Link copied!
Sign in / Sign up
0
Shares

ಗರ್ಭಾವಸ್ಥೆಯಲ್ಲಿ ಕರುಳುವಾಳ: ರೋಗಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ (Appendicitis During Pregnancy: Symptoms, Causes and Treatment In Kannada)

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಎದುರಿಸುವ ಪ್ರಮುಖ ತೊಂದರೆಗಳಲ್ಲಿ ಒಂದು - ಹೊಟ್ಟೆ ನೋವು ಮತ್ತು ತೀವ್ರ ಸೆಳವು. ಹಲವಾರು ಬಾರಿ ಅವು ಕ್ಷಣಿಕದ ತೊಂದರೆಯಾಗಿರುತ್ತವೆ ಹಾಗೂ ದೀರ್ಘಕಾಲದ ತೊಂದರೆಗಳನ್ನು ಉಂಟುಮಾಡದ ತೊಂದರೆಗಳಾಗುತ್ತವೆ. ಆದರೆ ನಿಮಗೆ ಅದು ಕರುಳುವಾಳ ಆಗಿರಬಹುದು ಎಂಬ ಅನುಮಾನವಿದ್ದರೆ, ಕರುಳುವಾಳದ ಗುಣಲಕ್ಷಣಗಳನ್ನು ತಿಳಿದುಕೊಂಡು, ಅವುಗಳ ಸೂಕ್ತ ಚಿಕಿತ್ಸೆಯೇನು ಎಂದು ತಿಳಿದುಕೊಳ್ಳುವುದು ಒಳ್ಳೆಯದು.

ಪರಿವಿಡಿ:

೧. ಕರುಳುವಾಳ ಎಂದರೇನು?!

೨. ಗರ್ಭಾವಸ್ಥೆಯಲ್ಲಿ ಕರುಳುವಾಳ

೩. ಕರುಳುವಾಳದ ಕಾರಣಗಳೇನು?

೪. ಗರ್ಭವಾಸ್ಥೆಯ ಸಮಯದಲ್ಲಿ ಕರುಳುವಾಳದ ಗುಣಲಕ್ಷಣಗಳೇನು?

     ೪.೧. ಹೊಟ್ಟೆ ಹಸಿವು ಕಡಿಮೆಯಾಗುವುದು

     ೪.೨. ಜ್ವರ

     ೪. ೩. ವಾಕರಿಕೆ

     ೪. ೪. ಯೋನಿಯಿಂದ ಸ್ರಾವ

೫. ಗರ್ಭವಾಸ್ಥೆಯಲ್ಲಿ ಹೊಟ್ಟೆ ನೋವು

೬. ಗರ್ಭವಾಸ್ಥೆಯಲ್ಲಿ ಕರುಳುವಾಳ ರೋಗನಿರ್ಣಯ

     ೬. ೧. ರಕ್ತಪರೀಕ್ಷೆ

     ೬. ೨. ಇಮೇಜಿಂಗ್ ಪರೀಕ್ಷೆ

     ೬. ೩. ಮೂತ್ರ ಪರೀಕ್ಷೆ

೭. ಗರ್ಭಿಣಿಯರಿಗೆ ಕರುಳುವಾಳ ಚಿಕಿತ್ಸೆ

     ೭. ೧. ಔಷಧಿ

     ೭. ೨. ಕರುಳುವಾಳ ಶಸ್ತ್ರಚಿಕಿತ್ಸೆ ಅಥವಾ ಲ್ಯಾಪ್ರೋಸ್ಕೋಪಿಕ್ ಅಪೆಂಡೆಕ್ಟಮಿ

೮. ಕರುಳುವಾಳ ಶಸ್ತ್ರಚಿಕಿತ್ಸೆಯ ನಂತರ ಕಾಳಜಿ ತೆಗೆದುಕೊಳ್ಳುವುದು

೯. ಸಮಾರೋಪ

೧. ಕರುಳುವಾಳ ಎಂದರೇನು?

ಕರುಳುವಾಳ ಎಂದರೆ ದೇಹದ ಕೋಲನ್ ಗೆ ಜೋಡಿಸಲಾಗಿರುವ ಬೆರಳಾಕಾರದ ಅಂಗ, ಅಪ್ಪೆಂಡಿಕ್ಸ್, ಉರಿಯೂತ. ಅಪ್ಪೆಂಡಿಕ್ಸ್ ನಮ್ಮ ದೇಹದಲ್ಲಿ ಯಾವುದೇ ಉಪಯೋಗವಿಲ್ಲದ ಭಾಗಗಳಲ್ಲಿ ಒಂದಾಗಿದ್ದರೂ, ಕೆಲವು ಸಲ ಕೀವಿನಿಂದ ತುಂಬಿಕೊಂಡು ಅತಿಯಾದ ನೋವು ಮತ್ತು ಸೆಳೆತವನ್ನು ಉಂಟು ಮಾಡುತ್ತದೆ. ಈ ನೋವು ಕರುಳುವಾಳದ ಚಿಕಿತ್ಸೆ ಪಡೆಯುವವರೆಗೂ ಇರುತ್ತದೆ.

[Back To Top]

೨. ಗರ್ಭಾವಸ್ಥೆಯಲ್ಲಿ ಕರಳುವಾಳ:

ಗರ್ಭಾವಸ್ಥೆಯಲ್ಲಿ ಕರುಳುವಾಳ ಸಾಮಾನ್ಯವಾಗಿ ಕಂಡುಬರುವ ಸಂಗತಿ ಅಲ್ಲದೇ ಇದ್ದರೂ, ಸಾವಿರದಲ್ಲಿ ಒಬ್ಬರು ಪ್ರಾಯಶಃ ಗರ್ಭಧಾರಣೆಯ ಮೊದಲ ಆರು ತಿಂಗಳಲ್ಲಿ ಕಂಡು ಬರುತ್ತದೆ. ಗರ್ಭವಾಸ್ಥೆಯಲ್ಲಿ ಆರೋಗ್ಯದ ಅನಿವಾರ್ಯ ಸಂಗತಿಗಳಲ್ಲಿ ಇದೂ ಕೂಡ ಒಂದು. ಈ ರೋಗ ಅತೀರೇಖಕ್ಕೆ ಹೋಗುವುದನ್ನು ತಡೆಗಟ್ಟಲು, ಈ ರೋಗದ ಲಕ್ಷಣಗಳನ್ನು ಮೊದಲೇ ಒಳ್ಳೇಯದು.

ಕೆಲವು ಅಪರೂಪದ ಪ್ರಕರಣಗಳಲ್ಲಿ, ಕರುಳುವಾಳ ಹೊಟ್ಟೆ ನೋವಿನೊಂದಿಗೆ ಅತಿಯಾದ ಅಸಮಾಧಾನವನ್ನು ಅನುಭವಿಸುವಂತೆ ಮಾಡಬಹುದು.

೩. ಕರುಳುವಾಳದ ಕಾರಣಗಳೇನು?

ಕರುಳುವಾಳದ ರೋಗಲಕ್ಷಣಗಳನ್ನು ತಿಳಿದುಕೊಂಡಿರುವುದು ಒಳಿತು. ವಿಶೇಷವಾಗಿ, ಗರ್ಭಾವಸ್ಥೆಯಲ್ಲಿ ಕರುಳುವಾಳ ರೋಗವನ್ನು ಬೇಗನೆ ಗುರುತಿಸಿದಷ್ಟು ಸುರಕ್ಷಿತ. ಈ ರೋಗದ ಕೆಲವು ಗುಣಲಕ್ಷಣಗಳು ಕೆಳಗಿನಂತಿವೆ.

೧. ಕರುಳಿನ ಸೂಕ್ಷ್ಮಜೀವಿಗಳಾದ ಪಿನ್-ವಾರ್ಮ್ ಗಳು ಜೀರ್ಣಾಂಗದಲ್ಲಿದ್ದಾಗ, ಕರುಳುವಾಳ ಆಗುವ ಸಾಧ್ಯತೆ ಇರುತ್ತದೆ.

೨. ಪಿನ್ ಅಥವಾ ಗುಂಡಿಗಳಂತಹ ವಿದೇಶಿ ವಸ್ತುಗಳು ಹೊಟ್ಟೆಯೊಳಗೆ ಸೇರಿದಾಗ, ಕರುಳುವಾಳ ಆಗುವ ಸಾಧ್ಯತೆ ಇರುತ್ತದೆ.

೩. ಅಪ್ಪೆಂಡಿಸಿಎಲ್ ಲುಮೆನ್ ಗೆ ಯಾವುದಾದರೂ ಆಂತರಿಕ ಅಥವಾ ಬಾಹ್ಯ ವಸ್ತುಗಳಿಂದ ಹಾನಿಯಾಗಿದ್ದರೆ.

೪. ಅಪ್ಪೆಂಡಿಕ್ಸ್ ಇರುವ ಪ್ರದೇಶದಲ್ಲಿ ಮಲದ ಶೇಖರೆಣೆಯಾಗಿ, ತೀವ್ರವಾದ ನೋವನ್ನುಂಟು ಮಾಡಬಹುದು.

೫. ಅಪ್ಪೆಂಡಿಕ್ಸ್ ನಲ್ಲಿ ಕಲ್ಲುಗಳ ರಚನೆಯಿಂದ ಅಥವಾ ಕಿಬ್ಬೊಟ್ಟೆಯಲ್ಲಿ ಕಾಲ್ಸಿಫೈಡ್ ಮಲದ ಶೇಖರಣೆಯಿಂದ ಕರುಳುವಾಳ ಸಾಧ್ಯ.

೬. ಸಾಲ್ಮೊನೆಲ್ಲಾ, ಮೀಸಲ್ಸ್, ಶೀಗೆಲ್ಲ ರೀತಿಯ ಬ್ಯಾಕ್ಟೀರಿಯಾ ಸೋಂಕಿನಿಂದ ಗರ್ಭಾವಸ್ಥೆಯಲ್ಲಿ ಕರುಳುವಾಳ ಉಂಟಾಗಬಹುದು.

ಇವೆಲ್ಲ ಕಾರಣಗಳನ್ನು ಕಡೆಗಣಿಸಿದರೂ, ಈ ರೋಗ ಅನುವಂಶಿಕವಾಗಿಯೂ ಬರಬಹುದು. ಹಾಗಾಗಿ, ನಿಮ್ಮ ಕುಟುಂಬದಲ್ಲಿ ಕರುಳುವಾಳ ರೋಗದ ಇತಿಹಾಸವಿದ್ದರೆ, ಶೀಘ್ರದಲ್ಲೇ ವೈದ್ಯರನ್ನು ಕಾಣುವುದು ಸೂಕ್ತ.

[Back To Top]

೪. ಗರ್ಭಾವಸ್ಥೆಯ  ಸಮಯದಲ್ಲಿ ಕರುಳುವಾಳದ ಗುಣಲಕ್ಷಣಗಳೇನು?

ಈ ಕೆಳಗೆ ಕೊಟ್ಟಿರುವ ರೋಗಲಕ್ಷಣಗಳ ಬಗ್ಗೆ ಗಮನವಿರಲಿ:

೪.೧. ಹೊಟ್ಟೆ ಹಸಿವು ಕಡಿಮೆಯಾಗುವುದು: ನಿಮಗೆ ಅಸ್ವಾಭಾವಿಕವಾಗಿ ಹಸಿವು ಕಡಿಮೆಯಾದರೆ ಅಥವಾ ಮಲಬದ್ಧತೆ, ಸುಸ್ತು ತರಹದ ತೊಂದರೆಗಳು ಕಾಡತೊಡಗಿದರೆ, ನಿಮ್ಮ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಅದು ಕರುಳುವಾಳ ಆಗಿರುವ ಸಾಧ್ಯತೆ ಇದೆ.

೪.೨. ಜ್ವರ: ಕರುಳುವಾಳದ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು - ಜ್ವರ. ಹಾಗಾಗಿ, ದೀರ್ಘಕಾಲಿಕ ಜ್ವರದಿಂದ ನೀವು ಬಳಲುತ್ತಿದ್ದರೆ, ವೈದ್ಯರಿಂದ ಪರೀಕ್ಷೆಗೊಳಗಾಗಿರಿ.

೪.೩. ವಾಕರಿಕೆ: ವಾಕರಿಕೆ ಮತ್ತು ವಾಂತಿ - ಎರಡೂ ಕರುಳುವಾಳದ ರೋಗಲಕ್ಷಣಗಳು. ಆದರೆ, ಅವುಗಳು ಗರ್ಭಾವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ಅನುಭವಗಳು. ಹಾಗಾಗಿ, ಗರ್ಭಾವಸ್ಥೆಯಲ್ಲಿ ಹೊಟ್ಟೆ ನೋವಿನೊಂದಿಗೆ, ವಾಕರಿಕೆ ಬರುತ್ತಿದ್ದರೆ, ಅದು ಕರುಳುವಾಳ ಆಗಿರುವ ಸಾಧ್ಯತೆ ಇದೆ.

೪.೪. ಯೋನಿಯಿಂದ ರಕ್ತಸ್ರಾವ: ಗರ್ಭಾವಸ್ಥೆಯಲ್ಲಿ ಯೋನಿಯಿಂದ ರಕ್ತಸ್ರಾವವಾಗುವುದು ಒಳ್ಳೆಯ ಲಕ್ಷಣವಲ್ಲ. ಈ ರಕ್ತಸ್ರಾವ ಹೊಟ್ಟೆ ನೋವಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ, ಅದು ಕರುಳುವಾಳವಾಗಿರುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಅದೇನೇ ಆಗಿರಲಿ, ಯೋನಿಯಿಂದ ಆಗುವ ರಕ್ತಸ್ರಾವವನ್ನು ಸೂಕ್ತ ವೈದ್ಯಕೀಯ ಸಹಾಯದೊಂದಿಗೆ ಚಿಕಿತ್ಸೆ ಪಡೆಯಬೇಕು.

೫. ಗರ್ಭವಾಸ್ಥೆಯಲ್ಲಿ ಹೊಟ್ಟೆ ನೋವು: ಗರ್ಭಾವಸ್ಥೆಯಲ್ಲಿ ಹೊಟ್ಟೆ ನೋವುಂಟಾಗುವುದು ಸರ್ವೇಸಾಮಾನ್ಯ. ಆದರೆ, ಕರುಳುವಾಳದ ಹೊಟ್ಟೆ ನೋವು ಎಲ್ಲುಂಟಾಗುತ್ತದೆ ಎಂದು ತಿಳಿದುಕೊಳ್ಳುವುದು ಅಗತ್ಯ. ಹೊಟ್ಟೆಯ ಕೆಳಭಾಗದ ಕೋನ ಮಾಪಕದಲ್ಲಿ ನೋವುಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರೆ, ಜೋತೆಗೆ ಒತ್ತಡ ಹಾಕಿದಾಗ ನೋವು ಹೆಚ್ಚಾಗುವಂತಿದ್ದರೆ, ಅದು ಕರುಳುವಾಳ ರೋಗವಾಗಿರಬಹುದು. ಹಾಗೂ ವೈದ್ಯಕೀಯ ಸಹಾಯದ ಅಗತ್ಯತೆ ನಿಮಗಿದೆ.

ಕರುಳುವಾಳದ ರೋಗಲಕ್ಷಣಗಳು ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳಲ್ಲಿ ಕಂಡುಬಂದರೆ, ಅವುಗಳನ್ನು ಪ್ರಸವದ ನೋವು ಎಂದು ನಿರಾಕರಿಸಬಹುದು. ಆದರೆ ಈ ನೋವು ಸಮಯ ಕಳೆದಂತೆ, ಜಾಸ್ತಿಯಾಗುತ್ತಿದ್ದರೆ, ನಿಮಗೆ ಮತ್ತು ನಿಮ್ಮ ಮಗುವಿಗಾಗಬಹುದಾದ ತೊಂದರೆಗಳನ್ನು ತಡೆಯಲು ವೈದ್ಯರನ್ನು ಕಾಣುವುದು ಅನಿವಾರ್ಯ.

ಕರುಳುವಾಳವನ್ನು ಸೂಕ್ತ ಚಿಕಿತ್ಸೆ ನೀಡದೆ ನಿರಾಕರಿಸಿದರೆ, ಅಪ್ಪೆಂಡಿಕ್ಸ್ ಒಡೆದು, ಮಗುವಿನ ಹಾಗೂ ತಾಯಿಯ ಆರೋಗ್ಯಕ್ಕೆ ತೊಂದರೆ ಉಂಟುಮಾಡಬಹುದು.

೬. ಗರ್ಭವಾಸ್ಥೆಯಲ್ಲಿ ಕರುಳುವಾಳ ರೋಗನಿರ್ಣಯ

ಗರ್ಭಾವಸ್ಥೆಯಲ್ಲಿ ನೀವು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಮತ್ತು ನೀವು ಅಥವಾ ನಿಮ್ಮ ವೈದ್ಯರು ಅದನ್ನು ಕರುಳುವಾಳವಿರಬಹುದೆಂದು ಅನುಮಾನಿಸುತ್ತದ್ದರೆ, ರೋಗವನ್ನು ಕೆಳಗೆ ನೀಡಿರುವ ಪರೀಕ್ಷೆಗಳ ಸಹಾಯದಿಂದ ನಿರ್ಣಯ ಮಾಡಬಹುದು.

೬. ೧. ರಕ್ತ ಪರೀಕ್ಷೆ: ರಕ್ತಪರೀಕ್ಷೆಯಿಂದ ರಕ್ತದಲ್ಲಿರುವ ಬಿಳಿ ಜೀವಕೋಶಗಳ ಎಣಿಕೆ ಮಾಡಲಾಗುತ್ತದೆ. ಬಿಳಿ ಜೀವಕೋಶಗಳ ಸಂಖ್ಯಾ ಸಮಯದಲ್ಲಿ ಹೆಚ್ಚಾಗಿರುತ್ತದೆ.

೬.೨. ಇಮೇಜಿಂಗ್ ಪರೀಕ್ಷೆ: MRI ಮತ್ತು CT ಸ್ಕ್ಯಾನ್ ಗಳಂತಹ ಇಮೇಜಿಂಗ್ ಪರೀಕ್ಷೆ ಮಾಡುವುದರಿಂದ ರೋಗದ ಸರಿಯಾದ ಚಿತ್ರಣ ಸಿಗುವುದು.

೬.೩. ಮೂತ್ರ ಪರೀಕ್ಷೆ: ಕರುಳುವಾಳ ಸಾಮಾನ್ಯವಾಗಿ, UTI ಗೆ ಕಾರಣವಾಗುತ್ತದೆ. ಹಾಗಾಗಿ, ಮೂತ್ರ ಪರೀಕ್ಷೆಯಿಂದ ಕರುಳುವಾಳ ರೋಗ ನಿರ್ಣಯ ಮಾಡಬಹುದು.

[Back To Top]

೭. ಗರ್ಭಿಣಿಯರಿಗೆ ಕರುಳುವಾಳ ಚಿಕಿತ್ಸೆ

ಗರ್ಭಾವಸ್ಥೆಯಲ್ಲಿ ಎರಡು ಬಗೆಯ ಚಿಕಿತ್ಸೆಗಳೊಂದಿಗೆ ಕರುಳುವಾಳ ರೋಗವನ್ನು ನಿವಾರಿಸಬಹುದು.

೭.೧. ಔಷಧಿ: ಕರುಳುವಾಳ ನಿಮಗೆ ತೀವ್ರವಾಗಿರದಿದ್ದರೆ, ಅದನ್ನು ಕೇವಲ ಗುಳಿಗೆ ಮತ್ತು ಚುಚ್ಚುಮದ್ದಿನಿಂದ ನಿವಾರಿಸಬಹುದು.

೭.೨. ಕರುಳುವಾಳ ಶಸ್ತ್ರಚಿಕಿತ್ಸೆ ಅಥವಾ ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟಮಿ: ಕರುಳುವಾಳ ನಿಮಗೆ ಅತಿಯಾಗಿ ತೊಂದರೆ ಉಂಟುಮಾಡುತ್ತಿದ್ದರೆ ಅಥವಾ ನಿಮ್ಮ ಅಪ್ಪೆಂಡಿಕ್ಸ್ ನಲ್ಲಿ ರಂಧ್ರಗಳಿರಬಹುದು ಎಂದು ಅನುಮಾನಿಸುತ್ತದ್ದರೆ, ಕರುಳುವಾಳ ಶಸ್ತ್ರಚಿಕಿತ್ಸೆ ಸೂಕ್ತ ಚಿಕಿತ್ಸೆ. ನೀವು ಗರ್ಭಧಾರಣೆಯ ಮೊದಲ ಆರು ತಿಂಗಳೊಳಗೆ ಇದ್ದರೆ, ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟಮಿ ಮೂಲಕ ಚಿಕಿತ್ಸಿಸಬಹುದು, ಆದರೆ, ನೀವು ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳಲ್ಲಿದ್ದರೆ, ಕರುಳುವಾಳ ಚಿಕಿತ್ಸೆ ಅನಿವಾರ್ಯ.

ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಚಲನ ವಲನಗಳನ್ನು ಗಮನಿಸುತ್ತಿರುತ್ತಾರೆ. ಪ್ರಾಯಶಃ ಈ ಶಸ್ತ್ರಚಿಕಿತ್ಸೆ ಮಗುವಿಗಾಗಲಿ ಅಥವಾ ತಾಯಿಗಾಗಲಿ ತೊಂದರೆಯುಂಟು ಮಾಡುವುದಿಲ್ಲ.

೮. ಕರುಳುವಾಳ ಶಸ್ತ್ರಚಿಕಿತ್ಸೆಯ ನಂತರ ಕಾಳಜಿ ತೆಗೆದುಕೊಳ್ಳುವುದು

ಯಾವುದೇ ಶತ್ರಚಿಕಿತ್ಸೆಯ ನಂತರ, ಮೊದಲಿನ ಆರೋಗ್ಯಕ್ಕೆ ಹಿಂತಿರುಗಲು ಕೆಲವು ಕ್ರಮಗಳನ್ನು ನಿರ್ವಹಿಸಬೇಕು. ಅದೇ ರೀತಿ ಕರುಳುವಾಳ ಶಸ್ತ್ರಚಿಕಿತ್ಸೆಯ ನಂತರವೂ ಕಾಳಜಿವಹಿಸುವುದು ಅನಿವಾರ್ಯ.

೧. ಸಮತೋಲಿತ ಸೇವಿಸುವುದು.

೨. ಭಾರವಾದ ವಸ್ತುಗಳನ್ನು ಎತ್ತದೇ ಇರುವುದು.

೩. ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು.

೪. ಹೆಚ್ಚು ವಿಶ್ರಮಿಸುವುದು

೫. ವೈದ್ಯರು ಹೇಳಿರುವಂತೆ ಮರುಪರೀಕ್ಷೆ ಮಾಡಿಸಿಕೊಳ್ಳುವುದು.

[Back To Top]

ಸಮಾರೋಪ

ಒಟ್ಟಿನಲ್ಲಿ, ಗರ್ಭಾವಸ್ಥೆಯಲ್ಲಿ ಕರುಳುವಾಳ ಹೆದರಿಕೆ ಹುಟ್ಟಿಸುವಂತದ್ದಾದರೂ, ಅತೀ ದೊಡ್ಡ ತೊಂದರೆ ಏನೂ ಅಲ್ಲ. ಅದಕ್ಕೆ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮವೆಂದರೆ, ಅದರ ರೋಗಲಕ್ಷಣಗಳನ್ನು ಕಂಡುಹಿಡಿದು, ಸೂಕ್ತ ಚಿಕಿತ್ಸೆ ಪಡೆಯುವುದು. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon