Link copied!
Sign in / Sign up
8
Shares

ಅತ್ತೆ ಮನೆಯವರೊಂದಿಗೆ ಸುಮಧುರ ಸಂಬಂಧ ಬೆಸೆಯಲು ಏಳು ಉಪಾಯಗಳು

ನಿಮ್ಮ ಅತ್ತೆ ಮನೆಯವರೊಂದಿಗೆ ಉತ್ತಮ ಸಂಬಂಧವನ್ನು ಬೆಸೆಯಬೇಕೆಂದು ಕನಸು ಕಾಣುತ್ತಿರುವಿರೇ... ಹಿಂದೆ ಮುಂದೆ ನೋಡಬೇಡಿ, ನಿರಾತಂಕವಾಗಿ ಮುಂದಕ್ಕೆ ಹೆಜ್ಜೆಯಿರಿಸಿ. ನಿಮ್ಮ ಗಂಡನ ಮನೆಯವರ ಮನಸ್ಸಿಗೆ ಲಗ್ಗೆ ಇಡುವಂತಹ ಏಳು ಅತ್ಯದ್ಭುತವಾದ ಉಪಾಯಗಳು ನಮ್ಮಲ್ಲಿವೆ. 

ನಿಮ್ಮನ್ನು ದ್ವೇಷಿಸುವ ಅತ್ತೆಯನ್ನಾಗಲೀ, ಕಟ್ಟುನಿಟ್ಟಿನ ಪರ್ಯಾಯವಾದ ಮಾವನ್ನಾಗಲೀ ಅಥವಾ ಕುಹಕ ಮನಸ್ಸಿನ  ಸಹೋದರ ಸಹೋದರಿಯರನ್ನಾಗಲೀ ಇನ್ನು ಮುಂದೆ ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು.  

ಪ್ರಿಯ ಮಹಿಳೆಯರೇ, ನಿಮ್ಮ ಗಂಡನ ಸಂಬಂಧದವರ ಪ್ರೀತಿಯ ಮುಖಗಳ ದರ್ಶನಕ್ಕಾಗಿ ಸಿದ್ಧರಾಗಿ.

೧.ಭೋಜನ ಕೂಟದ ವ್ಯವಸ್ಥೆ ಮಾಡಿ 

ಮಧ್ಯಾಹ್ನ ಅಥವಾ ರಾತ್ರಿ ನಿಮ್ಮಿಬ್ಬರ ಅನುಕೂಲಕ್ಕೆ ತಕ್ಕಂತೆ ನಿಮ್ಮ ಅತ್ತೆ ಹಾಗೂ ಮನೆಯವರನ್ನು ಭೋಜನಕ್ಕೆ ಆಹ್ವಾನಿಸಿ. ನಿಮ್ಮ ಅದ್ಭುತವಾದ ಕೈ ರುಚಿಯಿಂದ ಹಾಗೂ ಸವಿ ಮಾತುಗಳಿಂದ ಮನೆಯವರೆಲ್ಲರ ಮನ ಗೆಲ್ಲಿರಿ. ಇದರಿಂದ ಅವರ ಅಭಿರುಚಿಗೆಳೇನೆಂದು ಕೂಡ ತಿಳಿದುಕೊಳ್ಳಬಹುದು. ಸಮಾನ ಅಭಿರುಚಿಯ ವ್ಯಕ್ತಿಗಳು ಬಹಳ ಬೇಗನೆ ಮಿತ್ರರಾಗುವರೆಂದು ಕೇಳಿಲ್ಲವೇ...!! ಊಟದ ತಟ್ಟೆಯ ಮುಂದಲ್ಲದೆ ಪರಸ್ಪರ ಮನಸ್ಸು ತೆರೆದುಕೊಳ್ಳಲು ಬೇರೆ ಪ್ರಶಸ್ತ ಸ್ಥಳ ಯಾವುದಿದೆ ಹೇಳಿ?

೨.ಅತ್ತೆಯವರಿಂದ ಅಡುಗೆಯನ್ನು ಕಲಿತುಕೊಳ್ಳಿ

ತನ್ನ ಮಗನಿಗಿಂತ ಹೆಚ್ಚಾಗಿ ಒಬ್ಬ ತಾಯಿಗೆ ಬೇರೇನೂ ಲೋಕವಿಲ್ಲ. ನಿಮ್ಮ ಅತ್ತೆಯರಲ್ಲಿ ಅವರ ಮಗನಿಗೆ ಪ್ರಿಯವಾದ ತಿಂಡಿಯ ಪಾಕವನ್ನು ಕೇಳಿ ಕಲಿತುಕೊಳ್ಳುವುದರಿಂದ, ಅವರ ಅಹಂ ತೃಪ್ತಿ ಪಟ್ಟುಕೊಳ್ಳುವುದಲ್ಲದೇ, ನೀವು ಅವರ ಮಗನನ್ನು ಬಹಳ ಹಚ್ಚಿಕೊಂಡಿದ್ದರೆಂಬ ಸಂದೇಶವನ್ನು ಅವರಿಗೆ ನೀಡುತ್ತದೆ. ನಮ್ಮ ಅತ್ತೆಯನ್ನು ನಿಮ್ಮ ವಶಕ್ಕೆ ತಂದುಕೊಳ್ಳುವ ಜಾಣತನದ ಪ್ರಯೋಗವಿದು. ನಿಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ, ಅವರ ಮಗನನ್ನು ನೀವು ಪ್ರೀತಿಸುತ್ತಿದ್ದೀರೆಂದು ಅತ್ತೆಯವರಿಗೆ ಅರಿವಾದರೆ ಸ್ವಾಭಾವಿಕವಾಗಿ ನಿಮ್ಮನ್ನೂ ಅವರು ಸ್ವೀಕರಿಸುವರು.

೩.ಆರ್ಥಿಕ ವಿಚಾರಗಳ ಬಗ್ಗೆ ಮಾವನೊಂದಿಗೆ ಚರ್ಚೆ

ಹಣಕಾಸಿನ ವ್ಯವಹಾರಗಳ ಬಗ್ಗೆ ನಿಮ್ಮ ಮಾವನವರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದೇ ಆದರೆ, ನಿಮ್ಮ ಮಾವನವರು ಬಹಳ ಬೇಗನೆ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಮುನ್ನಡೆಸಲು ನೀವು ಸನ್ನದ್ಧರಾಗಿದ್ದೀರೆಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ.  ಹಣಕಾಸಿನ ವ್ಯವಹಾರಗಳನ್ನು ನಡೆಸುವಲ್ಲಿ ನೀವು ಸಮರ್ಥರಾಗಿದ್ದೀರೆಂದೂ, ನಿರ್ಣಯ ತೆಗೆದುಕೊಳ್ಳುವುದರಲ್ಲೂ ನಿಸ್ಸೀಮರೆಂದೂ ಅವರಿಗೆ ತಿಳಿಯಪಡಿಸಲಿರುವ ಯಾವುದೇ ಸಂದರ್ಭಗಳನ್ನೂ ಕಳೆದುಕೊಳ್ಳಬೇಡಿ. ಹಣಕಾಸಿನ ವಿಚಾರ ಅಥವಾ ಇನ್ನಿತರ ಅಪ್ರಾಮುಖ್ಯ ಸನ್ನಿವೇಶಗಳಲ್ಲೂ ಮಾವನೊಂದಿಗೆ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಿ.

೪.ನಿಮ್ಮ ಗಂಡನ ಸಹೋದರಿಯೊಂದಿಗೆ ಸುತ್ತಾಟ

ಒಬ್ಬ ಸ್ತ್ರೀಗೆ, ತನ್ನನ್ನು ಯಾರಾದರೂ ಶಾಪಿಂಗ್ ಕರೆದೊಯ್ದರೆ, ಅದಕ್ಕಿಂತ ಸಂತೋಷ ಇನ್ನೇನಿದೆ...! ನಿಮ್ಮ ಸಮ ಪ್ರಾಯದವರಾದರೆ, ಅವರ ಆಸಕ್ತಿ – ನಿರಾಸಕ್ತಿ, ಇಷ್ಟಗಳ ಬಗ್ಗೆ ತಿಳಿದುಕೊಳ್ಳಲು ಇದೂ ಒಂದು ಸುವರ್ಣಾವಕಾಶ. ದಿನವಿಡೀ ಚರ್ಚಿಸಲು ಧಾರಾಳ ವಿಷಯಗಳು ಲಭಿಸುವುದಾದರೆ, ಅವರೊಂದಿಗಿನ ಸಂಬಂಧವನ್ನು ಬಲಿಷ್ಠಗೊಳಿಸಿಲೂ ಸಹೋದರಿಯೊಂದಿಗಿನ ಶಾಪಿಂಗ್ ನಿಜಕ್ಕೂ ಮೋಜಲ್ಲವೇ?

೫.ಗಂಡನ ಸಹೋದರನಿಗೆ ಉತ್ತಮ ಹೋಟೆಲಲ್ಲಿ ಟ್ರೀಟ್

“ಉದರವೇ ಮನುಷ್ಯ ಮನಸ್ಸಿನ ಪ್ರವೇಶ ದ್ವಾರ” ನಿಮ್ಮ ಗಂಡನ ಸಹೋದರನನ್ನು ಒಳ್ಳೆಯ ರೆಸ್ಟೋರೆಂಟಿಗೆ  ಕರೆದೊಯ್ದು, ಉತ್ತಮ ಟ್ರೀಟ್ ನೀಡಿರಿ. ಈ ಸಮಯದಲ್ಲಿ ನೀವಿಬ್ಬರೂ ಸೇರಿ ನಡೆಸಬಹುದಾದ ಉತ್ತಮ ವ್ಯವಹಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಬಹುದು. ಸಹೋದರನು ತನ್ನ ಅನಿಸಿಕೆಗಳನ್ನು ಹಂಚುವಾಗ ಅದನ್ನು ಗಮನವಿಟ್ಟು ಕೇಳುವುದಲ್ಲದೇ, ಅವರ ಅಭಿಪ್ರಾಯಗಳನ್ನು ಗೌರವಿಸುವುದರಿಂದ ಗಂಡನ ಸಹೋದರನೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಸೆಯಬಹುದು.

೬.ಸಂದರ್ಭಾನುಸಾರದ ಉಡುಗೊರೆಗಳು

ಉಡುಗೊರೆ ಯಾರಿಗೆ ಇಷ್ಟವಿಲ್ಲ ಹೇಳಿ...? ಸಕಾಲಕ್ಕೆ ಉಡುಗೋರೆಗಳನ್ನು ನೀಡುವುದರಿಂದ, ನಿಮ್ಮ ಅತ್ತೆ ಮಾವನ ಮನಸ್ಸನ್ನು ಶಾಂತವಾಗಿಡಬಹುದು. ಹಾಗೆಂದು ದುಬಾರಿಯಾದ ಉಡುಗೊರೆಗಳನ್ನು ನೀಡಬೇಕೆಂದೇನೂ ಇಲ್ಲ. ಅತ್ತೆ ಮಾವಂದಿರ ಅಗತ್ಯಗಳಿಗೆ ತಕ್ಕಂತೆ ದಿನನಿತ್ಯವೂ ಉಪಯೋಗವಾಗುವಂತಹ, ಕೋಣೆಯ ಮೂಲೆ ಸೇರಿದ ಸಾಧನಗಳನ್ನು ಉಡುಗೊರೆಗಳನ್ನಾಗಿ ನೀಡುವುದರಿಂದ ಅವರಿಗೂ ಪ್ರಯೋಜನವಾಗುವುದು.  

೭.ಕುಟುಂಬದ ಜನರಿಗಾಗಿ ಸಮಯ ಮೀಸಲಿಡಿ

ಒಳ್ಳೆಯ ಆರೋಗ್ಯವಂತ ನೆಮ್ಮದಿಯ ಸಂಬಂಧಗಳನ್ನು ಬೆಸೆಯಲು ಕಾಲಾವಕಾಶ ತೆಗೆದುಕೊಳ್ಳುತ್ತದೆ. ದಿನ ಬೆಳಗಾಗುವುದರೊಳಗೆ ಯಾವುದೇ ಸಂಬಂಧ ಗಟ್ಟಿ ಆಗುವುದಿಲ್ಲ.  

ದೀರ್ಘಕಾಲಿಕ ಸಂಬಂಧವನ್ನು ಬೆಸೆಯಲು ಬಯಸುವಿರಾದರೆ, ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲೇಬೇಕು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon