Link copied!
Sign in / Sign up
4
Shares

ನಿಮ್ಮ ಪತಿಯಲ್ಲಿ ಅಥವಾ ನಿಮ್ಮಲ್ಲಿ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆ ಆಗಲು ಮೂಲ ಕಾರಣಗಳು

ಮಾನಸಿಕವಾಗಿ ನಿಮಗೆ ಅಥವಾ ನಿಮ್ಮ ಪತಿಗೆ ಈ ರಾತ್ರಿ ರಸಮಯ ಕ್ಷಣಗಳನ್ನ ಸವಿಯಬೇಕೆಂಬ ತವಕ, ಆದರೆ ಆ ಸಮಯ ಬಂದೊಡನೆ ಏನೋ ಒಂಥರಾ ಉದಾಸೀನ. ಹೀಗೆ ಯಾವಾಗಲೋ ಒಮ್ಮೆ ಆದರೆ ತೊಂದರೆಯಿಲ್ಲ, ಆದರೆ ಇದು ಪದೇ ಪದೇ ಆಗುತ್ತಿದ್ದರೆ, ಅಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಕೆಲವರು ಗಂಡಸರಲ್ಲಿ ಲೈಂಗಿಕಾಸಕ್ತಿ ಕಡಿಮೆ ಆಗುವುದಿಲ್ಲ ಎಂದೇ ಭಾವಿಸುತ್ತಾರೆ, ಆದರೆ ಇದು ಖಂಡಿತಾ ಸಾಧ್ಯ ಮತ್ತು ತುಂಬಾನೇ ಸಾಮಾನ್ಯ. ಅಂದುಕೊಳ್ಳದೆ ಇರದಂತಹ ಎಷ್ಟೊಂದು ಅಂಶಗಳು ಲೈಂಗಿಕಾಸಕ್ತಿ ಮೇಲೆ ಪ್ರಭಾವ ಬೀರುತ್ತವೆ. ಒಂದು ವೇಳೆ ಗಂಡಸರು ಈ ಕೆಳಗಿನ ಯಾವುದಾದರು ಅಂಶಗಳಿಂದ ಬಳಲುತ್ತಿದ್ದರೆ, ಅವರ ಲೈಂಗಿಕಾಸಕ್ತಿ ಕುಂದುತ್ತದೆ.

೧. ದಪ್ಪಗಾದರೆ

ಕೇವಲ ಮಾನಸಿಕ ಅಂಶಗಳು ಮಾತ್ರ ಲೈಂಗಿಕಾಸಕ್ತಿ ಮೇಲೆ ಪ್ರಭಾವ ಬೀರುವುದಿಲ್ಲ. ದೈಹಿಕ ಅಂಶಗಳು ಕೂಡ ಪ್ರಭಾವ ಬೀರುತ್ತವೆ. ಅಧ್ಯಯನಗಳ ಪ್ರಕಾರ ಸೊಂಟವು 40 ಇಂಚುಗಳಿಗಿಂತ ಹೆಚ್ಚಿದ್ದ ಗಂಡಸರ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನಿನ ಪ್ರಮಾಣ ಕಡಿಮೆ ಇರುತ್ತದೆ.

ಲೈಂಗಿಕಾಸಕ್ತಿಗೆ ಸಂಬಂಧಿಸಿದ ಮೆದುಳಿನ ಭಾಗಗಳು - ಉದಾಹರೆಣೆಗೆ ಅಮಿಗ್ಡಾಲದಲ್ಲಿ ಬಹಳಷ್ಟು ಟೆಸ್ಟೋಸ್ಟೆರಾನ್ ಗ್ರಾಹಕಗಳು ಇರುತ್ತವೆ. ಒಂದು ವೇಳೆ ದೇಹದಲ್ಲಿ ಬೇಕಾದಷ್ಟು ಟೆಸ್ಟೋಸ್ಟೆರಾನ್ ಇದ್ದರೆ, ಅವುಗಳು ಇವು ಗ್ರಾಹಕಗಳನ್ನು ಸಕ್ರಿಯಗೊಳಿಸಿ, ನಿಮ್ಮನ್ನು ಲೈಂಗಿಕ ಕ್ರಿಯೆಯಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುವಂತೆ ನಿಮ್ಮನ್ನು ತಾಯರು ಮಾಡುತ್ತವೆ. ಒಂದು ವೇಳೆ ಬೇಕಿರುವಷ್ಟು ಟೆಸ್ಟೋಸ್ಟೆರಾನ್ ಇಲ್ಲದಿದ್ದರೆ ನಿಮ್ಮ ಲೈಂಗಿಕಾಸಕ್ತಿ ಕುಂದುತ್ತದೆ. ಇದಕ್ಕೆ ಇರುವ ಪರಿಣಾಮಕಾರಿ ಪರಿಹಾರ ಅಂದರೆ ಅದು ವ್ಯಾಯಾಮ ಮಾಡುವುದು.


೨. ಕತ್ತಲಲ್ಲಿ ಕಾಲ ಕಳೆಯುವುದು

ಇಟಲಿಯ ವೈದ್ಯರಾದ ಡಾ ।। ಫ್ಯಾರ್ಗಿಯೋನಿ ಅವರು ನಡೆಸಿದ ಅಧ್ಯಯನದಲ್ಲಿ ಕತ್ತಲಲ್ಲಿ ಹೆಚ್ಚು ಕಾಲ ಕಳೆಯುವ ಜನರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂಬುದು ತಿಳಿದು ಬಂದಿದೆ. ಇದಕ್ಕೆ ಸಾಧ್ಯವಿರುವ ಕಾರಣ ಎಂದರೆ ಅದು ಪ್ರಕಾಶವಾದ ಬೆಳಕಿನಿಂದ ಲೂಟಿನೈಜಿಂಗ್ ಹೊರೋಮೋನ್ ಒಂದು ಲಭ್ಯವಾಗುವುದು. ಈ ಹಾರ್ಮೋನ್ ಹೆಚ್ಚು ಇದ್ದಷ್ಟು, ದೇಹದಲ್ಲಿ ಟೆಸ್ಟೋಸ್ಟೆರೋನ್ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ ಹೆಚ್ಚೆಚ್ಚು ಸೂರ್ಯನ ಬೆಳಕಿನಲ್ಲಿ ಕಾಲ ಕಳೆಯಬೇಕು.


೩. ಗೊರಕೆ ಹೊಡೆಯುವುದು

ಹೊರಕೆ ಹೊಡೆಯುವುದು ಕೂಡ ನಿದ್ರೆಯಲ್ಲಿನ ಉಸಿರುಗಟ್ಟುಕುವಿಕೆ (ಸ್ಲೀಪ್ ಆಪಿನಿಯ)ದ ಒಂದು ಲಕ್ಷಣ ಆಗಿರಬಹುದು. ಈ ಅಸ್ವಸ್ಥತೆ ಕೂಡ ಟೆಸ್ಟೋಸ್ಟೆರಾನ್ ಪ್ರಮಾಣದಲ್ಲಿನ ಇಳಿಕೆಗೆ ಸಂಬಂಧಿಸಿರುತ್ತದೆ. ಈ ಹಾರ್ಮೋನ್ ನೀವು ಸರಿಯಾಗಿ ನಿದ್ರಿಸಿದಾಗ ಹೆಚ್ಚಾಗುತ್ತದೆ ಮತ್ತು ನೀವು ನಿದ್ರಿಸಲು ಕಷ್ಟ ಪಡುತ್ತಿದ್ದರೆ ಕಡಿಮೆ ಆಗಬಹುದು. ಅಲ್ಲದೆ, ಸ್ಲೀಪ್ ಆಪಿನಿಯ ಹೊಂದಿರುವ ಗಂಡಸರಲ್ಲಿ ಸುಮಾರು 70% ಅಷ್ಟು ಗಂಡಸರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯನ್ನು ಅನುಭವಿಸುತ್ತಾರೆ. ಆದರೆ ಇದಕ್ಕೆ ವೈದ್ಯರ ಬಳಿ ಚಿಕಿತ್ಸೆ ಪಡೆದರೆ, ಪರಿಹರಿಸಿಕೊಳ್ಳಬಹುದು.


೪. ಕಾರ್ಟಿಸೋಲ್ ಪ್ರಮಾಣ ಏರುತ್ತಿದೆ

ನೀವು ಯಾವುದಾದರೂ ಸಂದಿಗ್ಧ ಪರಿಸ್ಥಿತಿಯಲ್ಲಿ, ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ, ನಿಮಗೆ ತಕ್ಷಣವೇ ಕಾರ್ಯಸನ್ನದ್ಧರಾಗಲು ಸಹಾಯ ಮಾಡುವ ಹಾರ್ಮೋನ್ ಈ ಕಾರ್ಟಿಸೋಲ್. ಆದರೆ ಇದು ನಿರಂತರವಾಗಿ ದೇಹದಲ್ಲಿ ಹೆಚ್ಚಾಗಿ ಹರಿಯುತ್ತಲೇ ಇದ್ದರೆ, ನಿಮ್ಮ ದೇಹವು ತ್ರಾಣ ಇಲ್ಲದಂತೆ ಆಗುತ್ತದೆ. ಇದು ಒಂದು ರೀತಿಯಲ್ಲಿ ಅಲಾರ್ಮ್ ಕೂಗಿಕೊಳ್ಳಲು ಒಮ್ಮೆ ಶುರು ಮಾಡಿ, ನಿಲ್ಲದೆ ನಿರಂತರವಾಗಿ ಕೂಗುತ್ತಲೇ ಇರುವ ಹಾಗೆ. ಕಾರ್ಟಿಸೋಲ್ ಇಂದ ಬಹಳಷ್ಟು ಉಪಯೋಗಗಳು ಇದ್ದರೂ, ಇದು ಜಾಸ್ತಿ ಆದರೆ ಹಲವಾರು ತೊಂದರೆಗಳನ್ನ ಹುಟ್ಟು ಹಾಕುತ್ತದೆ.

ಇದು ಜಾಸ್ತಿ ಆದರೆ, ನೀವು ನಿದ್ರೆ ಕಳೆದುಕೊಳ್ಳುತ್ತೀರಾ, ಕೊಬ್ಬನ್ನು ತುಂಬಾ ಸುಲಭವಾಗಿ ಶೇಖರಿಸಿ ಇಟ್ಟುಕೊಳ್ಳುತ್ತೀರಾ, ಆತಂಕಕ್ಕೆ ಒಳಗಾಗುತ್ತೀರಿ ಮತ್ತು ಥೈರಾಯಿಡ್ ಸಮಸ್ಯೆಗಳಿಂದ ಬಳಲಬಹುದು. ಇವುಗಳಲ್ಲಿ ಯಾವುದಾದರು ಕೂಡ ನಿಮ್ಮ ಲೈಂಗಿಕ ಆಸಕ್ತಿ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ನೀವು ಧ್ಯಾನ, ವ್ಯಾಯಾಮ ಮತ್ತು ನಿಮ್ಮ ಮನಸ್ಸಿಗೆ ಖ್ಸುಹಿ ಕೊಡುವಂತಹ ಕೆಲಸಗಳನ್ನ ಮಾಡಿ ನಿಮ್ಮ ಮನಸ್ಸಿನಲ್ಲಿರುವ ಒತ್ತಡವನ್ನು ಇಳಿಸಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon