಂಟರ ಬಗ್ಗೆ ಮಾಹಿತಿಯನ್ನು ಕಲೆಹಾಕಿ

ನಿಮ್ಮ ಕುಟುಂಬದವರೆಂದರೆ ಕೇವಲ ನಿಮ್ಮ ಗಂಡ, ಅತ್ತೆ ಮಾವ ಇಷ್ಟೇ ಅಲ್ಲ. ಮದುವೆಯಾದ ನಂತರ, ನಿಮ್ಮ ಗಂಡನ ಮನೆಯ ನೆಂಟರು, ನಿಮ್ಮ ನೆಂಟರಾಗುತ್ತಾರೆ. ಅವರ ಬಗ್ಗೆಯೂ ಕೇಳಿ ತಿಳಿಯುವುದು, ಅವರ ಮನೆಗಳಿಗೆ ಹೋಗುವುದರಿಂದ, ಎಲ್ಲರಿಗು ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುತ್ತದೆ.

ಭಾವಿ-ಸೊಸೆಯಂದಿರೇ! ನಿಮ್ಮ ಗಂಡನ ಮೆನೆಗೆ ಮೊದಲ ಬಾರಿ ಹೋದಾಗ, ಅವರ ಪ್ರೀತಿಗೆ ಪಾತ್ರರಾಗಬೇಕೇ? ಆಹಾ!ಇಲ್ಲಿದೆ ನೋಡಿ ಕೆಲವು ಉಪಾಯಗಳು.

೧. ಸಾಂಪ್ರದಾಯಿಕ ಬಟ್ಟೆಗಳ್ಳನ್ನು ಧರಿಸಿ.

೨. ಸಣ್ಣ ಉಡುಗೊರೆಯೊಂದ್ದನ್ನು ತೆಗೆದುಕೊಂಡು ಹೋಗಿ.

೩. ಬಟ್ಟೆ-ಖರೀದಿಗೆ ಜೊತೆಯಲ್ಲಿ ಹೋಗಿ.

೪. ನಿಮ್ಮ ಭಾವಿ ಕುಟುಂಬದವರ ಇಷ್ಟ-ಕಷ್ಟಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ.

೫. ಅವರ ಆಯ್ಕೆಯನ್ನು ಹೊಗಳಿ.

೬. ನಿಮ್ಮ ಭಾವಿ-ಗಂಡನೊಂದಿಗೆ, ಅವರ ಕುಟುಂಬದವರ ಮುಂದೆ, ತೀರ ಸಲಿಗೆಯಿಂದ ವರ್ತಿಸದಿರಿ.

೭. ಅವರು ನಿಮಗೆ ಕೇಳುವ ಪ್ರಶ್ನೆಗಳಿಗೆ ಸೌಜನ್ಯದಿಂದ ಉತ್ತರಿಸಿ.

೮. ಅವರ ನೆಂಟರನ್ನು ಸಹ ಪ್ರೀತಿಯಿಂದ ಮಾತನಾಡಿಸಿ.

೯. ನೀವು ಮನೆಗೆ ವಾಪಸ್ ಹೋದ ನಂತರ, ಅತ್ತೆಯೊಂದಿಗೆ ಫೋನಿನ್ನಲ್ಲಿ ಮಾತನಾಡಿ.

೧೦. ಕೊನೆಯದಾಗಿ, ಸದಾಕಾಲ ತುಟಿಯಲ್ಲೊಂದು ಸಣ್ಣ ನಗುವಿರಲಿ.

ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon