Link copied!
Sign in / Sign up
22
Shares

ನಿಮ್ಮ ರಾಶಿಯ ಪ್ರಕಾರ ನಿಮ್ಮ ಮನದಾಳದಲ್ಲಿ ಆತಂಕ ಹುಟ್ಟಿಸುವ 3 ವಿಷಯಗಳು ಯಾವುದೆಂದು ತಿಳಿಯಿರಿ

ನನ್ನ ಜೀವನದಲ್ಲಿ ನಾನು ಕಲಿತ ಅತ್ಯಂತ ಮುಖ್ಯವಾದ ಪಾಠ ಎಂದರೆ ಅದು ನಮ್ಮನ್ನು ನಾವು ಮೊದಲು ಚೆನ್ನಾಗಿ ಅರಿತುಕೊಳ್ಳಬೇಕು. ಹೀಗೆ ಅರಿತರೆ ಮಾತ್ರ ನಮ್ಮ ಮುಂದಿನ ಎಲ್ಲಾ ಸವಾಲುಗಳನ್ನ ಎದುರಿಸಲು ನಮಗೆ ಸಾಧ್ಯ. ನನ್ನ ಅನಿಸಿಕೆ ಪ್ರಕಾರ, ನಾವು ನಮ್ಮ ಶಕ್ತಿಗಳನ್ನ ಎಷ್ಟು ಆಚರಿಸುತ್ತೀವೋ ಅಷ್ಟೇ ಮುಖ್ಯವಾಗಿ ನಮ್ಮ ಭಯಗಳನ್ನೂ ಎದುರಿಸಬೇಕು. ಹೀಗಾಗಿ ನಿಮ್ಮ ರಾಶಿಯ ಆಧಾರದ ಮೇಲೆ ನಿಮ್ಮ ಆತಂಕಗಳು ಯಾವುದೆಂದು ತಿಳಿಯುವುದು ನಿಮ್ಮ ದುರ್ಬಲತೆಗಳನ್ನ ದೂರ ಮಾಡುವಲ್ಲಿ ಮೊದಲ ಹೆಜ್ಜೆ ಆಗುತ್ತದೆ. ನಿಮ್ಮ ಮನದ ಆಳದಲ್ಲಿ ಅಡಗಿರುವ ನಿಮ್ಮ ಆತಂಕಗಳು ಏನು ಎಂಬುದರ ಬಗ್ಗೆ ನಿಮ್ಮ ರಾಶಿಯು ಏನು ಹೇಳುತ್ತದೆ ಎಂಬುದನ್ನ ನಾವು ತಿಳಿಸುತ್ತೇವೆ ಓದಿ.

ಮೇಷ

ಮಕರ ರಾಶಿಯವರು ಯಾವಾಗಲು ಸಕ್ರಿಯತೆ ಮತ್ತು ಸ್ಪರ್ಧೆಯನ್ನ ಇಷ್ಟಪಡುತ್ತಾರೆ. ಇವರಲ್ಲಿ ಆತಂಕ ಉಂಟು ಮಾಡುವ ಮೂರು ವಿಷಯಗಳು ಎಂದರೆ ಅದು ವಿಳಂಬ ಮಾಡುವುದು, ಏನು ಕೆಲಸ ಇಲ್ಲದೆ ಇರುವುದು ಮತ್ತು ತನ್ನ ಸೃಜನಶೀಲತೆ ಉಪಯೋಗಕ್ಕೆ ಬಾರದಂತಹ ಕೆಲಸಗಳು. ಹೀಗಾಗಿ ನಿಮಗೇನಾದರೂ ಜೀವನದಲ್ಲಿ ವಿಶ್ರಾಂತಿಯೇ ಇಲ್ಲ ಎಂದೆನಿಸಿದರೆ, ಈ ಜೀವನವು ರನ್ನಿಂಗ್ ರೇಸ್ ಅಲ್ಲ ಎಂಬುದನ್ನು ನೆನಪಲ್ಲಿಡಿ.


ವೃಷಭ

ವೃಷಭ ರಾಶಿಯವರು ಮಕರ ರಾಶಿಯವರಷ್ಟು ಬೇಗ ಸಿಟ್ಟಾಗುವುದಿಲ್ಲ. ಹಾಗಿದ್ದರೂ ದಿಢೀರ್ ಬದಲಾವಣೆ, ನಿಯಂತ್ರಣ ಕಳೆದುಕೊಳ್ಳುವ ಮತ್ತು ಅನ್ಯೋನ್ಯತೆ ಹಾಳು ಮಾಡುವಂತಹ ಸಂದರ್ಭಗಳು ಇವರ ಮನಸ್ಸಿನಲ್ಲಿ ಆತಂಕ ತುಂಬುತ್ತವೆ.


ಮಿಥುನ

ಮಿಥುನ ರಾಶಿಯವರು ಎರಡು ರೀತಿಯ ಚಿತ್ತವನ್ನ ಹೊಂದಿರುತ್ತಾರೆ. ಈ ನಿಮ್ಮ ಚಂಚಲ ಚಿತ್ತದಿಂದಲೇ ನಿಮಗೆ ನಿರ್ಧಾರಗಳನ್ನ ತೆಗೆದುಕೊಳ್ಳುವುದು, ಒಂಟಿಯಾಗಿರುವುದು, ದಿನ ಮಾಡುವ ಕೆಲಸಗಳನ್ನೇ ಮಾಡಿ ಮುಗಿಸುವುದೇ ನಿಮ್ಮಲ್ಲಿ ಆತಂಕವನ್ನು ಹುಟ್ಟು ಹಾಕುತ್ತವೆ. ಹೀಗಾಗಿ ಕೆಲವೊಮ್ಮೆ ನೀವು ಇನ್ನೊಬ್ಬರ ಬೆಂಬಲವನ್ನ ಅಪೇಕ್ಷಿಸುವುದರಲ್ಲಿ ತಪ್ಪೇನಿಲ್ಲ ಎಂಬುದು ತಿಳಿದುಕೊಳ್ಳಬೇಕು.


ಕಟಕ

ನೀವು ಭಂಡರಂತೆ ಕಾಣಬಹುದು, ಆದರೆ ಅದು ಕೇವಲ ಜನರ ತಪ್ಪು ನಂಬಿಕೆ ಅಷ್ಟೇ. ನಿಮ್ಮ ಸುತ್ತ ನೀವೇ ಹಾಕಿಕೊಳ್ಳುವ ಬೇಲಿಯು, ಬೇರೆ ಜನರನ್ನ ಹೊರಗಿಡಲೆಂದು ಅಲ್ಲ. ಬದಲಿಗೆ ನಿಮಗೆ ಹಾಗಿದ್ದರೇನೇ ಹೆಚ್ಚು ಸುರಕ್ಷಿತವೆನಿಸುವುದು. ಅಪರಿಚಿತರು, ನಿಮ್ಮ ಕುಟುಂಬದ ಬಗ್ಗೆ ಇನ್ನೊಬ್ಬರ ಕೊಂಕು ಮಾತು ಮತ್ತು ನಿಮ್ಮ ಖಾಸಗಿ ವಿಷಯಗಳನ್ನ ಹೊರಜಗತ್ತಿಗೆ ಗೊತ್ತಾಗುವುದು - ಇವುಗಳೇ ನಿಮ್ಮ ಮನಸ್ಸಿನಲ್ಲಿ ದೊಡ್ಡ ಆತಂಕ ಉಂಟು ಮಾಡುವುದು.


ಸಿಂಹ

ಸಿಂಹ ರಾಶಿಯವರು ಬಹಳ ಆತ್ಮಗೌರವ ಮತ್ತು ಹೆಮ್ಮೆಯ ಭಾವನೆ ಹೊಂದಿರುತ್ತಾರೆ. ಹೀಗಾಗಿ ಅವರಲ್ಲಿ ಅವರನ್ನ ಯಾರಾದರೂ ಕಡೆಗಣಿಸಿದರೆ, ಸುಮ್ಮನಿರಲು ಹೇಳಿದರೆ ಅಥವಾ ತಮ್ಮ ಹೆಸರು ಹಾಳು ಮಾಡುವಂತಹ ಸಂದರ್ಭ ಎದುರಾದರೆ ಆತಂಕ ಹುಟ್ಟುತ್ತದೆ.


ಕನ್ಯಾ

ಕನ್ಯಾ ರಾಶಿಯವರು ತುಂಬಾ ಇಷ್ಟಪಡುವ ಗುಣಗಳು ಎಂದರೆ ಅದು ಸ್ವಚ್ಛತೆ, ಕ್ರಮಬದ್ಧತೆ ಮತ್ತು ವಾಸ್ತವತೆ. ಜ್ಯೋತಿಷ್ಯದ ಪ್ರಕಾರ ಈ ಗುಣಗಳಿಗೆ ವಿರುದ್ಧವಾದ ಗುಣಗಳಾದ - ಅಪ್ರಯೋಜಕತೆ, ಹೇಗೆ ಬೇಕೋ ಹಾಗೆ ಇರುವುದು ಮತ್ತು ಸೋಮಾರಿತನ - ಇವುಗಳೇ ಕನ್ಯಾ ರಾಶಿಯವರಲ್ಲಿ ಆತಂಕ ಹುಟ್ಟಿಸುವುದು.


ತುಲಾ

ತುಲಾ ರಾಶಿಯವರನ್ನ ನಾವು ಗುರುತಿಸುವುದೇ ಅವರಲ್ಲಿನ ಬ್ಯಾಲೆನ್ಸ್, ರಮ್ಯತೆ ಮತ್ತು ಕರಾರುವಕ್ಕಾದ ನಿರ್ಧಾರಗಳು. ಹೀಗಾಗಿ ಇವರಿಗೆ ಈ ಮೂರು ಗುಣಗಳಿಗೆ ವಿರುದ್ಧವಾದ ವಿಷಯಗಳಾದ ಸ್ಪಷ್ಟತೆ ಇಲ್ಲದಿರುವುದು, ಇನ್ನೊಬ್ಬರೊಡನೆ ವಾದ ಮಾಡುವುದು ಮತ್ತು ಹಿಂಸೆ, ಇವುಗಳೆಲ್ಲವೂ ಆತಂಕ ಮೂಡಿಸುತ್ತವೆ.


ವೃಶ್ಚಿಕ

ವೃಶ್ಚಿಕ ರಾಶಿಯವರು ಕೆಲವೊಂದು ವಿಷಯಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಈ ರಾಶಿಯವರಿಗೆ ಪ್ರಮಾಣೀಕರಲ್ಲದ, ನೈಜ್ಯತೆ ಇರದ ಮತ್ತು ನಾಟಕವಾಡುವ ಜನರ ಜೊತೆ ಇರುವುದು ಎಂದರೆ ಬಹಳಾನೇ ಭಯ. ಇವರಿಗೆ ನಿಜ ಯಾವುದು, ಸುಳ್ಳು ಯಾವುದು ಎಂಬುದನ್ನ ಕಂಡು ಹಿಡಿಯುವುದು ಬಹಳ ಸುಲಭ ಮತ್ತು ಇವರು ನಂಬಿಕೆಗೆ ತುಂಬಾನೇ ಬೆಲೆ ಕೊಡುತ್ತಾರೆ.


ಧನು

ಇವರದ್ದು ನೇರ ನಡೆ, ನೇರ ನುಡಿ. ಹೀಗಾಗಿ ಇವರಿಗೆ ಇವರ ಸ್ವಾತಂತ್ರಕ್ಕೆ ಅಡ್ಡಿ ಮಾಡುವ ವಿಷಯಗಳಾದ - ಬೇರೆಯವರು ನಿಮ್ಮ ಮೇಲೆ ನಿಯಂತ್ರಣ ಹೇರುವುದು, ತಟಸ್ಥವಾಗಿರುವುದು, ನಿಮಗೆ ಧ್ವನಿ ಎತ್ತಲು ಬಿಡದೆ ಇರುವುದು - ಇವೆಲ್ಲವೂ ನಿಮ್ಮ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತವೆ.


ಮಕರ

ಮಕರ ರಾಶಿಯವರು ತುಂಬಾ ಹುಷಾರಾಗಿರಲು ಬಯಸುತ್ತಾರೆ, ಎಲ್ಲವನ್ನೂ ಸಾಂಪ್ರದಾಯಿಕವಾಗಿ ಮಾಡಲು ಇಚ್ಛಿಸುತ್ತಾರೆ. ಹೀಗಾಗಿ ಅವರು ಹೊಸತನ್ನ ಪ್ರಯತ್ನಿಸಲಿಕ್ಕೆ ಹಿಂದೇಟು ಹಾಕುವರು. ಹೀಗಾಗಿ ಅವರಿಗೆ ದಿಢೀರ್ ಬದಲಾವಣೆಗಳು, ಅಸಾಂಪ್ರದಾಯಿಕ ವಿಧಾನಗಳು, ತಮ್ಮ ಸುತ್ತ ತಾವೇ ಹಾಕಿಕೊಂಡಿರುವ ಬೇಲಿಯಿಂದ ಹೊರಬರುವುದು ಎಂದರೆ ಇವರಿಗೆ ಬಹಳ ಭಯ.


ಕುಂಭ

ಕುಂಭ ರಾಶಿಯವರನ್ನ ನಾವು ರಾಜಿಯಾಗದ, ವ್ಯಕ್ತಿ ಸ್ವಾತಂತ್ರತೆ ಮತ್ತು ಯೋಚನಶೀಲ ಗುಣಗಳಿಂದ ಗುರುತಿಸುತ್ತೇವೆ. ಹೀಗಾಗಿ ಅವರಿಗೆ ಇವುಗಳಿಗೆ ವಿರುದ್ಧವಾದ ಗುಣಗಳಾದ ರಾಜಿಯಾಗುವುದು, ಎಲ್ಲದಕ್ಕೂ ಸುಮ್ಮನೆ ತಲೆ ಆಡಿಸಬೇಕು ಎನ್ನುವುದು, ಅವರ ಮಾತಿಗೆ ಬೆಲೆ ಕೊಡದ ಜನರ ಜೊತೆ ಇರುವುದು ಇವರಲ್ಲಿ ಆತಂಕ ಹುಟ್ಟಿಸುತ್ತವೆ.


ಮೀನಾ

ತುಂಬಾ ಕಾಳಜಿ ತೋರಿಸುವವರು ಮೀನಾ ರಾಶಿಯವರು. ಅದರೊಂದಿಗೆ ತುಂಬಾನೇ ಸೂಕ್ಷ್ಮ ಸ್ವಭಾವದವರು ಕೂಡ ಇವರೇ. ಹೀಗಾಗಿ ಇವರನ್ನು ಯಾರಾದರೂ ದೂಷಿಸಿದರೆ, ಯಾರಾದರೂ ಇವರ ಬಗ್ಗೆ ಮತ್ತು ಇವರ ಕೆಲಸದ ಬಗ್ಗೆ ಕೊಂಕು ಮಾತನಾಡಿದರೆ ಮತ್ತು ತಮ್ಮನ್ನ ಇತರರು ಅವರ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯಗಳು ಇವರಲ್ಲಿ ಆತಂಕ ಹುಟ್ಟು ಹಾಕುತ್ತವೆ.  

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon