Link copied!
Sign in / Sign up
14
Shares

ಈ 7 ಚಿಹ್ನೆಗಳನ್ನ ನಿಮ್ಮ ಮಗುವಿನಲ್ಲಿ ಗುರುತಿಸಿದರೆ ನಿಮ್ಮ ಮಗು ಆರೋಗ್ಯವಾಗಿದೆ ಎಂದರ್ಥ!

ಎಲ್ಲಾ ತಾಯಿಯಂದಿರು ಮತಿವಿಕಲ್ಪ ಹಂತವನ್ನು ತಮ್ಮ ಜೀವನದಲ್ಲಿ ಅನುಭವಿಸುತ್ತಾರೆ, ತನ್ನ ಮಗುವು ಅಳುವ ಪ್ರತಿ ಸಮಯ, ನರಕಯಾತನೆಯನ್ನು ಅನುಭವಿಸಿದಂತೆ ಭಾವಿಸುತ್ತಾಳೆ. ನೀವು ಹೊಸ ತಾಯಿಯೇ? ನಿಮ್ಮ ಮಗು ಆರೋಗ್ಯದಿಂದ ಇದಿಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ನಿಮ್ಮ ತಲೆಯಲ್ಲಿ ಇತರಹದ ಪ್ರಶ್ನೆಗಳು ಕಾಡುತ್ತಿವಿಯೇ?

ಮಗುವು ದಿನದಲ್ಲಿ ಕೆಲವು ಸಮಯ ಏನು ಮಾಡದೆ ಸುಮ್ಮನೆ ಇರುವುದು ಸರಿನಾ? ಮಗು ಬೆಳವಣಿಗೆಯ ಸರಿಯಾದ ಚಿಹ್ನೆಗಳು ಯಾವುವು? ಎಲ್ಲಾ ತಾಯಿಯಂದಿರು ಇದನ್ನು ಅನುಭವಿಸುತ್ತಾರೆಯೇ? ನಾನು ಏನಾದರು ತಪ್ಪು ಮಾಡುತ್ತಿರುವೆನೇ?

ಮೇಲಿನ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ ಈ ಲೇಖನ ಖಂಡಿತವಾಗಿಯೂ ನಿಮಗಾಗಿ.

೧.ನಿಮ್ಮ ಮಗು ಸ್ವತಃ ತಾನೇ ಬೆಂಬಲಪಡೆದುಕೊಳ್ಳಲು ಶುರುಮಾಡುತ್ತದೆ

ಮಗುವಿಗೆ ಒಂದು ತಿಂಗಳು ತುಂಬುತ್ತಿದ್ದಂತೆಯೇ, ತನ್ನ ಕತ್ತನ್ನು ತಾನೇ ಮೇಲೆತ್ತಲು ಶುರು ಮಾಡುತ್ತದೆ. ಇದು ಮಗುವಿನ ಸಣ್ಣ ಸ್ನಾಯುಗಳು ಬೆಳವಣಿಗೆಯಾಗುತ್ತಿರುವುದನ್ನು ಸೂಚಿಸುತ್ತದೆ.

೨.ಮಗುವು ತನ್ನ ಸುತ್ತಮುತ್ತಲಿನೊಂದಿಗೆ ಸಂವಹನ ಮಾಡಲು ಶುರುಮಾಡುತ್ತದೆ

ಮಗುವಿಗೆ ಒಂದು ತಿಂಗಳು ಕಳೆಯುತ್ತಿದ್ದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮತ್ತು ಒಂದು ವಾರ ಆಗುತ್ತಿದ್ದಂತೆ ನಿಮ್ಮ ಬೆರಳುಗಳನ್ನು ಹಿಡಿದುಕೊಳ್ಳಲು ಆರಂಭಿಸುತ್ತವೆ. ಮೂರೂ ತಿಂಗಳು ತುಂಬಿದ ನಂತರ ಮಗುವು ನಗುವುದನ್ನು ಮತ್ತು ಮುಗುಳ್ನಗುವುದನ್ನು ಶುರುಮಾಡುತ್ತದೆ. ತನ್ನ ಸುತ್ತಲಿರುವ ಅಥವಾ ಮನೆಯ ಸದಸ್ಯರ ಜೊತೆ ನನ್ನನ್ನು ಕರೆದಿಕೋ ಎಂದು ಸನ್ನೆ ಮಾಡಲು ಪ್ರಾರಂಭಿಸುತ್ತವೆ.

೩.ಮಗುವು ಹೆಚ್ಚು ಆಹಾರವನ್ನು ಬಯಸುತ್ತದೆ

ನಿಮ್ಮ ಮಗು ಜನಿಸಿದಾಗ ಅದರ ಹೊಟ್ಟೆ ದ್ರಾಕ್ಷಿಯಂತೆ ಸಣ್ಣದಾಗಿರುತ್ತದೆ, ಮತ್ತು ಅವರು ಪದೇ ಪದೇ ಮಲವಿಸರ್ಜನೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಮಗುವಿಗೆ ಬೇಗನೆ ಹೊಟ್ಟೆ ಹಸಿವಾಗಲು ಶುರುವಾಗಿ ಆಗಾಗ್ಗೆ ಆಹಾರವನ್ನು ಕೇಳುತ್ತವೆ. ಸಾಮಾನ್ಯವಾಗಿ ಶಿಶುಗಳಿಗೆ ದಿನಕ್ಕೆ ೧೨ ಬಾರಿ ಹಾಲುಣಿಸುವುದು ಉತ್ತಮ. ಮಗುವಿಗೆ ಆಹಾರ ಕೊಡಲು ಪ್ರಾರಂಭಿಸಿದಾಗ ಇದನ್ನು ಕಡಿಮೆ ಮಾಡಿ ಮತ್ತು ನಿಧಾನವಾಗಿ ಎದೆಹಾಲನ್ನು ಬಿಡಿಸಿ(ಕನಿಷ್ಠ ಪಕ್ಷ ೧೦ ತಿಂಗಳು ಎದೆಹಾಲು ನೀಡುವುದು ಒಳ್ಳೆಯದು).

೪.ನಿಮ್ಮ ಶಿಶುವು ದಿನಕ್ಕೆ ೧೬ ತಾಸು(ಗಂಟೆ) ನಿದ್ರಿಸುತ್ತದೆ

ಆದಾಗ್ಯೂ ಅವರು ಆರಂಭದಲ್ಲಿ ನಿದ್ರೆಯ ನಿರಂತರ ಚಾಚುವಿಕೆಯನ್ನು ಹೊಂದಿರುವುದಿಲ್ಲ(ಅಂದರೆ ನಿರಂತರ ೧೬ ತಾಸು ನಿದ್ರಿಸುವುದಿಲ್ಲ), ಅವರು ದಿನಕ್ಕೆ ಒಟ್ಟು ೧೬ ಗಂಟೆ ನಿದ್ರಿಸುತ್ತಾರೆ. ನಾಲ್ಕು ತಿಂಗಳು ತುಂಬುತ್ತಿದ್ದಂತೆ ನಿರಂತರ ೪ ಗಂಟೆ ನಿದ್ರೆಮಾಡುವ ಸಾಮರ್ಥ್ಯ ಪಡೆಯುತ್ತಾರೆ.

೫.ನಿಮ್ಮ ಮಗು ದಿನಕ್ಕೆ ೮-೧೦ ಬಾರಿ ಬದಲಿಸುವುದನ್ನು ಬಯಸುತ್ತದೆ

ನಿಮ್ಮ ನವಜಾತ ಶಿಶು ದಿನಕ್ಕೆ ೮-೧೦ ಬಟ್ಟೆಯನ್ನು ವದ್ದೆ(ತೇವ) ಮಾಡಿಕೊಂಡರೆ, ಅದು ಸರಿಯಾದ ಮತ್ತು ಸಾಮಾನ್ಯ ಮಲವನ್ನು ಮಾಡುತ್ತಿದೆ  ಎಂಬುದನ್ನು ತೋರಿಸುತ್ತದೆ. ಮಗುವು ವದ್ದೆ ಮಾಡಿಕೊಳ್ಳುತ್ತದೆ ಏಕೆಂದರೆ ಮಗುವಿನ ಸಂಪೂರ್ಣ ಆಹಾರ ಎದೆಹಾಲು(ಅಥವಾ ಹಸುವಿನ ಹಾಲು) ಮಾತ್ರ ಆಗಿರುತ್ತದೆ.

೬.ನಿಮ್ಮ ಮಗುವು ದಿಡೀರ್ ಶಬ್ದ ಮಾಡಿದ ಕಡೆಗೆ ತಿರುಗಿ ನೋಡುತ್ತದೆ

ಇದು ಮಗುವಿನ ಕಿವಿ ಬೆಳವಣಿಗೆಯನ್ನು ಸೂಚಿಸುತ್ತದೆ. ಮಗುವು ಶಬ್ದ ಯಾವ ಕಡೆಯಿಂದ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಾತಾವರಣದ ಶಬ್ದ, ಬೇರೆಯವರ ಶಬ್ದ ಮತ್ತು ತನ್ನ ತಾಯಿಯ ಶಬ್ದವನ್ನು ಪ್ರತ್ಯೇಕವಾಗಿ ಗುರುತಿಸುತ್ತದೆ.

೭.ನಿಮ್ಮ ಮಗು ಅನುಸರಿಸುತ್ತದೆ

ನಿಮ್ಮ ಮಗುವು ತನ್ನ ಮೊದಲ ತಿಂಗಳಲ್ಲಿ ೧೨ ಇಂಚು ವರೆಗೆ ಮಾತ್ರ ನೋಡಬಹುದು. ೨ ತಿಂಗಳು ನಂತರ ಮಗುವು ೧೮ ಇಂಚುಗಳ ಅಂತರವನ್ನು ನೋಡಲು ಶಕ್ತರಾಗುತ್ತಾರೆ. ಅವರು ತಮ್ಮ ಸುತ್ತಮುತ್ತಲಿನವರ ಜೊತೆ ಎಚ್ಚರಿಕೆಯಿಂದ ಇರುತ್ತ್ತಾರೆ, ಎಂದರೆ ಅವರು ತಮ್ಮ ಸುತ್ತಲಿನ ಪ್ರಪಂಚವನ್ನು ಗಮನಿಸುತ್ತಿದ್ದಾರೆ ಮತ್ತು ಅದರಿಂದ ಕಲಿಯಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.

ನೀವು ತಾಯಿಯಾಗಿ ಒಂದು ಅತ್ಯುತ್ತಮ ಕೆಲಸವನ್ನು ನಿಭಾಯಿಸುತ್ತಿರುವಿರಿ., ಅದಕ್ಕೆ ಧನ್ಯವಾದಗಳು, ನಿಮಗೆ ಈ ಲೇಖನ ಇಷ್ಟವಾದರೆ ಇದನ್ನು ನೀವು ಪ್ರೀತಿಸುವ ಮತ್ತು ಕಾಳಜಿವಹಿಸುವ ಇತರರೊಂದಿಗೆ ಹಂಚಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon