Link copied!
Sign in / Sign up
3
Shares

ವೀಕ್ಷಿಸಿ : ಈ ಮಗುವಿಗೆ ಅರ್ಧ ತಲೆ ಬುರುಡೆ, ಮೆದುಳೇ ಇಲ್ಲ !

ನೀವು ಚಿತ್ರ-ವಿಚಿತ್ರ ಹೆರಿಗೆಯ, ಮಕ್ಕಳ ಕಥೆಗಳನ್ನ ಕೇಳಿರುತ್ತೀರಾ ಅಥವಾ ನೋಡಿರುತ್ತೀರ. ಆದರೆ, ಇಲ್ಲಿ ನಾವು ನಿಮಗೆ ತೋರಿಸುವ ರೀತಿಯ ಮಗುವನ್ನ ನೀವು ಬಹುಷಃ ಎಂದಿಗೂ ನೋಡಿರಲಿಕ್ಕಿಲ್ಲ. ಹೀಗೂ ಆಗಬಹುದು ಎಂಬ ಒಂದು ಕಲ್ಪನೆಯು ಬಹುಷಃ ನಿಮ್ಮ ತಲೆಯಲ್ಲಿ ಬಂದಿರುವುದಿಲ್ಲ! ಅಂತಹದೊಂದು ಕಥೆ ಅಥವಾ ವ್ಯಥೆ ಇದು. ಈ ಮಗುವಿನ ಹೆಸರು ಜಾಕ್ಸನ್ ಬುಯೆಲ್.

ಈ ಜಾಕ್ಸನ್ ತನ್ನ ಅಮ್ಮನ ಗರ್ಭಧಲ್ಲಿ ಇದ್ದಾಗ, ಆತನ ಮೆದುಳು ಕೇವಲ 30% ಅಷ್ಟೇ ಬೆಳವಣಿಗೆ ಹೊಂದಿತ್ತು ಮತ್ತು ಅವನಿಗೆ ಅರ್ಧ ತಲೆ ಬುರುಡೆಯೇ ಇರಲಿಲ್ಲ! ಆತನ ಮುಖವು ನೀಲಿ ಬಣ್ಣಕ್ಕೆ ತಿರುಗಿತ್ತು ಮತ್ತು ಅವನ ಹೊಕ್ಕಳು ಬಳ್ಳಿಯು ಆತನ ಕುತ್ತಿಗೆ ಸುತ್ತಾ ಸಿಕ್ಕಿ ಹಾಕಿಕೊಂಡಿತ್ತು! ವೈದ್ಯರಿಗೆ ಇಲ್ಲಿ ಏನಾಗಿದೆ ಎಂಬುದೇ ತಿಳಿಯದೆ ಗಲಿಬಿಲಿ ಆದರು. ಇದಕ್ಕೆ ಕಾರಣ ಏನು ಎಂಬುದು ಅವರಿಗೂ ತಿಳಿಯಲಿಲ್ಲ. ಆದರೆ ಆ ವೈದ್ಯರು ಜಾಕ್ಸನ್ ತಂದೆ ತಾಯಿಗೆ ಒಂದು ವೇಳೆ ಈ ಮಗುವನ್ನ ಹೆರಿಗೆ ಮಾಡಿ ಹೊರತೆಗೆದರೆ, ಅದು ಕೇವಲ ಕೆಲವು ಗಂಟೆಗಳ ಕಾಲವಷ್ಟೇ ಬದುಕಿರಬಹುದು ಎಂಬ ಎಚ್ಚರಿಕೆ ನೀಡಿದರು. ಅಬ್ಬಬ್ಬಾ ಎಂದರೆ ಕೆಲವು ದಿನಗಳು ಬದುಕಬಹುದು ಎಂದರು.


ಈ ಜಾಕ್ಸನ್ ಅಲ್ಲಿ ಕಾಣಿಸಿಕೊಂಡಿದ್ದು ಮೈಕ್ರೋಹೈಡ್ರಾನ್ಎನ್ಸೆಫಾಲಿ ಎಂಬ ಮೆದುಳಿನ ಬೆಳವಣಿಗೆಯ ಅಸಹಜತೆ. ಈ ಅಸಹಜತೆಯ ಬಗ್ಗೆ ತಜ್ಞರಿಗೂ ಸ್ವಲ್ಪವಷ್ಟೆ ಮಾಹಿತಿ ಇದ್ದು, ಇಲ್ಲಿಯವರೆಗೆ ಇದು ಕಾಣಿಸಿಕೊಂಡಿದ್ದ ಪ್ರಕರಣಗಳಲಲ್ಲೆಲ್ಲಾ ಮಕ್ಕಳು ಕೇವಲ ಒಂದೆರೆಡು ದಿನಗಳಷ್ಟು ಮಾತ್ರ ಬದುಕಿರುವುದಿದೆ. ಇದು ಜಾಕ್ಸನ್ ಅಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾರಣ ಏನು ಎಂಬುದು ವೈದ್ಯರಿಗೂ ಸ್ಪಷ್ಟಿಕರಿಸಲು ಆಗಲಿಲ್ಲ.

ಆದರೆ ಜಾಕ್ಸನ್ಗೆ ಈಗ ಮೂರೂವರೆ ವರ್ಷಗಳಾಗಿದ್ದು, ಎಲ್ಲಾ ಊಹೆಗಳನ್ನ ಮತ್ತು ಸಾಧ್ಯತೆಗಳನ್ನ ಜಾಡಿಸಿ ಒದ್ದು, ಅದುಕ್ಕೆ ವಿರುದ್ಧವಾಗಿ ಇನ್ನೂ ಜೀವಂತವಾಗಿದ್ದಾನೆ. ತಜ್ಞರು ಈತನಿಗೆ ನಡೆಯಲು, ಮಾತನಾಡಲು, ನೋಡಲು ಮತ್ತು ಕೇಳಲು ಆಗುವುದಿಲ್ಲ ಎಂದು ಹೇಳಿದ್ದರು. ಆದರೆ ಅವರೆಲ್ಲರ ಮಾತುಗಳಿಗೆ ವಿರುದ್ಧವಾಗಿ ಈಗ ಆತ ವಸ್ತುಗಳನ್ನ ಕೈಯಲ್ಲಿ ಹಿಡಿಯಲು ಮತ್ತು ಎತ್ತಲು ಕಲಿತಿದ್ದಾನೆ. ಅಷ್ಟೇ ಅಲ್ಲದೆ ಆತ ತನ್ನ ತಂದೆ ತಾಯಿಗೆ “ಐ ಲವ್ ಯು” ಎಂದು ಹೇಳುವುದನ್ನ ಸಹ ಕಲಿತಿದ್ದಾನೆ! ಇದೇ ಅಲ್ಲವೇ ಸೃಷ್ಟಿಯ ಅದ್ಭುತ ಎನ್ನುವುದು. ಅವನ ವಿಡಿಯೋ ಇಲ್ಲಿದೆ ನೋಡಿ. ನಿಮಗೆ ಈತನ ಕಥೆ ಅಚ್ಚರಿ ಮೂಡಿಸಿದ್ದರೆ, ಈ ಬ್ಲಾಗ್ ಅನ್ನು ಶೇರ್ ಮಾಡಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon