Link copied!
Sign in / Sign up
3
Shares

ಈ 5 ಶಕ್ತಿಶಾಲಿ ಮನೆಮದ್ದುಗಳಿಂದ ಅಸ್ತಮಾ ವಿರುದ್ಧ ಖರ್ಚಿಲ್ಲದೆ ಹೋರಾಡಿ!

ಅಸ್ತಮಾ ಎನ್ನುವುದು ಜಗತ್ತಿನ ಒಂದು ಅತ್ಯಂತ ಸಾಮಾನ್ಯವಾದ ದೀರ್ಘಾವಧಿಯ ಕಾಯಿಲೆ ಆಗಿದ್ದು, ಇದನ್ನು ಸಂಪೂರ್ಣವಾಗಿ ಹೋಗಲಾಡಿಸುವಂತಹ ಯಾವುದೇ ಔಷಧಿ ಸದ್ಯಕ್ಕಂತೂ ಲಭ್ಯವಿಲ್ಲ. ಹೀಗಾಗಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಲು ನಾವು ಕೆಲವು ಸೂಕ್ತವಾದ ಔಷಿಧಗಳ ಕಡೆ ಮುಖ ಮಾಡಬೇಕು. ಅಸ್ತಮಾದ ಅಪಾಯಗಳನ್ನ ಕ್ಷೀಣಿಸಲು, ಅಸ್ತಮಾ ಅಟಾಕ್ಸ್ ಅನ್ನು ತಡೆಯಲು, ಔಷಿಧಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ನೀವು ಈ ಅಸ್ತಮಾ ಅಟ್ಟಾಕ್ಸ್ ಅನ್ನು ನಿಯಂತ್ರಿಸಲು ಸೂಕ್ತ ಮನೆಮದ್ದುಗಳನ್ನೇ ಬಳಸಬೇಕು.

ಅಸ್ತಮಾ ಒಂದು ದೀರ್ಘಕಾಲದ ಕಾಯಿಲೆ ಆಗಿರುವುದರಿಂದ, ಅದಕ್ಕೆ ಶಾಶ್ವತ ಪರಿಹಾರ ಎನ್ನುವುದು ಇಲ್ಲ. ನೀವು ನಿಯಮಿತವಾಗಿ ವೈದ್ಯಕೀಯ ಪರಿಹಾರಗಳ ಮತ್ತು ಪ್ರಕ್ರಿಯೆಗಳ ಸಹಾಯ ಪಡೆದುಕೊಳ್ಳುತ್ತಿದ್ದರೂ, ಅಸ್ತಮಾ ಯಾವಾಗ ಬೇಕಾದರೂ ಹೆಚ್ಚಾಗಿ ನಿಮಗೆ ಯಮಯಾತನೆ ಉಂಟು ಮಾಡಬಹುದು. ಆದರೆ ನೀವು ಕೆಲವೊಂದು ಮನೆಮದ್ದುಗಳ ಸಹಾಯದಿಂದ ಅಸ್ತಮಾದ ಕೆಲವು ಲಕ್ಷಣಗಳಿಂದ ಆರಾಮ ಪಡೆದುಕೊಳ್ಳಬಹುದು ಮತ್ತು ಅಸ್ತಮಾದ ಅಪಾಯ ಭುಗಿಲೇಳುತ್ತಿದ್ದಂತೆ ಅದನ್ನು ಕಡಿಮೆ ಮಾಡಬಹುದು. ಅಂತಹ ಮನೆಮದ್ದುಗಳು ಯಾವುದೆಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಓದಿ.


೧. ಮೀನು


ಮೀನುಗಳು ನಿಮ್ಮ ಶ್ವಾಸಕೋಶವು ಹೆಚ್ಚು ಉತ್ತಮವಾಗಿ ಮತ್ತು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡಿ ಅಸ್ತಮಾದ ಲಕ್ಷಣಗಳ ವಿರುದ್ಧ ಹೋರಾಡುತ್ತವೆ. ಅಸ್ತಮಾ ಅಟ್ಯಾಕ್ ವಿರುಧ್ಹ ಅತ್ಯಂತ ಪರಿಣಾಮಕಾರಿಯಾಗಿ ಹೋರಾಡುವ ಮೀನು ಎಂದರೆ ಸಾಲ್ಮನ್ ಮೀನು.

ಸಾಲ್ಮನ್ ಮೀನಿನಲ್ಲಿ ಒಮೇಗಾ-3 ಕೊಬ್ಬಿನಾಮ್ಲ (ಫ್ಯಾಟಿ ಆಸಿಡ್) ಅಂಶ ಹೆಚ್ಚಿದ್ದು, ಇದು ನಿಮ್ಮ ಶ್ವಾಸಕೋಶವನ್ನು ಉದ್ರೇಕಕಾರಿ ಅಂಶಗಳಿಂದ ಕಾಪಾಡುತ್ತದೆ. ಅಲ್ಲದೆ ಒಮೇಗಾ-3 ಕೊಬ್ಬಿನಾಮ್ಲ ಉರಿತವನ್ನು ಕೂಡ ಕಡಿಮೆ ಮಾಡುತ್ತದೆ ಮತ್ತು ನಾಳವನ್ನ ಹಿಗ್ಗಿಸುವಲ್ಲಿ ಸಹಾಯಮಾಡುತ್ತದೆ.


೨. ನಿಂಬೆ ಮತ್ತು ಇತರೆ ಹಣ್ಣುಗಳು


ಕಿತ್ತಳೆ, ಪಪಾಯ, ಸ್ಟ್ರಾಬೆರಿ ಅಂತಹ ಹಣ್ಣುಗಳು ಅಸ್ತಮಾ ಇಂದ ಬಳಲುತ್ತಿರುವವರಿಗೆ ಸಹಾಯ ಮಾಡುವುದಾಗಿ ತಿಳಿದು ಬಂದಿದೆ. ಅಸ್ತಮಾಗಿರುವ ಈ ನೈಸರ್ಗಿಕ ಮನೆಮದ್ದುಗಳು ವಿಟಮಿನ್ C ಅನ್ನು ಹೇರಳವಾಗಿ ಹೊಂದಿರುತ್ತವೆ. ನ್ಯಾಷನಲ್ ಅಕಾಡೆಮಿ ಆ ಸೈನ್ಸ್ ಅವರು ನಡೆಸಿದ ಎರಡು ವರ್ಷ ಕಾಲಾವಧಿಯ ಅಧ್ಯಯನದಲ್ಲಿ ವಿಟಮಿನ್ C ದೇಹದಲ್ಲಿ ಕಡಿಮೆ ಆದಾಗ, ಶ್ವಾಸಕೋಶ ಡ್ರೈ ಆಗುತ್ತದೆ. ಆಗ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡು ಅಸ್ತಮಾ ಅಟ್ಯಾಕ್ ಉಂಟಾಗುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ, ನೀವು ಈ ಮೇಲೆ ತಿಳಿಸಿದ ಹಣ್ಣುಗಳನ್ನು ಮತ್ತು ನಿಂಬೆ ಶರಬತ್ ಅನ್ನು ಪದೇ ಪದೇ ಸೇವಿಸುವುದು ಒಳ್ಳೆಯದೇ.


೩. ಜೇನುತುಪ್ಪ


ಜೇನುತುಪ್ಪ ಕೂಡ ಅಸ್ತಮಾಗೆ ಬಳಸುವ ಒಂದು ಅತ್ಯಂತ ಪ್ರಾಚೀನ ಮತ್ತು ಅತ್ಯುತ್ತಮವಾದ ಮನೆಮದ್ದು ಆಗಿದೆ. ABC ನ್ಯೂಸ್ ಅವರು ನಡೆಸಿರುವ ಸಂಶೋಧನೆಯಲ್ಲಿ ಜೇನುತುಪ್ಪವು ಉಸಿರಿನ ನಾಳದಲ್ಲಿ ಇರುವ ಲೋಳೆಯ ಪದರಗಳನ್ನ ಆರಾಮವಾಗಿಸಿ, ರಾತ್ರಿ ಹೊತ್ತು ಅಸ್ತಮಾದ ಲಕ್ಷಣಗಳಾದ ಕೆಮ್ಮುವುದು ಮತ್ತು ಉಬ್ಬಸವನ್ನ ದೂರವಿಡುತ್ತದೆ. ನೀವು ಪ್ರತಿದಿನ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚದಷ್ಟು ಜೇನುತುಪ್ಪವನ್ನು ಬೆರೆಸಿ ಎರಡು-ಮೂರೂ ಬಾರಿ ಸೇವಿಸಿ. ಇದಲ್ಲದೆ, ನೀವು ಮಲಗುವ ಮುನ್ನ ನಿಮ್ಮ ಗಂಟಲಿನಲ್ಲಿನ ಕಫವನ್ನು ಹೊರಹಾಕಲು ಒಂದು ಚಮಚದಷ್ಟು ಜೇನುತುಪ್ಪಕ್ಕೆ ½ ಚಮಚ ಚಕ್ಕೆ ಪುಡಿಯನ್ನು ಬೆರೆಸಿ ಸೇವಿಸಿದರೆ ತುಂಬಾನೇ ಒಳ್ಳೆಯದು.


೪. ನೀಲಗಿರಿ ಎಣ್ಣೆ


ಅಸ್ತಮಾ ಲಕ್ಷಣಗಳನ್ನ ದೂರವಿಡಲು ಮತ್ತು ಅಸ್ತಮಾದಿಂದ ಮುಕ್ತಿ ಹೊಂದಲು ತುಂಬಾ ಮುಖ್ಯವಾದ ಮನೆಮದ್ದು ಎಂದರೆ ಅದು ನೀಲಗಿರಿ ಎಣ್ಣೆ. ನೀಲಗಿರಿ ಎಣ್ಣೆಗೆ ನಿರಾಳವಾಗಿಸುವ ಶಕ್ತಿ ಇದ್ದು, ಇದು ಕಫವನ್ನ ತೊಳೆದು ಹಾಕಲು ಸಹಾಯ ಮಾಡುತ್ತದೆ. ನೀವು ಈ ನೀಲಗಿರಿ ಎಣ್ಣೆಯ ಕೆಲವು ಹನಿಗಳಷ್ಟನ್ನು ತೆಳುವಾದ ಪೇಪರ್ ಟವೆಲ್ ಮೇಲೆ ಅಥವಾ ಬಿಸಿಯಾಗಿ ಆವಿಯಿಡುತ್ತಿರುವ ನೀರಿಗೆ ಬೆರೆಸಿ, ಅದರ ಆವಿ ಸೇವಿಸಿದರೆ, ನಿಮ್ಮ ಮೂಗಿನ ನಾಳಗಳು ಮತ್ತು ಉಸಿರಾಟದ ನಾಳಗಳು ಶುಚಿಯಾಗುತ್ತವೆ.


೫. ಬೆಳ್ಳುಳ್ಳಿ


ಅಸ್ತಮಾ ಅಟ್ಯಾಕಿಗೆ ನಾನು ನಿಮಗೆ ತಿಳಿಸಲು ಇಚ್ಛಿಸುವ ಇನ್ನೊಂದು ಮನೆಮದ್ದು ಎಂದರೆ ಅದು ಬೆಳ್ಳುಳ್ಳಿ. ನಿಮ್ಮ ಶ್ವಾಸಕೋಶದಲ್ಲಿ ಕಟ್ಟಿಕೊಂಡಿರುವ ವಸ್ತುಗಳನ್ನ ಹೊರಹಾಕಿ ಅಸ್ತಮಾ ಲಕ್ಷಣಗಳಿಂದ ತಕ್ಷಣವೇ ಮುಕ್ತಿ ನೀಡುತ್ತದೆ ಬೆಳ್ಳುಳ್ಳಿ. ಅರ್ಧ ಲೋಟದಷ್ಟು ಹಾಲಿಗೆ 10-15 ಎಸಳುಗಳಷ್ಟು ಬೆಳ್ಳುಳ್ಳಿ ಬೆರೆಸಿ ಚೆನ್ನಾಗಿ ಕುದಿಸಿ, ದಿನಕ್ಕೆ ಒಮ್ಮೆ ಆದರೂ ಸೇವಿಸಿ. ಅಥವಾ ಇದಕ್ಕೆ ಪರ್ಯಾಯವಾಗಿ 3-4 ಎಸಳುಗಳಷ್ಟು ಬೆಳ್ಳುಳ್ಳಿಯನ್ನು ಕುದಿಯುತ್ತಿರುವ ನೀರಿಗೆ ಬೆರೆಸಿ, ಗಾರ್ಲಿಕ್ ಟೀ ಅಥವಾ ಬೆಳ್ಳುಳ್ಳಿ ಟೀ ಸೇವಿಸಿರಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon