Link copied!
Sign in / Sign up
9
Shares

ಸೆಕ್ಸ್ ಬಗ್ಗೆ ಮದುವೆ ಆದಮೇಲೆ ಆಸಕ್ತಿ ಕಳೆದುಕೊಳ್ಳುವುದು ಏಕೆ ಮತ್ತು ವಾಪಸ್ಸು ಪಡೆದುಕೊಳ್ಳುವುದು ಹೇಗೆ

ಒಂದಂತೂ ನಿಜ, ಸೆಕ್ಸ್ ಎನ್ನುವ ವಿಷಯವು ಮನುಷ್ಯನನ್ನ ಯಾವಾಗಲೂ ಮೋಡಿಗೆ ಒಳಗಾಗುವಂತೆ ಮಾಡಿದೆ. ಸರಿಯಾದ ರೀತಿ ಯಾವುದು? ಬೇರೆಯವರು ಎಷ್ಟು ಬಾರಿ ಇದರಲ್ಲಿ ತೊಡಗುವರು? ನನಗೆ ಏಕೆ ಹೆಚ್ಚಾಗಿ ಅದರಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ? ಈ ಪಟ್ಟಿ ಹೀಗೆ ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲೊಂದು ಹೊಸ ಅಧ್ಯಯನವು ಇಂತಹ ಕುತೂಹಲಕಾರಿ ಮನೋಭಾವದ ಬಗೆಗಿನ ಕೆಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.

ಬಿ.ಎಂ.ಜೆ ಓಪನ್ ಎಂಬ ಪತ್ರಿಕೆ ಅವರು ನಡೆಸಿ, ಪ್ರಕಟಿಸಿದ ಅಧ್ಯಯನದಲ್ಲಿ 16 ರಿಂದ 74 ವರ್ಷಗಳ ಒಳಗಿನ 4839 ಗಂಡಸರು ಮತ್ತು 6669 ಹೆಂಗಸರನ್ನ ಪರಿಗಣಿಸಲಾಯಿತು. ಇವರಿಗೆಲ್ಲಾ ಸೆಕ್ಸ್ ಬಗೆಗಿನ ವಿವಿಧ ಪ್ರಶ್ನೆಗಳನ್ನ ಕೇಳಿ, ಅವುಗಳನ್ನ ವಿಶ್ಲೇಷಿಸಲಾಯಿತು. ಈ ಅಧ್ಯಯನದಲ್ಲಿ ದೊರೆತ ಫಲಿತಾಂಶವು ಕುತೂಹಲಕಾರಿ ಆಗಿತ್ತು. ಒಟ್ಟಾರೆ, 15% ಅಷ್ಟು ಗಂಡಸರು ತಮಗೆ ಲೈಂಗಿಕ ಆಸಕ್ತಿ ಕಡಿಮೆ ಆಗಿದೆ ಎಂದರೆ, 34% ಅಷ್ಟು ಹೆಂಗಸರು ತಮಗೆ ಲೈಂಗಿಕ ಆಸಕ್ತಿ ಕಡಿಮೆ ಆಗಿದೆ ಎಂದಿದ್ದಾರೆ. ಸಂಶೋಧಕರು ಲೈಂಗಿಕ ಆಸಕ್ತಿ ಕುಗ್ಗಲು ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಕಾರಣ ಎಂದು ಹೇಳುತ್ತಾರೆ. ಇದಲ್ಲದೆ ಲೈಂಗಿಕ ಆಸಕ್ತಿ ಕಡಿಮೆ ಆಗಿದೆ ಎಂದು ಹೇಳಿದ ಬಹಳಷ್ಟು ಮಂದಿಯು ಈ ಹಿಂದೆ ಯಾವಾಗಲಾದರೂ ಒಮ್ಮೆ ಆದರೂ ಲೈಂಗಿಕವಾಗಿ ಹರಡುವ ಸೋಂಕಿಗೆ ತುತ್ತಾಗಿರುವವರು ಅಥವಾ ಇನ್ನೊಬ್ಬರ ಒತ್ತಡಕ್ಕೆ ಮಣಿದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡವರು ಆಗಿದ್ದರು.

ಇದಲ್ಲದೆ ಸಹಜವಾಗಿ ಲೈಂಗಿಕ ಸಂಬಂಧದ ತೊಂದರೆಗೆ ಒಳಗಾದ ಗಂಡಸರು ಮತ್ತು ಹೆಂಗಸರು ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುವುದಾಗಿ ಹೇಳಿದರು. ಉದಾಹರಣೆಗೆ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದದೆ ಇರುವುದು ಅಥವಾ ತಮ್ಮ ಬಯಕೆಗಳ ಬಗ್ಗೆ ಮುಕ್ತವಾಗಿ ಮಾತಾಡಲು ಆಗದೆ ಇರುವುದು.

ಆದರೆ, ಎಲ್ಲದಕ್ಕಿಂತ ಹೆಚ್ಚು ಕಣ್ಣು ಕುಕ್ಕುವ ವಿಷಯ ಎಂದರೆ, ಅದು ಗಂಡಸರ ಸಂಖ್ಯೆಗಿಂತ ದುಪ್ಪಟ್ಟಿನಷ್ಟು ಸಂಖ್ಯೆಯ ಮಹಿಳೆಯರು ಲೈಂಗಿಕ ಆಸಕ್ತಿ ಕಳೆದುಕೊಂಡಿರುವುದಾಗಿ ಹೇಳಿರುವುದು. ಏಕಿರಬಹುದು?

ಸಂಶೋಧಕರು ಗಂಡಸರು ಮತ್ತು ಹೆಂಗಸರ ನಡುವಿನ ಈ ದೊಡ್ಡ ವ್ಯತ್ಯಾಸವು ಕಾಣಿಸಿಕೊಂಡಿರುವುದು ಮದುವೆ ಆಗಿ ಕನಿಷ್ಠ ಒಂದು ವರ್ಷ ಆಗಿರುವವರಲ್ಲೇ ಎನ್ನುತ್ತಾರೆ. ಈ ಜನರಲ್ಲಿ, ಗಂಡಸರಷ್ಟು ಲೈಂಗಿಕ ಆಸಕ್ತಿ ಹೆಂಗಸರು ಉಳಿಸಿಕೊಂಡಿರಲಿಲ್ಲ.

ಇದು ಅಂತದ್ದೇನು ಆಶ್ಚರ್ಯಕರ ಸಂಗತಿ ಅಲ್ಲ. ಏಕೆಂದರೆ, ಮದುವೆ ಆದ ಮೊದಲಲ್ಲಿ ಇರುವಂತಹ ದೈಹಿಕ ಆಕರ್ಷಣೆ ಆಮೇಲೆ ಕಡಿಮೆ ಆಗುವುದು ಸಹಜ. ಆದರೆ ಈ ಅಧ್ಯಯನದಿಂದ ನಾವು ತಿಳಿದುಕೊಳ್ಳಬೇಕಿರುವ ವಿಷಯ ಏನು ಎಂದರೆ, ಮದುವೆ ಆಗಿ ವರ್ಷ ಕಳೆದರೂ ಮಂಚದ ಮೇಲಿನ ಕಿಚ್ಚು ಆರದಂತೆ ಇಟ್ಟುಕೊಳ್ಳಬೇಕಿರುವುದರ ಮಹತ್ವ.

ಒಂದು ವೇಳೆ ನಿಮ್ಮ ಪ್ರಕರಣದಲ್ಲೂ ಇದು ನಿಜವಾಗಿದ್ದರೆ, ಭಯಪಡಬೇಡಿ. ಇದು ಬಹುತೇಕ ಎಲ್ಲರ ಸಮಸ್ಯೆ. ಬಹಳಷ್ಟು ದಂಪತಿಗಳಿಗೆ ತಮ್ಮ ಲೈಂಗಿಕ ಜೀವನವು ಒಂದು ನಿತ್ಯಕ್ರಮ ಆಗಿ, ಅದರಲ್ಲಿ ತಾಜಾ ಏನು ಇಲ್ಲವೆಂದು ಅನಿಸಿದಾಗ, ಅದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

ಹೀಗಾಗಿ ನೀವು ಇದನ್ನು ಯಾವುದೇ ಹೊಸತನ ಇಲ್ಲದ ನಿತ್ಯಕ್ರಮ ಮಾಡಿಕೊಳ್ಳಲು ಬಿಡಬೇಡಿ. ಸೆಕ್ಸ್ ಎನ್ನುವುದು ಸುಗಂಧ ಭರಿತ ಮೋಂಬತ್ತಿಗಳ ಮಂದಬೆಳಕಿನಲ್ಲಿ, ರೋಮ್ಯಾಂಟಿಕ್ ಜಾಗದಲ್ಲೇ ಆಗಬೇಕು ಎಂದಿಲ್ಲ. ಪ್ಲಾನ್ ಮಾಡದೆ ಈ ಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ  ಎಷ್ಟೋ ಬಾರಿ ನಮ್ಮ ಅತ್ಯುತ್ತಮ ಅನುಭವಗಳಿಗೆ ದಾರಿ ಮಾಡಿಕೊಡುತ್ತದೆ. ಮುದ್ದಾಡುವುದು, ಅಪ್ಪುವುದು, ಸ್ಪರ್ಶಿಸುವುದು ಕೂಡ ನಿಮ್ಮ ಅನ್ಯೋನ್ಯತೆಯನ್ನ ಹೆಚ್ಚಿಸುತ್ತದೆ. ಈ ಅನ್ಯೋನ್ಯತೆಯು ಮಂಚದ ಮೇಲೆಯೂ ಕೆಲಸ ಮಾಡುತ್ತದೆ.

ಒಂದು ವೇಳೆ ನಿಮಗೆ ನಿಮ್ಮ ಲೈಂಗಿಕ ಆಸಕ್ತಿ ಕುಗ್ಗಿದೆ ಎನಿಸಿದರೆ, ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಒಳಗೆ ಹಿಡಿದಿಟ್ಟುಕೊಂಡಿರುವ ಅಪಾರ ಮಾನಸಿಕ ಒತ್ತಡವು ಕೂಡ ನಿಮ್ಮ ಲೈಂಗಿಕ ಇಂಗಿತವನ್ನು ಕುಗ್ಗಿಸುತ್ತದೆ. ಅದೇನೇ ಇದ್ದರು, ನೀವು ನಿಮ್ಮ ಲೈಂಗಿಕ ಆಸಕ್ತಿಯನ್ನು ಪುನಃ ವಾಪಸ್ಸು ಪಡೆದುಕೊಳ್ಳಬಹುದು. ಅದು ನಿಮ್ಮ ಕೈಯಲ್ಲೇ ಇದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon