ಇತ್ತೀಚಿಗೆ ಮಕ್ಕಳ ಹಲ್ಲುಗಳು ಅನಾರೋಗ್ಯವಾಗುತ್ತಿರುವುದು ಮತ್ತು ಹಲ್ಲುಗಳ ಸಮಸ್ಯೆಯನ್ನು ಎದುರಿಸುವುದು ಹೆಚ್ಚಾಗಿದೆ. ಇದಕ್ಕೆ ಮಕ್ಕಳು ಸೇವಿಸುವ ಆಹಾರವು ಕೂಡ ಕಾರಣವಾಗಿದೆ. ಸರಿಯಾದ ಆರೋಗ್ಯಕರ ಆಹಾರ ಸೇವಿಸುವುದರಿಂದ ಇಂತಹ ತೊಂದರೆಗಳಿಂದ ಮುಕ್ತಿಹೊಂದಬಹುದು. ಸಾಮಾನ್ಯವಾಗಿ ಎಲ್ಲರಿಗೂ ಸಿಹಿ ತಿನಿಸುಗಳು ಇಷ್ಟ ಅದರಲ್ಲೂ ಮಕ್ಕಳಿಗೆ ಅಚ್ಚುಮೆಚ್ಚು. ಇಂತಹ ತಿನಿಸುಗಳಿಂದ ಅವರ ಹಲ್ಲುಗಳು ತಮ್ಮ ಗಟ್ಟಿತನವನ್ನು ಕಳೆದುಕೊಳ್ಳಬಹುದು. ಇಂತಹ ಕೆಲವು ತೊಂದರೆಗಳಿಗೆ ಸರಳ ಪರಿಹಾರಗಳು ಎಂದರೆ ಆರೋಗ್ಯಕರ ಆಹಾರ. ಅಂತಹ ಕೆಲವು ಆಹಾರಗಳನ್ನು ಇಲ್ಲಿ ನೀಡಲಾಗಿದೆ.
ಒಂದು ತರದ ಆಹಾರ ಸೇವನೆಯಿಂದ ಹಲ್ಲುಗಳ ಎಲ್ಲಾ ತೊಂದರೆ ನಿವಾರಿಸಲು ಸಾಧ್ಯವಿಲ್ಲ. ಹಾಗೆಯೆ ಅಗಾಲಕಾಯಿಯಂತಹ ಕಹಿ ರುಚಿಯ ಸಿಹಿ ಅರೋಗ್ಯ ನೀಡುವ ಪದಾರ್ಥಗಳನ್ನು ಮಕ್ಕಳು ಇರಲಿ ದೊಡ್ಡವರು ಸರಿಯಾಗಿ ತಿನ್ನುವುದಿಲ್ಲ ಅದಕ್ಕಾಗಿ ಎಲ್ಲರು ಸೇವಿಸಬಹುದಾದ ಕೆಲವು ಆಹಾರಗಳನ್ನು ಇಲ್ಲಿ ನೀಡಲಾಗಿದೆ ಇದರಿಂದ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
೧.ನೀರು
ನೀರು ಪ್ರತಿಯೊಬ್ಬರಿಗೂ ತುಂಬಾ ಅವಶ್ಯಕವಾದ ವಸ್ತು. ಹೆಚ್ಚು ನೀರು ಕುಡಿಯುವುದು ಹಲ್ಲು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ನೀರಿನಲ್ಲಿ ಹಲ್ಲಿಗೆ ಹಾನಿಮಾಡುವ ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್ ಇರುವುದಿಲ್ಲ, ಇವುಗಳಲ್ಲಿ ದಂತಕ್ಕೆ ಹಾನಿ ಮಾಡುವ ಬ್ಯಾಕ್ಟಿರಿಯಾ ಇರುತ್ತವೆ. ನೀರು ಬಾಯಿ ಒಣಗದಂತೆ ಕಾಪಾಡುತ್ತದೆ. ಮತ್ತು ಊಟ ಮಾಡಿದ ನಂತರ ನೀರಿನಲ್ಲಿ ಬಾಯಿ ಮುಕ್ಕುಳಿಸುವುದರಿಂದ ಹಲ್ಲಿನ ಸಂದಿಗಳಲ್ಲಿ ಸಿಲುಕಿಕೊಂಡಿರುವ ಆಹಾರದ ಕಣಗಳನ್ನು ತೆಗೆಯಲು ಸಹಾಯವಾಗುತ್ತದೆ.
೨.ಹಸಿ ಕ್ಯಾರೆಟ್, ಸೇಬು
ಹಣ್ಣು ತರಕಾರಿಗಳು ಮಕ್ಕಳಿಗೆ ತುಂಬಾ ಅವಶ್ಯಕವಾದವು. ಇವುಗಳನ್ನು ನೈಸರ್ಗಿಕ ಟೂತ್ಬ್ರಷ್ ಎನ್ನಬಹುದು. ಇವುಗಳನ್ನು ಸೇವಿಸುವುದರಿಂದ ಹಲ್ಲಿನ ಕ್ಯಾವಿಟಿಯನ್ನು ಹೋಗಲಾಡಿಸಬಹುದು. ಸೇಬಿನಲ್ಲಿ ಕೂಡ ಕೆಲವು ಆಸಿಡ್ ಅಂಶಗಳು ಇರುವುದರಿಂದ ಹುಳುಕಲ್ಲನ್ನು ತಪ್ಪಿಸಲು ಸಹಾಯವಾಗುತ್ತದೆ.
೩.ಕಡಿಮೆ ಕೊಬ್ಬಿನ ಹಾಲು ಮತ್ತು ಮೊಸರು
ಕಡಿಮೆ ಕೊಬ್ಬಿನ ಹಾಲು ನಿಮ್ಮ ಮಗುವಿಗೆ ಬೇಕಾಗಿರುವ ಕ್ಯಾಲ್ಸಿಯಂ ಅನ್ನು ನೀಡುತ್ತದೆ. ಕ್ಯಾಲ್ಸಿಯಂ ನಿಮ್ಮ ಮಗುವಿನ ದಂತದ ಜೊತೆಗೆ ಮೂಳೆಯನ್ನು ಬಲಶಾಲಿ ಮಾಡಲು ಸಹಾಯಮಾಡುತ್ತದೆ.
೪.ಹಸಿರು ಸೊಪ್ಪುಗಳು
ಹಾಲು ಮತ್ತು ಮೊಸರಿನಂತೆ ಬಾರ್ಕೋಲಿ ಮತ್ತು ಗಾಢ ಹಸಿರು ಸೊಪ್ಪುಗಳು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದ್ದು ಮಗುವಿನ ಹಲ್ಲು ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ.
೫.ಮೊಟ್ಟೆ
ನಂಬಲು ಕಷ್ಟ ಆಗಬಹುದು, ಆದರೆ ಸತ್ಯ ಮೊಟ್ಟೆಯು ಹಲವು ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಅದು ವಿಟಮಿನ್ D, ಪ್ರೊಟೀನ್ ಮತ್ತು ಫೋಸ್ಪ್ಯಾಟ್ ಅನ್ನು ತನ್ನಲ್ಲಿ ಇರಿಸಿಕೊಂಡಿದೆ. ಇದು ಮೂಳೆಯ ತೊಂದರೆಯಲ್ಲಿ ಅಥವಾ ಬಲಿಷ್ಠಗೊಳಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ವಿಟಮಿನ್ D ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ. ಜೊತೆಗೆ ಇದು ಹಲ್ಲನ್ನು ಶಕ್ತಿಶಾಲಿಯಾಗಿ ಮತ್ತು ಆರೋಗ್ಯವಾಗಿರಿಸಲು ಸಹಾಯಮಾಡುತ್ತದೆ.
ಸಲಹೆ: ಸಕ್ಕರೆ ಅಂಶವುಳ್ಳ ತಿನಿಸುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಊಟ ಮಾಡಿದ ನಂತರ ನೀರಿನಿಂದ ಬಾಯಿಯನ್ನು ಮುಕ್ಕುಳಿಸುವುದು. ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜುವುದು. ಇವುಗಳು ಹಲ್ಲು ಆರೋಗ್ಯವಾಗಿರಲು ಸಹಾಯಮಾಡುತ್ತವೆ.
